'ಕೆಜಿಎಫ್ 2' ಆಯ್ತು ಈಗ 'ವಿಕ್ರಾಂತ್ ರೋಣ' ತಂತ್ರದ ಹಿಂದೆ ಬಿದ್ದ 'ಪುಷ್ಪ 2'!

'ಪುಷ್ಪ' ಸುದ್ದಿ ಎದ್ದಾಗಲೆಲ್ಲಾ ಅಲ್ಲೊಂದು ಕನ್ನಡ ಸಿನಿಮಾ ಕನೆಕ್ಟ್ ಆಗುತ್ತೆ. 'ಪುಷ್ಪ' ಬಿಡುಗಡೆಗೂ ಮುನ್ನ 'ಕೆಜಿಎಫ್'ಗಿಂತ ದೊಡ್ಡ ಸಿನಿಮಾ ಅಂತ ಹೇಳಿತ್ತು. ಬಿಡುಗಡೆಗೂ ಮುನ್ನ 'ಕೆಜಿಎಫ್' ತಂತ್ರವನ್ನೇ ಬಳಸಿಕೊಂಡು ಸಿನಿಮಾ ರಿಲೀಸ್ ಮಾಡಿತ್ತು. ಈಗ ಮತ್ತೊಂದು ಕನ್ನಡ ಸಿನಿಮಾದ ತಂತ್ರವನ್ನು ಬಳಸಿಕೊಳ್ಳುತ್ತಿದೆ.

ಅಲ್ಲು ಅರ್ಜುನ್ ಅಭಿನಯದ 'ಪುಷ್ಪ' ಸಿನಿಮಾದ ಬಗ್ಗೆ ಹೇಳಬೇಕಾಗಿಲ್ಲ. ಕಳೆದ ಡಿಸೆಂಬರ್‌ನಲ್ಲಿ ಈ ಸಿನಿಮಾ ತೆರೆಕಂಡು ಭರ್ಜರಿ ಯಶಸ್ಸು ಕಂಡಿತ್ತು. ಈಗ ಸುಕುಮಾರ್ ನಿರ್ದೇಶನದ ಸೀಕ್ವೆಲ್ ಕೂಡ ಅನೌನ್ಸ್ ಆಗಿದೆ. ಈ ಬೆನ್ನಲ್ಲೇ 'ವಿಕ್ರಾಂತ್ ರೋಣ' ತಂತ್ರದ ಹಿಂದೆ ಬಿದ್ದಿದೆ.

ಇತ್ತೀಚೆಗಷ್ಟೇ ಸೋಶಿಯಲ್ ಮೀಡಿಯಾದಲ್ಲಿ 'ಪುಷ್ಪ' ಸೀಕ್ವೆಲ್ ಬಗ್ಗೆ ಇಂಟ್ರೆಸ್ಟಿಂಗ್ ಸುದ್ದಿಯೊಂದು ಹೊರ ಬಿದ್ದಿದೆ. ಅಲ್ಲು ಅರ್ಜುನ್ ಸಿನಿಮಾ 'ಪುಷ್ಪ' ಬರೋಬ್ಬರಿ 10 ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆಯಂತೆ. ಅಂತಹದ್ದೊಂದು ವದಂತಿ ಸ್ಯಾಂಡಲ್‌ವುಡ್‌ನಲ್ಲಿ ವೈರಲ್ ಆಗುತ್ತಿದೆ.

'ಪುಷ್ಪ 2' ಆರಂಭ ಯಾವಾಗ?

'ಪುಷ್ಪ 2' ಆರಂಭ ಯಾವಾಗ?

ಐಕಾನ್ ಸ್ಟಾರ್ ಅಲ್ಲು ಅರ್ಜುನ್, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಇಬ್ಬರು ಜೋಡಿಯಾಗಿ ನಟಿಸಿದ ಸಿನಿಮಾ ಪ್ಯಾನ್‌ ಇಂಡಿಯಾ ಲೆವಲ್‌ನಲ್ಲಿ ಸದ್ದು ಮಾಡಿದ್ದು ಗೊತ್ತೇ ಇದೆ. ನಿರ್ದೇಶಕ ಸುಕುಮಾರ್ ಈ ಸಿನಿಮಾವನ್ನು ಎರಡು ಪಾರ್ಟ್‌ಗಳಲ್ಲಿ ರಿಲೀಸ್ ನಿರ್ಧಸಿರಿದ್ದರು. ಅದರಂತೆ ಶೇಷಾಚಲಂ ಅರಣ್ಯದಲ್ಲಿ ರಕ್ತಚಂದನದ ಕಳ್ಳರ ಕಳ್ಳಸಾಗಾಣಿಕೆಯ ಮುಂದುವರೆದ ಭಾಗ ನಿರ್ದೇಶನಕ್ಕೆ ಸಜ್ಜಾಗಿದ್ದಾರೆ. ಈ ಮಧ್ಯೆ ಕನ್ನಡ ಸಿನಿಮಾಗಳ ಪ್ಯಾನ್ ಇಂಡಿಯಾ ತಂತ್ರವನ್ನೇ ಅನುಸರಿಸುತ್ತಿದ್ದಾರೆ.

10 ಭಾಷೆಗಳಲ್ಲಿ 'ಪುಷ್ಪ' ರಿಲೀಸ್

10 ಭಾಷೆಗಳಲ್ಲಿ 'ಪುಷ್ಪ' ರಿಲೀಸ್

'ವಿಕ್ರಾಂತ್ ರೋಣ' ಸಿನಿಮಾ ಆರು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಅಲ್ಲದೆ ವಿಶ್ವದ ಬೇರೆ ಬೇರೆ ಭಾಷೆಗಳಲ್ಲಿ ಸಿನಿಮಾವನ್ನು ರಿಲೀಸ್ ಮಾಡಲು ಸಜ್ಜಾಗಿದೆ. ಈಗಾಗಲೇ ಡಬ್ಬಿಂಗ್ ಮಾಡಲು ತುದಿಗಾಲಲ್ಲಿ ನಿಂತಿದೆ. ಈಗ ಇದೇ ತಂತ್ರವನ್ನು ಅನುಸರಿಸಲು 'ಪುಷ್ಪ' ಕೂಡ ಮುಂದಾಗಿದ್ಯಂತೆ. ಬರೋಬ್ಬರಿ 10 ಭಾಷೆಗಳಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ ಎಂಬ ಸುದ್ದಿ ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಮೂಲಗಳ ಪ್ರಕಾರ, 5 ಭಾರತೀಯ ಭಾಷೆ ಹಾಗೂ 5 ವಿದೇಶಿ ಭಾಷೆಯಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

ಕೆಜಿಎಫ್ ತಂತ್ರ ಕಾಫಿ ಮಾಡಿದ್ದ 'ಪುಷ್ಪ'

ಕೆಜಿಎಫ್ ತಂತ್ರ ಕಾಫಿ ಮಾಡಿದ್ದ 'ಪುಷ್ಪ'

'ಕೆಜಿಎಫ್' ಸಿನಿಮಾವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಎರಡು ಚಾಪ್ಟರ್‌ಗಳ ಮಧ್ಯೆ ಒಂದು ಲಾಂಗ್ ಇತ್ತು. ಸಾಕಷ್ಟು ಸಮಯ ತೆಗೆದುಕೊಂಡು ಭರ್ಜರಿ ಪ್ರಚಾರ ಮಾಡಿದ್ದರು. ಅಲ್ಲದೆ ಎರಡನೇ ಚಾಪ್ಟರ್‌ನಲ್ಲಿ ಬಾಲಿವುಡ್‌ ಹಾಗೂ ಟಾಲಿವುಡ್ ನಟರನ್ನೂ ಸಿನಿಮಾದಲ್ಲಿ ವಿಶೇಷ ಪಾತ್ರಗಳನ್ನು ನೀಡಲಾಗಿತ್ತು. 'ಪುಷ್ಪ' ಕೂಡ ಇದೇ ತಂತ್ರಕ್ಕೆ ಮುಂದಾಗಿದೆ. ಪ್ರತಿಬಾರಿ 'ಕೆಜಿಎಫ್ 2' ಜೊತೆ ಹೋಲಿಕೆ ಮಾಡಿಕೊಳ್ಳುತ್ತಾ ಬಂದಿರೋ 'ಪುಷ್ಪ' ಈ ಬಾರಿಗೂ ಇದೇ ತಂತ್ರಕ್ಕೆ ಕೈ ಹಾಕಲಿದ್ದು, ಬಾಲಿವುಡ್‌ ನಟರನ್ನು ಸೇರಿಕೊಳ್ಳಲಿದೆ ಎಂಬ ವದಂತಿ ಹಬ್ಬಿದೆ.

ಆಗಸ್ಟ್‌ನಿಂದ ಶೂಟಿಂಗ್ ಶುರು

ಆಗಸ್ಟ್‌ನಿಂದ ಶೂಟಿಂಗ್ ಶುರು

ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಕಾಂಬಿನೇಷನ್ ಸಿನಿಮಾ 'ಪುಷ್ಪ 2' ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲದೆ ಐದು ಅಂತಾರಾಷ್ಟ್ರೀಯ ಭಾಷೆಗಳಲ್ಲಿ ತಯಾರಾಗುತ್ತಿದೆ ಎಂಬ ಸುದ್ದಿ ಹಬ್ಬಿದೆ. ಸದ್ಯ ಚಿತ್ರತಂಡ ಲೋಕೇಶ್ ಫೈನಲ್ ಮಾಡುತ್ತಿದ್ದು, ಮತ್ತೊಂದು ಕಡೆ ಸ್ಕ್ರಿಪ್ಟ್ ಕಂಪ್ಲೀಟ್ ಮಾಡಲು ಸುಕುಮಾರ್ ಮುಂದಾಗಿದ್ದಾರಂತೆ. 'ಪುಷ್ಪ 2' ಭಾಗದ ಚಿತ್ರೀಕರಣ ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗಲಿದ್ದು, 2023 ಆಗಸ್ಟ್‌ ತಿಂಗಳಲ್ಲಿ ಬಿಡುಗಡೆಯಾಗಲಿದೆಯಂತೆ.

More from Filmibeat

English summary
Allu Arjun Starrer Pushpa 2 Will Be Releasing Release In 10 Languages, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X