ಅನುಷ್ಕಾ ಮದುವೆ ಫಿಕ್ಸ್ ಆಯ್ತಾ? ಕನ್ನಡದ ನಿರ್ಮಾಪಕನ ಜೊತೆ ಮದ್ವೆಯಂತೆ? ಯಾರು ಗೊತ್ತೇ?
ಭಾರತೀಯ ಚಿತ್ರರಂಗದಲ್ಲಿ ಸಲ್ಮಾನ್ ಖಾನ್, ಪ್ರಭಾಸ್ ಮದುವೆ ನೋಡುವುದಕ್ಕೆ ಕಾದೂ ಕಾದು ಸುಸ್ತಾದವರಿಗೇನು ಕಮ್ಮಿಯಿಲ್ಲ. ಅದೇ ರೀತಿ ಕರಾವಳಿ ಬ್ಯೂಟಿ ಅನುಷ್ಕಾ ಶೆಟ್ಟಿ ಮದುವೆ ನೋಡುವುದಕ್ಕೂ ಅವರ ಅಭಿಮಾನಿಗಳು ಅಷ್ಟೇ ಕಾತುರರಾಗಿದ್ದಾರೆ. ವಯಸ್ಸು 42 ಆಗಿದ್ದರೂ, ಅನುಷ್ಕಾ ಶೆಟ್ಟಿ ಇನ್ನೂ ಮದುವೆ ಬಗ್ಗೆ ಮಾತ್ರ ಯೋಚನೆ ಮಾಡಿರಲಿಲ್ಲ.
ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ಅದೆಷ್ಟು ಗಾಳಿ ಸುದ್ದಿಗಳು ಬಂದಿದ್ದಾವೋ ಲೆಕ್ಕವೇ ಇಲ್ಲ. ಒಂದಿಷ್ಟು ದಿನ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಮದುವೆ ಆಗುತ್ತಾರೆ ಅನ್ನೋ ಸುದ್ದಿ ಹರಿದಾಡಿದ್ದವು. ಆದರೆ, ಅವರಿಬ್ಬರೇ ಪರಿ ಪರಿಯಾಗಿ ನಾವಿಬ್ಬರೂ ಸ್ನೇಹಿತರು ಅಂತ ಸಾರಿ ಹೇಳಿದ್ದರು. ಆದರೂ, ಗಾಳಿ ಸುದ್ದಿಗಳೇನು ನಿಂತಿರಲಿಲ್ಲ.

ಈಗ ಮತ್ತೊಂದು ಸುದ್ದಿ ಟಾಲಿವುಡ್‌ನಲ್ಲಿ ಓಡಾಡುತ್ತಿದೆ. ತೆಲುಗು ಮಾಧ್ಯಮಗಳು ಮತ್ತೆ ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ಸುದ್ದಿ ಮಾಡಿವೆ. ಇದು ಈಗ ಸ್ಯಾಂಡಲ್‌ವುಡ್‌ನಲ್ಲೂ ಚರ್ಚೆಗೆ ಗ್ರಾಸವಾಗಿದೆ. ಯಾಕಂದ್ರೆ, ಈ ಬಾರಿ ಕನ್ನಡದ ದೊಡ್ಡ ನಿರ್ಮಾಪಕ ಅನುಷ್ಕಾ ಶೆಟ್ಟಿಯನ್ನು ಮದುವೆ ಆಗಲಿದ್ದಾರೆ ಅಂತ ಸುದ್ದಿ ಮಾಡಿದ್ದಾರೆ. ಅಸಲಿಗೆ ಈ ಸುದ್ದಿಯ ಹಿನ್ನೆಲೆಯೇನು? ತಿಳಿಯಲು ಮುಂದೆ ಓದಿ..
ಅನುಷ್ಕಾ ಶೆಟ್ಟಿ ಇತ್ತೀಚೆಷ್ಟೇ ಮಲಯಾಳಂ ಸಿನಿಮಾವೊಂದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದು ಅವರ ಮೊದಲ ಮಲಯಾಳಂ ಸಿನಿಮಾ. ಜೊತೆಗೆ ಅವರ ಬಳಿ ಕ್ರೇಜಿ ಪ್ರಾಜೆಕ್ಟ್‌ಗಳು ಕೈನಲ್ಲಿವೆ. ಹೀಗಿದ್ದರೂ, ದಿಢೀರನೇ ತೆಲುಗು ಚಿತ್ರರಂಗದಲ್ಲಿ ಕರಾವಳಿ ಸುಂದರಿಯ ಮದುವೆ ಮ್ಯಾಟರ್ ಸದ್ದು ಮಾಡುವುದಕ್ಕೆ ಶುರು ಮಾಡಿದೆ.
ಅನುಷ್ಕಾ ಶೆಟ್ಟಿ ಕನ್ನಡದ ನಟಿಯೇ ಆಗಿದ್ದರೂ, ತೆಲುಗು ಸಿನಿಮಾಗಳಿಂದ ವೃತ್ತಿ ಬದುಕನ್ನು ಆರಂಭಿಸಿದ್ದರು. ಅಕ್ಕಿನೇನಿ ನಾಗಾರ್ಜುನ ನಟಿಸಿದ್ದ 'ಸೂಪರ್' ಸಿನಿಮಾ ಮೂಲಕ ಟಾಲಿವುಡ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ ಅನುಷ್ಕಾ ತಮ್ಮ ಸೌಂದರ್ಯ ಹಾಗೂ ನಟನೆ ಮೂಲಕ ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಲೇ ಸ್ಟಾರ್ ಪಟ್ಟಕ್ಕೆ ಏರಿದ್ದರು.

'ಅರುಂಧತಿ', 'ಬಾಹುಬಲಿ' ಅಂತಹ ಸಿನಿಮಾ ಅನುಷ್ಕಾ ಶೆಟ್ಟಿ ವೃತ್ತಿ ಬದುಕಿಗೆ ಹೊಸ ತಿರುವನ್ನು ಕೊಟ್ಟಿತ್ತು. ಅದರಲ್ಲೂ 'ಬಾಹುಬಲಿ' ಸಿನಿಮಾ ಜಗತ್ತಿನಾದ್ಯಂತ ಸದ್ದು ಮಾಡಿತ್ತು. ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನೇ ನಿರ್ಮಿಸಿತ್ತು. 'ಬಾಹುಬಲಿ ಬಳಿಕ ಅನುಷ್ಕಾ ಶೆಟ್ಟಿ ಸಿನಿಮಾದಿಂದ ಕೊಂಚ ಬ್ರೇಕ್ ಪಡೆದಿದ್ದರು.
ಈ ವೇಳೆ ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ಮದುವೆ ಬಗ್ಗೆ ಸುದ್ದಿಗಳು ಹರಿದಾಡಿದ್ದವು. ಸದ್ಯ ಇಬ್ಬರ ಮದುವೆ ಮ್ಯಾಟರ್ ಈಗ ಅಭಿಮಾನಿಗಳಿಗೆ ದೊಡ್ಡ ಸವಾಲಿನ ವಿಷಯವಾಗಿ ಬಿಟ್ಟಿದೆ. ಸದ್ಯ ತೆಲುಗು ಮಾಧ್ಯಮಗಳಲ್ಲಿ ವರದಿಯಾಗಿರುವ ಪ್ರಕಾರ, ಅನುಷ್ಕಾ ಶೆಟ್ಟಿ ಶೀಘ್ರದಲ್ಲಿಯೇ ಮದುವೆ ಆಗಲಿದ್ದಾರೆ. ಕನ್ನಡದ ದೊಡ್ಡ ನಿರ್ಮಾಪಕನೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರಂತೆ. ಎರಡೂ ಕುಟುಂಬಗಳು ಇದಕ್ಕೆ ಅಸ್ತು ಅಂದಿದ್ದು, ಶೀಘ್ರದಲ್ಲಿಯೇ ಮದುವೆ ನಡೆಯಲಿದೆ. ಅಲ್ಲದೆ ಆ ನಿರ್ಮಾಪಕನಿಗೂ 42 ವರ್ಷ ಎಂದು ವರದಿಗಳಾಗಿವೆ. ಈ ಸುದ್ದಿನೂ ಕೇವಲ ಗಾಳಿ ಸುದ್ದಿ ಅಷ್ಟೇನಾ ಅನ್ನೋದು ಇನ್ನಷ್ಟೇ ತಿಳಿಯಬೇಕಿದೆ.


Click it and Unblock the Notifications











