RRR ಬಳಿಕ ಮತ್ತೊಂದು ತೆಲುಗು ಸಿನಿಮಾಕ್ಕೆ ಆಲಿಯಾ ಭಟ್ ಗ್ರೀನ್ ಸಿಗ್ನಲ್? : ಹೀರೋ ಯಾರು?

ದಕ್ಷಿಣ ಭಾರತಕ್ಕೆ ಕಾಲಿಟ್ಟಿದ್ದೇ ಕಾಲಿಟ್ಟಿದ್ದು, ಆಲಿಯಾ ಭಟ್ ಈ ಚಿತ್ರರಂಗಕ್ಕೆ ಫಿದಾ ಆದಂತಿದೆ. ರಾಜಮೌಳಿ ಅದೇನು ಮೋಡಿ ಮಾಡಿ ಕರೆದುಕೊಂಡು ಬಂದರೋ ಗೊತ್ತಿಲ್ಲ. ಸೌತ್ ಸಿನಿಮಾ ಮೇಲೆ ಭಾರೀ ಪ್ರೀತಿ ಬಂದಿದೆಯಂತೆ. ಅದಕ್ಕೆ ಆಲಿಯಾ ಭಟ್ ಇನ್ನೊಂದು ತೆಲುಗು ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಹೀಗೊಂದು ಸುದ್ದಿ ಟಾಲಿವುಡ್ ಅಂಗಳದಲ್ಲಿ ಬೇಜಾನ್ ದೊಡ್ಡ ಸುದ್ದಿ ಮಾಡುತ್ತಿದೆ.

ಬಾಲಿವುಡ್ ನಟಿ ಆಲಿಯಾ ಭಟ್ ನಟಿಸಿದ ದಕ್ಷಿಣದ ಮೊದಲ ಸಿನಿಮಾ RRR. ಈ ಸಿನಿಮಾ ಇನ್ನೂ ಬಿಡುಗಡೆಯಾಗಿಲ್ಲ. ಅಷ್ಟರಲ್ಲೇ ಆಲಿಯಾ ಭಟ್‌ಗೆ ಮತ್ತೊಂದು ಆಫರ್ ಹುಡುಕಿಕೊಂಡು ಬಂದಿದೆ. ರಾಜಮೌಳಿ ಸಿನಿಮಾದಲ್ಲಿ ಆಲಿಯಾ ಭಟ್‌ ಫ್ಯಾನ್ ಇಂಡಿಯಾ ನಟಿಯಾಗಿ ಹೊರ ಹೊಮ್ಮಿದ್ದಾರೆ. ಹೀಗಾಗಿ ದಿಢೀರನೇ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಆಲಿಯಾಗೆ ದಕ್ಷಿಣ ಭಾರತದ ಚಿತ್ರರಂಗ ಇಷ್ಟ ಆಗಿದೆ. ಅದಕ್ಕೆ ಈ ಬಾರಿ ಪೂರ್ಣ ಪ್ರಮಾಣದ ನಾಯಕಿಯಾಗಿ ಟಾಲಿವುಡ್‌ನಲ್ಲಿ ಅಖಾಡಕ್ಕೆ ಇಳಿಯಲಿದ್ದಾರಂತೆ.

2ನೇ ತೆಲುಗು ಚಿತ್ರಕ್ಕೆ ಆಲಿಯಾ ಗ್ರೀನ್ ಸಿಗ್ನಲ್

2ನೇ ತೆಲುಗು ಚಿತ್ರಕ್ಕೆ ಆಲಿಯಾ ಗ್ರೀನ್ ಸಿಗ್ನಲ್

ಆಲಿಯಾ ಭಟ್ ಸದ್ಯ RRR ಸಿನಿಮಾ ಪ್ರಚಾರ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಟಾಲಿವುಡ್‌ನಲ್ಲಿ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಅದೇನಂದರೆ, ಆಲಿಯಾ ಭಟ್ 2ನೇ ತೆಲುಗು ಚಿತ್ರದಲ್ಲಿ ನಟಿಸುವುದಕ್ಕೆ ಜೈ ಅಂದಿದ್ದಾರಂತೆ. ವಿಶೇಷ ಏನೆಂದರೆ, ಇದು ಕೂಡ ಪ್ಯಾನ್ ಇಂಡಿಯಾ ಸಿನಿಮಾ. ಅಷ್ಟಕ್ಕೂ ಆಲಿಯಾ ಭಟ್ ಈ ಸಿನಿಮಾ ಒಪ್ಪಿಕೊಳ್ಳುವುದಕ್ಕೆ ಕಾರಣನೇ RRR ಎನ್ನಲಾಗಿದೆ. ಈಗಾಗಲೇ ಆಲಿಯಾ ನಟಿಸುತ್ತಿರುವ ಸಿನಿಮಾದ ಸ್ಟಾರ್ ಕೂಡ ಫೈನಲ್ ಮಾಡಲಾಗಿದೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

 ಆಲಿಯಾಗೆ ಕೊರಟಾಲ ಶಿವ ನಿರ್ದೇಶನ

ಆಲಿಯಾಗೆ ಕೊರಟಾಲ ಶಿವ ನಿರ್ದೇಶನ

ಹೌದು.. ಕೊರಟಾಲ ಶಿವ ನಿರ್ದೇಶಿಸುತ್ತಿರುವ ಮುಂದಿನ ಸಿನಿಮಾಗೆ ಆಲಿಯಾ ಭಟ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಇದು ಜೂ. ಎನ್‌ಟಿಆರ್ ನಟಿಸುತ್ತಿರುವ 30ನೇ ಸಿನಿಮಾ. ಜೂ ಎನ್‌ಟಿಆರ್ ಹಾಗೂ ರಾಮ್‌ಚರಣ್ ಕಾಂಬಿನೇಷನ್‌ ಸಿನಿಮಾ RRR ರಿಲೀಸ್ ಆಗುತ್ತಿದ್ದಂತೆ ಯಂಗ್ ಟೈಗರ್ ಹೊಸ ಸಿನಿಮಾ ಸೆಟ್ಟೇರಲಿದೆ. ಫೆಬ್ರವರಿ ಇಲ್ಲವೇ ಮಾರ್ಚ್ ತಿಂಗಳಲ್ಲಿ ಈ ಸಿನಿಮಾದ ಚಿತ್ರೀಕರಣ ಆರಂಭ ಆಗಲಿದೆ ಎನ್ನಲಾಗಿದ್ದು, ಆಲಿಯಾ ಭಟ್ ಬಹುತೇಕ ಸಿನಿಮಾ ಒಪ್ಪಿಕೊಂಡಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

 ಪ್ಯಾನ್ ಇಂಡಿಯಾ ಚಿತ್ರಕ್ಕೆ ಕೊರಟಾಲ ಶಿವ ಸಜ್ಜು

ಪ್ಯಾನ್ ಇಂಡಿಯಾ ಚಿತ್ರಕ್ಕೆ ಕೊರಟಾಲ ಶಿವ ಸಜ್ಜು

ನಿರ್ದೇಶಕ ಕೊರಟಾಲ ಶಿವ ಟಾಲಿವುಡ್‌ನಲ್ಲಿ ಸೂಪರ್‌ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಆದರೆ, ಜೂ. ಎನ್‌ಟಿಆರ್ ನಟಿಸುತ್ತಿರುವ 30ನೇ ಸಿನಿಮಾ ಕೊರಟಾಲ ಶಿವನಿಗೆ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಹೀಗಾಗಿ ಸಿನಿಮಾದ ಕಥೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ. ಸ್ಕ್ರೀನ್ ಪ್ಲೇ ಯನ್ನು ಮತ್ತಷ್ಟು ಬಿಗಿಗೊಳಿಸುವತ್ತ ಗಮನ ಹರಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಎಲ್ಲಕ್ಕಿಂತ ಹೆಚ್ಚಾಗಿ ಆಲಿಯಾ ಪಾತ್ರದ ಬಗ್ಗೆ ವಿಶೇಷವಾಗಿ ಕಾಳಜಿವಹಿಸಿದ್ದಾರೆ ಎನ್ನುವ ಮಾತು ಹರಿದಾಡುತ್ತಿದೆ.

ಬೆಂಗಳೂರಲ್ಲಿ ಆಲಿಯಾ RRR ಪ್ರಚಾರ

ಬೆಂಗಳೂರಲ್ಲಿ ಆಲಿಯಾ RRR ಪ್ರಚಾರ

ರಾಜಮೌಳಿ ನಿರ್ದೇಶನದ ಮೆಗಾ ಸಿನಿಮಾ RRR ಬಿಡುಗಡೆಗೆ ಇನ್ನೊಂದು ವಾರ ಬಾಕಿಯಿದೆ. ಹೀಗಾಗಿ ರಾಜಮೌಳಿ ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಸಿನಿಮಾದ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ರಾಜಮೌಳಿ ಜೊತೆ ಆಲಿಯಾ ಭಟ್ ಕೂಡ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ. ಜನವರಿ 2ನೇ ತಾರೀಕಿನಿಂದು ಆಲಿಯಾ ಭಟ್ ಮತ್ತೆ ಬೆಂಗಳೂರಿಗೆ ಬರಲಿದ್ದು, ಸಿನಿಮಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ ಎನ್ನುವ ಮಾತುಗಳೂ ಕೂಡ ಕೇಳಿಬರುತ್ತಿವೆ.

More from Filmibeat

English summary
Bollywood actress Alia Bhatt is almost confirmed as the female lead for JrNtr30. Koratala Siva is going to direct Jr.Ntr 30th movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X