ಪುಷ್ಪ 2 ಮುನ್ನ ಅಲ್ಲು ಅರ್ಜುನ್ ಮತ್ತೊಂದು ಸಿನಿಮಾ: ಯಾವುದದು?

ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. 'ಪುಷ್ಪ' ಸಿನಿಮಾ ಬ್ಲಾಕ್‌ ಬಸ್ಟರ್ ಲಿಸ್ಟ್ ಸೇರುತ್ತಿದ್ದಂತೆ ಅಲ್ಲು ಅರ್ಜುನ್ ವಿಶ್ವದಾದ್ಯಂತ ಫೇಮಸ್ ಆಗಿದ್ದಾರೆ. 'ಪುಷ್ಪ' ಬ್ಲಾಕ್‌ ಬಸ್ಟರ್ ಹಿಟ್ ಆದ ಬಳಿಕ 'ಪುಷ್ಪ 2'ಗಾಗಿ ಕಾದು ಕೂತಿದ್ದಾರೆ.

ಅಲ್ಲು ಅರ್ಜುನ್‌ಗೆ ಮೆಗಾ ಬ್ಲಾಕ್‌ಬಸ್ಟರ್ ಹಿಟ್ ಕೊಟ್ಟ ಸಿನಿಮಾ 'ಪುಷ್ಪ' ಬಳಿಕ ಸೀಕ್ವೆಲ್‌ಗಾಗಿ ಅಲ್ಲು ಅರ್ಜುನ್ ಅಭಿಮಾನಿಗಳು ಕಾದು ಕೂತಿದ್ದಾರೆ. ಆದ್ರೀಗ 'ಪುಷ್ಪ 2'ಗೂ ಮುನ್ನ ಮತ್ತೊಂದು ಸಿನಿಮಾದಲ್ಲಿ ಸ್ಟೈಲಿಶ್ ಸ್ಟಾರ್ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ.

'ಪುಷ್ಪ 2'ಗೂ ಮುನ್ನ ಮತ್ತೊಂದು ಸಿನಿಮಾ

'ಪುಷ್ಪ 2' ಸಿನಿಮಾವನ್ನು ಇನ್ನೂ ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡುವುದಕ್ಕೆ ಚಿತ್ರತಂಡ ಸ್ಕೆಚ್ ಹಾಕಿಕೊಂಡಿದೆ. ಹೀಗಾಗಿ ಸಿನಿಮಾ ಸೆಟ್ಟೇರುವುದು ತಡವಾಗಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ನಿರ್ದೇಶಕ ಸುಕುಮಾರ್ ಇನ್ನೂ ಸ್ಕ್ರಿಪ್ಟ್‌ನಲ್ಲಿ ಬ್ಯುಸಿಯಾಗಿರುವುದರಿಂದ 'ಪುಷ್ಪ 2' ಸೆಟ್ಟೇರುವುದು ತಡವಾಗಬಹುದು ಎಂದು ಅಂದಾಜಿಸಲಾಗಿದೆ.

Before Pushpa 2 Allu Arjun Doing Another Movie

'ಪುಷ್ಪ' ಸ್ವೀಕ್ವೆಲ್ ತಡವಾಗುತ್ತಿರುವುದರಿಂದ ಅಲ್ಲು ಅರ್ಜುನ್ ಮತ್ತೊಂದು ಸಿನಿಮಾಗೆ ಕೈ ಹಾಕಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಸ್ಟೈಲಿಶ್ ಸ್ಟಾರ್ ಮತ್ತೊಂದು ಕಥೆಯನ್ನು ಕೇಳಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

'ಪುಷ್ಪ 2' ಸಿನಿಮಾದ ಕಥೆಯೇನು?

ಕೆಲವು ದಿನ ಹಿಂದೆ 'ಪುಷ್ಪ 2' ಸಿನಿಮಾ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಅಲ್ಲು ಅರ್ಜುನ್ 'ಪುಷ್ಪ 2' ಬಿಟ್ಟು ಬೇರೆ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ಗುಲ್ಲೆದ್ದಿತ್ತು. ಆದ್ರೀಗ ಪ್ಯಾನ್ ಇಂಡಿಯಾ ಸ್ಟಾರ್ ಯೂಟರ್ನ್ ತೆಗೆದುಕೊಳ್ಳುತ್ತಾರೆ ಅಂತ ಹೇಳಾಗಿದೆ.

Before Pushpa 2 Allu Arjun Doing Another Movie

ಸುಕುಮಾರ್ ನಿರ್ದೇಶನದ 'ಪುಷ್ಪ 2' ಮೇಲೆ ಒತ್ತಡ ಹೆಚ್ಚಾಗಿದೆ. 'ಕೆಜಿಇಫ್ 2' ಸಿನಿಮಾ ಮೆಗಾ ಬ್ಲಾಕ್‌ಬಸ್ಟರ್ ಆದ ಬಳಿಕ 'ಪುಷ್ಪ 2' ದೊಡ್ಡ ಹಿಟ್ ಆಗಲೇ ಬೇಕು ಅಂತ ನಿರ್ಧರಿಸಿದ್ದಾರೆ ಪಣತೊಟ್ಟಿದ್ದಾರೆ ಅನ್ನೋ ಮಾತು ಹರಿದಾಡುತ್ತಿದೆ. ಈ ಮಧ್ಯೆ ಅಲ್ಲು ಅರ್ಜುನ್ ಹೊಸ ಸಿನಿಮಾ ಬಗ್ಗೆ ಬೇರೆ ಗುಲ್ಲೆದ್ದಿದೆ. ಆದರೆ, ಅಲ್ಲು ಅರ್ಜುನ್ ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.

More from Filmibeat

English summary
Before Pushpa 2 Allu Arjun Doing Another Movie, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X