ಕ್ಯಾನ್ಸರ್‌ ಗೆದ್ದು ಮತ್ತೆ ಚಿತ್ರರಂಗಕ್ಕೆ ಮರಳಿದ ಶಿವಣ್ಣ, ಉಪೇಂದ್ರ ನಾಯಕಿ ಸೋನಾಲಿ ಬೇಂದ್ರೆ

ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಕನ್ನಡಿಗರಿಗೂ ಚಿರಪರಿಚಿತ. ಶಿವಣ್ಣ ಹಾಗೂ ಉಪೇಂದ್ರ ಅಭಿನಯದ 'ಪ್ರೀತ್ಸೆ' ಸಿನಿಮಾ ನೋಡಿದವರಿಗೆ ಈ ನಟಿ ಯಾರು ಅನ್ನುವುದು ಗೊತ್ತೇ ಇದೆ. ಬಾಲಿವುಡ್‌ನ ಈ ಸುಂದರ ನಟಿ ನಟಿಸಿದ 'ಪ್ರೀತ್ಸೆ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದಿತ್ತು. ಆ ಬಳಿಕ ಮತ್ತೆ ಸ್ಯಾಂಡಲ್‌ವುಡ್‌ ಸಿನಿಮಾಗಳಲ್ಲಿ ಸೋನಾಲಿ ಬೇಂದ್ರೆ ನಟಿಸಿಲ್ಲ. ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ನಟಿ ವಿವಾಹದ ಬಳಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು ತೀರಾ ವಿರಳ. ಆದರೆ 2018ರಲ್ಲಿ ಸೋನಾಲಿ ಬೇಂದ್ರೆ ಮತ್ತೆ ಸುದ್ದಿಯಾಗಿದ್ದರು. ಅದು ಸಿನಿಮಾದಿಂದ ಅಲ್ಲ.

2018ರಲ್ಲಿ ಸೋನಾಲಿ ಬೇಂದ್ರೆಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ತಕ್ಷಣವೇ ಸೋನಾಲಿ ಬೇಂದ್ರೆ ಹೆಚ್ಚಿನ ಚಿಕಿತ್ಸೆಗೆಂದು ನ್ಯೂಯಾರ್ಕ್‌ಗೆ ಹೋಗಿದ್ದರು. ಅಲ್ಲಿ ಚಿಕಿತ್ಸೆ ಪಡೆದ ಬಳಿಕ ಕ್ಯಾನ್ಸರ್‌ನಿಂದ ಗುಣಮುಖರಾಗಿದ್ದರು. ಇದಾದ ಬಳಿಕವೂ ಸೋನಾಲಿ ಬೇಂದ್ರೆ ಸಿನಿಮಾ ಕಡೆ ಮುಖ ಮಾಡಿರಲಿಲ್ಲ. ಆದ್ರೀಗ ಬಹಳ ಸಿನಿಮಾಗಳ ಬಳಿಕ ಮತ್ತೆ ಮತ್ತೆ ಸೋನಾಲಿ ಬೇಂದ್ರೆ ಕ್ಯಾಮರಾ ಮುಂದೆ ಬರಲು ನಿರ್ಧರಿಸಿದ್ದಾರೆ.

ಸೋನಾಲಿ ಬೇಂದ್ರೆ, ದಕ್ಷಿಣ ಭಾರತದ ಸಿನಿಮಾಗಳಲ್ಲೂ ನಟಿಸಿದ್ದರಿಂದ ಯಾವ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಡಬಹುದು ಎಂಬ ಕುತೂಹಲವಿತ್ತು. ಮೂಲಗಳ ಪ್ರಕಾರ, ಸೋನಾಲಿ ಬೇಂದ್ರೆ ದಕ್ಷಿಣ ಭಾರತದ ಚಿತ್ರಗಳಲ್ಲಿಯೇ ಮತ್ತೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲಿ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಸೋನಾಲಿ ಬೇಂದ್ರೆ ಟಾಲಿವುಡ್ ಚಿತ್ರದಲ್ಲಿ ನಟಿಸಲು ಒಲವು ತೋರಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

 ಟಾಲಿವುಡ್‌ಗೆ ಸೋನಾಲಿ ಬೇಂದ್ರೆ ಎಂಟ್ರಿ

ಟಾಲಿವುಡ್‌ಗೆ ಸೋನಾಲಿ ಬೇಂದ್ರೆ ಎಂಟ್ರಿ

ಹೌದು.. ಟಾಲಿವುಡ್‌ನಲ್ಲಿ ಇಂತಹದ್ದೊಂದು ಸುದ್ದಿ ಹರಿದಾಡುತ್ತಿದೆ. ಸೋನಾಲಿ ಬೇಂದ್ರೆ ತೆಲುಗು ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಬಿಗ್ ಪ್ರಾಜೆಕ್ಟ್‌ಗೆ ಸೋನಾಲಿ ಬೇಂದ್ರೆ ಸೈ ಎಂದಿದ್ದಾರೆ. ಜೂನಿಯರ್ ಎನ್‌ಟಿಆರ್ 30ನೇ ಸಿನಿಮಾದಲ್ಲಿ ಸೋನಾಲಿ ಬೇಂದ್ರೆ ನಟಿಸುತ್ತಿದ್ದಾರಂತೆ. ಕೊರಟಾಲ ಶಿವ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದು, ಸದ್ಯಕ್ಕೆ ಎನ್‌ಟಿಆರ್ 30 ಎಂದು ಹೆಸರಿಡಲಾಗಿದೆ. ಕೊರಟಾಲ ಶಿವ ಈಗಾಗಲೇ ಸೋನಾಲಿ ಬೇಂದ್ರೆಗೆ ಪಾತ್ರದ ಬಗ್ಗೆ ವಿವರಿಸಿದ್ದು, ಅವರಿಗೂ ಇಷ್ಟ ಆಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ, ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.

 ಸೋನಾಲಿಗೆ ತೆಲುಗು ಚಿತ್ರರಂಗ ಹೊಸತಲ್ಲ

ಸೋನಾಲಿಗೆ ತೆಲುಗು ಚಿತ್ರರಂಗ ಹೊಸತಲ್ಲ

ಸೋನಾಲಿ ಬೇಂದ್ರೆಗೆ ದಕ್ಷಿಣ ಭಾರತದ ಸಿನಿಮಾ ಹೊಸತಲ್ಲ. ಯಾಕಂದ್ರೆ, ಕನ್ನಡ, ತೆಲುಗು, ತಮಿಳು ಈ ಮೂರು ಚಿತ್ರರಂಗದಲ್ಲಿಯೂ ಸೋನಾಲಿ ಬೇಂದ್ರೆ ಕೆಲಸ ಮಾಡಿದ್ದಾರೆ. ಅದರಲ್ಲೂ ತೆಲುಗಿನಲ್ಲಿ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ನಟಿಸಿದ 'ಶಂಕರ್ ದಾದಾ ಎಂಬಿಬಿಎಸ್' ಹಾಗೂ ಮಹೇಶ್ ಬಾಬು ಅಭಿನಯದ 'ಮುರಾರಿ' ಸಿನಿಮಾದಲ್ಲಿ ಸೋನಾಲಿ ಬೇಂದ್ರೆ ನಟಿಸಿದ್ದಾರೆ. ಈಗ ಕ್ಯಾನ್ಸರ್‌ನಿಂದ ಗುಣಮುಖರಾದ ಬಳಿಕ ಮತ್ತೆ ಬಣ್ಣ ಹಚ್ಚಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

 ಆಲಿಯಾ-ಸೋನಾಲಿ ನಟನೆ

ಆಲಿಯಾ-ಸೋನಾಲಿ ನಟನೆ

ಸೋನಾಲಿ ಬೇಂದ್ರೆ ನಿರ್ದೇಶಕ ಕೊರಟಾಲ ಶಿವ ಕತೆ ಇಷ್ಟ ಪಟ್ಟು ಒಪ್ಪಿಕೊಂಡರೆ, ಬಾಲಿವುಡ್‌ನ ಇಬ್ಬರು ನಟಿಯರು ಈ ಚಿತ್ರಕ್ಕೆ ಕೆಲಸ ಮಾಡಿದಂತಾಗುತ್ತೆ. ಈಗಾಗಲೇ ಜೂ.ಎನ್‌ಟಿಆರ್ ಅಭಿನಯದ 30ನೇ ಚಿತ್ರಕ್ಕೆ ಬಾಲಿವುಡ್ ನಟಿ ಆಲಿಯಾ ಭಟ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಒಂದ್ವೇಳೆ ಸೋನಾಲಿ ಒಪ್ಪಿದರೆ, ಇದೇ ಸಿನಿಮಾದಲ್ಲಿ ಈ ಇಬ್ಬರೂ ಬಾಲಿವುಡ್ ನಟಿಯರನ್ನು ತೆಲುಗು ಸಿನಿಮಾದಲ್ಲಿ ನೋಡುವ ಅಪರೂಪದ ಅವಕಾಶ ಸಿನಿಪ್ರಿಯರಿಗೆ ಸಿಗಲಿದೆ.

 ಡಿಐಡಿಗೆ ಸೋನಾಲಿ ಜಡ್ಜ್

ಡಿಐಡಿಗೆ ಸೋನಾಲಿ ಜಡ್ಜ್

ನಾಲ್ಕು ವರ್ಷಗಳ ಬಳಿಕ ಸೋನಾಲಿ ಬೇಂದ್ರೆ ಮತ್ತೆ ಕ್ಯಾಮರಾ ಮುಂದೆ ಕಾಣಿಸಿಕೊಳ್ಳಿದ್ದಾರೆ. 'ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಲಿಟಿಲ್ ಮಾಸ್ಟರ್' ರಿಯಾಲಿಟಿ ಶೋನಲ್ಲಿ ಸೋನಾಲಿ ಬೇಂದ್ರೆ ಜಡ್ಜ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ನಾಲ್ಕು ವರ್ಷಗಳ ಬಳಿಕ ಮತ್ತೆ ಸೋನಾಲಿ ಬೇಂದ್ರೆಯನ್ನು ಕಿರುತೆರೆಯಲ್ಲಿ ಕಂಡು ಫ್ಯಾನ್ಸ್ ಖುಷಿಯಾಗಿದ್ದಾರೆ. ಹಾಗೇ ಸಿನಿಮಾಗೂ ಬಣ್ಣ ಹಚ್ಚಿದರೆ, ನಟಿಯ ಅಭಿಮಾನಿಗಳು ದಿಲ್ ಖುಷ್ ಆಗುವುದು ಪಕ್ಕಾ.

More from Filmibeat

English summary
Bollywood actress Sonali Bendre's comeback with Jr NTR's film after Cancer free. The actress is apparently in talks for an important role in Jr NTR's upcoming project with Koratala Siva, which has been tentatively titled NTR30.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X