Rajinikanth 169: ರಜನಿ ಜೊತೆ ಮತ್ತೆ ಐಶ್ವರ್ಯಾ ರೈ ರೊಮ್ಯಾನ್ಸ್: ಶಿವಕಾರ್ತಿಕೇಯನ್, ಪ್ರಿಯಾಂಕಾ ಪಾತ್ರವೇನು?
ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ 169 ಸಿನಿಮಾದ ಬಗ್ಗೆ ಒಂದೊಂದೇ ಅಪ್‌ಡೇಟ್‌ಗಳು ಹೊರಬೀಳುತ್ತಿದೆ. ಈ ಮಧ್ಯೆ ರಜನಿಕಾಂತ್ ಸಿನಿಮಾದಲ್ಲಿ ಯಾರೆಲ್ಲಾ ನಟಿಸುತ್ತಾರೆ ಅನ್ನೋ ಲಿಸ್ಟ್ ಕೂಡ ಹರಿದಾಡುತ್ತಿದ್ದಾರೆ. ಈ ಸ್ಟಾರ್ ಕಾಸ್ಟ್ ಕುರಿತು ಮಹತ್ವದ ಮಾಹಿತಿಯು ಸೋರಿಕೆಯಾಗಿದೆ ಎಂದು ಕಾಲಿವುಡ್ ಮಾತಾಡಿಕೊಳ್ಳುತ್ತಿದೆ.
ರಜನಿಕಾಂತ್ 169ನೇ ಸಿನಿಮಾದ ಶೂಟಿಂಗ್ ಆರಂಭ ಮಾಡುವುದಕ್ಕೆ ಸಕಲ ಸಿದ್ಧತೆಗಳೂ ನಡೆಯುತ್ತಿವೆ. ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಪಕ್ಕಾ ಪ್ಲಾನ್ ಒಂದನ್ನು ರೆಡಿ ಮಾಡಿಕೊಳ್ಳುತ್ತಿದ್ದಾರೆ. ಚಿತ್ರರಂಗದ ಕೆಲವು ಮೂಲಗಳ ಪ್ರಕಾರ ಆಗಸ್ಟ್ ತಿಂಗಳಲ್ಲಿ ಚಿತ್ರೀಕರಣ ಮುಗಿಸಲು ಪ್ಲಾನ್ ಮಾಡಿಕೊಂಡಿದ್ದು, 2023 ಪೊಂಗಲ್‌ಗೆ ಸಿನಿಮಾ ರಿಲೀಸ್ ಮಾಡಲು ಸಜ್ಜಾಗಿದೆ.

ರಜನಿ 'ಅಣ್ಣಾತ್ತೆ' ಸೂಪರ್ ಹಿಟ್
ರಜನಿಕಾಂತ್ ಸಿನಿಪ್ರಿಯರ ಪಾಲಿಗೆ ಸೂಪರ್ ಸ್ಟಾರ್. ಇತ್ತೀಚೆಗೆ ತೆರೆಕಂಡ ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದರೂ, ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿತ್ತು. ಶಿವ ಈ ಸಿನಿಮಾವನ್ನು ನಿರ್ದೇಶಿಸಿದ್ದು, ಸೆಂಟಿಮೆಂಟ್ ಸ್ಟೋರಿ ವರ್ಕ್‌ಔಟ್ ಆಗಿತ್ತು. ಅಣ್ಣ-ತಂಗಿಯ ಬಾಂಧವ್ಯ ಕ್ಲಿಕ್ ಆಗಿತ್ತು. ಈ ಚಿತ್ರದಲ್ಲಿ ನಯನತಾರಾ, ಖುಷ್ಬು, ಮೀನಾ ಮತ್ತು ಕೀರ್ತಿ ಸುರೇಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದರಿಂದ ರಜನಿಕಾಂತ್ ಕಥೆಯ ಆಯ್ಕೆಯಲ್ಲಿ ಬಹಳ ಎಚ್ಚರಿಕೆ ವಹಿಸಿದ್ದರು. ಈ ಕಾರಣಕ್ಕೆ ವಿವಿಧ ನಿರ್ದೇಶಕರ ಬಳಿ ಕಥೆ ಕೇಳಿದ್ದರು ಎನ್ನುವ ಮಾತುಗಳು ಕೇಳಿ ಬಂದಿವೆ.

ಕಿಕ್ ಕೊಟ್ಟಿದೆ ಮೋಷನ್ ಮೋಸ್ಟರ್
ಸೂಪರ್‌ಸ್ಟಾರ್ ರಜನಿಕಾಂತ್ 169ನೇ ಸಿನಿಮಾಕ್ಕೆ 'ಬೀಸ್ಟ್' ಚಿತ್ರದ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ರಜನಿಕಾಂತ್ ಮಾಸ್ ಲುಕ್‌ನಲ್ಲಿರುವ ಮೋಷನ್ ಪೋಸ್ಟರ್ ಅನ್ನುರಿಲೀಸ್ ಮಾಡಲಾಗಿತ್ತು. ಈ ಸಿನಿಮಾವನ್ನು ಕೂಡ ಸನ್ ಪಿಕ್ಚರ್ಸ್ ನಿರ್ಮಿಸಲಿದ್ದು, ಅನಿರುದ್ಧ್ ಸಂಗೀತ ನೀಡಲಿದ್ದಾರೆ. ರಜನಿಕಾಂತ್ ರಗಡ್ ಲುಕ್ ಕಂಡು ಫ್ಯಾನ್ಸ್ ಈಗಾಗಲೇ ಫಿದಾ ಆಗಿದ್ದಾರೆ.

ರಜನಿಕಾಂತ್‌ಗೆ ಐಶ್ವರ್ಯಾ ರೈ ನಾಯಕಿ?
ತಲೈವಾ 169ನೇ ಸಿನಿಮಾ ಬಗ್ಗೆ ಹಲವು ದಿನಗಳಿಂದ ಚರ್ಚೆಯಾಗುತ್ತಲೇ ಇದೆ. ಸೋಶಿಯಲ್ ಮೀಡಿಯಾದಲ್ಲಿ ರಜನಿಕಾಂತ್ 169ನೇ ಚಿತ್ರಕ್ಕೆ ನಾಯಕಿ ಯಾರು ಎಂಬುವುದು ಚರ್ಚೆಯಾಗುತ್ತಿದೆ. ಈ ಸಿನಿಮಾ ಬಗ್ಗೆ ವದಂತಿಗಳು ಹರಿದಾಡುತ್ತಿರುವಾಗಲೇ 'ಎಂದಿರನ್' ಬಳಿಕ ರಜನಿಕಾಂತ್ ಜೊತೆ ನಾಯಕಿಯಾಗಿ ಮತ್ತೆ ಐಶ್ವರ್ಯಾ ರೈ ಬಚ್ಚನ್ ನಟಿಸುವುದು ಬಹುತೇಕ ಕನ್ಫರ್ಮ್ ಆಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಸದ್ಯ ಐಶ್ವರ್ಯಾ ರೈ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶಿಸಿದ ಪೊನ್ನಿಯನ್ ಸೆಲ್ವನ್ ಚಿತ್ರದಲ್ಲಿ ನಟಿಸಿದ್ದಾರೆ.

ಶಿವಕಾರ್ತಿಕೇಯನ್, ಪ್ರಿಯಾಂಕಾ ಕಥೆಯೇನು?
ರಜನಿಕಾಂತ್ 169ನೇ ಸಿನಿಮಾದಲ್ಲಿ ಐಶ್ವರ್ಯಾ ರೈ ಬಚ್ಚನ್ ಜೊತೆ ಇನ್ನೂ ಎರಡು ಪಾತ್ರಗಳು ಆಯ್ಕೆಯಾಗಿವೆ. ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸಿದ ಎಲ್ಲಾ ಸಿನಿಮಾಗಳಲ್ಲೂ ಕೆಲಸ ಮಾಡಿರುವ ಶಿವಕಾರ್ತಿಕೇಯನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರಂತೆ ಪ್ರಿಯಾಂಕಾ ಮೋಹನ್ ಸೂಪರ್‌ಸ್ಟಾರ್ ರಜನಿಕಾಂತ್ ಮಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ರಜನಿಕಾಂತ್ ಜೊತೆ ಕಿತ್ತಾಡಿಕೊಂಡಿದ್ದ ವಡಿವೇಲು ಮತ್ತೆ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ ಎನ್ನಲಾಗಿದೆ.


Click it and Unblock the Notifications











