ದಸರಾ ಹಬ್ಬಕ್ಕೆ ಅಲ್ಲು ಸ್ಟುಡಿಯೋ ಓಪನಿಂಗ್: ಮೊದಲ ಸಿನಿಮಾವೇ 'ಪುಷ್ಪ 2'!

ಟಾಲಿವುಡ್‌ನಲ್ಲಿ ಮೆಗಾ ಕುಟುಂಬದಂತೆಯೇ ಅಲ್ಲು ಕುಟುಂಬ ಕೂಡ ಪವರ್‌ಫುಲ್. ಅದರಲ್ಲೂ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಆದ್ಮೇಲಂತೂ ಟಾಲಿವುಡ್‌ನಲ್ಲಿ ಮತ್ತಷ್ಟು ಪವರ್ ಬಂದಂತಾಗಿದೆ. ಈಗ ಅಲ್ಲು ಕುಟುಂಬ ಹೊಸ ಸಾಹಸಕ್ಕೆ ಕೈ ಹಾಕಿದ್ದು, ಶೀಘ್ರದಲ್ಲಿಯೇ ಲೋಕಾರ್ಪಣೆ ಮಾಡಲಿದೆ.

ಎರಡು ವರ್ಷಗಳ ಹಿಂದೆ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಮೆಗಾ ಪ್ರಾಜೆಕ್ಟ್ ಅನ್ನು ಅನೌನ್ಸ್ ಮಾಡಿದ್ದರು. ಟಾಲಿವುಡ್‌ಗಾಗಿ ಹೊಸ ಸ್ಟುಡಿಯೋ ಒಂದನ್ನು ಆರಂಭ ಮಾಡುವುದಾಗಿ ಹೇಳಿದ್ದರು. ಆ ಪ್ರಾಜೆಕ್ಟ್ ಈಗ ಕಂಪ್ಲೀಟ್ ಆಗಿದ್ದು, ದಸರಾ ಹಬ್ಬಕ್ಕೆ ಉದ್ಘಾಟನೆ ಮಾಡುವುದಕ್ಕೆ ಸಜ್ಜಾಗಿ ನಿಂತಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ.

ದಸರಾಗೆ ಅಲ್ಲು ಸ್ಟುಡಿಯೋ ಆರಂಭ?

ಅಲ್ಲು ಅರವಿಂದ್ ತಮ್ಮ ಕುಟುಂಬಕ್ಕೆ ಸೇರಿದ್ದ ಜಾಗದಲ್ಲಿ ಅಲ್ಲು ಸ್ಟುಡಿಯೋ ಕಟ್ಟುವುದಕ್ಕೆ ಮುಂದಾಗಿದ್ದರು. ಗಂದಿಪೇಟ್ ಸಮೀಪವಿರುವ ಔಟರ್ ರಿಂಗ್‌ ರೋಡ್‌ ಸಮೀಪ ಅಲ್ಲು ಕುಟುಂಬ ಸ್ಟುಡಿಯೋ ಕಟ್ಟುವುದಕ್ಕೆ ಸಜ್ಜಾಗಿದ್ದರು. ಇದು ಟಾಲಿವುಡ್ ಮಂದಿಗೆ ಬಿಗ್ ಸರ್ಪ್ಪ್ರೈಸ್ ಸಿಕ್ಕಂತಾಗಿತ್ತು.

ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ, ಆ ಸ್ಟುಡಿಯೋ ಈಗ ಕಂಪ್ಲೀಟ್ ಆಗಿದೆ ಎನ್ನಲಾಗಿದೆ. ದಸರಾ ಹಬ್ಬದ ಖುಷಿಯ ಸಂದರ್ಭದಲ್ಲಿ ಅಕ್ಟೋಬರ್ 1 ರಂದು ಸ್ಟುಡಿಯೋವನ್ನು ಲೋಕಾರ್ಷಣೆ ಮಾಡಲಿದ್ದಾರೆ ಎನ್ನಲಾಗಿದೆ.

Allu Arjun Family Ready to Innagurate Allu Studio On October 1st With Pushpa 2

ಮುಖ್ಯ ಅತಿಥಿಗಳು ಯಾರು?

ಅಲ್ಲು ಸ್ಟುಡಿಯೋ ಶುಭಾರಂಭಕ್ಕೆ ಮೆಗಾಸ್ಟಾರ್ ಚಿರಂಜೀವಿ ಹಾಗೂ ತೆಲಂಗಾಣ ಸಿ ಎಂ ಕೆ ಸಿ ಚಂದ್ರಶೇಖರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಅಂತ ವರದಿಯಾಗಿದೆ. ಇವರೊಂದಿಗೆ ಮೆಗಾ ಕುಟುಂಬದ ಹೀರೊಗಳು ಹಾಗೂ ಆತ್ಮೀಯರು ಭಾಗವಹಿಸುವ ಸಾಧ್ಯತೆಯಿದೆ.

ಅಕ್ಟೋಬರ್ 1 ಅಲ್ಲು ರಾಮಲಿಂಗಯ್ಯ ಅವರ ಜನ್ಮ ದಿನೋತ್ಸವ ಕೂಡ ಹೌದು. ಈ ಕಾರಣಕ್ಕಾಗಿಯೇ ಮಹತ್ವಕಾಂಕ್ಷೆಯ ಅಲ್ಲು ಸ್ಟುಡಿಯೋದ ಪ್ರಮುಖ ಭಾಗವನ್ನು ಚಿತ್ರೀಕರಣಕ್ಕೆ ನೀಡಲು ಅಲ್ಲು ಕುಟುಂಬ ಮುಂದಾಗಿದೆ ಎನ್ನಲಾಗಿದೆ.

Allu Arjun Family Ready to Innagurate Allu Studio On October 1st With Pushpa 2

'ಪುಷ್ಟ 2' ಸಿನಿಮಾದಿಂದಲೇ ಆರಂಭ

ಅಲ್ಲು ಸ್ಟುಡಿಯೋದಲ್ಲಿ ಶೂಟಿಂಗ್ ಆರಂಭಿಸುವ ಮೊದಲ ಸಿನಿಮಾವೇ 'ಪುಷ್ಪ 2' ಎಂದು ಹೇಳಲಾಗುತ್ತಿದೆ. ಟಾಲಿವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ 2' ಇದೇ ಸೆಟ್ಟಿನಲ್ಲಿ ಶೂಟಿಂಗ್ ಟೇಕಾಫ್ ಆಗುತ್ತಿದೆ.

ಮೆಗಾ ಪ್ರಡ್ಯೂಸರ್ ಅಲ್ಲು ಅರ್ಜುನ್ ಇದೂವರೆಗೂ ಸ್ಟುಡಿಯೋ ಬ್ಯುಸಿನೆಸ್‌ಗೆ ಕೈ ಹಾಕಿರಲಿಲ್ಲ. ಇದೂವರೆಗೂ ಸಿನಿಮಾ ಮೇಕಿಂಗ್ ಹಾಗೂ ವಿತರಣೆ ಕಡೆ ಮುಖ ಮಾಡಿದ್ದರು. ಅಲ್ಲದೆ ಓಟಿಟಿ ವೇದಿಕೆಗೂ ಮುಂದಾಗಿದ್ದರು. ಕೈ ಹಾಕಿದ ಎಲ್ಲಾ ಉದ್ಯಮದಲ್ಲಿಯೂ ಸಕ್ಸಸ್ ಕಂಡಿರೋ ಅಲ್ಲು ಅರವಿಂದ್ ಈಗ ಸ್ಟುಡಿಯೋಗೆ ಕೈ ಹಾಕಿದ್ದು, ಮತ್ತಷ್ಟು ಪವರ್ ಬಂದಂತಾಗಿದೆ.

More from Filmibeat

English summary
Allu Arjun Family Ready to Inaugurate Allu Studio On October 1st With Pushpa 2, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X