»   » ಮತ್ತೊಬ್ಳು ಬಾಲಿವುಡ್ ಬ್ಯೂಟಿ ಬಿದ್ದಳೇ ವಿರಾಟ್ ಕೊಹ್ಲಿ ಹಿಂದೆ?

ಮತ್ತೊಬ್ಳು ಬಾಲಿವುಡ್ ಬ್ಯೂಟಿ ಬಿದ್ದಳೇ ವಿರಾಟ್ ಕೊಹ್ಲಿ ಹಿಂದೆ?

Posted By:
Subscribe to Filmibeat Kannada

ನಸೀಬು ಅಂದರೆ ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ರೀತಿ ಇರಬೇಕು. ಹೆಣ್ಣು, ಹೊನ್ನು, ಮಣ್ಣಿನ ವಿಚಾರದಲ್ಲಿ ವಿರಾಟ್ ಮುಟ್ಟಿದ್ದೆಲ್ಲಾ ಈಗ ಚಿನ್ನ..

ಮಹೇಂದ್ರ ಸಿಂಗ್ ಧೋನಿ ಅಚಾನಕ್ ಆಗಿ ಟೆಸ್ಟ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ ನಂತರ ಬಹು ಬೇಡಿಕೆಯ ಕ್ಯಾಪ್ಟನ್ ಪಟ್ಟ ಕೊಹ್ಲಿಗೆ ಒಲಿದು ಬಂದಿತ್ತು. ಆಸ್ಟ್ರೇಲಿಯಾ ನೆಲದಲ್ಲಿ ಭಾರತೀಯ ತಂಡ ಟೆಸ್ಟ್ ಸರಣಿ ಸೋತರೂ ವಿರಾಟ್ ಭರ್ಜರಿ ಫಾರಂನಲ್ಲಂತೂ ಇದ್ದಾರೆ.

ಕ್ರೀಸಿನಲ್ಲಿ ಎದುರಾಳಿಗಳ ಬೌಲಿಂಗಿಗೆ ಶತಕದ ಮೂಲಕ ಉತ್ತರ ನೀಡುತ್ತಿರುವ ಕೊಹ್ಲಿ, ಕ್ರೀಸಿನಿಂದಲೇ ತನ್ನ ಪ್ರೇಮಿ ಅನುಷ್ಕಾ ಶರ್ಮಾಗೆ ಏನು ತಲುಪಿಸಬೇಕೋ ಅದನ್ನು ಸರಿಯಾದ ಸಮಯಕ್ಕೆ ತಲುಪಿಸುತ್ತಿದ್ದಾರೆ. (ನಟಿ ಸೋನಂ ಕಪೂರ್ ಕ್ಲಾಸ್ ಲೆಸ್)

ಬಂದರು ನಗರಿ ಸಿಡ್ನಿಯಲ್ಲಿ ವಿರಾಟ್ ಮತ್ತು ಅನುಷ್ಕಾ ತು ಮೇರಿ ಸಾಮ್ನೆ, ಮೈತೇರಿ ಸಾಮ್ನೆ ಅನ್ಕೊಂಡು ಕೈಕೈ ಹಿಡಿದುಕೊಂಡು ಮಾಧ್ಯಮಗಳಿಗೆ ಬಿಂದಾಸ್ ಫೋಸ್ ಕೊಡುತ್ತಿದ್ದಾರೆ.

ಇತ್ತ ಭಾರತದ ಬಂದರು ನಗರಿ ಮುಂಬೈನಿಂದ ಅನುಷ್ಕಾಗೆ ಎಚ್ಚರಿಕೆ ಗಂಟೆಯೊಂದು ಸದ್ದು ಮಾಡುತ್ತಿದೆ. ಹೌದು, ಬಾಲಿವುಡ್ ಚಿತ್ರ ರಂಗದ ಖೂಬ್ಸೂರತ್ ನಟಿ ನೀಡಿರುವ ಹೇಳಿಕೆ ಅನುಕ್ಷಾ ತನ್ನ ದಿಲ್ ಅನ್ನೋದನ್ನು ಪರಪರಾ.. ಅಂತಾ ಪರಚಿಕೊಳ್ಳುವಂತೆ ಮಾಡಿದೆ.

ಅನಿಲ್ ಕಪೂರ್ ಪುತ್ರಿ

ಕನ್ನಡದ 'ಪಲ್ಲವಿ ಅನುಪಲ್ಲವಿ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅನಿಲ್ ಕಪೂರ್ ಮಗಳು ಸೋನಂ ಕಪೂರ್ ಕಣ್ಣು ಕ್ರೀಡಾ ರಂಗದ ಸದ್ಯದ ಚಾಲ್ತಿಯಲ್ಲಿರುವ ವಿರಾಟ್ ಕೊಹ್ಲಿ ಮೇಲೆ ಬಿದ್ದಿದೆ ಅನ್ನುತ್ತವೆ ಬಾಲಿವುಡ್ಡಿನ ಗಾಸಿಪ್ ಜಗಲಿಗಳು.

ಸೋನಂ ಕಪೂರ್ ಹೇಳಿಕೆ

ಇದ್ದದ್ದನ್ನು ಇದ್ದಾಗೆ ಹೇಳೋದ್ರಲ್ಲಿ ಸೋನಂ ಕಪೂರ್ ಎತ್ತಿದ ಕೈ ಅನ್ನೋದು ಬಾಲಿವುಡ್ ನಲ್ಲಿ ಎಲ್ಲರಿಗೂ ಗೊತ್ತಿರುವ ವಿಚಾರ. ತನ್ನ ಮನಸ್ಸಿನಲ್ಲಿರುವ ಮಾತನ್ನು ಎಷ್ಟೋ ಬಾರಿ ಹೇಳಿ, ತಂದೆಯೂ ಮುಜುಗರಕ್ಕೀಡಾಗುವಂತೆ ಮಾಡಿರುವ "ಕೀರ್ತಿ" ಸೋನಂಗೆ ಸಲ್ಲಬೇಕು. ಅದೆಷ್ಟೋ ಬಾರಿ ಇದು ನನ್ನ ವೈಯಕ್ತಿಕ ವಿಚಾರವೆಂದು ತಂದೆ ಅನಿಲ್ ಕಪೂರ್ ಬಾಯಿಯನ್ನೇ ಮುಚ್ಚಿಸಿದ ಧೀರ ಮಹಿಳೆ ಈಕೆ.

ಫರಾ ಖಾನ್ ಬರ್ತಡೇ ಪಾರ್ಟಿ

ಬಾಲಿವುಡ್ ಚಿತ್ರೋದ್ಯಮದ ಫರಾ ಖಾನ್ ಅವರ ಐವತ್ತನೇ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸೋನಂ ಭಾಗವಹಿಸಿದ್ದರು. ಸೆಕ್ಸಿ ಲುಕ್ ನಲ್ಲಿ ಬಂದಿದ್ದ ಸೋನಂ ಅವರನ್ನು ನಿಮ್ಮ ಫೇವರೇಟ್ ಕ್ರಿಕೆಟಿಗ ಯಾರೆಂದು ಮಾಧ್ಯಮದವರು ಪ್ರಶ್ನಿಸಿದ್ದಾರೆ.

ವಿರಾಟ್ ಕೊಹ್ಲಿ ಬಗ್ಗೆ ಸೋನಂ ಹೇಳಿದ್ದೇನು

ಮಾಧ್ಯಮದವರ ಈ ಪ್ರಶ್ನೆಗೆ ಸೋನಂ ಕಪೂರ್ ಒಂದು ಕ್ಷಣ ಆಲೋಚಿಸದೇ ವಿರಾಟ್ ಕೊಹ್ಲಿ ಅಂದಿದ್ದಾರೆ. ಅವರ ಆ ಕ್ಷಣದಲ್ಲಿ ನೀಡಿದ ಉತ್ತರ ಮತ್ತು ನಾಚಿಕೊಂಡ ರೀತಿ ಮಾಧ್ಯಮಗಳ ಮತ್ತಷ್ಟು ಪ್ರಶ್ನೆಗೆ ಆಹಾರವಾಗಿದೆ.

ಮಾತು ಮುಂದುವರಿಸಿದ ಸೋನಂ

ನನ್ನ ಫೇವರೇಟ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅನ್ನೋದಷ್ಟೇ ಅಲ್ಲದೇ 'ವಿರಾಟ್ ಕೊಹ್ಲಿ ಈಸ್ ವೆರಿ ಹಾಟ್' ಎಂದು ಮಾಧ್ಯಮದವರತ್ತ ತುಂಟ ನಗು ಬೀರಿ ಸೋನಂ ಅಲ್ಲಿಂದ ತೆರಳಿದ್ದಾರೆ. ಮಾಧ್ಯಮದವರ ಮುಂದಿನ ಪ್ರಶ್ನೆಗಳಿಗೆ ಸೋನಂ ಉತ್ತರಿಸದೇ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದಾರೆ. ಬಾಲಿವುಡ್ ಗಾಸಿಪ್ ಜಗತ್ತು ಸೋನಂ ಕಪೂರ್ ವಿರಾಟ್ ಕೊಹ್ಲಿ ಹಿಂದೆ ಬಿದ್ದಿದ್ದಾಳೆ ಎನ್ನುತ್ತಿದೆ. ಇದರಿಂದ ಅನುಷ್ಕಾ ಎಷ್ಟು ಹೊಟ್ಟೆ ಉರಿ ಪಡ್ಕೋತಾಳೋ?

English summary
Bollywood actress Sonam Kapoor Trying To Steal Virat Kohli From Anushka Sharma? Sonam says in a Farah Khan's birthday bash Virat Kohli is too hot.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada