"ಪುರುಷ ವಯಸ್ಸನ್ನು ಏಕೆ ಪರಿಗಣಿಸಬೇಕು? ವಯಸ್ಸು ಮುಖ್ಯವೇ?"; ರಾಜಕಾರಣಿ ಜೊತೆ ನಟಿಯ ಆಡಿಯೋ ವೈರಲ್?

ಸಿನಿಮಾ ಹಾಗೂ ರಾಜಕೀಯ ಎರಡೂ ಕ್ಷೇತ್ರಕ್ಕೂ ಬಿಡಲಾರದ ನಂಟು. ಹಿಂದಿನಿಂದಲೂ ರಾಜಕೀಯ ವ್ಯಕ್ತಿಗಳ ಜೊತೆ ನಟಿಯರ ಹೆಸರು ತಳುಕು ಹಾಕಿಕೊಳ್ಳುತ್ತಲೇ ಇರುತ್ತೆ. ಇಂತಹ ಸಾಕಷ್ಟು ವದಂತಿಗಳನ್ನು ಕೇಳುತ್ತಲೇ ಬಂದಿದ್ದೇವೆ. ಇಂತಹ ಸುದ್ದಿಗಳು ಸಂಚಲನ ಸೃಷ್ಟಿಸಿದಾಗಲೆಲ್ಲಾ ಅವು ಕೇವಲ ಗಾಳಿ ಸುದ್ದಿಯಾಗಿಯೇ ಉಳಿದು ಬಿಟ್ಟಿವೆ. ತಾರ್ಕಿಕ ಅಂತ್ಯಕ್ಕೆ ಬಂದಿರುವ ಉದಾಹರಣೆಗಳೇ ಇಲ್ಲ.

ಇದೀಗ ಸೋಶಿಯಲ್ ಮೀಡಿಯಾದಲ್ಲಿ ಒಬ್ಬ ನಟಿ ಹಾಗೂ ರಾಜಕೀಯ ವ್ಯಕ್ತಿಯ ನಡುವಿನ ಫೋನ್ ಸಂಭಾಷಣೆ ವೈರಲ್ ಆಗಿದೆ. ಇಬ್ಬರು ತುಂಬಾನೇ ಆತ್ಮೀಯವಾಗಿ ಮಾತಾಡಿಕೊಳ್ಳುತ್ತಿರುವ ಆಡಿಯೋ ಇಟ್ಟುಕೊಂಡು ನೆಟ್ಟಿಗರು ಅವರು ಯಾರು ಇರಬಹುದೆಂಬ ನಿರ್ಧಾರಕ್ಕೂ ಬಂದು ಬಿಟ್ಟಿದ್ದಾರೆ.

Bollywood Star Actress Alleged Phone Call with Senior Politician Goes Viral on Social Media

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಆಡಿಯೋದಲ್ಲಿ, ದೆಹಲಿ ಮತ್ತು ಉತ್ತರ ಪ್ರದೇಶ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಿರಿಯ ರಾಜಕಾರಣಿ ಹಾಗೂ ಬಾಲಿವುಡ್‌ನ ಜನಪ್ರಿಯ ನಟಿಯೊಬ್ಬರ ನಡುವೆ ಈ ಸಂಭಾಷಣೆ ನಡೆದಿದೆ ಎಂದು ಹೇಳಲಾಗಿದೆ. ಈ ಆಡಿಯೋ ವೈರಲ್ ಆದ ಬಳಿಕ ನೆಟ್ಟಿಗರು ಗುರುತಿಸುತ್ತಿರುವ ಆ ರಾಜಕಾರಣಿ ಈಗ ಬದುಕಿಲ್ಲ. ಬಾಲಿವುಡ್ ನಟಿ ಮದುವೆಯಾಗಿ ಸೆಟಲ್ ಆಗಿದ್ದಾರೆ. ಹಾಗಿದ್ದರೆ, ಇವರಿಬ್ಬರ ನಡುವೆ ನಡೆದಿದೆ ಎನ್ನಲಾದ ಆ ಆಡಿಯೋದಲ್ಲಿ ಏನಿದೆ? ತಿಳಿಯುವುದಕ್ಕೆ ಮುಂದೆ ಓದಿ.


ಇಬ್ಬರ ಪರಿಚಯ ಆಗುತ್ತೆ

ಫೋನ್ ಸಂಭಾಷಣೆಯ ಆರಂಭ ಹೀಗಾಗುತ್ತೆ. "ಹಾಯ್, ಹೇಗಿದ್ದೀರಾ?" ಎಂದು ನಟಿಯ ಕೇಳುತ್ತಾರೆ. " ನಾನು ಆರಾಮಾಗಿ ಇದ್ದೇನೆ" ಎಂದು ಆ ಕಡೆಯಿಂದ ರಾಜಕೀಯ ವ್ಯಕ್ತಿ ಎಂದು ಬಿಂಬಿಸಲಾಗಿರುವವರ ಧ್ವನಿ ಉತ್ತರಿಸುತ್ತೆ. ಬಹಳ ದಿನಗಳ ನಂತರ ಮಾತನಾಡುತ್ತಿರುವುದಾಗಿ ನಟಿ ಹೇಳಿದ ಬಳಿಕ ಆ ವ್ಯಕ್ತಿಯ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳುತ್ತಾರೆ. ಇದಕ್ಕೆ ಆ ವ್ಯಕ್ತಿ "ಹೌದು" ಎಂದು ಉತ್ತರಿಸುತ್ತಾರೆ.

ಯಾರದು ಬಿಪ್?

ನಟಿ ತನ್ನ ಸಂಭಾಷಣೆಯನ್ನು ಹಾಗೆ ಮುಂದುವರೆಸುತ್ತಾರೆ. "ನೀವು ತುಂಬಾ ಬಿಜಿಯಾಗಿದ್ದೀರಿ ಅನಿಸುತ್ತದೆ" ಎಂದು ಕೇಳುತ್ತಾರೆ. "ಯಾರು.. ಬಿಪ್?" ಎಂದು ಆ ವ್ಯಕ್ತಿ ಪ್ರಶ್ನೆ ಹಾಕುತ್ತಾನೆ. ಆಗ ಆ ನಟಿ ತನ್ನ ಹೆಸರನ್ನು ಹೇಳುತ್ತಾಳೆ. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಎರಡು ಬಾರಿ ಭೇಟಿಯಾಗಿದ್ದನ್ನು ನೆನಪಿಸುತ್ತಾಳೆ. ಆ ಕೂಡ "ನೀವು ಯಾವಾಗ ಭೇಟಿಯಾಗುತ್ತೀರಿ?" ಎಂದು ಕೇಳಿದಾಗ, ಆ ವ್ಯಕ್ತಿ "ನನಗೆ ಸಮಯವೇ ಸಿಗುತ್ತಿಲ್ಲ. ತುಂಬಾ ಬಿಜಿಯಾಗಿದ್ದೇನೆ" ಎಂದು ಹೇಳುತ್ತಾರೆ.

ನಟಿಗೆ ಭರವಸೆ ನೀಡಿದ ವ್ಯಕ್ತಿ

ಮತ್ತೆ ನಟಿ "ನೀವು ಬಿಜಿಯಾಗಿದ್ದೀರಾ?" ಎಂದು ಕೇಳಿದಾಗ, "ನನ್ನ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ" ಎಂದು ವ್ಯಕ್ತಿ ಹೇಳುತ್ತಾರೆ. "ಪರಿಸ್ಥಿತಿ ಚೆನ್ನಾಗಿಲ್ಲವೇ?" ಎಂಬ ಪ್ರತಿಕ್ರಿಯೆ ಮಹಿಳೆಯಿಂದ ಬರುತ್ತೆ. "ಸಮಯವಿಲ್ಲ, ಆದರೆ ನಿನಗಾಗಿ ಸಮಯ ಮಾಡಿಕೊಳ್ಳುತ್ತೇನೆ" ಎಂದು ವ್ಯಕ್ತಿಯಿಂದ ಉತ್ತರ ಬರುತ್ತೆ. ಆಗ ಆ ನಟಿ ರೊಮ್ಯಾಂಟಿಕ್ ಆಗಿ "ಓಕೆ, ಸ್ವೀಟಿ" ಎಂದು ಹೇಳುತ್ತಾರೆ. ಹೀಗೆ ಹೇಳುತ್ತಿದ್ದಂತೆ "ನನ್ನನ್ನು ನೆನಪಿಟ್ಟುಕೊಂಡು ಕರೆ ಮಾಡಿದಕ್ಕೆ ತುಂಬಾ ಸಂತೋಷ ಆಯ್ತು" ಎಂದು ಆ ವ್ಯಕ್ತಿ ಹೇಳಿದಾಗ, ಆ ನಟಿ "ನಾನು ನಿಮ್ಮನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ" ಎಂದು ಉತ್ತರಿಸುತ್ತಾರೆ.

ವಯಸ್ಸು ಮತ್ತು ಸಂಬಂಧಗಳು

ಹೀಗೆ ಸಂಭಾಷಣೆ ಮುಂದುವರೆದಾಗ, ಆ ವ್ಯಕ್ತಿ "ನಾನು ಈಗ ಪುರಾತನ ಕಾಲದ ಶಿಲಾವಶೇಷದಂತೆ ಇದ್ದೇನೆ" ಎಂದು ಹೇಳುತ್ತಾರೆ. ಆಗ ನಟಿ "ಪುರುಷ ತನ್ನ ವಯಸ್ಸನ್ನು ಏಕೆ ಪರಿಗಣಿಸಬೇಕು? ವಯಸ್ಸು ಮುಖ್ಯವೇ?" ಎಂದು ಕೇಳುತ್ತಾಳೆ. ಆ ವ್ಯಕ್ತಿ "ಹೌದು.. ಕಾಲಿನ ನಡುವೆ ವ್ಯವಹಾರಗಳು ಇದ್ದಾಗ, ಅದನ್ನು ಪರಿಗಣಿಸಬೇಕು" ಎಂದು ಹೇಳುತ್ತಾರೆ. ಈ ಮಾತನ್ನು ಕೇಳಿ ಆ ನಟಿ ಜೋರಾಗಿ ನಗುತ್ತಾ "ನೀವು ನನಗೆ ಯಾವಾಗ ಸಿಗುತ್ತೀರಿ? ನಾವು ಭೇಟಿಯಾಗಿ ಒಂದು ತಿಂಗಳಾಗಿದೆ." ಎಂದು ಕೇಳುತ್ತಾಳೆ. ಆ ವ್ಯಕ್ತಿ "ಖಂಡಿತವಾಗಿಯೂ ಸಮಯ ಮಾಡಿಕೊಳ್ಳುತ್ತೇನೆ. ಮತ್ತೆ ಭೇಟಿಯಾಗೋಣ.. ಟೇಕ್ ಕೇರ್" ಎಂದು ಹೇಳುತ್ತಾರೆ. ಆ ನಂತರ ನಟಿ ಫೋನ್ ಕಟ್ ಮಾಡುತ್ತಾಳೆ. ಈ ಆಡಿಯೋ ಸದ್ಯಕ್ಕೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

More from Filmibeat

English summary
A leaked phone call between once a leading Bollywood actress and a senior politician has gone viral on social media. Here are the details.
Read more about: bipasha basu politician dating
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X