ಈ ನಟಿಯರಿಗ್ಯಾಕೆ ಬೇಕಿತ್ತು ಬಾತ್‌ರೂಮ್‌ನಲ್ಲಿ ಸೆಲ್ಫಿ: ಬಾಲಿವುಡ್‌ನಲ್ಲಿ ಲೆಟೆಸ್ಟ್ ಟ್ರೆಂಡ್ ಅಂತೆ

ಫ್ಯಾಷನ್ ಲೋಕದಲ್ಲಿ ಹೊಸತು ಏನೇ ಆದರೂ ಮೊದಲು ಬಾಲಿವುಡ್‌ನಲ್ಲಿ ಪ್ರಯೋಗ ಆಗುತ್ತೆ. ಇನ್ನು ಟ್ರೆಂಡಿಂಗ್ ವಿಷಯದಲ್ಲೂ ಬೇರೆ ಇಲ್ಲ. ಬಾಲಿವುಡ್ ಮಂದಿ ಬೇಗನೇ ಟ್ರೆಂಡಿಂಗ್‌ಗೆ ಹೊಂದಿಕೊಳ್ಳುತ್ತಾಳೆ. ಸದ್ಯ ಬಾಲಿವುಡ್‌ನಲ್ಲಿ ಹೊಸ ಟ್ರೆಂಡ್ ಶುರುವಾಗಿದ್ಯಂತೆ. ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ, ಕತ್ರಿನಾ ಕೈಫ್, ದಿಶಾ ಪಾಟ್ನಿ ಎಲ್ಲರೂ ಈ ಟ್ರೆಂಡ್‌ ಅನ್ನು ಫಾಲೋ ಮಾಡುತ್ತಿದ್ದಾರೆ.

ಬಾಲಿವುಡ್‌ನಲ್ಲಿ ನಟಿಯರು ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ. ಟ್ರೋಲ್ ಆದರೂ ಚಿಂತೆಯಿಲ್ಲ. ನೆಗೆಟಿವ್ ಕಮೆಂಟ್‌ಗಳು ಬಂದರೂ ಚಿಂತೆಯಿಲ್ಲ. ಸಿನಿಮಾದಲ್ಲಿ ನಟಿಸುವುದು. ತಮಗೆ ಬೇಕಾದ ಹಾಗೆ ಇರುವುದು ಅವರ ಮುಖ್ಯ ಧ್ಯೇಯ. ಅಸಲಿಗೆ ಬಾಲಿವುಡ್‌ನಲ್ಲಿ ಬಾತ್‌ರೂಮ್ ಸೆಲ್ಫಿ ಹೊಸ ಟ್ರೆಂಡ್ ಅಂತೆ. ಬಾಲಿವುಡ್ ಟಾಪ್‌ ನಟಿಯರೆಲ್ಲಾ ಈ ಟ್ರೆಂಡ್‌ಗೆ ದಾಸರಾಗಿದ್ದಾರಂತೆ. ಈ ಬಾತ್‌ರೂಮ್ ಸೆಲ್ಫಿ ಟ್ರೆಂಡ್ ಏನು ಅನ್ನುವುದನ್ನು ನೋಡೋಣ ಬನ್ನಿ.

ಏನಿದು ಬಾಲಿವುಡ್‌ ನಟಿಯರ ಬಾತ್‌ರೂಮ್ ಸೆಲ್ಫಿ?

ಬಾಲಿವುಡ್‌ ನಟಿಯರೇ ಆರಂಭಿಸಿದ ಈ ಸೆಲ್ಫಿ ಟ್ರೆಂಡ್ ವೈರಲ್ ಆಗುತ್ತಿದೆ. ಬಾಲಿವುಡ್ ನಟಿಯರು ಬಾತ್‌ರೂಮ್‌ನಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಹೀಗೆ ತೆಗೆದ ಸೆಲ್ಫಿ ಸಾಮಾಜಿಕ ಜಾಲ ತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ. ಈ ಸೆಲ್ಫಿಗಳನ್ನು ನೋಡಿ ಅವರ ಅಭಿಮಾನಿಗಳೂ ಕೂಡ ಫಾಲೋ ಮಾಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಬಾಲಿವುಡ್‌ನಲ್ಲಿ ಈ ಬಾತ್ ರೂಮ್ ಸೆಲ್ಫಿ ಬೇಜಾನ್ ಸದ್ದು ಮಾಡುತ್ತಿದ್ಯಂತೆ. ಹಾಗಿದ್ದರೆ, ಬಾತ್‌ ರೂಮ್‌ನಲ್ಲಿ ಸೆಲ್ಫಿ ತೆಗೆದುಕೊಂಡ ನಟಿಯರು ಯಾರು ಮುಂದೆ ನೋಡಿ.

ಕತ್ರಿನಾ ಕೈಫ್

ಕತ್ರಿನಾ ಕೈಫ್

ಕತ್ರಿನಾ ಕೈಫ್ ಆಗಾಗ ತನ್ನ ಇನ್‌ಸ್ಟಾಗ್ರಾಂನಲ್ಲಿ ಸೆಲ್ಫಿ ಫೋಟೊಗಳನ್ನು ಫೋಸ್ಟ್ ಮಾಡುತ್ತಾರೆ. ಈಕೆಗೂ ಬಾತ್‌ರೂಮ್ ಸೆಲ್ಫಿ ಕ್ರೇಜ್ ಇದೆ. ಅದಕ್ಕೆ ಇತ್ತೀಚೆಗೆ ಕೆಂಪು ಬಣ್ಣದ ಡ್ರೆಸ್‌ನಲ್ಲಿ ಬಾತ್‌ರೂಮ್ ಸೆಲ್ಫಿ ತೆಗೆದು ಪೋಸ್ಟ್ ಮಾಡಿದ್ದರು.

ಮಲೈಕಾ ಅರೋರಾ

ಮಲೈಕಾ ಅರೋರಾ

ಮಲೈಕಾ ಅರೋರಾ ಬಾಲಿವುಡ್‌ನ ಎವರ್‌ಗ್ರೀನ್ ಬ್ಯೂಟಿ. ಈಕೆಗೆ ಕೂಡ ಸೆಲ್ಫಿ ಕ್ರೇಜ್ ಇದೆ. ಸದಾ ಲೇಟೆಸ್ಟ್ ಟ್ರೆಂಡ್ ಜೊತೆ ಇರುವ ಮಲೈಕಾ ಅರೋರಾ ಕೂಡ ಇತ್ತೀಚೆಗೆ ಬಾತ್‌ ಸೆಲ್ಫಿಯನ್ನು ತೆಗೆದು ಪೋಸ್ಟ್ ಮಾಡಿದ್ದರು.

ಆಲಿಯಾ ಭಟ್

ಆಲಿಯಾ ಭಟ್

ಗಂಗೂಬಾಯಿ ಹಾಗೂ ರಾಜಮೌಳಿ ನಿರ್ದೇಶನದ RRR ಸಿನಿಮಾದ ಪ್ರಚಾರದಲ್ಲಿ ಆಲಿಯಾ ಭಟ್ ಫುಲ್ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಆಲಿಯಾ ಭಟ್ ಬಾತ್‌ರೂಮ್ ಸೆಲ್ಫಿ ಬಗ್ಗೆನೂ ಚರ್ಚೆಯಾಗುತ್ತಿದೆ. ಇತ್ತೀಚೆಗೆ ಆಲಿಯಾ ಭಟ್ ಬಾತ್‌ರೂಮ್‌ನಲ್ಲಿ ಸೆಲ್ಫಿ ತೆಗೆದುಕೊಂಡಿದ್ದರು. ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಕೂಡ ಮಾಡಿದ್ದರು. ಈ ಸೆಲ್ಫಿ ಆಲಿಯಾ ಅಭಿಮಾನಿಗಳ ಮೆಚ್ಚುಗೆ ಗಳಿಸಿತ್ತು.

ದಿಶಾ ಪಾಟ್ನಿ

ದಿಶಾ ಪಾಟ್ನಿ

ಟೈಗರ್ ಶ್ರಾಫ್ ಗರ್ಲ್‌ಫ್ರೆಂಡ್ ದಿಶಾ ಪಾಟ್ನಿ ಕೂಡ ಬಾತ್‌ ರೂಮ್ ಸೆಲ್ಫಿ ತೆಗೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ದಿಶಾ ಪಾಟ್ನಿ ಆ ಬಾತ್‌ರೂಮ್ ಸೆಲ್ಫಿ ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಈ ವೇಳೆ ಆಕೆ ಸ್ಲಿಮ್ ದೇಹಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ ಎಲ್ಲಕ್ಕಿಂತ ಹೆಜ್ಜೆ ಮುಂದೆ. ಎಲ್ಲರೂ ತಮ್ಮ ಮನೆ, ಇಲ್ಲವೆ ಹೊಟೇಲ್‌ಗಳ ಬಾತ್‌ರೂಮ್‌ನಲ್ಲಿ ಸೆಲ್ಫಿ ತೆಗೆದುಕೊಂಡರೇ ಪ್ರಿಯಾಂಕಾ ಚೋಪ್ರಾ ಮಾತ್ರ ಪ್ಲೇನ್‌ನಲ್ಲಿ ಸೆಲ್ಪಿ ತೆಗೆದುಕೊಂಡಿದ್ದಾರೆ. ಈ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ಅನನ್ಯಾ ಪಾಂಡೆ

ಅನನ್ಯಾ ಪಾಂಡೆ

'ಗೆಹರಾಯಿಯಾ' ಸಿನಿಮಾದಿಂದ ಇತ್ತೀಚೆಗೆ ಸದ್ದು ಮಾಡುತ್ತಿರುವ ನಟಿ ಅನನ್ಯ ಪಾಂಡೆ. ಈಕೆ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ಇತ್ತೀಚೆಗೆ ಬ್ಲ್ಯಾಕ್ ಡ್ರೆಸ್‌ನಲ್ಲಿ ಬಾತ್‌ರೂಮ್ ಒಳಗೆ ತೆಗೆದ ಫೋಟೊ ಸಖತ್ ವೈರಲ್ ಆಗುತ್ತಿದೆ.

More from Filmibeat

English summary
Bollywood actress who set internet on fire with Bathroom selfies are now treanding. Alia Bhatt, Katrina Kaif, Disha Patani, Priyanka Chopra and many bollywood actress taking selfies in Bathroom.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X