ಅಂಗಲಾಚಿದರೂ ಮೀನಾ 'ದೃಶ್ಯಂ'ನಲ್ಲಿ ನಟಿಸಲ್ಲ ಎಂದಿದ್ರು: ಮೋಹನ್‌ಲಾಲ್ ಸಿನಿಮಾ ಯಾಕೆ ಒಪ್ಪಿರಲಿಲ್ಲ?

ದಕ್ಷಿಣ ಭಾರತದ ಜನಪ್ರಿಯ ನಟಿಯರಲ್ಲಿ ಮೀನಾ ಕೂಡ ಒಬ್ಬರು. ಬಹುಭಾಷಾ ನಟಿ ಕನ್ನಡದಲ್ಲೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ನಟಿಸಿದ 'ಪುಟ್ನಂಜ' ಸಿನಿಮಾ ಒಂದೇ ಸಾಕು. ಕನ್ನಡಿಗರಿಗೆ ಮೀನಾ ಯಾರು ಅನ್ನೋದು ನೆನಪಿಗೆ ಬಂದು ಬಿಡುತ್ತೆ.

ಮೀನಾ 90 ದಶಕದ ಜನಪ್ರಿಯ ನಟಿ. ದಕ್ಷಿಣ ಭಾರತದ ಬಹುತೇಕ ಸೂಪರ್‌ಸ್ಟಾರ್‌ಗಳೊಂದಿಗೆ ಮೀನಾ ನಟಿಸಿದ್ದಾರೆ. ಸೂಪರ್‌ಸ್ಟಾರ್ ರಜನಿಕಾಂತ್, ಕಮಲ್ ಹಾಸನ್, ವಿಜಯಕಾಂತ್, ಶರತ್‌ಕುಮಾರ್, ಅರ್ಜುನ್, ಅಜಿತ್, ಮೋಹನ್ ಲಾಲ್, ಮಮ್ಮುಟ್ಟಿ ಸೇರಿದಂತೆ ಅನೇಕ ಟಾಪ್ ಸ್ಟಾರ್‌ಗಳೊಂದಿಗೆ ನಟಿಸಿ ಜೈ ಎನಿಸಿಕೊಂಡಿದ್ದಾರೆ.

meena-rejected-mohanlal-drishyam

1982ರಲ್ಲಿ ಶಿವಾಜಿ ಗಣೇಶನ್ ಸಿನಿಮಾದಲ್ಲಿ ಮೀನಾ ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಸುಮಾರು 20 ಹೆಚ್ಚು ಸಿನಿಮಾಗಳಲ್ಲಿಸ ಬಾಲನಟಿಯಾಗಿಯೇ ಕಾಣಿಸಿಕೊಂಡಿದ್ದಾರೆ. ಬಳಿಕ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಇವರಲ್ಲಿ ರಜನಿಕಾಂತ್ ಹಾಗೂ ಮೀನಾ ಜೋಡಿ ಅತೀ ಹೆಚ್ಚು ಜನಪ್ರಿಯತೆ ಗಳಿಸಿಕೊಂಡಿತ್ತು. ಮದುವೆ ಬಳಿಕ ಮಗುವಾಗುತ್ತಿದ್ದಂತೆ ನಟನೆಗೆ ಬ್ರೇಕ್ ಕೊಟ್ಟಿದ್ದರು. ಈ ವೇಳೆ 'ದೃಶ್ಯಂ' ಸಿನಿಮಾದಲ್ಲಿ ನಟಿಸುವಂತೆ ಆಫರ್ ನೀಡಲಾಗಿತ್ತು. ಆದರೆ, ಮೀನಾ ಸರಾಸಗಟಾಗಿ ತಿರಸ್ಕರಿಸಿದ್ದರು. ಅದ್ಯಾಕೆ ಅನ್ನೋದನ್ನು ತಿಳಿಯಲು ಮುಂದೆ ಓದಿ.

ರಜನಿ ಜೊತೆ ನಟಿಸುತ್ತಿದ್ದಂತೆ ಹೆಚ್ಚಿದ ಬೇಡಿಕೆ

ಮೀನಾ ಬಾಲ ನಟಿಯಾಗಿಯೇನೋ ನಟಿಸಿದ್ದರು. ಆದರೆ, ನಾಯಕಿ ಆಗುತ್ತಿದ್ದಂತೆ ಕಾಲ ಬದಲಾಗಿತ್ತು. 14 ವರ್ಷಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದರು. 1990 ರಲ್ಲಿ ಮೀನಾ 'ನವಯುಗಂ' ಅನ್ನೋ ತೆಲುಗು ಸಿನಿಮಾ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದರು. ಆದರೆ, ರಜನಿಕಾಂತ್ ಜೊತೆ ನಟಿಸಿದ 'ಯಜಮಾನ್' ಸೂಪರ್ ಹಿಟ್ ಆಗಿತ್ತು. ಇಲ್ಲಿಂದ ಮೀನಾ ಹಿಂತಿರುಗಿ ನೋಡಲಿಲ್ಲ.

meena-rejected-mohanlal-drishyam

ಮಗಳು ಹುಟ್ಟಿದ ಬಳಿಕ ಸಿನಿಮಾಗೆ ಬ್ರೇಕ್

ಮೀನಾ ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ. 'ಪುಟ್ನಂಜ', ಸ್ವಾತಿಮುತ್ತು' ಸಿನಿಮಾಗಳೇ ಇದಕ್ಕೆ ಉದಾಹರಣೆ. ಆದರೆ, ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ನಟನೆಯಿಂದ ದೂರ ಉಳಿದಿದ್ದರು. ಮಗಳು ಹುಟ್ಟಿದ ಕಾರಣಕ್ಕೆ ನಟನೆಯಿಂದ ದೂರವೇ ಉಳಿದಿದ್ದರು. ಇಂತಹದ್ದೊಂದು ಸಂದರ್ಭದಲ್ಲಿ 'ದೃಶ್ಯಂ' ಸಿನಿಮಾದಲ್ಲಿ ನಟಿಸುವಂತೆ ಆಫರ್ ಬಂದಿತ್ತು. ಆದರೆ, ಮೀನಾ ಮಾತ್ರ ಒಪ್ಪಿಕೊಂಡಿರಲಿಲ್ಲ.

'ದೃಶ್ಯಂ' ರಿಜೆಕ್ಟ್ ಮಾಡಿದ್ದೇಕೆ?

ಮದುವೆ ನಂತರವೂ ಮೀನಾ ಸಿನಿಮಾದಲ್ಲಿ ನಟಿಸುವುದನ್ನು ನಿಲ್ಲಿಸಲಿಲ್ಲ. ಆದರೆ, ಅದ್ಯಾವಾಗ ಮಗಳು ಹುಟ್ಟಿದಳೋ ಅಂದಿನಿಂದ ನಟನೆಯಿಂದ ಕೊಂಚ ದೂರ ಉಳಿದಿದ್ದರು. ಈ ವೇಳೆ ಮೋಹನ್‌ಲಾಲ್ ನಟಿಸುತ್ತಿರುವ 'ದೃಶ್ಯಂ' ಸಿನಿಮಾದಲ್ಲಿ ಅವರ ಪತ್ನಿಯಾಗಿ ನಟಿಸುವಂತೆ ಚಿತ್ರತಂಡ ಮನವಿ ಮಾಡಿಕೊಂಡಿತ್ತು. ಆದರೆ, ಮೀನಾ ಮಾತ್ರ ಒಪ್ಪಿರಲೇ ಇಲ್ಲ. ಮೋಹನ್‌ಲಾಲ್‌ಗೆ ಜೋಡಿ ಅಂದಾಗಲೂ ಒಪ್ಪಿರಲಿಲ್ಲ. ಅದಕ್ಕೆ ಕಾರಣ ಮಗಳು ನೈನಿಕಾ.

ಚಿತ್ರತಂಡ ಅಂಗಲಾಚಿದರೂ ಒಪ್ಪಿರಲಿಲ್ಲ

'ದೃಶ್ಯಂ' ಮೋಹನ್‌ಲಾಲ್ ಪತ್ನಿ ಪಾತ್ರಕ್ಕೆ ಮೀನಾ ಅಂತ ಫಿಕ್ಸ್ ಆಗಿತ್ತು. ಅವರನ್ನು ಬಿಟ್ಟು ಬೇರೆ ಯಾರನ್ನೂ ಊಹೆ ಕೂಡ ಮಾಡಿರಲಿಲ್ಲ. ಹೀಗಾಗಿ ಪಟ್ಟು ಹಿಡಿದು ಕೂತಿದ್ದರು. ಆದರೆ, ಚಿಕ್ಕ ಮಗುವನ್ನು ಬಿಟ್ಟು ಶೂಟಿಂಗ್‌ಗೆ ಬರಲು ಮೀನಾ ಒಪ್ಪಿರಲಿಲ್ಲ. ಬಳಿಕ ಸೆಟ್ಟಿನಲ್ಲಿ ಏನು ಸೌಲಭ್ಯ ಬೇಕಿದ್ದರೂ ಕೊಡುತ್ತೇವೆ ಎಂದು ಮನವೊಲಿಸಿ 'ದೃಶ್ಯಂ'ಗೆ ಒಪ್ಪಿಸಲಾಗಿತ್ತು. ಈಗ ಈ ಜೋಡಿಯನ್ನು ಬಿಟ್ಟು ಸಿನಿಮಾವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವಂತಾಗಿದೆ.

More from Filmibeat

English summary
South Actress Meena initially rejected Drishyam because of this reason
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X