KD: The Devil; 'ಟಾಕ್ಸಿಕ್', 'ಜನ ನಾಯಗನ್' ಎಫೆಕ್ಟ್? ಅಂದ್ಕೊಂಡಿದ್ದಕ್ಕಿಂತ 15 ದಿನ ಮೊದಲೇ 'ಕೆಡಿ' ರಿಲೀಸ್?

ಕೆವಿಎನ್ ಪ್ರೊಡಕ್ಷನ್ ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಎರಡು ಸಿನಿಮಾಗಳು ಪೋಸ್ಟ್‌ಪೋನ್ ಆಗಿವೆ. ದಳಪತಿ ವಿಜಯ್ ನಟನೆಯ 'ಜನ ನಾಯಗನ್' ಇಷ್ಟೊತ್ತಿಗಾಗಲೇ ರಿಲೀಸ್ ಆಗಬೇಕಿತ್ತು. ಆದರೆ, ಸೆನ್ಸಾರ್ ಜೊತೆಗಿನ ಕಿತ್ತಾಟದಿಂದ ಸಿನಿಮಾ ಸಂಕ್ರಾಂತಿಗೆ ರಿಲೀಸ್ ಆಗಲಿಲ್ಲ. ಅದರೂ ತಮಿಳುನಾಡು ಚುನಾವಣೆ ಘೋಷಣೆ ಆಗುವುದರೊಳಗೆ ರಿಲೀಸ್ ಆಗಬಹುದೆಂಬ ನಿರೀಕ್ಷೆಯಿತ್ತು. ಆದರೆ, ಆ ಬಗ್ಗೆ ಸುದ್ದಿನೇ ಇಲ್ಲ.

ಇನ್ನೊಂದು ಕಡೆ ರಾಕಿಂಗ್ ಸ್ಟಾರ್‌ ಯಶ್ ನಟನೆ 'ಟಾಕ್ಸಿಕ್' ಸಿನಿಮಾನಾದರೂ ಅಂದುಕೊಂಡಿದ್ದ ಸಮಯಕ್ಕೆ ರಿಲೀಸ್ ಆಗುತ್ತೆ ಅನ್ನೋ ನಿರೀಕ್ಷೆಯಿತ್ತು. ಮಾರ್ಚ್ 19ಕ್ಕೆ ಯುಗಾದಿ ಹಬ್ಬಕ್ಕೆ ವಿಶ್ವದಾದ್ಯಂತ 'ಟಾಕ್ಸಿಕ್' ರಿಲೀಸ್ ಆಗಬೇಕಿತ್ತು. ಆದರೆ, ಇರಾನ್-ಇಸ್ರೇಲ್ ಯುದ್ಧದ ಕಾರಣವೊಡ್ಡಿ 'ಟಾಕ್ಸಿಕ್' ಕೂಡ ಜೂನ್‌ 4 ಕ್ಕೆ ಮುಂದೂಡಲ್ಪಟ್ಟಿದೆ.

After Toxic and Jana Nayagan release postpone KVN may release KD the devil on April 17th

ಈ ಎರಡೂ ಸಿನಿಮಾಗಳು 300 ರಿಂದ 400 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗಿರುವ ಬಿಗ್ ಬಜೆಟ್ ಸಿನಿಮಾಗಳು. ಹೀಗಾಗಿ ನಿರೀಕ್ಷೆಗಳೇನು ಕಮ್ಮಿಯಿರಲಿಲ್ಲ. ಅಲ್ಲದೆ ಈ ಎರಡೂ ಸಿನಿಮಾಗಳ ಬ್ಯುಸಿನೆಸ್ ಡೀಲ್ ಕೂಡ ಈಗಾಗಲೇ ಮುಗಿದಿದೆ. ಹೀಗಾಗಿ ಕೆವಿಎನ್ ಬ್ಲಾಕ್ ಮಾಡಿಕೊಂಡಿದ್ದ 'ಟಾಕ್ಸಿಕ್' ಡೇಟ್‌ನಲ್ಲಿ 'ಲವ್ ಮಾಕ್ಟೇಲ್ 3' ಅನ್ನು ರಿಲೀಸ್ ಮಾಡುತ್ತಿದೆ. ಇದರ ಜೊತೆಗೆ ಸ್ಯಾಂಡಲ್‌ವುಡ್‌ನಲ್ಲಿ ಇನ್ನೊಂದು ಸುದ್ದಿನೂ ಹರಿದಾಡುತ್ತಿದೆ. ಅದು 'ಕೆಡಿ' ಅಂದುಕೊಂಡಿದ್ದಕ್ಕಿಂತ 15 ದಿನ ಬೇಗನೇ ರಿಲೀಸ್ ಆಗುತ್ತೆ ಎಂಬ ಸುದ್ದಿ ಹರಿದಾಡುವುದಕ್ಕೆ ಶುರುವಾಗಿದೆ.

ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡಿರುವ 'ಕೆಡಿ: ದಿ ವಿಲನ್' ಇಷ್ಟೊತ್ತಿಗಾಗಲೇ ರಿಲೀಸ್ ಆಗಬೇಕಿತ್ತು. ಆದರೆ, ಈ ಸಿನಿಮಾ ಕೂಡ ಪೋಸ್ಟ್‌ಪೋನ್ ಆಗುತ್ತಲೇ ಬರುತ್ತಿದೆ. ಸದ್ಯಕ್ಕೆ ಏಪ್ರಿಲ್ 30ಕ್ಕೆ ರಿಲೀಸ್ ಆಗುತ್ತೆ ಎನ್ನಲಾಗಿತ್ತು. ಅದಕ್ಕಾಗಿ ಜೋಗಿ ಪ್ರೇಮ್ ಹಗಲು-ರಾತ್ರಿ ಎನ್ನದೆ ಕೆಲಸ ಮಾಡುತ್ತಿದ್ದಾರೆ. 'ಟಾಕ್ಸಿಕ್' ಪೋಸ್ಟ್‌ಪೋನ್ ಆಗಿದ್ದರಿಂದ 'ಕೆಡಿ: ದಿ ವಿಲನ್' ಅನ್ನು ಅಂದುಕೊಂಡಿದ್ದ ದಿನದಂದು ರಿಲೀಸ್ ಮಾಡಲೇಬೇಕು ಅಂತ ತಂಡಕ್ಕೆ ಕೆವಿಎನ್ ಸಂಸ್ಥೆ ತಾಕೀತು ಮಾಡಿದೆ ಅನ್ನೋ ಸುದ್ದಿ ಓಡಾಡಿತ್ತು.

ಕಳೆದ ಎರಡು ದಿನಗಳಿಂದ ಇಂತಹದ್ದೊಂದು ಸುದ್ದಿ ಸದ್ದು ಮಾಡುತ್ತಿತ್ತು. ಆದ್ರೀಗ ಗಾಂಧಿನಗರದ ಮಂದಿಯ ಬಾಯಲ್ಲಿ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಕೆವಿಎನ್ ಸಂಸ್ಥೆ ಅಂದುಕೊಂಡಿದ್ದಕ್ಕಿಂತ ಎರಡು ವಾರ ಮುಂಚೆನೇ ರಿಲೀಸ್ ಮಾಡುವುದಕ್ಕೆ ಸೂಚನೆ ಕೊಟ್ಟಿದೆ ಅನ್ನೋ ಮಾತು ಓಡಾಡುತ್ತಿದೆ. ಅದಕ್ಕೆ ಬಲವಾದ ಕಾರಣ ಕೂಡ ಇದೆ. ಕೆಡಿ: ದಿ ಡೆವಿಲ್' ಪ್ಯಾನ್ ಇಂಡಿಯಾ ಸಿನಿಮಾ. ಹೀಗಾಗಿ ಏಕಕಾಲಕ್ಕೆ ಐದು ಭಾಷೆಯಲ್ಲಿ ರಿಲೀಸ್ ಆಗಲೇಬೇಕು. ಆದರೆ, ಏಪ್ರಿಲ್ 30ಕ್ಕೆ ಮತ್ತೊಂದು ಮೋಸ್ಟ್‌ ಎಕ್ಸ್‌ಪೆಕ್ಟೆಡ್ ಸಿನಿಮಾ ರಿಲೀಸ್ ಆಗುತ್ತಿದೆ.

After Toxic and Jana Nayagan release postpone KVN may release KD the devil on April 17th

ಹೌದು, ತೆಲುಗಿನ ಮೆಗಾ ಪವರ್‌ಸ್ಟಾರ್ ರಾಮ್ ಚರಣ್‌ ನಟನೆಯ 'ಪೆದ್ದಿ' ಸಿನಿಮಾ ಏಪ್ರಿಲ್ 30ರಂದು ರಿಲೀಸ್ ಆಗುತ್ತಿದೆ. 'ಪೆದ್ದಿ' ಕೂಡ ಐದು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಹೀಗಾಗಿ ಕನ್ನಡ ಬಿಟ್ಟು ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ರಿಲೀಸ್‌ಗೆ ಸಮಸ್ಯೆ ಆಗಬಹುದು. ಮತ್ತೊಂದು ಬಾಕ್ಸಾಫೀಸ್ ಕ್ಲ್ಯಾಶ್‌ ಆಗುವುದನ್ನು ತಪ್ಪಿಸುವುದಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಏಪ್ರಿಲ್ 17ಕ್ಕೆ ಸಿನಿಮಾ ರಿಲೀಸ್ ಮಾಡುವುದಕ್ಕೆ ಚಿಂತಿಸುತ್ತಿದೆ ಎನ್ನಲಾಗಿದೆ.

ಇದೇ ಯುಗಾದಿ 'ಟಾಕ್ಸಿಕ್' ರಿಲೀಸ್ ಆಗಬೇಕಿದ್ದ ದಿನದಂದೇ 'ಕೆಡಿ: ದಿ ಡೆವಿಲ್' ಸಿನಿಮಾದ ಟೀಸರ್ ರಿಲೀಸ್ ಮಾಡುವುದಕ್ಕೆ ಕೆವಿಎನ್ ಪ್ರೊಡಕ್ಷನ್ ಆಲೋಚನೆ ಮಾಡುತ್ತಿದೆ. ಅಲ್ಲದೇ ಅದೇ ಟೀಸರ್ ಜೊತೆ ಸಿನಿಮಾ ಏಪ್ರಿಲ್ 17ಕ್ಕೆ ರಿಲೀಸ್ ಅಂತಾನೂ ಅನೌನ್ಸ್ ಮಾಡುತ್ತೆ ಅಂತ ಗಾಂಧಿನಗರದಲ್ಲಿ ಗುಲ್ಲೆದ್ದಿದೆ. ಅಸಲಿಗೆ ಕೆವಿಎನ್ ಪ್ರೊಡಕ್ಷನ್ಸ್ ಮಾತ್ರ ಈ ಸಿನಿಮಾ ರಿಲೀಸ್ ಬಗ್ಗೆನೂ ಇನ್ನೂ ಅಧಿಕೃತವಾಗಿ ಸುಳಿವನ್ನು ಬಿಟ್ಟುಕೊಟ್ಟಿಲ್ಲ.

More from Filmibeat

English summary
After Toxic and Jana Nayagan release postpone KVN may release KD the devil on April 17th.
Read more about: dhruva sarja jogi prem teaser
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X