ಶನಿವಾರವೇ ನಡೆಯಲಿದೆ ಅನಿಲ್ ಕಪೂರ್ ಪುತ್ರಿ ರಿಯಾ ಕಪೂರ್ ಮದುವೆ?

ಬಾಲಿವುಡ್ ಹಿರಿಯ ನಟಿ ಅನಿಲ್ ಕಪೂರ್ ಕುಟುಂಬದಲ್ಲಿ ಮದುವೆ ಸಂಭ್ರಮ ಜೋರಾಗಿದ್ದು, ಪುತ್ರಿ ರಿಯಾ ಕಪೂರ್ ಮದುವೆಗೆ ಎಲ್ಲಾ ಸಿದ್ಧತೆ ನಡೆದಿದೆ ಎಂಬ ಸುದ್ದಿ ಹೊರಬಿದ್ದಿದೆ. ಹಿಂದಿ ಫಿಲ್ಮಿಬೀಟ್ ವರದಿ ಮಾಡಿರುವ ಶನಿವಾರವೇ (ಆಗಸ್ಟ್ 14) ಅನಿಲ್ ಕಪೂರ್ ಪುತ್ರಿ ರಿಯಾ ಮತ್ತು ಬಹುಕಾಲ ಗೆಳೆಯ ಕರಣ್ ಬೂಲಾನಿ ವಿವಾಹ ಜರುಗಲಿದೆ ಎಂದು ಹೇಳಲಾಗಿದೆ.

ಮುಂಬೈನ ಜುಹಾ ನಿವಾಸದಲ್ಲಿ ಈ ವಿವಾಹ ನೆರವೇರಿಸಲು ನಿಶ್ಚಿಯಿಸಿದ್ದು, ಕೇವಲ ಕುಟುಂಬದವರು ಮತ್ತು ಕೆಲವೇ ಕೆಲವು ಆಪ್ತರು ಮಾತ್ರ ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನು ಎರಡು ಅಥವಾ ಮೂರು ದಿನಗಳ ಕಾಲ ಈ ವಿವಾಹ ಮಹೋತ್ಸವ ಜರುಗಲಿದೆ ಎಂಬ ಮಾಹಿತಿಯೂ ಇದೆ.

ರಿಯಾ ಕಪೂರ್ ಮತ್ತು ಕರಣ್ ಬೂಲಾನಿ ಮದುವೆ ಹಿನ್ನೆಲೆ ಅನಿಲ್ ಕಪೂರ್ ನಿವಾಸ ಹಾಗೂ ಕರಣ್ ನಿವಾಸದ ಹೊರಾಂಗಣದಲ್ಲಿ ಲೈಟ್‌ಗಳಿಂದ ಅಲಂಕರಿಸಲಾಗಿದೆ. ಶುಕ್ರವಾರದಿಂದಲೇ ಎರಡು ಮನೆಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ ಎಂದು ವರದಿಯಾಗಿದೆ.

Anil Kapoors daughter Rhea Kapoor to marry Karan Boolani today?

ಇತ್ತೀಚಿಗಷ್ಟೆ ಸೋನಮ್ ಕಪೂರ್ ಲಂಡನ್‌ನಿಂದ ಭಾರತಕ್ಕೆ ಬಂದಿದ್ದರು. ಕೊರೊನಾ ಲಾಕ್‌ಡೌನ್ ಕಾರಣದಿಂದ ಒಂದೂವರೆ ವರ್ಷಗಳಿಗೂ ಹೆಚ್ಚು ಸಮಯ ಲಂಡನ್‌ನ ಪತಿಯ ಮನೆಯಲ್ಲಿಯೇ ಉಳಿದುಕೊಂಡಿದ್ದರು. ಕಳೆದ ತಿಂಗಳಷ್ಟೇ ಸೋನಮ್ ಮುಂಬೈಗೆ ಆಗಮಿಸಿದ್ದರು. ಸೋನಮ್ ಕಪೂರ್ ಆಗಮಿಸಿದ ವೇಳೆ ಖುದ್ದು ಅನಿಲ್ ಕಪೂರ್ ಏರ್‌ಪೋರ್ಟ್‌ಗೆ ಹೋಗಿ ಸ್ವಾಗತಿಸಿದ್ದರು. ಅಂದ್ಹಾಗೆ, ಸೋನಮ್ ಕಪೂರ್ ಭಾರತಕ್ಕೆ ಬಂದಿದ್ದೇ ಸಹೋದರಿ ರಿಯಾ ಕಪೂರ್ ಮದುವೆಗಾಗಿ ಎಂದು ಹೇಳಲಾಗಿದೆ.

ರಿಯಾ ಕಪೂರ್ ಮತ್ತು ಕರಣ್ ಬೂಲಾನಿ ಸುಮಾರು 13 ವರ್ಷದಿಂದ ಪರಿಚಯ ಹೊಂದಿದ್ದಾರೆ. ಸುಮಾರು ವರ್ಷದ ಸ್ನೇಹ ಈಗ ದಾಂಪತ್ಯಕ್ಕೆ ದಾರಿ ಮಾಡಿದೆ. 2010ರಲ್ಲಿ ಸೋನಮ್ ಕಪೂರ್ ನಟಿಸಿದ್ದ 'ಆಯಿಶಾ' ಚಿತ್ರ ನಿರ್ಮಾಣ ಮಾಡುವುದರ ಮೂಲಕ ರಿಯಾ ಕಪೂರ್ ಚೊಚ್ಚಲ ಬಾರಿಗೆ ನಿರ್ಮಾಪಕರಾಗಿ ಗುರುತಿಸಿಕೊಂಡರು. ಈ ಸಿನಿಮಾದಲ್ಲಿ ಕರಣ್ ಬೂಲಾನಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು.

2019ರಲ್ಲೇ ತನ್ನ ಸಹೋದರಿ ರಿಯಾ ಮತ್ತು ಕರಣ್ ಸಂಬಂಧವನ್ನು ಸೋನಮ್ ಕಪೂರ್ ಖಚಿತಪಡಿಸಿದ್ದರು. ಚಾಟ್ ಶೋವೊಂದರಲ್ಲಿ ಭಾಗಿಯಾಗಿದ್ದ ಸೋನಮ್, ''ರಿಯಾ ಮತ್ತು ಕರಣ್ ಇನ್ನೂ ಮದುವೆಯಾಗಿಲ್ಲ. ಸುಮಾರು 10 ವರ್ಷದಿಂದ ಪ್ರೀತಿಯಲ್ಲಿದ್ದಾರೆ. ಮದುವೆ ನಿಗದಿಯಾದಾಗ ಈ ಸುದ್ದಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಅದು ನಮ್ಮ ಕುಟುಂಬಕ್ಕೆ ಸಂತಸದ ದಿನ. ಈ ವರ್ಷವಂತೂ ಮದುವೆ ಇಲ್ಲ. ಬಹುಶಃ ಆದಷ್ಟೂ ಬೇಗ ಅಧಿಕೃತ ಮಾಡಿಕೊಳ್ಳಲು ತಯಾರಾಗುತ್ತಿದ್ದಾರೆ'' ಎಂದು ಹೇಳಿದ್ದರು.

Anil Kapoors daughter Rhea Kapoor to marry Karan Boolani today?

ಇನ್ನು ವಿಶೇಷ ಅಂದ್ರೆ ಸೋನಮ್ ಕಪೂರ್ ಸ್ಟೈಲಿಶ್ ಲುಕ್‌ಗಳ ಹಿಂದೆ ಕೆಲಸ ಮಾಡಿದ್ದು ಇದೇ ರಿಯಾ ಕಪೂರ್. ವೃತ್ತಿಯಲ್ಲಿ ರಿಯಾ ಕಪೂರ್ ಫ್ಯಾಶನ್ ಡಿಸೈನರ್ ಸಹ ಹೌದು. ಆಯಿಶಾ, ಖೂಬ್ಸುರತ್ ಮತ್ತು ವೀರೆ ಡಿ ವೆಡ್ಡಿಂಗ್ ಚಿತ್ರಗಳಲ್ಲಿಯೂ ರಿಯಾ ಕಪೂರ್ ಸಹ ನಿರ್ಮಾಪಕರಾಗಿದ್ದರು. ಕರಣ್ ಬೂಲಾನಿ ಮೊದಲಿನಿಂದಲೂ ಅನಿಲ್ ಕಪೂರ್ ಕುಟುಂಬಕ್ಕೆ ಬಹಳ ಆತ್ಮೀಯರಾಗಿದ್ದಾರೆ. ಅನಿಲ್ ಕಪೂರ್ ನಟಿಸಿ ನೆಟ್‌ಪ್ಲಿಕ್ಸ್‌ನಲ್ಲಿ ಬಿಡುಗಡೆಯಾದ 'ಸೆಲೆಕ್ಷನ್ ಡೇ' ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿದ್ದರು.

Anil Kapoors daughter Rhea Kapoor to marry Karan Boolani today?

2018ರ ಮೇ ತಿಂಗಳಲ್ಲಿ ಉದ್ಯಮಿ ಆನಂದ್ ಆಹುಜಾ ಜೊತೆ ಸೋನಮ್ ಕಪೂರ್ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದರು. ಪತಿಯ ಜೊತೆ ಲಂಡನ್‌ನಲ್ಲಿ ನೆಲೆಸಿದ್ದ ಸೋನಂ 2020ರಿಂದಲೂ ಅಲ್ಲೆ ಉಳಿದುಕೊಂಡಿದ್ದರು. ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದ ಗೆಟಪ್ ವೈರಲ್ ಆಗಿ ಸೋನಮ್ ಗರ್ಭಿಣಿ ಎಂಬ ಸುದ್ದಿ ಹರಿದಾಡಿತ್ತು. ಬಳಿಕ, ಅದು ವದಂತಿ ಎಂದು ಸ್ವತಃ ಅನಿಲ್ ಕಪೂರ್ ಪುತ್ರಿ ಸ್ಪಷ್ಟಪಡಿಸಿದ್ದರು. ಅನಿಲ್ ಕಪೂರ್-ಸುನೀತಾ ದಂಪತಿಗೆ ಮೂವರು ಮಕ್ಕಳು. ಸೋನಮ್, ರಿಯಾ ಹಾಗೂ ಹರ್ಷವರ್ಧನ್ ಕಪೂರ್.

More from Filmibeat

English summary
Bollywood senior Actor Anil Kapoor's second daughter, producer and stylist Rhea Kapoor to marry her long-time boyfriend Karan Boolani today?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X