ಆಲಿಯಾ ಭಟ್-ರಣಬೀರ್ ಕಪೂರ್ ಪ್ರೀತಿಯಲ್ಲಿ ಮತ್ತೆ ಬ್ರೇಕ್ಅಪ್?
'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ನಡುವೆ ಪ್ರೀತಿ ಚಿಗುರಿದ್ದು ಇದೇ ಸಿನಿಮಾ ಸೆಟ್‌ನಲ್ಲಿ. ದೀಪಿಕಾ ಪಡುಕೋಣೆ ಜತೆಗಿನ ಪ್ರೀತಿ ಪ್ರೇಮದ ಪ್ರಸಂಗಗಳಿಗೆ ಬ್ರೇಕ್ ಬಿದ್ದ ಬಳಿಕ ಆಲಿಯಾ ಪ್ರೀತಿಯಲ್ಲಿ ರಣಬೀರ್ ತೋಯ್ದೆದ್ದರು.
ತಮ್ಮ ಅಮೋಘ ಅಭಿನಯದಿಂದ ಗಮನ ಸೆಳೆದಿರುವ ಆಲಿಯಾ ಭಟ್, ರಣಬೀರ್ ಕುಟುಂಬಕ್ಕೂ ಆತ್ಮೀಯರಾದರು. ಕುಟುಂಬದ ಕಾರ್ಯಕ್ರಮಗಳಲ್ಲಿ ಆಗಾಗ್ಗೆ ಕಾಣಿಸಿಕೊಂಡರು. ಈ ಮೂಲಕ ಅವರ ಪ್ರೇಮಕ್ಕೆ ಭಟ್ ಮತ್ತು ಕಪೂರ್ ಕುಟುಂಬಗಳು ಅಧಿಕೃತ ಒಪ್ಪಿಗೆಯನ್ನೂ ನೀಡಿದವು. ಸುದೀರ್ಘ ಕಾಲದಿಂದಲೂ ಇವರಿಬ್ಬರ ಮದುವೆ ದಿನಾಂಕ ನಿಗದಿಯಾಗಿದೆ ಎಂಬ ಊಹಾಪೋಹಗಳು ಬಿಟೌನ್‌ನಲ್ಲಿ ಅನೇಕ ಬಾರಿ ಹರಿದಾಡಿವೆ.
ಇದರ ನಡುವೆ ಇಬ್ಬರ ನಡುವೆ ಈಗ ಎಲ್ಲವೂ ಮೊದಲಿನಂತಿಲ್ಲ, ಈ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂಬ ಸುಳಿವು ಸಿಕ್ಕಿದೆ. ಮುಂದೆ ಓದಿ...

ಗೆಳೆತಿಯರ ಜತೆಗೆ ಆಲಿಯಾ ಹುಟ್ಟುಹಬ್ಬ
ಕೊರೊನಾ ವೈರಸ್ ಭೀತಿಯ ನಡುವೆಯೇ ಆಲಿಯಾ ಇತ್ತೀಚೆಗೆ ತಮ್ಮ ಗೆಳತಿಯರ ಸಮೂಹದ ಜತೆಗೂಡಿ ಜನ್ಮದಿನ ಆಚರಿಸಿಕೊಂಡಿದ್ದರು. ಜತೆಯಲ್ಲಿ ಅವರ ತಂಗಿ ಶಹೀನ್ ಭಟ್ ಮತ್ತು ಆತ್ಮೀಯ ಸ್ನೇಹಿತೆ ಆಕಾಂಶಾ ರಂಜನ್ ಕಪೂರ್ ಇದ್ದರು.

ರಣಬೀರ್ ಸುಳಿವಿಲ್ಲ
ಬಳಿಕ ಅವರು ತಮ್ಮ ಜನ್ಮದಿನಾಚರಣೆಯ ಸಂಭ್ರಮದ ಕೆಲವು ತುಣುಕುಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಆಲಿಯಾ ಅಮ್ಮ ಸೋನಿ ರಾಜ್ದಾನ್ ಮತ್ತು ರಣಬೀರ್ ಅಮ್ಮ ನೀತು ಸೇರಿದಂತೆ ಸಿನಿಮಾ ಇಂಡಸ್ಟ್ರಿಯ ಸ್ನೇಹಿಯರು, ಸಹೋದ್ಯೋಗಿಗಳಿಂದ ಅಭಿನಂದನೆಗಳು ಹರಿದುಬಂದವು. ಆದರೆ ಇಷ್ಟೆಲ್ಲಾ ಆದರೂ ರಣಬೀರ್ ಕಪೂರ್ ಅವರಿಂದ ಒಂದೇ ಒಂದು ಸಂದೇಶ ಅಥವಾ ಫೋಟೊ ಕೂಡ ಸಾಮಾಜಿಕ ಜಾಲತಾಣದಲ್ಲಿ ಬಂದಿಲ್ಲ.

ದೂರ ಉಳಿದ ರಣಬೀರ್
ಆಲಿಯಾ ತಮ್ಮ ಗೆಳತಿಯರ ಗ್ಯಾಂಗ್ ಜತೆ ತಮ್ಮ ವಿಶೇಷ ದಿನವನ್ನು ಆಚರಿಸಿದ ಸಂದರ್ಭದಲ್ಲಿ ಮುಂಬೈನಲ್ಲಿಯೇ ಇದ್ದರೂ ರಣಬೀರ್, ಪ್ರೇಯಸಿಯಿಂದ ದೂರವೇ ಉಳಿದಿದ್ದರು. ಇದು ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ, ಇವರ ಸಂಬಂಧದಲ್ಲಿ ಏನೋ ನಡೆಯುತ್ತಿದೆ ಎಂಬ ಅನುಮಾನಗಳನ್ನು ಹುಟ್ಟುಹಾಕಿದೆ.

ಹಳೆಯ ಫೋಟೊ ವೈರಲ್ ಆಯ್ತು
ಆಲಿಯಾ ಜನ್ಮದಿನದ ಮರುದಿನ ನಟಾಶಾ ಪೂನವಾಲಾ ಇನ್‌ಸ್ಟಾಗ್ರಾಂನಲ್ಲಿ ಹಳೆಯ ಫೋಟೊವೊಂದನ್ನು ಪೋಸ್ಟ್ ಮಾಡಿದ್ದರು. ಇದರಲ್ಲಿ ಆಲಿಯಾ ಕೆನ್ನೆಗೆ ರಣಬೀರ್ ಮುತ್ತಿಕ್ಕಿದ್ದರು. ಹಿನ್ನೆಲೆಯಲ್ಲಿ ಅರ್ಜುನ್ ಕಪೂರ್-ಮಲೈಕಾ ಅರೋರಾ ಜೋಡಿ ಕೂಡಾ ಅಪ್ಪಿಕೊಂಡು ಚುಂಬಿಸಿರುವುದು ಕಾಣಿಸಿತ್ತು. ಇದೀಗ ವೈರಲ್ ಆಗಿದೆ. ಆದರೆ ಈ ಬಾರಿ ಆಲಿಯಾ ಜನ್ಮದಿನದಂದು ಇಬ್ಬರೂ ಒಟ್ಟಿಗೆ ಸುತ್ತಾಡಿದ್ದು ಕಂಡುಬಂದಿಲ್ಲ.

ಮದುವೆ ಬಗ್ಗೆ ಏಕೆ ಮಾತು?
ಕಳೆದ ವರ್ಷ ಕೂಡ ಅವರ ಸಂಬಂಧದಲ್ಲಿ ಬಿರುಕು ಉಂಟಾಗಿ ಸಣ್ಣ ಪ್ಯಾಚಪ್ ಆಗಿದ್ದು ಸುದ್ದಿಯಾಗಿತ್ತು. ನನ್ನ ಮದುವೆ ಬಗ್ಗೆ ಏಕೆ ಎಲ್ಲರೂ ಪದೇ ಪದೇ ಮಾತಾಡುತ್ತಿದ್ದಾರೆ. ಇದು ಸರಳವಾದ ಪ್ರಶ್ನೆ ಎಂದು ನನ್ನನ್ನು ನಾನೇ ಸಮಾಧಾನ ಮಾಡಿಕೊಂಡು ಅದೇ ಉತ್ತರ ನೀಡುತ್ತಿದ್ದೇನೆ. ನಾನು ಈಗ ಮದುವೆಯಾಗುತ್ತಿಲ್ಲ ಎಂಬುದಷ್ಟನ್ನೇ ಹೇಳಬಲ್ಲದೆ. ರಿಲೇಷನ್‌ಶಿಪ್‌ನಲ್ಲಿ ಇರುವುದರಿಂದ ಖುಷಿ ಇದೆ. ಅದರ ಅರ್ಥ ನಾನು ಈಗಲೇ ಮದುವೆಯಾಗುತ್ತೇನೆ ಎಂದಲ್ಲ ಎಂದು ಆಲಿಯಾ ಕೋಪದಿಂದ ಹೇಳಿದ್ದರು.


Click it and Unblock the Notifications











