'ಪುಷ್ಪ'ಗಾಗಿ ನಿದ್ದೆ ಬಿಟ್ಟ ಐಕಾನ್ ಸ್ಟಾರ್ ಅಲ್ಲು ಅರ್ಜುನ್: ದಿನಕ್ಕೆ ಬರೀ 4 ಗಂಟೆ ರೆಸ್ಟ್
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ವೃತ್ತಿ ಬದುಕಿನ ಪ್ರಮುಖ ಸಿನಿಮಾ 'ಪುಷ್ಪ'. ಅಲ್ಲು ಅಚ್ಚು ಮೆಚ್ಚಿನ ನಿರ್ದೇಶಕ ಸುಮಾರ್ ನಿರ್ದೇಶಿಸಿದ ಸಿನಿಮಾ ಇದು. ಈ ಸಿನಿಮಾ ಈಗ ಬಿಡುಗಡೆ ಸಜ್ಜಾಗುತ್ತಿದೆ. ಈಗಾಗಲೇ ಚಿತ್ರತಂಡ ಕೂಡ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅನ್ನುವುದನ್ನೂ ಸಾರಿ ಹೇಳಿದ್ದಾರೆ. ಡಿಸೆಂಬರ್ 17 ರಂದು ಪುಷ್ಪ ಚಾಪ್ಟರ್ 1 ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಈ ಸಿನಿಮಾ ರಿಲೀಸ್‌ಗಾಗಿ ಇಡೀ ಭಾರತೀಯ ಚಿತ್ರರಂಗ ಕಾದು ಕೂತಿದೆ.
'ಪುಷ್ಪ' ಅಲ್ಲು ಅರ್ಜುನ್ ನಟಿಸಿರುವ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಹೀಗಾಗಿ ಕೇವಲ ನಿರ್ದೇಶಕ ಸುಕುಮಾರ್ ಅಷ್ಟೇ ಅಲ್ಲ. ಅಲ್ಲು ಅರ್ಜುನ್ ಕೂಡ ತಲೆ ಕೆಡಿಸಿಕೊಂಡು ಕೂತಿದ್ದಾರೆ. ಯಾವುದೇ ಅಡೆ ತಡೆ ಇಲ್ಲದೆ ಸಿನಿಮಾ ಬಿಡುಗಡೆ ಮಾಡುವುದಕ್ಕೆ ಅಲ್ಲು ಅರ್ಜುನ್ ನಿರ್ಧರಿಸಿದ್ದಾರೆ. ಹೀಗಾಗಿ ಕಳೆದ ಕೆಲವು ದಿನಗಳಿಂದ ಅಲ್ಲು ಸರಿಯಾಗಿ ನಿದ್ದೆನೇ ಮಾಡಿಲ್ಲ ಎನ್ನುತ್ತಿವೆ ಟಾಲಿವುಡ್ ಮೂಲಗಳು.

'ಪುಷ್ಪ'ಗಾಗಿ ಅಲ್ಲು ಅರ್ಜುನ್ ದಿನಕ್ಕೆ 20 ಗಂಟೆ ಕೆಲಸ
ಒಬ್ಬ ಸ್ಟಾರ್ ಹೀರೊ ದಿನಕ್ಕೆ ನಿರಂತರವಾಗಿ 20 ಗಂಟೆ ಕೆಲಸ ಮಾಡುವುದು ತೀರಾ ವಿರಳ. ಆದರೆ, ಅಲ್ಲು ಅರ್ಜುನ್ ಪುಷ್ಪಗಾಗಿ ದಿನಕ್ಕೆ 20 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರಂತೆ . ಇಂತಹದ್ದೊಂದು ಸುದ್ದಿ ಈ ತೆಲುಗು ಚಿತ್ರರಂಗದಲ್ಲಿ ಬಾರಿ ಸುದ್ದಿ ಮಾಡುತ್ತಿದೆ. ಅಲ್ಲು ಅರ್ಜುನ್ ಈ ಸಿನಿಮಾದಲ್ಲಿ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರಕ್ತ ಚಂದನ ಕಳ್ಳ ಸಾಗಾಣಿಕೆಯನ್ನು ಆಧರಿಸಿದ ಸಿನಿಮಾ ಆಗಿದ್ದು, ಬಹುತೇಕ ಸಿನಿಮಾ ಕಾಡಿನ ಮಧ್ಯೆ ಚಿತ್ರೀಕರಿಸಲಾಗಿದೆ. ಈಗ ಬಿಡುಗಡೆಗೆ 20 ದಿನ ಉಳಿದಿದ್ದು ಅಲ್ಲು ಅರ್ಜುನ್‌ಗೆ ಟೆನ್ಷನ್ ಶುರುವಾಗಿದ್ಯಂತೆ.

'ಪುಷ್ಪ' ಚಿತ್ರದ ಶೂಟಿಂಗ್ ಮುಗಿದಿಲ್ಲ
ಸುಕುಮಾರ್ ನಿರ್ದೇಶಿಸುತ್ತಿರುವ 'ಪುಷ್ಪ ದಿ ರೈಸ್' ಫಸ್ಟ್ ಪಾರ್ಟ್ ಶೂಟಿಂಗ್ ಇನ್ನೂ ಮುಗಿದಿಲ್ಲ. ಕೆಲವು ದೃಶ್ಯಗಳನ್ನು ಚಿತ್ರತಂಡ ಇನ್ನೂ ಶೂಟ್ ಮಾಡುತ್ತಲೇ ಇದೆ. ಸಿನಿಮಾ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಉಳಿದುಕೊಂಡಿರುವುದರಿಂದ ಚಿತ್ರತಂಡಕ್ಕೆ ಗಾಬರಿಗೊಂಡಿದೆಯಂತೆ. ಅದಕ್ಕಾಗಿ ಬಿಡುವಿಲ್ಲದೆ ಚಿತ್ರೀಕರಣ ಮಾಡುತ್ತಿದೆ. ಆದರೂ, ಸಿನಿಮಾದ ಶೂಟಿಂಗ್ ಇನ್ನು ಮುಗಿಯುತ್ತಿಲ್ಲ. ಹೀಗಾಗಿ ಹೇಗಾದರೂ ಮಾಡಿ ಸಿನಿಮಾ ಮುಗಿಸಲೇಬೇಕು ಅಂತ ಅಲ್ಲು ಅರ್ಜುನ್ ಹಠಕ್ಕೆ ಬಿದ್ದು ಕೆಲಸ ಮಾಡುತ್ತಿದ್ದಾರಂತೆ.

ಅಂದುಕೊಂಡ ದಿನವೇ 'ಪುಷ್ಪ' ರಿಲೀಸ್‌ಗೆ ಪಟ್ಟು
'ಪುಷ್ಪ' ಚಿತ್ರೀಕರಣ ಇನ್ನೂ ಮುಗಿಯದೇ ಇರುವುದರಿಂದ ಸಿನಿಮಾ ಬಿಡುಗಡೆಯನ್ನು ಮುಂದೂಡಲು ಚಿತ್ರತಂಡ ಚಿಂತಿಸಿತ್ತು ಎನ್ನಲಾಗಿದೆ. ಆದರೆ, ಅಲ್ಲು ಅರ್ಜುನ್ ಮಾತ್ರ ಒಪ್ಪುತ್ತಿಲ್ಲವಂತೆ. ಡಿಸೆಂಬರ್ 17ಕ್ಕೆ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದೇವೆ. ಅದೇ ದಿನ ಸಿನಿಮಾ ರಿಲೀಸ್ ಆಗಬೇಕು ಅಂತ ಪಟ್ಟು ಹಿಡಿದು ಕೂತಿದ್ದಾರೆ. ಹೀಗಾಗಿ ಚಿತ್ರತಂಡ ಬಿಡುವಿಲ್ಲ ಕೆಲಸ ಮಾಡುತ್ತಿದೆ. ಇತ್ತ ಅಲ್ಲು ಅರ್ಜುನ್ ದಿನಕ್ಕೆ 20 ಗಂಟೆ ಈ ಸಿನಿಮಾಗಾಗಿ ಕೆಲಸ ಮಾಡುತ್ತಿರುವುದು ಚಿತ್ರತಂಡಕ್ಕೂ ಹೊಸ ಹುರುಷು ಬಂದಿದ್ಯಂತೆ.

ಇತ್ತೀಚೆಗೆ 'ಪುಷ್ಪ' ಇಂಟ್ರುಡಕ್ಷನ್ ಸಾಂಗ್ ಶೂಟ್ ಆಗಿತ್ತು
'ಪುಷ್ಪ' ಸಿನಿಮಾದ ಹೀರೊ ಇಂಟ್ರುಡಕ್ಷನ್ ಸಾಂಗ್ ಅನ್ನು ದೊಡ್ಡ ಪ್ರಮಾಣದಲ್ಲಿ ಇತ್ತೀಚೆಗೆ ಶೂಟ್ ಮಾಡಲಾಗಿದೆ. ಆ ಹಾಡು ಕೆಲವೇ ದಿನಗಳ ಹಿಂದಷ್ಟೇ ಮುಗಿದಿದೆ. ಆ ಹಾಡಿನ ಎಡಿಟಿಂಗ್ ಕೂಡ ನಡೆಯುತ್ತಿದೆ. ಇನ್ನೊಂದು ಉಳಿದುಕೊಂಡಿರುವ ಸಿನಿಮಾ ದೃಶ್ಯಗಳ ಚಿತ್ರೀಕರಣ ಕೂಡ ನಡೆಯುತ್ತಿದೆ. ಹೀಗಾಗಿ ಸಿನಿಮಾ ಮುಗಿಸುವುದು ಯಾವಾಗ? ಪ್ರಚಾರ ಮಾಡಿ ಸಿನಿಮಾ ರಿಲೀಸ್ ಮಾಡುವುದು ಯಾವಾಗ ಅಂತ ಟಾಲಿವುಡ್ ಮಾತಾಡಿಕೊಳ್ಳುತ್ತಿದೆ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದರೆ, ಮಲಯಾಳಂ ನಟ ಫಹಾದ್ ಫಾಸಿಲ್, ಕನ್ನಡದ ನಟ ಡಾಲಿ ಧನಂಜಯ್ ಅಭಿನಯಿಸಿದ್ದು ಬಿಡುಗಡೆಗಾಗಿ ಇವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.


Click it and Unblock the Notifications











