Bigg Boss Kannada 12: ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಈ ಐದು ಮಂದಿ ಬರ್ತಾರಾ? ಯಾರವರು?
ಬಿಗ್ ಬಾಸ್ ಸೀಸನ್ ಶುರುವಾಗಿದೆ. ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಈ ರಿಯಾಲಿಟಿ ಶೋಗೆ ವೇದಿಕೆ ಸಜ್ಜಾಗುತ್ತಿದೆ. ಅದರಲ್ಲೂ ಹಿಂದಿ ಭಾಷೆಯಲ್ಲಿ ಮೊದಲು ಆರಂಭ ಆಗಲಿದ್ದು, ಈಗಾಗಲೇ ಸಂಭಾವ್ಯರ ಪಟ್ಟಿ ಕೂಡ ಲೀಕ್ ಆಗಿದೆ. ಇನ್ನೊಂದು ಕಡೆ ಮಲಯಾಳಂ, ತಮಿಳು, ತೆಲುಗಿನಲ್ಲೂ ಬಿಗ್ ಬಾಸ್ ಬಗ್ಗೆ ಚರ್ಚೆಯಾಗುತ್ತಿದೆ. ಇನ್ನು ಕನ್ನಡದಲ್ಲೂ ಸೀಸನ್ 12ಕ್ಕೆ ತೆರೆಮೆರೆಯಲ್ಲಿ ತಯಾರಿ ನಡೆಯುತ್ತಿದೆ.
ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 11 ಅನ್ನು ಯಶಸ್ವಿಯಾಗಿ ಮುಗಿಸಿದ್ದ ಕಲರ್ಸ್ ಕನ್ನಡ ಮತ್ತೊಂದು ಸೀಸನ್‌ಗೆ ರೆಡಿಯಾಗುತ್ತಿದೆ. ಬಿಗ್ ಬಾಸ್ ಸೀಸನ್ 12ಕ್ಕೆ ಕಿಚ್ಚ ಸುದೀಪ್ ನಿರೂಪಣೆ ಮಾಡುತ್ತಾರಾ? ಇಲ್ವಾ? ಎನ್ನುವುದರಿಂದ ಚರ್ಚೆಗಳು ಆರಂಭ ಆಗಿವೆ. ಕಿರುತೆರೆ ವೀಕ್ಷಕರು ಸುದೀಪ್ ನಿರೂಪಣೆ ಮಾಡುತ್ತಾರಾ? ಇಲ್ಲ ಇವರ ಸ್ಥಾನಕ್ಕೆ ಬೇರೆ ಯಾರು ಬರಬಹುದೆಂದು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

ಈ ಮಧ್ಯೆ ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಸ್ಪರ್ಧಿಗಳ ಹುಡುಕಾಟ ಶುರುವಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈಗಾಗಲೇ ಬಿಗ್ ಬಾಸ್ ತಂಡ ಕೆಲವು ಸೆಲೆಬ್ರೆಟಿಗಳನ್ನು ಅಪ್ರೋಚ್ ಮಾಡಿದೆ ಎಂದು ಕಿರುತೆರೆ ವಲಯದಲ್ಲಿ ಸುದ್ದಿಗಳು ಹರಿದಾಡುತ್ತಿವೆ. ಹಾಗಿದ್ದರೆ, ಆ ಸೆಲೆಬ್ರೆಟಿಗಳು ಯಾರು? ಈಗಾಗಲೇಸಂಪರ್ಕ ಮಾಡಿರುವ ಆ ಐದು ಮಂದಿಯನ್ನು ಯಾರು? ಏನೆಲ್ಲ ಚರ್ಚೆಗಳಾಗುತ್ತಿವೆ? ಎನ್ನುವುದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಸ್ಪರ್ಧಿಗಳ ಹುಡುಕಾಟ ಶುರು
ಬಿಗ್ ಬಾಸ್ ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ. ಸುಮಾರು ಮೂರು ತಿಂಗಳು ನಡೆಯುವ ಈ ರಿಯಾಲಿಟಿ ಶೋನಲ್ಲಿ ಆ ವರ್ಷ ಸದ್ದು ಮಾಡಿದ ಸೆಲೆಬ್ರೆಟಿಗಳನ್ನು ಬಿಗ್ ಬಾಸ್ ಮನೆಯೊಳಗೆ ಕಳುಹಿಸಲಾಗುತ್ತೆ. ಇವರಲ್ಲಿ ಜನಪ್ರಿಯ ತಾರೆಯರಿಂದ ಹಿಡಿದು ಸೋಶಿಯಲ್ ಮೀಡಿಯಾ ಸ್ಟಾರ್‌ಗಳು, ವಿವಾದ ಮಾಡಿಕೊಂಡು ಸುದ್ದಿಯಲ್ಲಿ ಇದ್ದವರನ್ನು ಮನೆಯೊಳಗೆ ಕಳಹಿಸಲಾಗುತ್ತೆ. ಈ ಬಾರಿ ಕೂಡ ಇಂತಹ ಫೇಮಸ್ ವ್ಯಕ್ತಿಗಳ ಹುಡುಕಾಟದಲ್ಲಿ ಕಲರ್ಸ್ ಟೀಮ್ ನಿರತವಾಗಿದೆ. ಈಗಾಗಲೇ ಕೆಲವು ಹೆಸರುಗಳು ಚರ್ಚೆಯಲ್ಲಿವೆ.

ನಿರೂಪಕ ಚಂದನ್ ಶರ್ಮಾ
ಕನ್ನಡ ನ್ಯೂಸ್ ಚಾನೆಲ್‌ಗಳಲ್ಲಿ ತಮ್ಮ ನಿರೂಪಣೆಯಿಂದ ಗಮನ ಸೆಳೆದಿರುವ ನ್ಯೂಸ್ ಆಂಕರ್ ಚಂದನ್ ಶರ್ಮಾ ಹೆಸರು ಕೇಳಿ ಬರುತ್ತಿದೆ. ಈಗಾಗಲೇ ಕಲರ್ಸ್ ಟೀಮ್ ಚಂದನ್ ಶರ್ಮಾ ಅವರನ್ನು ಅಪ್ರೋಚ್ ಮಾಡಿದ್ದು, ಹಲವು ಬಾರಿ ಚಾನೆಲ್ ವಿಸಿಟ್ ಹಾಕಿ ಹೋಗಿರುವ ಬಗ್ಗೆ ಚರ್ಚೆಯಾಗುತ್ತಿದೆ. ಸಂಭಾವನೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿದೆ ಎಂಬುವುದು ಮೂಲಗಳಿಂದ ಬಂದ ಮಾಹಿತಿ.
ನಟ ಶ್ರೀ ಮಹದೇವ್
'ಹೊಂದಿಸಿ ಬರೆಯಿರಿ' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಕನ್ನಡ ಚಿತ್ರರಂಗದ ಉದಯೋನ್ಮುಖ ನಟ ಶ್ರೀ ಮಹದೇವ್ ಅವರನ್ನೂ ಅಪ್ರೋಚ್ ಮಾಡಲಾಗಿದೆ ಎಂಬ ಸುದ್ದಿಯಿದೆ. ಈಗಾಗಲೇ ಇವರು 'ಇರುವುದೆಲ್ಲವ ಬಿಟ್ಟು' , 'ಗಜಾನನ ಅಂಡ್ ಗ್ಯಾಂಗ್' ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಅರಿಹ' ಎನ್ನುವ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.
ಅರ್ಚನಾ ಜೋಯಿಸ್
'ಕೆಜಿಎಫ್' ಮೂಲಕ ಸದ್ದು ದೇಶಾದ್ಯಂತ ಜನಪ್ರಿಯವಾಗಿರುವ ನಟಿ ಅರ್ಚನಾ ಜೋಯಿಸ್ ಅವರನ್ನೂ ಸಂಪರ್ಕ ಮಾಡಲಾಗಿದೆ ಎಂದು ಹೇಳಲಾಗಿದೆ. ಆದರೆ, ಇವರು ಒಪ್ಪಿದ್ದಾರಾ? ಇಲ್ಲವ ಎನ್ನುವ ಬಗ್ಗೆ ಮಾಹಿತಿ ಇಲ್ಲ.
ಡಾ.ಬ್ರೋ
ಬಿಗ್ ಬಾಸ್ ಮನೆಯಲ್ಲಿ ಯೂಟ್ಯೂಬ್ ಸ್ಟಾರ್ ಡಾ. ಬ್ರೋ ಅವರನ್ನು ನೋಡುವುದಕ್ಕೆ ವೀಕ್ಷಕರು ಬಯಸಿದ್ದರು. ಆದರೆ, ಡಾ. ಬ್ರೋ ಈ ಹಿಂದೆ ಬಿಗ್ ಬಾಸ್‌ಗೆ ಹೋಗುವುದಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದರು. ಆದರೆ, ಈ ಬಾರಿ ಸೀಸನ್‌ಗೆ ಅವರನ್ನು ಕರೆಸುವುದಕ್ಕೆ ಬಿಗ್ ಬಾಸ್ ತಂಡ ತುಂಬಾನೇ ಪ್ರಯತ್ನ ಪಡುತ್ತಿದೆ ಎಂದೂ ಹೇಳಲಾಗುತ್ತಿದೆ.
ಪ್ರಿಯಾಂಕಾ ಉಪೇಂದ್ರ
ಇವರೊಂದಿಗೆ ಪ್ರಿಯಾಂಕಾ ಉಪೇಂದ್ರ ಅವರನ್ನು ಅಪ್ರೋಚ್ ಮಾಡಿದ್ದಾರೆ ಎನ್ನಲಾಗಿದೆ. ಅತಿಥಿಯಾಗಿ ಒಂದೆರಡು ವಾರ ಮನೆಯೊಳಗೆ ಇರುವಂತೆ ಕೇಳಿಕೊಂಡಿದ್ದು, ಅವರ ಆಸಕ್ತಿ ತೋರಿಲ್ಲ ಎಂದು ಮೂಲಗಳು ಹೇಳುತ್ತಿವೆ. ಆದರೆ, ಇದ್ಯಾವುದರ ಬಗ್ಗೆನೂ ಅಧಿಕೃತ ಮಾಹಿತಿ ಇಲ್ಲ.
Disclaimer: ಬಿಗ್ ಬಾಸ್ ಸೀಸನ್ 12ಕ್ಕೆ ಸಂಬಂಧಿಸಿದಂತೆ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಕೆಲವು ಹೆಸರುಗಳು ಓಡಾಡುತ್ತಿವೆ. ಅಂತೆಯೇ ಕಿರುತೆರೆ ವಲಯದಲ್ಲಿ ಹರಿದಾಡುತ್ತಿರುವ ಹೆಸರುಗಳಿವು. ಆದರೆ, ಕಲರ್ಸ್ ಕನ್ನಡ ಆಗಲಿ, ಇಲ್ಲಿ ಹೇಳಿರುವ ತಾರೆಯರಾಗಲಿ ಅಧಿಕೃತವಾಗಿ ಎಲ್ಲೂ ಮಾಹಿತಿಯನ್ನು ಹಂಚಿಕೊಂಡಿರುವುದಿಲ್ಲ. ಇದು ಕೇವಲ ಕಿರುತೆರೆಯಲ್ಲಿ ಒಡಾಡುತ್ತಿರುವ ಹೆಸರುಗಳು ಅಷ್ಟೇ. ಅಧಿಕೃತವಾಗಿ ಮಾಹಿತಿ ಹೊರಬೀಳಬೇಕಿದೆ.


Click it and Unblock the Notifications











