ಅಲ್ಲು ಅರ್ಜುನ್, ಸುಕುಮಾರ್‌ ಇಬ್ಬರಿಗೆ ₹200 ಕೋಟಿ ಸಂಭಾವನೆ? ನಿರ್ಮಾಪಕರಿಗೆ ಚಿಪ್ಪೇ ಗತಿ!

ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ' ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದ್ದಂತೆ ಪಾರ್ಟ್ 2 ಬಗ್ಗೆ ಟಾಕ್ ಶುರುವಾಗಿದೆ. ಅದರಲ್ಲೂ 'ಕೆಜಿಎಫ್ 2' ಬ್ಲಾಕ್ ಬಸ್ಟರ್ ಲಿಸ್ಟ್ ಸೇರಿದ್ಮೇಲಂತೂ 'ಪುಷ್ಪ 2' ಬಗ್ಗೆ ಎಲ್ಲರ ಕಣ್ಣು ನೆಟ್ಟಿದೆ. ಯಾಕಂದ್ರೆ, 'ಪುಷ್ಪ' ಸಿನಿಮಾ ಬಿಡುಗಡೆಗೆ ಸಜ್ಜಾದಲ್ಲಿಂದ 'ಕೆಜಿಎಫ್' ಜೊತೆ ಹೋಲಿಕೆ ಮಾಡಿಕೊಳ್ಳುತ್ತಲೇ ಇತ್ತು.

ಈಗ 'ಪುಷ್ಪ 2' ಶೂಟಿಂಗ್‌ಗೆ ಚಿತ್ರತಂಡ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈಗ ಅಲ್ಲು ಅರ್ಜುನ್ ಸಿನಿಮಾ 'ಕೆಜಿಎಫ್ 2' ಬಾಕ್ಸಾಫೀಸ್‌ ದಾಖಲೆಯನ್ನು ಉಡೀಸ್ ಮಾಡುತ್ತಾ ಅಂತ ಚಿತ್ರತಂಡ ಎದುರು ನೋಡುತ್ತಿದೆ. ಈ ಮಧ್ಯೆ ಅಲ್ಲು ಅರ್ಜುನ್ ಹಾಗೂ ನಿರ್ದೇಶಕ ಸುಕುಮಾರ್ ಪಡೆದ ಅತೀ ದೊಡ್ಡ ಸಂಭಾವನೆ ಬಗ್ಗೆನೇ ಟಾಕ್ ಆಗುತ್ತಿದೆ.

ಆಗಸ್ಟ್ 1 ರಿಂದ ನಿರ್ಮಾಣ ಟಾಲಿವುಡ್ ನಿರ್ಮಾಪಕರು ಶೂಟಿಂಗ್ ನಿಲ್ಲಿಸಿದ್ದಾರೆ. ಸಿನಿಮಾ ನಿರ್ಮಾಣದ ವೆಚ್ಚ ಹೆಚ್ಚಾಗುತ್ತಿದೆ ಅನ್ನೋ ಆರೋಪ. ಇರಲ್ಲಿ ಸೂಪರ್‌ಸ್ಟಾರ್‌ಗಳ ಸಂಭಾವನೆ ಕೂಡ ಸೇರಿಕೊಂಡಿದೆ. ಈ ಬೆನ್ನಲ್ಲೇ ಈಗ 'ಪುಷ್ಪ 2'ಗಾಗಿ ಅಲ್ಲು ಅರ್ಜುನ್ ಹಾಗೂ ನಿರ್ದೇಶಕ ಸುಕುಮಾರ್ ಪಡೆದ ಸಂಭಾವನೆ ಬಗ್ಗೆ ಟಾಲಿವುಡ್‌ನಲ್ಲಿ ಹೊಗೆಯಾಡುತ್ತಿದೆ. ಅಷ್ಟಕ್ಕೂ ಇಬ್ಬರೂ ಪಡೆದ ಸಂಭಾವನೆ ಎಷ್ಟು? ಅಲ್ಲು ಅರ್ಜುನ್ ವಿರುದ್ಧ ನಿರ್ಮಾಪಕರು ಕೋಪ ಮಾಡಿಕೊಂಡಿದ್ದಾರಾ? ಟಾಲಿವುಡ್ ಏನಂತಿದೆ ಅನ್ನೋದನ್ನು ತಿಳಿಯಲು ಮುಂದೆ ಓದಿ.

ಅಲ್ಲು ಅರ್ಜುನ್ ಸಂಭಾವನೆ ಎಷ್ಟು?

ಅಲ್ಲು ಅರ್ಜುನ್ ಸಂಭಾವನೆ ಎಷ್ಟು?

'ಪುಷ್ಪ 2' ಬಗ್ಗೆ ವಿಶ್ವದಾದ್ಯಂತ ಕ್ರೇಜ್ ಇರೋದಂತೂ ನಿಜ. ಅಲ್ಲು ಅರ್ಜುನ್ ಮ್ಯಾನರಿಸಂ ಹಾಗೂ ಸ್ಟೈಲ್ ನೋಡುವುದಕ್ಕೆಂದೇ ಫ್ಯಾನ್ಸ್ ಕಾದು ಕೂತಿದ್ದಾರೆ. ಈ ಕಾರಣಕ್ಕೆ 'ಕೆಜಿಎಫ್ 2' ಬಾಕ್ಸಾಫೀಸ್ ದಾಖಲೆಯನ್ನು ಮುರಿಯುತ್ತೋ ಇಲ್ಲವೋ? ಆದರೆ, ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸೋದಂತೂ ಪಕ್ಕಾ. ಈ ಕಾರಣಕ್ಕೆ ಅಲ್ಲು ಅರ್ಜುನ್ ಕೂಡ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ. ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಐಕಾನ್ ಸ್ಟಾರ್ 'ಪುಷ್ಪ 2'ಗೆ ಬರೋಬ್ಬರಿ 125 ಕೋಟಿ ರೂ. ಹಾಗೂ ಪ್ರಾಫಿಟ್‌ ಕೇಳಿದ್ದಾರೆ ಎನ್ನಲಾಗಿದೆ. ಇದು ನಿರ್ಮಾಪಕರಿಗೆ ಕಷ್ಟ ಆಗುತ್ತಿದೆ ಎಂದು ವರದಿಯಾಗಿದೆ.

ಸುಕುಮಾರ್ ಸಂಭಾವನೆ ಕಮ್ಮಿಯೇನಿಲ್ಲ

ಸುಕುಮಾರ್ ಸಂಭಾವನೆ ಕಮ್ಮಿಯೇನಿಲ್ಲ

ಕೆಲವು ದಿನಗಳ ಹಿಂದೆನೇ ಅಲ್ಲು ಅರ್ಜುನ್ ಸಂಭಾವನೆ ಬಗ್ಗೆ ಚರ್ಚೆಯಾಗುತ್ತಿತ್ತು. 'ಪುಷ್ಪ 2'ಗೆ ಅಲ್ಲು ಅರ್ಜುನ್ ಬರೋಬ್ಬರಿ 100 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎಂದು ವರದಿಯಾಗಿತ್ತು. ಈಗ ಸುಕುಮಾರ್ ಕೂಡ ದೊಡ್ಡ ಮೊತ್ತ ಪಡೆದಿದ್ದಾರೆ ಎನ್ನಲಾಗಿದೆ. ತೆಲುಗು ಮಾಧ್ಯಮಗಳ ವರದಿ ಪ್ರಕಾರ, 'ಪುಷ್ಪ 2'ಗಾಗಿ ನಿರ್ದೇಶಕ ಸುಕುಮಾರ್ ಬರೋಬ್ಬರಿ 75 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಈ ಮೂಲಕ ಹೀರೊ ಹಾಗೂ ನಿರ್ದೇಶಕರಿಬ್ಬರಿಂದಲೇ 200 ಕೋಟಿ ರೂ. ಸಂಭಾವನೆ ನೀಡಬೇಕಾಗಿದೆ. ಇದು ನಿರ್ಮಾಪಕರಿಗೆ ತಲೆಕೆಡಿಸಿದೆ ಎಂದು ಹೇಳಲಾಗುತ್ತಿದೆ.

ನಿರ್ಮಾಪಕರಿಗೆ ಕೇವಲ ಶೇ.20ರಷ್ಟು ಲಾಭ

ನಿರ್ಮಾಪಕರಿಗೆ ಕೇವಲ ಶೇ.20ರಷ್ಟು ಲಾಭ

'ಪುಷ್ಪ 2' ಸಿನಿಮಾದ ನಿರ್ಮಾಪಕರು 200 ಕೋಟಿ ರೂ. ಇಬ್ಬರಿಗಾಗಿ ಖರ್ಚು ಮಾಡುತ್ತಿದೆ. ಅದೇ ಸಿನಿಮಾ ನಿರ್ಮಾಣಕ್ಕೆ ಕೇವಲ 150 ಕೋಟಿ ರೂ. ಹಣ ಹಾಕುತ್ತಿದೆ. ಸಿನಿಮಾದ ಒಟ್ಟು ಬಜೆಟ್ 350 ಕೋಟಿ ರೂ. ಎನ್ನಲಾಗಿದೆ. ಇನ್ನೊಂದು ಕಡೆ ಸಿನಿಮಾದಿಂದ ಬರುವ ಲಾಭದಲ್ಲಿ ಶೇ. 40ರಷ್ಟು ಹೀರೊ ಹಾಗೂ ಡೈರೆಕ್ಟರ್‌ಗೆ ಸೇರಲಿದ್ದು, ನಿರ್ಮಾಪಕರಿಗೆ ಕೇವಲ ಶೇ. 20ರಷ್ಟು ಮಾತ್ರ ಸಿಗುತ್ತೆ ಎಂದು ವರದಿಯಾಗಿದೆ. ಇದು ದೊಡ್ಡ ಬಜೆಟ್ ಹಾಕಿ ನಿರ್ಮಾಣ ಮಾಡುತ್ತಿರುವ ನಿರ್ಮಾಪಕರಿಗೆ ಕಡಿಮೆನೇ ಅಂತ ಚರ್ಚೆಯಾಗುತ್ತಿದೆ.

'ಪುಷ್ಪ' ಬಜೆಟ್ ಎಷ್ಟು? ಲಾಭವೆಷ್ಟು?

'ಪುಷ್ಪ' ಬಜೆಟ್ ಎಷ್ಟು? ಲಾಭವೆಷ್ಟು?

'ಪುಷ್ಪ' ಸಿನಿಮಾವನ್ನು ಸುಮಾರು 170 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿತ್ತು. ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರಿಂದ ಸ್ವಲ್ಪ ದೊಡ್ಡ ಮೊತ್ತದಲ್ಲಿ ಸಿನಿಮಾ ನಿರ್ಮಾಣ ಮಾಡಲಾಗಿತ್ತು. ಆದರೆ, ಸಿನಿಮಾ ವಿಶ್ವದಾದ್ಯಂತ ಸುಮಾರು 365 ಕೋಟಿ ರೂ. ಕಲೆಕ್ಷನ್ ಮಾಡಿದ್ದರಿಂದ ಪಾರ್ಟ್ 2 ಅಷ್ಟೇ ಮೊತ್ತವನ್ನು ನಿರ್ಮಾಪಕರು ಸುರಿಯುತ್ತಿದ್ದಾರೆ. ಆದರೆ, ಅವರು ಹೆಚ್ಚು ಲಾಭವನ್ನು ನಿರೀಕ್ಷಿಸುವಂತಿಲ್ಲ. ಈಗ ಟಾಲಿವುಡ್‌ ನಿರ್ಮಾಪಕರು ಶೂಟಿಂಗ್ ಸ್ಥಗಿತ ಮಾಡಿರೋದು ಪುಷ್ಪ ನಿರ್ಮಾಪಕರಿಗೆ ರಿಲೀಪ್ ಕೊಡಬಹುದು.

More from Filmibeat

English summary
Allu Arjun And Sukumar Remuneration Itself Is Around 200 Cr. For Pushpa 2, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X