ಬಾಲಕೃಷ್ಣ 107ನೇ ಸಿನಿಮಾದ ಟೈಟಲ್ 'ಜೈ ಬಾಲಯ್ಯ'

ಟಾಲಿವುಡ್ ಲೆಜೆಂಡ್ ಬಾಲಕೃಷ್ಣ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಬಾಲಕೃಷ್ಣ ಅಭಿನಯದ ಸಿನಿಮಾ 'ಅಖಂಡ' ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಬಾಚಿಕೊಂಡಿತ್ತು. ಇದೇ ಸಕಸ್ಸ್ ಖುಷಿಯಲ್ಲೇ 107ನೇ ಸಿನಿಮಾ ಸೆಟ್ಟೇರಿ, ಶೂಟಿಂಗ್ ಕೂಡ ನಡೆಯುತ್ತಿದೆ.

ಇತ್ತೀಚೆಗೆ ಬಾಲಕೃಷ್ಣ ಸಿನಿಮಾ 'ಅಖಂಡ' ಕೆಲ ಥಿಯೇಟರ್‌ಗಳಲ್ಲಿ 175ನೇ ದಿನಗಳನ್ನು ಪೂರೈಸಿದೆ. ಈ ಸಿನಿಮಾ ಬಾಲಕೃಷ್ಣ ವೃತ್ತಿ ಬದುಕಿನಲ್ಲಿಯೇ ಅತೀ ದೊಡ್ಡ ಹಿಟ್ ಕೊಟ್ಟ ಸಿನಿಮಾ. ಸದ್ಯ ಬಾಲಕೃಷ್ಣ 107ನೇ ಸಿನಿಮಾ ಶೂಟಿಂಗ್ ಶುರುವಾಗಿದ್ದು, ಕ್ರ್ಯಾಕ್ ಸಿನಿಮಾದ ನಿರ್ದೇಶಕ ಗೋಪಿಚಂದ್ ಮಲಿನೇನಿ ಆಕ್ಷನ್ ಕಟ್ ಹೇಳುತ್ತಿದೆ.

ಈ ಸಿನಿಮಾ ಅನೌನ್ಸ್ ಮಾಡಿ, ಶೂಟಿಂಗ್ ಕೂಡ ಆರಂಭ ಮಾಡಲಾಗಿತ್ತು. ಆದರೆ, ಬಾಲಯ್ಯನ 107ನೇ ಸಿನಿಮಾ ಟೈಟಲ್ ಮಾತ್ರ ಇನ್ನೂ ಫಿಕ್ಸ್ ಆಗಿರಲಿಲ್ಲ. ಈಗ ಚಿತ್ರರಂಗ ಬಾಲಕೃಷ್ಣ ಅಭಿನಯದ 107ನೇ ಸಿನಿಮಾಗೆ ಪವರ್‌ಫುಲ್ ಟೈಟಲ್‌ ಅನ್ನು ಹುಡುಕಿಕೊಂಡು ಬಂದಿದೆಯಂತೆ. ಅದುವೇ 'ಜೈ ಬಾಲಯ್ಯ'.

ಬಾಲಕೃಷ್ಣ 107ನೇ ಸಿನಿಮಾ 'ಜೈ ಬಾಲಯ್ಯ'

ಬಾಲಕೃಷ್ಣ 107ನೇ ಸಿನಿಮಾ 'ಜೈ ಬಾಲಯ್ಯ'

ಬಾಲಕೃಷ್ಣ ಸಿನಿಮಾದ ಟೈಟಲ್ ಅನೌನ್ಸ್ ಮಾಡದೆ ಇದ್ದೆ ಏನಂತೆ? ಈಗಾಗಲೇ ಸಿನಿಮಾ ಫಸ್ಟ್ ಲುಕ್ ಅನ್ನು ರಿಲೀಸ್ ಮಾಡಿದ್ದಾರೆ. ಫಸ್ಟ್ ಲುಕ್ ನೋಡಿದ ಬಾಲಕೃಷ್ಣ ಅಭಿಮಾನಿಗಳು ಫಿದಾ ಆಗಿದ್ದರು. ಈಗ ಮತ್ತೆ ಸಿನಿಮಾ ಟೈಟಲ್ 'ಜೈ ಬಾಲಯ್ಯ' ಎಂದು ಪುಕಾರು ಹಬ್ಬುತ್ತಿದ್ದಂತೆ ಮತ್ತೆ ಥ್ರಿಲ್ ಆಗಿದ್ದಾರೆ. ಬಾಲಯ್ಯ 107ನೇ ಸಿನಿಮಾ ಟೈಟಲ್ ಅನ್ನು ಸಿನಿಮಾ ತಂಡದಿಂದಲೇ ಕೇಳಲು ಕಾದು ಕೂತಿದ್ದಾರೆ.

ಬಾಲಯ್ಯನ ಸಿನಿಮಾಗಿತ್ತು ಮತ್ತೊಂದು ಟೈಟಲ್

ಬಾಲಯ್ಯನ ಸಿನಿಮಾಗಿತ್ತು ಮತ್ತೊಂದು ಟೈಟಲ್

ಲೆಜೆಂಡ್ ಬಾಲಕೃಷ್ಣ ಸಿನಿಮಾ ಮೇಲೆ ಟಾಲಿವುಡ್ ಕಣ್ಣಿಟ್ಟಿದೆ. ಅದಕ್ಕೆ ಕಾರಣ ಅಖಂಡ ಬಾಕ್ಸಾಫೀಸ್ ಕಲೆಕ್ಷನ್. ಹೀಗಾಗಿ ಅಖಂಡ ಕಲೆಕ್ಷನ್ ಅನ್ನೇ ಮುಂದುವರೆಸಿಕೊಂಡು ಹೋಗಲು ಚಿತ್ರತಂಡ ಕೂಡ ಶ್ರಮವಹಿಸುತ್ತಿದೆ. ಅದಕ್ಕೆ ಟೈಟಲ್ ಕೂಡ ಅಷ್ಟೇ ಮುಖ್ಯ ಆಗಿದ್ದು, ಈ ಹಿಂದೆ 107ನೇ ಸಿನಿಮಾಗೆ 'ಅಣ್ಣಗಾರು' ಎಂಬ ಟೈಟಲ್ ಇಡಲಿದ್ದಾರೆ ಎಂದು ಪುಕಾರು ಹಬ್ಬಿತ್ತು. ಆದ್ರೀಗ ಅಣ್ಣಾಗಾರು ಅಲ್ಲ ಜೈ ಬಾಲಯ್ಯ ಎಂದು ಹೇಳಲಾಗಿದೆ.

ಬಾಲಕೃಷ್ಣ ಸಾಲ್ಟ್ ಅಂಡ್ ಪೆಪ್ಪರ್ ಲುಕ್

ಬಾಲಕೃಷ್ಣ ಸಾಲ್ಟ್ ಅಂಡ್ ಪೆಪ್ಪರ್ ಲುಕ್

ಬಾಲಕೃಷ್ಣ 107ನೇ ಸಿನಿಮಾದ ಲುಕ್ ಬದಲಾಗಿದೆ. ಈ ಸಿನಿಮಾ ಬಾಲಕೃಷ್ಣ ಸಾಲ್ಟ್ ಅಂಡ್ ಪೆಪ್ಪರ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಫಸ್ಟ್‌ ಲುಕ್‌ನಲ್ಲಿ ಈ ಅವತಾರವನ್ನು ನೋಡಿ ಅಭಿಮಾನಿಗಳು ಖುಷಿಯಲ್ಲಿ ತೇಲುತ್ತಿದ್ದಾರೆ. ನವೀನ್ ಯೆರ್ನೇನಿ ಮತ್ತು ವೈ ರವಿಶಂಕರ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಸಿನಿಮಾ ಈಗಾಗಲೇ ಸಿನಿಮಾ ಪ್ರೇಕ್ಷಕರಿಗೆ ಕಿಕ್ ಕೊಡುತ್ತಿದೆ.

ಶೃತಿ ಹಾಸನ್ ಬಾಲಯ್ಯನಿಗೆ ನಾಯಕಿ

ಶೃತಿ ಹಾಸನ್ ಬಾಲಯ್ಯನಿಗೆ ನಾಯಕಿ

ಬಾಲಯ್ಯ ನಟಿಸುತ್ತಿರುವ ಸಿನಿಮಾವನ್ನು ಗೋಪಿಚಂದ್ ಮಲಿನೇನಿ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ಇವರೇ 'ಕ್ರ್ಯಾಕ್' ಸಿನಿಮಾವನ್ನು ನಿರ್ದೇಶಿಸಿದ್ದರು. ಈ ಸಿನಿಮಾದಲ್ಲಿ ರವಿತೇಜಾಗೆ ನಾಯಕಿಯಾಗಿದ್ದ ಶ್ರುತಿ ಹರಿಹರನ್ ಇಲ್ಲೂ ಮುಂದುವರೆದಿದ್ದಾರೆ. ವಿಶೇಷ ಅಂದರೆ, ಇದರೊಂದಿಗೆ ದುನಿಯಾ ವಿಜಯ್ ಕೂಡ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ತಮಿಳಿನ ವರಲಕ್ಷ್ಮ ಶರತ್ ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ.

More from Filmibeat

English summary
Balakrishna Starrer NBK 107 Movie Title Finalized As Jai Balayya, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X