ತಮಿಳು ನಿರ್ಮಾಪಕರ ನಿದ್ದೆ ಕೆಡಿಸಿದ ದಿಗ್ಗಜರು: ಅಜಿತ್ ₹100 ಕೋಟಿ.. ವಿಜಯ್‌ ಕೇಳಿದ್ದೆಷ್ಟು?

'ಬಾಹುಬಲಿ 2', 'RRR', 'ಕೆಜಿಎಫ್ 2', 'ಪುಷ್ಪ' ಈ ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್ ನೋಡಿ ಇಡೀ ಭಾರತೀಯ ಚಿತ್ರರಂಗವೇ ಬೆರಗಾಗಿದೆ. ದಕ್ಷಿಣದ ಸಿನಿಮಾ ಬಾಕ್ಸಾಫೀಸ್ ದಂಡಯಾತ್ರೆಯನ್ನು ನೋಡಿ ದಂಗಾಗಿ ಹೋಗಿದೆ. ಇದರ ಪರಿಣಾಮ ದಕ್ಷಿಣ ಎಲ್ಲಾ ಸೂಪರ್‌ಸ್ಟಾರ್‌ಗಳು ಪ್ಯಾನ್ ಇಂಡಿಯಾ ಸಿನಿಮಾ ಮಾಡುವುದಕ್ಕೆ ಹೊರಟಿದ್ದಾರೆ.

ಸೂಪರ್‌ಸ್ಟಾರ್‌ಗಳು ಪ್ಯಾನ್ ಇಂಡಿಯಾ ಸಿನಿಮಾ ಮಾತ್ರ ಮಾಡೋದು ಅಂತ ನಿರ್ಧರಿಸಿ ಆಗಿದೆ. ಆದರೆ, ಇದರ ಪರಿಣಾಮ ಎದುರಿಸುತ್ತಿರೋದು ನಿರ್ಮಾಪಕರು. ಯಾಕಂದ್ರೆ, ಪ್ಯಾನ್ ಇಂಡಿಯಾ ಸಿನಿಮಾ ಅಂದ್ಕೂಡ್ಲೇ ಆ ಸೂಪರ್‌ಸ್ಟಾರ್ ದಿಢೀರನೇ ಸಂಭಾವನೆಯನ್ನು ಏರಿಸಿಕೊಂಡಿದ್ದಾರಂತೆ. ಇದು ನಿರ್ಮಾಪಕರಿಗೆ ದೊಡ್ಡ ತಲೆ ನೋವಾಗಿದ್ಯಂತೆ.

ಅದರಲ್ಲೂ ತಮಿಳಿನ ಇಬ್ಬರು ದಿಗ್ಗಜರು ದಳಪತಿ ವಿಜಯ್ ಹಾಗೂ ಅಜಿತ್ ಕುಮಾರ್ ಮುಂದಿನ ಸಿನಿಮಾಗಳಿಗೆ ದೊಡ್ಡ ಮೊತ್ತದ ಸಂಭಾವನೆ ಬೇಡಿಕೆ ಇಟ್ಟಿದ್ದಾರಂತೆ. ಈ ಸಂಭಾವನೆ ಕೇಳಿ ಚಿತ್ರರಂಗ ಶಾಕ್ ಆಗಿದೆ ಅನ್ನೋ ಮಾತು ಕೇಳಿಬರುತ್ತಿದೆ.

'ವಾರಿಸು' ಬಳಿಕ ವಿಜಯ್ ಸಂಭಾವನೆ ಏರಿಕೆ?

'ವಾರಿಸು' ಬಳಿಕ ವಿಜಯ್ ಸಂಭಾವನೆ ಏರಿಕೆ?

ತಮಿಳು ಮಾಧ್ಯಮಗಳಲ್ಲಿ ದಳಪತಿ ವಿಜಯ್ ಸಂಭಾವನೆ ಬಗ್ಗೆನೇ ಚರ್ಚೆ. 'ವಾರಿಸು' ಸಾಧಾರಣ ಹಿಟ್ ಕಂಡ ಸಿನಿಮಾ ಎಂದು ಸಾಬೀತಾಗಿದೆ. ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಬಾಕ್ಸಾಫೀಸ್‌ನಲ್ಲಿ ಡಿಸೆಂಟ್ ಕಲೆಕ್ಷನ್ ಮಾಡಿದೆ. ಇದು ಕೇವಲ ದಳಪತಿ ವಿಜಯ್ ಸ್ಟಾರ್‌ಢಮ್‌ನಿಂದ ಅನ್ನೋದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಹೀಗಾಗಿಯೇ ಲೋಕೇಶ್ ಕನಗರಾಜ್‌ ಸಿನಿಮಾಗೆ ದಳಪತಿ ವಿಜಯ್ ಬರೋಬ್ಬರಿ 130 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ಅಜಿತ್ ಸಂಭಾವನೆ ₹100 ಕೋಟಿ ರೂ.?

ಅಜಿತ್ ಸಂಭಾವನೆ ₹100 ಕೋಟಿ ರೂ.?

ಸಂಕ್ರಾಂತಿ ಹಬ್ಬಕ್ಕೆ ದಳಪತಿ ವಿಜಯ್ ಹಾಗೂ ಅಜಿತ್ ಕುಮಾರ್ ಇಬ್ಬರೂ ಕಾಂಪಿಟೇಷನ್‌ಗೆ ಬಿದ್ದಿದ್ದರು. ಸಿನಿಮಾಗೆ ನೆಗೆಟಿವ್ ರೆಸ್ಪಾನ್ಸ್ ಸಿಕ್ಕಿದ್ದರೂ, ಬಾಕ್ಸಾಫೀಸ್‌ನಲ್ಲಿ ಇಬ್ಬರಿಗೂ ಹೆಚ್ಚು ಕಡಿಮೆ ಸಮನಾದ ಸಕ್ಸಸ್ ಸಿಕ್ಕಿತ್ತು. 'ಥುನಿವು' ಗೆಲುವು ದಾಖಲಿಸುತ್ತಿದ್ದಂತೆ ಅಜಿತ್ ಸಂಭಾವನೆ ಏರಿಸಿಕೊಂಡಿದ್ದಾರೆ ಅನ್ನೋದು ಸುದ್ದಿ. ವಿಘ್ನೇಶ್ ಸಿವನ್ ನಿರ್ದೇಶಿಸುತ್ತಿರುವ ಸಿನಿಮಾಗೆ ಅಜಿತ್ ಬರೋಬ್ಬರಿ 100 ಕೋಟಿ ರೂ. ಸಂಭಾವನೆ ಪಡೆದಿದ್ದಾರಂತೆ.

ಗಗನಕ್ಕೇರಿದೆ ಪ್ರಭಾಸ್ ಸಂಭಾವನೆ?

ಗಗನಕ್ಕೇರಿದೆ ಪ್ರಭಾಸ್ ಸಂಭಾವನೆ?

ಕೇವಲ ತಮಿಳು ಚಿತ್ರರಂಗ ಅಷ್ಟೇ ಅಲ್ಲ. ತೆಲುಗು ಚಿತ್ರರಂಗದ ಸೂಪರ್‌ಸ್ಟಾರ್‌ಗಳು ಕೂಡ ದುಬಾರಿ ಸಂಭಾವನೆ ಕೇಳುತ್ತಿದ್ದಾರೆ ಅನ್ನೋ ಮಾತು ಓಡಾಡುತ್ತಿದೆ. ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಮಹೇಶ್ ಬಾಬು ಸುಮಾರು 150 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಸದ್ಯ ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ ಎನ್ನಲಾಗಿದೆ. ಹೀಗಾಗಿ ಪ್ರಭಾಸ್ ಮೀರಿಸುವುದಕ್ಕೆ ಉಳಿದ ನಟರು ಹೊರಟಿದ್ದಾರೆ ಎನ್ನಲಾಗಿದೆ.

ಮಹೇಶ್ ಬಾಬುಗೂ ದುಬಾರಿ ಸಂಭಾವನೆ

ಮಹೇಶ್ ಬಾಬುಗೂ ದುಬಾರಿ ಸಂಭಾವನೆ

ಪ್ರಭಾಸ್ ಸಾಲಿನಲ್ಲಿಯೇ ಮಹೇಶ್ ಬಾಬು ಕೂಡ ಇದ್ದಾರಂತೆ. ರಾಜಮೌಳಿ ನಿರ್ದೇಶನದ ಸಿನಿಮಾ ಮಹೇಶ್ ಬಾಬು ಹೆಚ್ಚು ಕಡಿಮೆ ಪ್ರಭಾಸ್ ಪಡೆಯುವಷ್ಟೇ ಸಂಭಾವನೆ ಕೇಳಿದ್ದಾರೆ ಎನ್ನಲಾಗಿದೆ. ಇವರಿಂದಿಗೆ ರಾಮ್‌ ಚರಣ್,ಜೂ.ಎನ್‌ಟಿಆರ್, ಅಲ್ಲು ಅರ್ಜುನ್ ಕೂಡ 100 ಕೋಟಿ ರೂ. ಸಂಭಾವನೆ ಕೇಳುತ್ತಿದ್ದಾರಂತೆ. ಇದು ಟಾಲಿವುಡ್ ಹಾಗೂ ಕಾಲಿವುಡ್ ನಿರ್ಮಾಪಕರಿಗೆ ದೊಡ್ಡ ತಲೆ ನೋವಾಗಿದೆ.

More from Filmibeat

English summary
After Thunivu And Varisu Tamil Superstars Thalapathy Vijay And Ajith Demanding High Remuneration, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X