11 ವರ್ಷಗಳ ಬಳಿಕ ಮತ್ತೆ ರಜನಿಕಾಂತ್ ಸಿನಿಮಾದಲ್ಲಿ ಐಶ್ವರ್ಯಾ ರೈ? ತಲೈವಾ 169ನೇ ಚಿತ್ರದ ಗುಟ್ಟೇನು?

ಮಗಳ ವಿಚ್ಛೇದನದ ಸುದ್ದಿ ಸೂಪರ್‌ಸ್ಟಾರ್ ರಜನಿಕಾಂತ್ ಮಾನಸಿಕವಾಗಿ ಕುಗ್ಗಿದ್ದರು ಎಂಬ ಸುದ್ದಿ ಹರಿದಾಡಿತ್ತು. ರಜನಿಕಾಂತ್ ಸದ್ಯ ಸಿನಿಮಾ ಮಾಡುವುದು ಅನುಮಾನ ಎನ್ನುವ ಮಾತು ಕೇಳಿಬಂದಿತ್ತು. ಆದರೆ, ರಜನಿ ಆ ಎಲ್ಲಾ ಊಹಾ-ಪೋಹಗಳಿಗೆ ಹೊಸ ಸಿನಿಮಾ ಅನೌನ್ಸ್ ಮಾಡಿ ತೆರೆ ಎಳೆದಿದ್ದಾರೆ. ರಜನಿಕಾಂತ್ 169ನೇ ಸಿನಿಮಾವನ್ನು ಕೆಲವೇ ದಿನಗಳ ಹಿಂದೆ ಘೋಷಣೆ ಮಾಡಲಾಗಿದೆ. ನೆಲ್ಸನ್ ದಿಲೀಪ್ ಕುಮಾರ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.

ರಜನಿಕಾಂತ್ 169ನೇ ಸಿನಿಮಾ ಅನೌನ್ಸ್ ಆಗುತ್ತಿದ್ದಂತೆ ತಲೈವಾ ಅಭಿಮಾನಿಗಳಿಗೆ ಜೀವ ಬಂದಂತಾಗಿದೆ. ಅದರಲ್ಲೂ ಫಸ್ಟ್ ಲುಕ್ ನೋಡಿದ ಮೇಲಂತೂ ಸೂಪರ್‌ಸ್ಟಾರ್ ಭೂಮಿ ಮೇಲೆ ನಿಲ್ಲುತ್ತಿಲ್ಲ. ಈಗ ಕಾಲಿವುಡ್‌ ಅಂಗಳದಿಂದ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ರಜನಿಕಾಂತ್ ಸಿನಿಮಾದಲ್ಲಿ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ನಟಿಸುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಅಸಲಿಗೆ ಈ ಸುದ್ದಿ ನಿಜವೇ?

 ರಜನಿ 169ನೇ ಚಿತ್ರದಲ್ಲಿ ಐಶ್ವರ್ಯಾ ರೈ

ರಜನಿ 169ನೇ ಚಿತ್ರದಲ್ಲಿ ಐಶ್ವರ್ಯಾ ರೈ

ರಜನಿಕಾಂತ್ 169ನೇ ಸಿನಿಮಾ ಅನೌನ್ಸ್ ಆದಲ್ಲಿಂದ ರಜನಿ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ತಮಿಳು ಚಿತ್ರರಂಗದ ಸ್ಟಾರ್ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಇದೇ ಮೊದಲ ಬಾರಿಗೆ ರಜನಿಕಾಂತ್‌ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹೀಗಾಗಿ ಎಲ್ಲರ ಕಣ್ಣು ರಜನಿಕಾಂತ್ 169ನೇ ಸಿನಿಮಾ ಮೇಲೆ ನೆಟ್ಟಿದೆ. ಈ ಸಿನಿಮಾ ಹೇಗಿರಬಹುದು ಅನ್ನು ಕುತೂಹಲದೊಂದಿಗೆ ಮತ್ತೊಂದು ರಜನಿ ಹೈ ಹಾರ್ಡ್ ಫ್ಯಾನ್ಸ್ ನಿದ್ದೆಗೆಡಿಸಿದೆ. ಹೌದು.. ರಜನಿಕಾಂತ್ ಸಿನಿಮಾದಲ್ಲಿ ಐಶ್ವರ್ಯಾ ರೈ ನಟಿಸುತ್ತಾರೆ ಎನ್ನುವ ಮಾತು ಬಲವಾಗಿ ಕೇಳಿಬರುತ್ತಿದೆ.

 11 ವರ್ಷಗಳ ಹಿಂದೆ ತೆರೆಕಂಡಿದ್ದ 'ಎಂದಿರನ್'

11 ವರ್ಷಗಳ ಹಿಂದೆ ತೆರೆಕಂಡಿದ್ದ 'ಎಂದಿರನ್'

2010 ಅಕ್ಟೋಬರ್ ತಿಂಗಳಲ್ಲಿ ಐಶ್ವರ್ಯಾ ರೈ ಹಾಗೂ ರಜನಿಕಾಂತ್ ಜೋಡಿಯಾಗಿ ನಟಿಸಿದ್ದ 'ಎಂದಿರನ್' ಬಿಡುಗಡೆಯಾಗಿತ್ತು. ಇವರಿಬ್ಬರ ಕೆಮಿಸ್ಟ್ರಿ ಕಂಡು ಇಬ್ಬರ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದರು. ಆದರೂ, 'ಎಂದಿರನ್' ಸಿನಿಮಾ ಬಳಿಕ ರಜನಿ ಹಾಗೂ ಐಶ್ವರ್ಯಾ ಮತ್ತೆ ಒಟ್ಟಿಗೆ ನಟಿಸಲಿಲ್ಲ. ಶಂಕರ್ ನಿರ್ದೇಶಿಸಿದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚಮ್ಕಾಯಿಸಿ ಚಿಂದಿ ಉಡಾಯಿಸಿತ್ತು. ಈಗ ಬರೋಬ್ಬರಿ 11 ವರ್ಷಗಳ ಬಳಿಕ ರಜನಿಕಾಂತ್ ಸಿನಿಮಾದಲ್ಲಿ ಐಶ್ವರ್ಯಾ ರೈ ಮತ್ತೆ ನಟಿಸಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ, ನಿರ್ದೇಶಕರಾಗಲಿ, ಸಿನಿಮಾ ತಂಡವಾಗಿ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ.

 ರಜನಿ ಸಿನಿಮಾ ಶೂಟಿಂಗ್ ಯಾವಾಗ?

ರಜನಿ ಸಿನಿಮಾ ಶೂಟಿಂಗ್ ಯಾವಾಗ?

ನೆಲ್ಸನ್ ದಿಲೀಪ್ ಕುಮಾರ್ ಸಿನಿಮಾ ಕಥೆ ಮೇಲೆ ಎಲ್ಲೂ ಕಣ್ಣೀರುತ್ತೆ. ಇವರೇ ನಿರ್ದೇಶಿಸಿದ 'ಡಾಕ್ಟರ್' ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೆ ಇದೀಗ ದಳಪತಿ ವಿಜಯ್ ನಟಿಸಿದ 'ಬೀಸ್ಟ್' ಸಿನಿಮಾವನ್ನು ಮುಗಿಸಿದ್ದಾರೆ. 'ಬೀಸ್ಟ್' ಸಿನಿಮಾದ ಒಂದು ಹಾಡು ಕೇಳಿ ವಿಜಯ್ ಅಭಿಮಾನಿಗಳು ಫಿದಾ ಆಗಿದ್ದಾರೆ. ಹೀಗಾಗಿ ರಜನಿಕಾಂತ್ ಸಿನಿಮಾವನ್ನು ಯಾವಾಗ ಸೆಟ್ಟೇರುತ್ತೋ ಅಂತ ಅಭಿಮಾನಿಗಳು ಕಾದು ಕೂತಿದ್ದಾರೆ. ಈ ಸಿನಿಮಾ ಏಪ್ರಿಲ್ ಇಲ್ಲವೇ ಮೇ ತಿಂಗಳಲ್ಲಿ ಚಿತ್ರೀಕರಣ ಆರಂಭ ಆಗಲಿದೆ.

 ರಜನಿಕಾಂತ್ ಖದರ್ ಇನ್ನೂ ನಿಂತಿಲ್ಲ

ರಜನಿಕಾಂತ್ ಖದರ್ ಇನ್ನೂ ನಿಂತಿಲ್ಲ

ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾ ಇನ್ನು ಬಾಕ್ಸಾಫೀಸ್‌ನಲ್ಲಿ ಗೆಲ್ಲುವುದಿಲ್ಲವೆಂದು ಟೀಕೆ ಮಾಡಲಾಗಿತ್ತು. 'ಅಣ್ಣಾತ್ತೆ' ಸಿನಿಮಾ ನೋಡಿದ ದಿನವೇ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ, 'ಅಣ್ಣಾತ್ತೆ' ಬಾಕ್ಸಾಫೀಸ್‌ನಲ್ಲಿ ಎಲ್ಲರ ಲೆಕ್ಕಾಚಾರವನ್ನೂ ತಲೆಕೆಳಗೆ ಮಾಡಿತ್ತು. ಹೀಗಾಗಿ ರಜನಿ 169ನೇ ಸಿನಿಮಾಗೆ ಐಶ್ವರ್ಯಾ ರೈ ಎನಾದರೂ ಸೇರಿಕೊಂಡರೆ, ಸೂಪರ್‌ಸ್ಟಾರ್ ಮತ್ತೆ ಬಾಕ್ಸಾಫೀಸ್‌ನಲ್ಲಿ ವಿಶ್ವವೇ ತಿರುಗಿ ನೋಡುವಂತಹ ದಾಖಲೆ ಬರೆಯಬಹುದು.

More from Filmibeat

English summary
Aishwarya Rai Bachchan to star with Rajinikanth 169 and director Nelson Dilipkumar. Rumour is that their collaboration is likely on cards After 11 years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X