30 ದೇಶ.. 7 ಭಾಷೆ.. ಏಕಕಾಲಕ್ಕೆ ರಿಷಬ್ ಶೆಟ್ಟಿಯ 'ಕಾಂತಾರ' ರಿಲೀಸ್? ಟ್ರೇಡ್ ಲೆಕ್ಕಾಚಾರವೇನು?

ಕನ್ನಡ ಚಿತ್ರರಂಗ ಸುಮಾರು ಎರಡು ವರ್ಷಗಳಿಂದ ಕಾಯುತ್ತಿರುವ ಸಿನಿಮಾ 'ಕಾಂತಾರ ಚಾಪ್ಟರ್ 1'. ರಿಷಬ್ ಶೆಟ್ಟಿ ಮತ್ತೊಂದು ಮೆಗಾ ಬ್ಲಾಕ್‌ಬಸ್ಟರ್ ನೀಡಬಹುದೆಂಬ ನಿರೀಕ್ಷೆಯಲ್ಲಿ ಸ್ಯಾಂಡಲ್‌ವುಡ್ ಇದೆ. ಹಾಗೇ ಬೇರೆ ಭಾಷೆಯ ಚಿತ್ರರಂಗ ಕೂಡ ಈ ಸಿನಿಮಾವನ್ನು ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದೆ. ಈಗಾಗಲೇ ಹೊಂಬಾಳೆ ಫಿಲ್ಮ್ಸ್ ಹಿಂದಿ ಹಾಗೂ ಮಲಯಾಳಂ ಚಿತ್ರರಂಗದ ಜೊತೆ ವ್ಯವಹಾರವನ್ನೂ ಕುದುರಿಸಿದೆ.

ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಆದರೂ ದೊಡ್ಡ ಮಟ್ಟದಲ್ಲಿ ಸಿನಿಮಾದ ಪ್ರಚಾರವನ್ನು ಆರಂಭಿಸಿಲ್ಲ. ಇದು ಸಿನಿಮಾ ಮಂದಿಯ ಅಚ್ಚರಿಗೆ ಕಾರಣವಾಗಿದೆ. ಈ ಮಧ್ಯೆ ಅಕ್ಟೋಬರ್ 2ಕ್ಕೆ 'ಕಾಂತಾರ ಚಾಪ್ಟರ್ 1' ರಿಲೀಸ್ ಆಗಲ್ಲ ಅನ್ನೋ ಸುದ್ದಿಗಳು ಹರಿದಾಡಿದ್ದೂ ಇದೆ. ಆದರೆ, ಹೊಂಬಾಳೆ ಫಿಲ್ಮ್ಸ್ ಈಗಾಗಲೇ ಅನೌನ್ಸ್ ಮಾಡಿದ ದಿನವೇ ರಿಲೀಸ್ ಮಾಡುವುದಕ್ಕೆ ನಿರ್ಧರಿಸಿದೆ ಎನ್ನಲಾಗಿದೆ.

Buzz Hombale Films planning to release Rishab Shetty s Kantara chapter 1 in 30 countries

ಇನ್ನೊಂದು ಮೂಲದ ಪ್ರಕಾರ 'ಕಾಂತಾರ ಚಾಪ್ಟರ್ 1' ಇದೂವರೆಗೂ ಹೊಂಬಾಳೆ ನಿರ್ಮಿಸಿದ ಎಲ್ಲಾ ಸಿನಿಮಾಗಳಿಗಿಂತ ಬಿಗ್ ಬಜೆಟ್‌ನಲ್ಲಿ ನಿರ್ಮಾಣ ಆಗಿದೆ. ಹೀಗಾಗಿ ದೊಡ್ಡ ಮಟ್ಟದಲ್ಲಿ ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ ನಿರ್ಧರಿಸಿದೆ ಅನ್ನೋ ಸುದ್ದಿ ಕೂಡ ಓಡಾಡುತ್ತಿದೆ. ಹಾಗಿದ್ದರೆ, ಹೊಂಬಾಳೆ ಫಿಲ್ಮ್ಸ್ ಸ್ಟ್ರಾಟಜಿ ಏನು? ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುವುದಕ್ಕೆ ಏನು ಸ್ಕೆಚ್ ಹಾಕಿದೆ? ತಿಳಿಯುವುದಕ್ಕೆ ಮುಂದೆ ಓದಿ.

ಹೈಲೈಟ್ಸ್

'ಕಾಂತರಾ ಚಾಪ್ಟರ್ 1' ಬಿಡುಗಡೆ ಭರ್ಜರಿ ಸಿದ್ಧತೆ
ರಿಷಬ್ ಶೆಟ್ಟಿ ಕರಿಯರ್‌ನಲ್ಲೇ ಅತೀ ಸಿನಿಮಾ
30 ದೇಶ.. 7 ಭಾಷೆ.. ಏನಿದು ಹೊಂಬಾಳೆ ಲೆಕ್ಕಾಚಾರ?
'ಕಾಂತರಾ ಚಾಪ್ಟರ್ 1' ಬಾಕ್ಸಾಫೀಸ್ ಲೆಕ್ಕಾಚಾರವೇನು?

7 ಭಾಷೆಗಳಲ್ಲಿ 'ಕಾಂತಾರ' ರಿಲೀಸ್?

'ಕಾಂತಾರ ಚಾಪ್ಟರ್ 1' ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದಾರೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಈ ಸಿನಿಮಾ ಕ್ರಿ.ಶ 4ನೇ ಶತಮಾನದ ಸಂಸ್ಕೃತಿ ಮತ್ತು ವೈಭವವನ್ನು ತೆರೆಯ ಮೇಲೆ ತರಲು ಹೊರಟಿದೆ. ಸದ್ಯ ರಿಷಬ್ ಶೆಟ್ಟಿ, ರುಕ್ಷ್ಮಿಣಿ ವಸಂತ್ ಹಾಗೂ ಗುಲ್ಶನ್ ದೇವಯ್ಯ ಪಾತ್ರಗಳು ರಿವೀಲ್ ಆಗಿವೆ. ಕನ್ನಡದ ಜೊತೆಗೆ ಹಿಂದಿ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಹೀಗಾಗಿ ಬಾಕ್ಸಾಫೀಸ್‌ನಲ್ಲಿ ಹಲವು ದಾಖಲೆಗಳನ್ನು ಮುರಿಯುವ ಸಾಧ್ಯತೆಯಿದೆ.

Buzz Hombale Films planning to release Rishab Shetty s Kantara chapter 1 in 30 countries

30 ದೇಶಗಳಲ್ಲಿ ಸಿನಿಮಾ ರಿಲೀಸ್

ಏಳು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಮಾಡುವುದಾಗಿ ಈಗಾಗಲೇ ಹೊಂಬಾಳೆ ಫಿಲ್ಮ್ಸ್ ಅನೌನ್ಸ್ ಮಾಡಿದೆ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಸ್ಪಾನಿಷ್ ಭಾಷೆಗೂ ಡಬ್ ಆಗಿ ರಿಲೀಸ್ ಮಾಡುವುದಕ್ಕೆ ಹೊಂಬಾಳೆ ಫಿಲ್ಮ್ಸ್ ಯೋಚಿಸುತ್ತಿದೆ ಎಂದು ಟ್ರೆಂಡ್ ಮಾಡಲಾಗುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಏಕಕಾಲಕ್ಕೆ ಸುಮಾರು 30 ಭಾಷೆಗಳಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡುವುಕ್ಕೆ ಸಿನಿಮಾ ಆಲೋಚನೆ ಮಾಡಿದೆ ಎಂಬ ಮಾತುಗಳು ಕೂಡ ಹೇಳಿಬರುತ್ತಿದೆ. ಆದರೆ, ಈ ಬಗ್ಗೆ ಹೊಂಬಾಳೆ ಅಧಿಕೃತವಾಗಿ ಹೇಳಿಕೊಂಡಿಲ್ಲ.

ಹೊಂಬಾಳೆ ಲೆಕ್ಕಾಚಾರವೇನು?

'ಕಾಂತಾರ ಚಾಪ್ಟರ್ 1' ಬಿಗ್ ಬಜೆಟ್ ಸಿನಿಮಾ. 'ಕೆಜಿಎಫ್ 2', 'ಸಲಾರ್' ಅಂತಹ ಸಿನಿಮಾಗಳಿಗೆ ಆದ ಖರ್ಚಿಗಿಂತ ದುಪ್ಪಟ್ಟು ಆಗಿದೆ. ವಿಎಫ್‌ಎಕ್ಸ್‌ಗಾಗಿಯೇ ಸಾಕಷ್ಟು ಹಣವನ್ನು ಖರ್ಚು ಮಾಡಲಾಗಿದೆ. ಹೀಗಾಗಿ ಸಿನಿಮಾ ಮೊದಲ ವಾರವೇ ಹಾಕಿದ ಬಂಡವಾಳವೆಲ್ಲ ಬಂದರೆ, ಉಳಿದಿದ್ದೆಲ್ಲಾ ಲಾಭವಾಗಿ ಬದಲಾಗುತ್ತು. 'ಕಾಂತಾರ'ದಂತಹ ಸಿನಿಮಾ ಕಮ್ಮಿ ಅಂದರೂ ಎರಡು ವಾರಕ್ಕೇನೂ ಮೋಸವಿಲ್ಲ. ಹೀಗಾಗಿ 1000 ಕೋಟಿ ಗಳಿಕೆ ಮೇಲೆ ಕಣ್ಣಿಟ್ಟಿದೆ ಎಂದು ಹೇಳಲಾಗುತ್ತಿದೆ.

'ಕಾಂತಾರ' ದಾಖಲೆ ಮುರಿಯುತ್ತಾ ಚಾಪ್ಟರ್ 1?

ಪ್ರಾದೇಶಿಕ ಕಥೆಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವುದಕ್ಕೆ ಹೊಂಬಾಳೆ ಫಿಲ್ಮ್ಸ್ ರಿಷಬ್ ಶೆಟ್ಟಿ ಜೊತೆ ಮತ್ತೊಮ್ಮೆ ಕೈ ಜೋಡಿಸಿದೆ. 2022ರಲ್ಲಿ ತೆರೆಕಂಡ 'ಕಾಂತಾರ' ಬಾಕ್ಸಾಫೀಸ್‌ನಲ್ಲಿ ₹450 ಕೋಟಿಯ ಬಜೆಟ್ ಕಲೆಕ್ಷನ್ ಮಾಡಿತ್ತು. ಹೀಗಾಗಿ 'ಕಾಂತಾರ ಚಾಪ್ಟರ್ 1' ಕಮ್ಮಿ ಅಂದರೂ ಸಾವಿರ ಕೋಟಿ ಕಲೆಕ್ಷನ್ ಮಾಡಲೇ ಬೇಕು. ಇಲ್ಲಿವರೆಗೂ ಅದ್ಭುತ ಕಥೆ, ದೃಶ್ಯ ವೈಭವ ಮತ್ತು ಸಂಗೀತವೇ ಸಿನಿಮಾ ಹೈಲೈಟ್ ಅಗಲಿದೆ ಎನ್ನಲಾಗಿದೆ. ಹೀಗಾಗಿ ಇನ್ನು ಕೆಲವೇ ದಿನಗಳಲ್ಲಿ ಕಾಂತಾರ ಲೆಕ್ಕಾಚಾರನೂ ಸಿಕ್ಕಿಬಿಡುತ್ತೆ.

More from Filmibeat

English summary
Buzz is that Hombale Films planning to release Rishab Shetty's Kantara chapter 1 in 30 countries in 7 Languages.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X