ಒಂದೇ ಸಿನಿಮಾದಲ್ಲಿ ಅಪ್ಪ-ಮಗಳು; ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾದ ದುನಿಯಾ ವಿಜಯ್ ಪುತ್ರಿ!

ದುನಿಯಾ ವಿಜಯ್ 'ಭೀಮ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅಷ್ಟರಲ್ಲೇ ಮತ್ತೊಂದು ಸಿನಿಮಾ ಸೆಟ್ಟೇರುವ ಸುದ್ದಿ ಹರಿದಾಡುತ್ತಿದೆ. ಆದರೆ, ಈ ಸಿನಿಮಾ ದುನಿಯಾ ವಿಜಯ್‌ಗೆ ವಿಶೇಷ. ಹಾಗಂತ ಇನ್ನೊಂದು ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ಅಂತಲ್ಲ.

ಈಗ ದುನಿಯಾ ವಿಜಯ್ ಕೇವಲ ನಟನಾಗಿ ಯಶಸ್ಸು ಕಂಡಿಲ್ಲ. 'ಸಲಗ' ಮೂಲಕ ನಿರ್ದೇಶಕನಾಗಿಯೂ ಯಶಸ್ಸು ಕಂಡಿದ್ದಾರೆ. ಈಗ ಎರಡನೇ ಸಿನಿಮಾ 'ಭೀಮ'ಗೂ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಮಧ್ಯೆ ತಮ್ಮ ಜವಾಬ್ದಾರಿಯನ್ನೂ ನಿಭಾಯಿಸುತ್ತಿದ್ದಾರೆ.

Buzz Duniya Vijay and his daughter Monica acting together in Jadesh Movie

ಕೆಲವು ದಿನಗಳ ಹಿಂದಷ್ಟೇ ದುನಿಯಾ ವಿಜಯ್ ಇಬ್ಬರು ಪುತ್ರಿಯರು ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿರುವ ಬಗ್ಗೆ ಸುದ್ದಿಯಾಗಿತ್ತು. ಮೊದಲ ಪತ್ನಿಯ ಇಬ್ಬರು ಮಕ್ಕಳು ಮೋನಿಕಾ ಹಾಗೂ ಮೋನಿಷಾ ಇಬ್ಬರ ಸಿನಿಮಾದಲ್ಲಿ ನಟಿಸುವುದಕ್ಕೆ ರೆಡಿಯಾಗುವ ಸುದ್ದಿ ಹೊರಬಿದ್ದಿತ್ತು. ಇವರಿಬ್ಬರಲ್ಲಿ ಯಾರು ಮೊದಲ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ? ಅನ್ನೋದಕ್ಕೀಗ ಉತ್ತರ ಸಿಕ್ಕಿದೆ.

ದುನಿಯಾ ವಿಜಯ್ ಸದ್ಯಕ್ಕೀಗ 'ಭೀಮ' ಸಿನಿಮಾದ ಕೊನೆಯ ಹಂತದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ದುನಿಯಾ ವಿಜಯ್ ಅಡ್ಡದಿಂದ ಖುಷಿ ವಿಷಯವೊಂದು ಹೊರಬಿದ್ದಿದೆ. ದುನಿಯಾ ವಿಜಯ್ ಪುತ್ರಿ ಮೋನಿಕಾ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಅಷ್ಟಕ್ಕೂ ಆ ಸಿನಿಮಾ ಯಾವುದು? ಸಿನಿಮಾ ಬಗ್ಗೆ ಏನಿದೆ ಡಿಟೈಲ್ಸ್? ಅನ್ನೋದನ್ನು ತಿಳಿಯಲು ಮುಂದೆ ಓದಿ.

Buzz Duniya Vijay and his daughter Monica acting together in Jadesh Movie

ಫ್ಯಾನ್ಸ್‌ಗೆ ಖುಷಿ ಕೊಡುವ ವಿಷಯವೇನಂದರೆ, ದುನಿಯಾ ವಿಜಯ್ ಹಾಗೂ ಪುತ್ರಿ ಮೋನಿಕಾ ಇಬ್ಬರೂ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಪ್ಪನ ಸಿನಿಮಾ ಮೂಲಕವೇ ಮೋನಿಯಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಸುದ್ದಿ ಈಗಾಗಲೇ ವೈರಲ್ ಆಗಿದ್ದು, ವಿಜಯ್ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ಅಪ್ಪ ಹಾಗೂ ಮಗಳನ್ನು ಒಂದೇ ಸಿನಿಮಾದಲ್ಲಿ ಒಟ್ಟಿಗೆ ತೆರೆಮೇಲೆ ತೋರಿಸೋಕೆ ಹೊರಟಿರೋದು ಜಡೇಶ್ ಕುಮಾರ್. ದರ್ಶನ್ ನಟಿಸುತ್ತಿರುವ 'ಕಾಟೇರ' ಸಿನಿಮಾಗೆ ರೈಟರ್ ಆಗಿ ಕೆಲಸ ಮಾಡಿದ್ದಾರೆ. ಈ ಹಿಂದೆ ಶರಣ್ ನಟಿಸಿದ್ದ 'ಗುರುಶಿಷ್ಯರು' ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಇವರೇ ಈಗ ದುನಿಯಾ ವಿಜಯ್ ಹಾಗೂ ಪುತ್ರಿ ಮೋನಿಕಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಈಗಾಗಲೇ ಹಬ್ಬಿರೋ ಸುದ್ದಿ ಪ್ರಕಾರ, ಸಂಬಂಧ ಹಾಗೂ ಬಾಂಧವ್ಯಗಳ ಕುರಿತ ಸಿನಿಮಾವಿದು ಎಂದು ವರದಿಯಾಗಿದೆ. ಜಡೇಶ್ ಕುಮಾರ್ ಹೆಣೆದಿರೋ ಈ ಕಥೆ ಎಲ್ಲಾ ವರ್ಗಕ್ಕೂ ಟಚ್ ಮಾಡಲಿದೆ ಎಂದು ಹೇಳಲಾಗುತ್ತಿದೆ. ಆದರೆ, ದುನಿಯಾ ವಿಜಯ್ ಹಾಗೂ ಮಗಳು ಮೋನಿಕಾ ಪಾತ್ರವೇನು? ತೆರೆಮೇಲೆ ಹೇಗೆ ಕಾಣಿಸಬಹುದು? ಅನ್ನೋ ಬಗ್ಗೆ ಸುಳಿವು ಸಿಕ್ಕಿಲ್ಲ. ಆದರೆ, ಫ್ಯಾನ್ಸ್ ಅಂತೂ ಫುಲ್ ಥ್ರಿಲ್ ಆಗಿದ್ದಾರೆ.

ಮೋನಿಯಾ ಚಿತ್ರರಂಗಕ್ಕೆ ಎಂಟ್ರಿ ಕೊಡಲು ನಿರ್ಧರಿಸುವುದಕ್ಕೂ ಮುನ್ನ ನಟನೆ ಬಗ್ಗೆ ಸಂಪೂರ್ಣ ತಯಾರಿಯನ್ನು ತೆಗೆದುಕೊಂಡೇ ಬಂದಿದ್ದರು. ಮುಂಬೈನ ಅನುಪಮ್ ಖೇರ್ ಆಕ್ಟಿಂಗ್ ಸ್ಕೂಲ್‌ನಲ್ಲಿ ತರಬೇತಿ ಪಡೆದಿರೋ ಬಗ್ಗೆ ವರದಿಯಾಗಿದೆ. ಸದ್ಯ ಸಿನಿಮಾ ಬಗ್ಗೆ ಇನ್ನಷ್ಟು ಮಾಹಿತಿ ಹೊರಬೀಳಬೇಕಿದೆ.

More from Filmibeat

English summary
Duniya Vijay and his daughter Monica acting in Jadesh Kumar Movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X