'ಟಾಕ್ಸಿಕ್' ಗೆದ್ದರೆ.. ಕೆವಿಎನ್ ಜೊತೆ ಯಶ್ ಮತ್ತೊಂದು ಸಿನಿಮಾ? 'ಕೆಜಿಎಫ್ 3' ಕಥೆಯೇನು?
ರಾಕಿಂಗ್ ಸ್ಟಾರ್ ಯಶ್ 'ಕೆಜಿಎಫ್ 2' ಸಿನಿಮಾ ಬಳಿಕ ನಟಿಸುತ್ತಿರುವ 'ಟಾಕ್ಸಿಕ್' ಇಷ್ಟೊತ್ತಿಗಾಗಲೇ ರಿಲೀಸ್ ಆಗಬೇಕಿತ್ತು. ಮಾರ್ಚ್ 19ಕ್ಕೆ ರಿಲೀಸ್ ಮಾಡುವುದಕ್ಕೆ ಮುಹೂರ್ತ ಕೂಡ ಫಿಕ್ಸ್ ಆಗಿತ್ತು. ಆದರೆ, ಅಮೆರಿಕ-ಇಸ್ರೇಲ್ ಹಾಗೂ ಇರಾನ್ ಯುದ್ಧದ ಹಿನ್ನೆಲೆಯಲ್ಲಿ 'ಟಾಕ್ಸಿಕ್' ಬಿಡುಗಡೆಯನ್ನು ಮುಂದಕ್ಕೆ ಹಾಕಲಾಗಿದೆ. ಹೀಗಾಗಿ ಸಿನಿಮಾ ನೋಡುವ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿದೆ.
'ಟಾಕ್ಸಿಕ್' ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ ಒಂದು. ಈಗಾಗಲೇ ವಿಶ್ವದಾದ್ಯಂತ ಯಶ್ ಸಿನಿಮಾ ಒಂದು ಹಂತದ ಪ್ರಚಾರವನ್ನು ಮಾಡಿದೆ. ಎಲ್ಲಾ ಸರಿಯಾಗಿ ಇದ್ದಿದ್ದರೆ, ಯುಗಾದಿ ಹಬ್ಬದಂದು ಬಾಕ್ಸಾಫೀಸ್‌ನಲ್ಲಿ ದೊಡ್ಡ ಕ್ಲ್ಯಾಶ್ ನಡೆಯುತ್ತಿತ್ತು. ಆದರೆ, ಹಾಗಾಗಲಿಲ್ಲ. 'ಧುರಂಧರ್ 2' ಯುದ್ಧ ಸಮಸ್ಯೆ ಇಲ್ಲದೇ ಇದ್ದಿದ್ದರಿಂದ ಈ ಸಿನಿಮಾವನ್ನು ಮುಂದೂಡುವ ಪರಿಸ್ಥಿತಿ ಎದುರಾಗಿದೆ.

'ಟಾಕ್ಸಿಕ್' ಪೋಸ್‌ಪೋಸ್ ಆಗಿದ್ದಕ್ಕೆ ಕೆವಿಎನ್ ಪ್ರೊಡಕ್ಷನ್ ವಿರುದ್ಧ ಯಶ್ ಅಭಿಮಾನಿಗಳು ಗರಂ ಆಗಿದ್ದರು. 'ಧುರಂಧರ್ 2' ವಿರುದ್ಧ ಸಿನಿಮಾ ರಿಲೀಸ್ ಮಾಡುವುದಕ್ಕೆ ಹಿಂಜರಿದಿದ್ದಕ್ಕೆ ಬೇಸರ ಹೊರ ಹಾಕಿದ್ದರು. ಹೀಗಿರುವಾಗಲೇ ಸ್ಯಾಂಡಲ್‌ವುಡ್ ಮಂದಿಯ ಬಾಯಲ್ಲಿ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ಯಶ್ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುವುದಕ್ಕೆ ಹೊರಟಿದೆಯಂತೆ. ಅದೇನು ಅಂತ ತಿಳಿಯುವುದಕ್ಕೆ ಮುಂದೆ ಓದಿ.
ಯಶ್ ಹಾಗೂ ಕೆವಿಎನ್ ಪ್ರೊಡಕ್ಷನ್ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಚೊಚ್ಚಲ ಸಿನಿಮಾ 'ಟಾಕ್ಸಿಕ್'. ಒಂದು ವೇಳೆ ಈ ಸಿನಿಮಾ 'ಕೆಜಿಎಫ್ 2' ನಂತಯೇ ದೊಡ್ಡ ಮಟ್ಟಕ್ಕೆ ಯಶಸ್ಸು ಕಂಡರೆ, ಇದೇ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಆರಂಭ ಆಗಲಿದೆ ಎಂಬ ಮಾತು ಸ್ಯಾಂಡಲ್‌ವುಡ್‌ನಲ್ಲಿ ಹರಿದಾಡುತ್ತಿದೆ. ಜೂನ್ 4ರ ಬಳಿಕ ಪ್ರೇಕ್ಷಕರಿಂದ ಸಿಗುವ ರೆಸ್ಪಾನ್ಸ್‌ಗೆ ಕೆವಿಎನ್ ಸಂಸ್ಥೆ ಎದುರು ನೋಡುತ್ತಿದೆ ಅನ್ನೋ ಮಾತು ಹೇಳಿ ಬರುತ್ತಿದೆ.
ಅಷ್ಟಕ್ಕೂ ಯಶ್ ಕೂಡ ಕೆವಿಎನ್ ಸಂಸ್ಥೆ ಮೇಲೆ ಒಲವು ತೋರಿದ್ದಾರೆ ಅನ್ನೋದ ಮಾತು ಕೂಡ ಹರಿದಾಡುತ್ತಿದೆ. ಇದೇ ಸ್ಯಾಂಡಲ್‌ವುಡ್ ಮಂದಿ ಈ ಕಾಂಬಿನೇಷನ್ ಮತ್ತೆ ಒಂದಾಗುವುದಕ್ಕೆ ಕಾರಣಗಳನ್ನು ಕೂಡ ಪಟ್ಟಿದೆ ಮಾಡಿದ್ದಾರೆ. ಯಶ್ ಹಾಗೂ ಕೆವಿಎನ್ ನಡುವಿನ ವ್ಯಾವಹಾರಿಕ ಹೊಂದಾಣಿಕೆ ಚೆನ್ನಾಗಿದೆ. ಬೇರೆ ನಿರ್ಮಾಣ ಸಂಸ್ಥೆಗಳಲ್ಲಿ ಯಶ್ ಕೆಲಸ ಮಾಡುವುದಕ್ಕಿಂತ ಕೆವಿಎನ್ ಜೊತೆಗೆ ಕೈ ಜೋಡಿಸಿದರೆ, ಹೆಚ್ಚು ಹಣ ಸಿಗಲಿದೆ. ಈ ಕಾರಣಕ್ಕೆ ಇಬ್ಬರೂ ಮತ್ತೊಂದು ಸಿನಿಮಾವನ್ನು ಅನೌನ್ಸ್ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗುತ್ತಿದೆ.

ಕನ್ನಡ ಚಿತ್ರರಂಗದ ಮೂಲಗಳ ಪ್ರಕಾರ, 'ಟಾಕ್ಸಿಕ್' ಸಿನಿಮಾಗೆ ಯಶ್ ಕೂಡ ನಿರ್ಮಾಪಕರಲ್ಲಿ ಒಬ್ಬರು. ಆದರೆ, ಯಶ್‌ಗೆ ಸಂಭಾವನೆ ಜೊತೆಗೆ ಸಿನಿಮಾದಲ್ಲಿ ಬಂದ ಲಾಭದಲ್ಲಿ ಶೇ.30ರಷ್ಟು ಹಣವನ್ನು ನೀಡುವ ಬಗ್ಗೆ ಒಡಂಬಡಿಕೆಯಾಗಿದೆ ಎನ್ನಲಾಗಿದೆ. ಇಂತಹದ್ದೊಂದು ಆಫರ್ ಬೇರೆ ಯಾವುದೇ ಸಂಸ್ಥೆ ಮಾಡುವುದಿಲ್ಲ. ಹೀಗಾಗಿ ಇದೇ ನಿರ್ಮಾಣ ಸಂಸ್ಥೆ ಜೊತೆಗೆ ಇನ್ನೊಂದು ಸಿನಿಮಾ ಮಾಡುವ ಬಗ್ಗೆ ಆಲೋಚನೆಯಿದೆ ಎಂಬ ಮಾತು ಕೇಳಿ ಬರುತ್ತಿದೆ.
ಹಾಗಿದ್ದರೆ, 'ಕೆಜಿಎಫ್ 3' ಕಥೆಯೇನು? 'ಟಾಕ್ಸಿಕ್' ಹಾಗೂ 'ರಾಮಾಯಣ' ಸಿನಿಮಾಗಳನ್ನು ಮುಗಿಸಿದ ಬಳಿಕ ಯಶ್ 'ಕೆಜಿಎಫ್ 3' ಕಡೆ ಮುಖ ಮಾಡುತ್ತಾರೆಂದು ಹೇಳಲಾಗಿತ್ತು. ಈಗಾಗಲೇ ಕೆಜಿಎಫ್ ಚಾಪ್ಟರ್ 3' ಸ್ಕ್ರೀಪ್ಟ್ ಕೂಡ ರೆಡಿಯಿದೆ. ಹೀಗಿದ್ದೂ ಕೆವಿಎನ್ ಜೊತೆ ಇನ್ನೊಂದು ಸಿನಿಮಾ ಮಾಡುತ್ತಾರಾ? ಈ ಪ್ರಶ್ನೆಗೂ ಸ್ಯಾಂಡಲ್‌ವುಡ್ ಮಂದಿ ಬಳಿ ಉತ್ತರವಿದೆ. ಪ್ರಶಾಂತ್ ನೀಲ್ ತೆಲುಗು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಅವರು 'ಕೆಜಿಎಫ್ 2' ಸಿನಿಮಾವನ್ನು ಕೈಗೆತ್ತಿಕೊಳ್ಳುವುದಕ್ಕೆ ಸಮಯ ಹಿಡಿಯಬಹುದು. ಈ ಕಾರಣಕ್ಕೆ ಯಶ್ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ಇನ್ನೊಂದು ಸಿನಿಮಾ ಒಟ್ಟಿಗೆ ಮಾಡಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಕೆವಿಎನ್ ಹಾಗೂ ಯಶ್ ಕಡೆಯಿಂದ ಅಧಿಕೃತ ಮಾಹಿತಿಯಿಲ್ಲ.


Click it and Unblock the Notifications











