₹100 ಕೋಟಿ ಸಿನಿಮಾ ಕೊಟ್ಟ ನಿರ್ದೇಶಕನಿಗೆ ಸ್ಕ್ರಿಪ್ಟ್ ಬದಲಾಯಿಸು ಎಂದ ಬಾಲಕೃಷ್ಣ?

ಒಂದೇ ಒಂದು ಸಿನಿಮಾ ಟಾಲಿವುಡ್‌ನಲ್ಲಿ ಲೆಜೆಂಡ್ ಬಾಲಕೃಷ್ಣರನ್ನು ಮತ್ತೆ ಬಹುಬೇಡಿಕೆಯ ನಟನನ್ನಾಗಿ ಮಾಡಿದೆ. ಲೆಜೆಂಡ್ ಬಾಲಕೃಷ್ಣ ಬ್ಯಾಕ್ ಟು ಬ್ಯಾಕ್ ತೆಲುಗು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈಗಾಗಲೇ 107 ಚಿತ್ರದ ಶೂಟಿಂಗ್‌ನಲ್ಲಿ ಬಾಲಯ್ಯ ಬ್ಯುಸಿಯಾಗಿದ್ದಾರೆ.

'ಅಖಂಡ' ಬಾಲಕೃಷ್ಣ ವೃತ್ತಿ ಬದುಕಿನಲ್ಲೇ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ. ಹೆಚ್ಚು ಕಡಿಮೆ ₹150 ಕೋಟಿಯಷ್ಟು ಕಲೆಕ್ಷನ್ ಮಾಡಿ ಅಚ್ಚರಿ ಮೂಡಿಸಿತ್ತು. ಸೋಲಿನ ಸುಳಿಯಲ್ಲಿ ಸಿಲುಕಿದ್ದ ಬಾಲಕೃಷ್ಣ ಹಾಗೂ ನಿರ್ದೇಶಕ ಬೋಯಪಾಟಿ ಶ್ರೀನು ಇಬ್ಬರಿಗೂ ಗೆಲುವು ಸಿಕ್ಕಿತ್ತು.

'ಅಖಂಡ' ಹಿಟ್ ಆಗುತ್ತಿದ್ದಂತೆ ಬಾಲಯ್ಯ ತೆಲುಗು ಚಿತ್ರರಂಗದಲ್ಲಿ ಬಹುಬೇಡಿಕೆಯ ನಟನಾಗಿದ್ದಾರೆ. ಈ ಹಿನ್ನೆಯಲ್ಲಿ ಒಂದೊಂದೇ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಡುತ್ತಿದ್ದಾರೆ. ಈ ಮಧ್ಯೆ ಬಾಲಕೃಷ್ಣ ಟಾಲಿವುಡ್‌ ನಿರ್ದೇಶಕರೊಬ್ಬರಿಗೆ ಸಿನಿಮಾ ಸ್ಕ್ರಿಪ್ಟ್ ಚೇಂಜ್ ಮಾಡುವಂತೆ ಸೂಚನೆ ನೀಡಿದ್ದಾರಂತೆ. ಅದಕ್ಕೆ ಕಾರಣವೇನು? ಟಾಲಿವುಡ್‌ನಲ್ಲಿ ಎದ್ದಿರೊ ಗುಸು ಗುಸು ಏನು? ಅನ್ನುವುದನ್ನು ತಿಳಿಯಲು ಮುಂದೆ ಓದಿ.

ಸ್ಕ್ರಿಪ್ಟ್ ಬದಲಿಸಲು ಬಾಲಯ್ಯ ಸೂಚನೆ

ಸ್ಕ್ರಿಪ್ಟ್ ಬದಲಿಸಲು ಬಾಲಯ್ಯ ಸೂಚನೆ

107ನೇ ಸಿನಿಮಾ ಬಳಿಕ ಬಾಲಕೃಷ್ಣಗೆ 'F 3' ಸಿನಿಮಾದ ನಿರ್ದೇಶಕ ಅನಿಲ್ ರವಿಪುಡಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ ಬಗ್ಗೆ ಟಾಲಿವುಡ್‌ನಲ್ಲಿ ಈಗಾಗಲೇ ಟಾಕ್ ಶುರುವಾಗಿದೆ. ಅನಿಲ್ ರವಿಪುಡಿ ನಿರ್ದೇಶಿಸಿದ ಕಳೆದ ಎರಡೂ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆದ್ದಿವೆ. ಈ ಕಾರಣಕ್ಕೆ ಈ ಕಾಂಬಿನೇಷನ್‌ ಬಗ್ಗೆ ನಿರೀಕ್ಷೆ ದುಪ್ಪಟ್ಟಾಗಿದೆ. ಇಷ್ಟರ ಮಧ್ಯೆ ಅನಿಲ್‌ಗೆ ಬಾಲಕೃಷ್ಣ ಸ್ಕ್ರಿಪ್ಟ್ ಬದಲಾಯಿಸುವಂತೆ ಸೂಚನೆ ಕೊಟ್ಟಿದ್ದಾರೆ.

ಸ್ಕ್ರಿಪ್ಟ್ ಬದಲಿಸಿ ಎಂದಿದ್ದೇಕೆ ಬಾಲಕೃಷ್ಣ?

ಸ್ಕ್ರಿಪ್ಟ್ ಬದಲಿಸಿ ಎಂದಿದ್ದೇಕೆ ಬಾಲಕೃಷ್ಣ?

ಲೆಜೆಂಡ್ ಬಾಲಕೃಷ್ಣ ಸಖತ್ ಸ್ಟ್ರೈಟ್ ಫಾರ್ವರ್ಡ್. ತನಗನ್ನಿಸಿದ್ದನ್ನು ನೇರವಾಗಿ ಹೇಳಿಬಿಡುತ್ತಾರೆ. ಇತ್ತೀಚೆಗೆ ಬಾಲಯ್ಯ 'F 3' ಸಿನಿಮಾ ಸ್ಪೆಷಲ್ ಸ್ಕ್ರೀನಿಂಗ್ ಹೋಗಿದ್ದರು. ಈ ವೇಳೆ ಸಿನಿಮಾ ನೋಡಿ ಅನಿಲ್ ರವಿಪುಡಿಗೆ ಸ್ಕ್ರಿಪ್ ಚೇಂಜ್ ಮಾಡಿ ಎಂದಿದ್ದಾರಂತೆ. ಕಾರಣ ಏನಪ್ಪಾ ಅಂದ್ರೆ, ಅನಿಲ್ ಕಾಮಿಡಿ ಸೆನ್ಸ್‌ಗೆ ಮರುಳಾಗಿರುವ ಬಾಲಯ್ಯ ಹಾಸ್ಯ ಸಿನಿಮಾ ಮಾಡೋಣ ಎಂದಿದ್ದಾರಂತೆ. ಹೀಗಾಗಿ ಅನಿಲ್‌ ಹಾಸ್ಯ ಸಿನಿಮಾ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ ಅಂತಿದೆ ಟಾಲಿವುಡ್.

ಬಾಲಯ್ಯ ನಿಗೆ ಮಾಸ್ ಸ್ಟೋರಿ

ಬಾಲಯ್ಯ ನಿಗೆ ಮಾಸ್ ಸ್ಟೋರಿ

ಅನಿಲ್ ರವಿಪುಡಿ ಲೆಜೆಂಡ್ ಬಾಲಕೃಷ್ಣಗಾಗಿ ಆಕ್ಷನ್ ಸಿನಿಮಾ ಮಾಡಲು ಸ್ಕ್ರಿಪ್ಟ್ ಮಾಡಿಕೊಂಡಿದ್ದರು. ಅಲ್ಲದೆ ಅದ್ಭುತ ಆಕ್ಷನ್ ಸೀನ್‌ಗೂ ಪ್ಲ್ಯಾನ್ ಮಾಡಿದ್ದರಂತೆ. 'ಅಖಂಡ' ಬಳಿಕ ಬಾಲಯ್ಯನಿಗೆ ಮತ್ತೊಂದು ಮಾಸ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಮಾಡೋಣ ಎಂದುಕೊಂಡಿದ್ದರಂತೆ. ಆದ್ರೀಗ ಎಲ್ಲಾ ತಲೆಕೆಳಗಾಗಿದೆ ಎನ್ನುತ್ತಿದ್ದಾರೆ ಟಾಲಿವುಡ್ ಮಂದಿ. ಇತ್ತೀಚೆಗೆ ಬಾಲಯ್ಯ 'ಅನ್‌ಸ್ಟಾಪಬಲ್' ಟಾಕ್‌ ಶೋನಲ್ಲಿ ತಮ್ಮ ಹಾಸ್ಯ ಪ್ರಜ್ಞೆ ಎಷ್ಟಿದೆ ಅನ್ನುವುದನ್ನು ಪ್ರೂವ್ ಮಾಡಿದ್ದರು. ಈ ಕಾರಣಕ್ಕೆ ಕಾಮಿಡಿ ಸ್ಕ್ರಿಪ್ಟ್ ಮಾಡಲು ಹೇಳಿದ್ದಾರೆ ಎನ್ನುತ್ತಿದೆ ಟಾಲಿವುಡ್.

ಬಾಲಯ್ಯ ಸಿನಿಮಾದಲ್ಲಿ ತಂದೆ-ಮಗಳ ಸೆಂಟಿಮೆಂಟ್

ಬಾಲಯ್ಯ ಸಿನಿಮಾದಲ್ಲಿ ತಂದೆ-ಮಗಳ ಸೆಂಟಿಮೆಂಟ್

ಅನಿಲ್ ಕೇವಲ ಆಕ್ಷನ್ ಸೀನ್‌ ಜೊತೆ ತಂದೆ-ಮಗಳ ಸಂಬಂಧವನ್ನು ತೆರೆಮೇಲೆ ತರಲು ಸಜ್ಜಾಗಿದ್ದರು. ಈ ಸಿನಿಮಾದಲ್ಲಿ ಕನ್ನಡದ ನಟಿ ಶ್ರೀ ಲೀಲಾ ಮಗಳ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದ್ರೀಗ ಬಾಲಯ್ಯ ಹೇಳಿದಂತೆ ಸ್ಕ್ರಿಪ್ಟ್ ಬದಲಾಯಿಸುತ್ತಾರಾ? ಇಲ್ಲ ಬಾಲಯ್ಯನ ಮನವೊಲಿಸುತ್ತಾರಾ? ಅನ್ನುವುದನ್ನು ಯಕ್ಷ ಪ್ರಶ್ನೆಯಾಗಿದೆ.

More from Filmibeat

English summary
Akhanda Star Balakrishna Asked F3 Director Anil Ravipudi To Change The Movie Script, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X