ನಟ ಗುಲ್ಶನ್ ಗ್ರೋವರ್‌ಗೆ ಕಿಸ್ ಮಾಡುವಾಗ ಅಮಿತಾಬ್ ಬಚ್ಚನ್ ಕೈಗೆ ಸಿಕ್ಕಿಬಿದ್ದಿದ್ದ ಕತ್ರಿನಾ ಕೈಫ್ : ಏನಿದು ಕಥೆ?

ಕತ್ರಿನಾ ಕೈಫ್ ಬಾಲಿವುಡ್‌ನ ಟಾಪ್ ನಟಿಯರಲ್ಲೊಬ್ಬರು. ಬಾಲಿವುಡ್‌ನಲ್ಲಿ ಹಲವು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿರುವ ನಟಿ. ಸಲ್ಮಾನ್ ಖಾನ್, ಆಮಿರ್ ಖಾನ್ ಹಾಗೂ ಶಾರುಖ್ ಖಾನ್ ಅಂತಹ ದಿಗ್ಗಜರ ಜೊತೆಯಲ್ಲಿ ನಟಿಸಿದ್ದಾರೆ. ಆದರೆ, ಕತ್ರಿನಾ ಕೈಫ್ ಬಾಲಿವುಡ್‌ಗೆ ಎಂಟ್ರಿಕೊಟ್ಟಾಗ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಲ್ಲಿ ಸಾಕಷ್ಟು ಕಷ್ಟಪಟ್ಟಿದ್ದಾರೆ. 2003ರ 'ಝೂಮ್' ಚಿತ್ರದಲ್ಲಿ ಕತ್ರಿನಾ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಇದು ಕತ್ರಿನಾ ವೃತ್ತಿ ಬದುಕಿನ ಟರ್ನಿಂಗ್ ಪಾಯಿಂಟ್.

ಇದೇ 'ಝೂಮ್' ಸಿನಿಮಾದ ಚಿತ್ರೀಕರಣ ಮಾಡುವಾಗ ಕತ್ರಿನಾ ಹಾಗೂ ಬಾಲಿವುಡ್ ಖಳನಟ ಗುಲ್ಶನ್ ಗ್ರೋವರ್ ರೋಮಿನಲ್ಲಿ ಕಿಸ್ ಮಾಡುತ್ತಿದ್ದರು. ಇಬ್ಬರೂ ಅದೇ ಸಿನಿಮಾದಲ್ಲಿ ನಟಿಸುತ್ತಿದ್ದ ಅಮಿತಾಬ್ ಬಚ್ಚನ್‌ ಕಣ್ಣಿಗೆ ಸಿಕ್ಕಿಬಿದ್ದಿದ್ದರು. ಕತ್ರಿನಾ ಕೈಫ್ ವಿವಾಹದ ಬಳಿಕ ಇಂತಹದ್ದೊಂದು ಸುದ್ದಿ ಹೊರಬಿದ್ದಿದೆ. ಅಸಲಿಗೆ ಕತ್ರಿನಾ ಕೈಫ್ ಕಿಸ್ಸಿಂಗ್ ಸುದ್ದಿಯ ಅಸಲಿ ಮ್ಯಾಟರ್ ಏನು ಎಂದು ತಿಳಿಯುವುದಕ್ಕೆ ಮುಂದೆ ಓದಿ.

ಬಿಗ್ ಬಿ ಕೈಗೆ ಸಿಕ್ಕಿಬಿದ್ದಿದ್ದ ಕತ್ರಿನಾ-ಗುಲ್ಶನ್

ಬಿಗ್ ಬಿ ಕೈಗೆ ಸಿಕ್ಕಿಬಿದ್ದಿದ್ದ ಕತ್ರಿನಾ-ಗುಲ್ಶನ್

ಬಾಲಿವುಡ್‌ನಲ್ಲಿ 19 ವರ್ಷಗಳ ಬಳಿಕ ಕತ್ರಿನಾ ಕೈಫ್ ನಟಿಸಿದ ಸಿನಿಮಾವೊಂದು ಭಾರಿ ಚರ್ಚೆಯಾಗುತ್ತಿದೆ. ಇದು ಕತ್ರಿನಾ ಕೈಫ್ ನಟಿಸಿದ ಮೊದಲ ಸಿನಿಮಾ 'ಝೂಮ್'. ಈ ಚಿತ್ರದಲ್ಲಿ ಕತ್ರಿನಾ ಬೋಲ್ಡ್ ಸೀನ್‌ಗಳಲ್ಲಿ ನಟಿಸಿರುವುದು ಈಗ ಹೊಸ ವಿಷಯವೇನಲ್ಲಾ. ಖಳನಟ ಗುಲ್ಶನ್ ಗ್ರೋವರ್ ಹಾಗೂ ಕತ್ರಿನಾ ಕೈಫ್ ಇಬ್ಬರ ಕಿಸ್ಸಿಂಗ್ ದೃಶ್ಯ ಸೇರಿದಂತೆ ಹಲವು ಬೋಲ್ಡ್ ಸೀನ್‌ಗಳಿವೆ. ಇದೇ ಸೀನ್‌ ಚಿತ್ರೀಕರಣದ ವೇಳೆ ಕತ್ರಿನಾ ಹಾಗೂ ಗುಲ್ಶನ್ ಗ್ರೋವರ್ ಕಿಸ್ ಮಾಡುತ್ತಿರುವ ವೇಳೆ ಅಮಿತಾ ಬಚ್ಚನ್ ಎಂಟ್ರಿಕೊಟ್ಟಿದ್ದಂತೆ. ಅಸಲಿಗೆ ಕತ್ರಿನಾ ಕಿಸ್ ಮಾಡುತ್ತಿದ್ದದ್ದು ಸಿನಿಮಾಗಾಗಿಯೇ.

2 ಗಂಟೆ ಗುಲ್ಶನ್ ಗ್ರೋವರ್ ಮುತ್ತಿಕ್ಕಿದ್ದ ಕತ್ರಿನಾ

2 ಗಂಟೆ ಗುಲ್ಶನ್ ಗ್ರೋವರ್ ಮುತ್ತಿಕ್ಕಿದ್ದ ಕತ್ರಿನಾ

ಅಸಲಿಗೆ ಬಾಲಿವುಡ್‌ನಲ್ಲಿ ಚರ್ಚೆಯಾಗುತ್ತಿರುವ ವಿಷಯ ಇಷ್ಟೇನೇ. 'ಝೂಮ್' ಕತ್ರಿನಾ ಕೈಫ್‌ಗೆ ಮೊದಲ ಸಿನಿಮಾ ಆಗಿತ್ತು. ಇದರಲ್ಲಿ ನಟ ಗುಲ್ಶನ್ ಗ್ರೋವರ್ ಅವರನ್ನು ವೈಯ್ಯಾರದಿಂದ ಸೆಳೆಯುವ ಸಂದರ್ಭವನ್ನು ಶೂಟ್ ಮಾಡುತ್ತಿದ್ದರು. ಈ ವೇಳೆ ಕತ್ರಿನಾ ಕೈಫ್ ಗುಲ್ಶನ್ ಗ್ರೋವರ್‌ಗೆ ಕಿಸ್ ಮಾಡುವ ದೃಶ್ಯವನ್ನು ಇಡಲಾಗಿತ್ತು. ಆಗ ಕತ್ರಿನಾಗೆ ಮೊದಲ ಸಿನಿಮಾ ಆಗಿದ್ದರಿಂದ ನಿರ್ದೇಶಕರು ಇಬ್ಬರನ್ನೂ ಒಂದು ರೂಮಿನಲ್ಲಿ ಕೂಡಿ ಹಾಕಿ ಮುತ್ತು ಕೊಡುವ ದೃಶ್ಯವನ್ನು ಅಭ್ಯಾಸ ಮಾಡುವಂತೆ ಹೇಳಿದ್ದರು. ಆ ವೇಳೆ ಅದೇ ರೂಮಿಗೆ ಅಚಾನಕ್ ಆಗಿ ಅಮಿತಾಬ್ ಬಚ್ಚನ್ ಎಂಟ್ರಿ ಕೊಟ್ಟಿದ್ದರು.

ಅಮಿತಾಬ್ ದಿಢೀರ್ ಎಂಟ್ರಿ: ಕತ್ರಿನಾಗೆ ಮುಜುಗರ

ಅಮಿತಾಬ್ ದಿಢೀರ್ ಎಂಟ್ರಿ: ಕತ್ರಿನಾಗೆ ಮುಜುಗರ

ಗುಲ್ಶನ್ ಗ್ರೋವರ್ ಹಾಗೂ ಕತ್ರಿನಾ ಕೈಫ್ ಇಬ್ಬರನ್ನೂ ಒಂದು ರೂಮಿನಲ್ಲಿ ಕೂಡಿ ಹಾಕಿರುವ ಸಂಗತಿ ಅಮಿತಾಬ್ ಬಚ್ಚನ್‌ಗೆ ತಿಳಿದಿತ್ತು. ಮೊದಲೇ ಕತ್ರಿನಾಗೆ ಕಿಸ್ ಮಾಡುವ ದೃಶ್ಯದಲ್ಲಿ ನಟಿಸುವುದನ್ನು ನೆನೆದು ಗುಲ್ಶನ್ ಗ್ರೋವರ್ ಮುಜುಗರಕ್ಕೆ ಒಳಗಾಗಿದ್ದರು. ಕತ್ರಿನಾ ಕೈಫ್ ಕೂಡ ಈ ದೃಶ್ಯದಲ್ಲಿ ನಟಿಸಲು ಹಿಂದೇಟು ಹಾಕುತ್ತಿದ್ದರು. ಇದೇ ವೇಳೆ ಇಬ್ಬರನ್ನೂ ಹುರಿದುಂಬಿಸಲು ಅಮಿತಾಬ್ ಬಚ್ಚನ್ ದಿಢೀರನೇ ಎಂಟ್ರಿಕೊಟ್ಟಿದ್ದರು. ಆಗ ಇಬ್ಬರಿಗೂ ಆ ಸಂದರ್ಭ ಇರಿಸು-ಮುರಿಸಿಗೆ ಕಾರಣವಾಗಿತ್ತು.

'ಝುಮ್' ದೃಶ್ಯದ ಬಗ್ಗೆ ಕತ್ರಿನಾ ಹೇಳಿದ್ದೇನು?

'ಝುಮ್' ದೃಶ್ಯದ ಬಗ್ಗೆ ಕತ್ರಿನಾ ಹೇಳಿದ್ದೇನು?

ಕತ್ರಿನಾ ಕೈಫ್‌ಗೆ ಆಗಾಗಾ ಈ ಸಿನಿಮಾದ ಕಿಸ್ಸಿಂಗ್ ಹಾಗೂ ಬೋಲ್ಡ್ ಸೀನ್‌ಗಳ ಬಗ್ಗೆ ಪ್ರಶ್ನೆ ಮಾಡಲಾಗುತ್ತೆ. ಪ್ರತಿ ಬಾರಿ ಪ್ರಶ್ನೆ ಮಾಡಿದಾಗಲೂ ಕತ್ರಿನಾ ಕೈಫ್ ವಿವಾದಾತ್ಮಕ ದೃಶ್ಯದ ಬಗ್ಗೆ ಬೋಲ್ಡ್ ಆಗಿಯೇ ಉತ್ತರ ನೀಡಿದ್ದರು. "ಈ ದೃಶ್ಯದ ಬಗ್ಗೆ ಪ್ರತಿಕ್ರಿಯೆ ನೀಡುವುದಕ್ಕೆ ಏನಿದೆ? ಇಂತಹ ದೃಶ್ಯಗಳಲ್ಲಿ ಹೊಸದು ಏನಾದರೂ ಹೇಳುವುದಕ್ಕೆ ಏನಿಲ್ಲ. ನಾನು ಈ ದೃಶ್ಯದಲ್ಲಿ ನಟಿಸಿಲ್ಲ ಎನ್ನುವುದನ್ನು ತಳ್ಳಿಹಾಕುವುದಿಲ್ಲ. ಆದರೆ, ಈ ದೃಶ್ಯದಲ್ಲಿ ನಟಿಸುವುದು ನನಗೆ ಮುಜುಗರ ತರಿಸಿತ್ತು." ಎಂದು ಕತ್ರಿನಾ ಕೈಫ್ ಈ ಹಿಂದೆ ಹೇಳಿದ್ದರು.

More from Filmibeat

English summary
Amitabh Bachchan had once caught Katrina Kaif kissing with Gulshan Grover. While filming Zoom Amitabh Bachchan had once caught Katrina locking lips with Gulshan Grover in a closed room.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X