ಪ್ರಭಾಸ್ ಸಿನಿಮಾದಲ್ಲಿ ಚಿರಂಜೀವಿ; ಬಾಕ್ಸಾಫೀಸ್‌ಗೆ ಗುನ್ನ ಇಡಲು ಹೊರಟರೇ 'ಸ್ಪಿರಿಟ್' ನಿರ್ದೇಶಕ?

ಒಂದ್ಕಡೆ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್.. ಇನ್ನೊಂದು ಕಡೆ ಸೆನ್ಸೇಷನಲ್ ಡೈರೆಕ್ಟರ್ ಸಂದೀಪ್ ರೆಡ್ಡಿ ವಂಗಾ. ಇವರಿಬ್ಬರ ಕಾಂಬಿನೇಷನ್ ಸಿನಿಮಾ ಅಂದಾಗಲೇ ಸಿನಿಮಾ ಮಂದಿ ಹುಬ್ಬೇರಿಸಿದ್ದರು. ಇದೂವರೆಗೂ ಪ್ರಭಾಸ್ ನಟಿಸಿದ ಎಲ್ಲಾ ಸಿನಿಮಾಗಳಿಗಿಂತ 'ಸ್ಪಿರಿಟ್' ಮೇಲೆ ಹೆಚ್ಚು ನಿರೀಕ್ಷೆಗಳು ಹುಟ್ಟಿಕೊಂಡಿವೆ. ಈ ಸಿನಿಮಾ ಇಷ್ಟೊತ್ತಿಗಾಗಲೇ ಆರಂಭ ಆಗಬೇಕಿತ್ತು. ಆದರೆ, ಡಾರ್ಲಿಂಗ್ ಬ್ಯುಸಿ ಇದ್ದಿದ್ದರಿಂದ ಶೂಟಿಂಗ್ ಸ್ಪಲ್ಪ ಮಟ್ಟಿಗೆ ಮುಂದೂಡಲಾಗಿತ್ತು.

ಟಾಲಿವುಡ್ ವರದಿಗಳ ಪ್ರಕಾರ, 'ಸ್ಪಿರಿಟ್' ಸಿನಿಮಾ ತಂಡವನ್ನು ಪ್ರಭಾಸ್ ಇನ್ನು ಕೆಲವೇ ದಿನಗಳಲ್ಲಿ ಸೇರಿಕೊಳ್ಳಲಿದ್ದಾರೆ. ಪ್ರಭಾಸ್ ಈ ಸಿನಿಮಾ ಒಪ್ಪಿಕೊಂಡಾಗ 'ಸಲಾರ್', 'ಕಲ್ಕಿ 2898 ಎಡಿ', 'ದಿ ರಾಜಾ ಸಾಬ್' ಸಿನಿಮಾದ ಶೂಟಿಂಗ್‌ನಲ್ಲಿ ನಿರತರಾಗಿದ್ದರು. ಹೀಗಾಗಿ ಸ್ಪಿರಿಟ್ ಆರಂಭ ಮಾಡುವುದಕ್ಕೆ ಕೊಂಚ ಸಮಯ ತೆಗೆದುಕೊಂಡಿದ್ದು, ಶೀಘ್ರವೇ 'ಸ್ಪಿರಿಟ್' ಸೆಟ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Buzz Chiranjeevi will be doing cameo in Sandeep Reddy Vanga Directed Prabhas Film Spirit

ಸಂದೀಪ್ ರೆಡ್ಡಿ ವಂಗಾ ಹೇಳಿದ ಕಥೆಯನ್ನು ಇಷ್ಟ ಪಟ್ಟ ಪ್ರಭಾಸ್ ಎರಡು ವರ್ಷಗಳ ಹಿಂದೆಯೇ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಪ್ರಭಾಸ್ ಕಟೌಟ್ ಮತ್ತು ಇಮೇಜ್‌ಗೆ ತಕ್ಕಂತೆ ಸಂದೀಪ್ ಮಾಸ್ ಸೀನ್‌ಗಳನ್ನು ಸೃಷ್ಟಿಸಿದ್ದಾರೆ ಎನ್ನಲಾಗಿದೆ. ಸಂದೀಪ್ ಈ ಹಿಂದೆ ನಿರ್ದೇಶಿಸಿದ ಸಿನಿಮಾಗಳಲ್ಲಿ ಹೀರೋಗಳು ಹಿಂಸಾತ್ಮಕ ಮನಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ ಪ್ರಭಾಸ್ ಅವರನ್ನು ಸಂದೀಪ್ ತೆರೆಯ ಮೇಲೆ ಯಾವ ರೀತಿ ತೋರಿಸುತ್ತಾರೆಂದು ಕುತೂಹಲದಿಂದ ನೋಡುತ್ತಿದ್ದಾರೆ. ಈ ಮಧ್ಯೆ ಟಾಲಿವುಡ್‌ನಲ್ಲಿ ಚಿರಂಜೀವಿ ಎಂಟ್ರಿ ಬಗ್ಗೆ ಸುದ್ದಿ ಹರಿದಾಡುತ್ತಿದೆ.

ಪ್ರಭಾಸ್ 'ಸ್ಪಿರಿಟ್' ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳಿವೆ. ಪ್ರಭಾಸ್ ಇದೂವರೆಗೆ ಖಾಕಿ ಸಮವಸ್ತ್ರ ಧರಿಸಿಲ್ಲ. ಹೀಗಾಗಿ ಒಂದು ವೇಳೆ ಪ್ರಭಾಸ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡರೆ, ಬಾಕ್ಸಾಫೀಸ್‌ನಲ್ಲಿ ದಾಖಲೆಗಳು ಧೂಳೀಪಟವಾಗುವುದರಲ್ಲಿ ಎರಡು ಮಾತಿಲ್ಲ ಅಂತ ಅಭಿಮಾನಿಗಳು ಮಾತಾಡಿಕೊಳ್ಳುತ್ತಿದ್ದಾರೆ.

Buzz Chiranjeevi will be doing cameo in Sandeep Reddy Vanga Directed Prabhas Film Spirit

ಇದರ ಜೊತೆಗೆ 'ಸ್ಪಿರಿಟ್' ಸಿನಿಮಾಗೆ ಸಂಬಂಧಿಸಿದ ಇನ್ನೊಂದು ರೋಚಕ ಸುದ್ದಿ ಹರಿದಾಡುತ್ತಿದೆ. ಪ್ರಭಾಸ್ ಸಿನಿಮಾ ಮೆಗಾಸ್ಟಾರ್ ಚಿರಂಜೀವಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಂದು ಟಾಲಿವುಡ್‌ನಲ್ಲಿ ಸುದ್ದಿ ಹಬ್ಬಿದೆ. 'ಸ್ಪಿರಿಟ್' ಸಿನಿಮಾದ ದ್ವಿತೀಯಾರ್ಧದಲ್ಲಿ ಬರುವ ಫ್ಲಾಶ್‌ಬ್ಯಾಕ್ ಎಪಿಸೋಡ್‌ನಲ್ಲಿ ಮೆಗಾಸ್ಟಾರ್ ಚಿರಂಜೀವಿ ಸುಮಾರು 15 ನಿಮಿಷಗಳ ಕಾಲ ಕಾಣಿಸಿಕೊಳ್ಳಲಿದ್ದಾರೆ ಎಂಬ ಪುಕಾರು ಹಬ್ಬಿದೆ.

'ಸ್ಪಿರಿಟ್' ಸಿನಿಮಾದಲ್ಲಿ ಚಿರಂಜೀವಿ ಪಾತ್ರವು ಕಥೆಗೆ ಬಿಗ್ ಟ್ವಿಸ್ಟ್ ನೀಡಲಿದೆ ಎಂಬ ಸುದ್ದಿ ಹಬ್ಬಿದೆ. ಆದರೆ, ಈ ಬಗ್ಗೆ ಸಿನಿಮಾ ತಂಡದಿಂದ ಯಾವುದೇ ಅಧಿಕೃತ ಘೋಷಣೆಯಾಗಿಲ್ಲ. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾಗೆ ಮೆಗಾಸ್ಟಾರ್ ಚಿರಂಜೀವಿ ಫೇವರಿಟ್ ಆಕ್ಟರ್. ಹೀಗಾಗಿ 'ಸ್ಪಿರಿಟ್' ಸಿನಿಮಾ ಮುಹೂರ್ತದ ವೇಳೆ ಚಿರಂಜೀವಿ ಅವರ ಕೈಯಿಂದಲೇ ಸಿನಿಮಾದ ಉದ್ಘಾಟನೆ ಮಾಡಿಸಿದ್ದರು. ಈಗ ಎದ್ದಿರೋ ಊಹಾಪೋಹಗಳಿಗೆ ಈ ಸಂಗತಿ ಇನ್ನಷ್ಟು ಬಲ ನೀಡುತ್ತಿವೆ. ಪ್ರಭಾಸ್ ಮತ್ತು ಚಿರಂಜೀವಿ ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡರೆ, ಟಾಲಿವುಡ್‌ ಇತಿಹಾಸದಲ್ಲಿಯೇ ಹೊಸ ದಾಖಲೆ ನಿರ್ಮಿಸೋದು ಗ್ಯಾರಂಟಿ ಅಂತ ಟಾಲಿವುಡ್‌ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ.

ಜನವರಿ 16ರಂದು ಸಂದೀಪ್ ರೆಡ್ಡಿ ವಂಗಾ 'ಸ್ಪಿರಿಟ್' ಸಿನಿಮಾ 2027ರ ಮಾರ್ಚ್ 5 ರಂದು ವಿಶ್ವದಾದ್ಯಂತ ಎಂಟು ಭಾಷೆಗಳಲ್ಲಿ ರಿಲೀಸ್ ಆಗುತ್ತೆ ಎಂದು ಮಾಹಿತಿ ನೀಡಿದ್ದಾರೆ. ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಇಂಗ್ಲಿಷ್, ಜಪಾನೀಸ್, ಕೊರಿಯನ್ ಭಾಷೆಯಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ . ಇದನ್ನು ಹೇಳಿ ಪ್ರಭಾಸ್ ಅಭಿಮಾನಿಗಳಿಗೆ ಥ್ರಿಲ್ ಆಗಿದ್ದಾರೆ. ಬಾಲಿವುಡ್ ನಟ ವಿವೇಕ್ ಒಬೆರಾಯ್ ಮತ್ತು ಹಿರಿಯ ನಟಿ ಕಂಚನಾ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ನಟಿಸಿದ್ದಾರೆ ಎನ್ನಲಾಗಿದೆ. ಭದ್ರಕಾಳಿ ಪಿಕ್ಚರ್ಸ್, ಟಿ-ಸೀರೀಸ್ ಫಿಲ್ಮ್ಸ್ ಬ್ಯಾನರ್‌ಗಳ ಅಡಿಯಲ್ಲಿ ಪ್ರಣಯ್ ರೆಡ್ಡಿ ವಂಗಾ, ಭೂಷಣ್ ಕುಮಾರ್, ಕೃಷ್ಣನ್ ಕುಮಾರ್ ಅವರು 'ಸ್ಪಿರಿಟ್' ಸಿನಿಮಾವನ್ನು ದೊಡ್ಡ ಬಜೆಟ್‌ನಲ್ಲಿ ನಿರ್ಮಿಸುತ್ತಿದ್ದಾರೆ.

More from Filmibeat

English summary
Buzz Chiranjeevi will be doing cameo in Sandeep Reddy Vanga Directed Prabhas Film Spirit.
Read more about: prabhas chiranjeevi telugu movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X