ಸಾಲು ಸಾಲು ಸಿನಿಮಾ ಸೋತರೂ ಪೂಜಾ ಹೆಗ್ಡೆ ಡಿಮ್ಯಾಂಡ್; ದುಲ್ಖರ್ ಜೊತೆ ನಟಿಸೋಕೆ ಭಾರೀ ಸಂಭಾವನೆ ಪಡೆದ ನಟಿ

ಪೂಜಾ ಹೆಗ್ಡೆ ಭಾರತೀಯ ಚಿತ್ರರಂಗದ ಸ್ಟಾರ್ ನಟಿ. ತೆಲುಗು ಚಿತ್ರರಂಗ ಸೇರಿದಂತೆ ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ನಾಯಕಿಯಾಗಿ ಮಿಂಚಿದವರು. ಮುಂಬೈನಲ್ಲಿ ಹುಟ್ಟಿದ್ದರೂ ತಮಿಳು ಸಿನಿಮಾದಿಂದ ವೃತ್ತಿ ಬದುಕು ಆರಂಭ ಆಗಿತ್ತು. ಬಳಿಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಪೂಜಾ ಹೆಗ್ಡೆ ಸ್ಟಾರ್ ನಟಿಯಾಗಿ ಮಿಂಚಿದ್ದರು. ಅಲ್ಲಿಂದ ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಆದರೆ, ಇತ್ತೀಚೆಗ್ಯಾಕೋ ಪೂಜಾ ಹೆಗ್ಡೆಯ ಅದೃಷ್ಟ ಕೈ ಕೊಟ್ಟಿದ್ದು, ಇವರು ಸಿನಿಮಾಗಳು ಕೈ ಹಿಡಿಯುತ್ತಿರಲಿಲ್ಲ. ಆದ್ರೀಗ ಪೂಜಾ ಹೆಗ್ಡೆ ಫ್ಯಾನ್ಸ್ ಖುಷಿ ಪಡುವ ಸುದ್ದಿಯೊಂದು ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ.

ಪೂಜಾ ಹೆಗ್ಡೆ 'ಮುಗಮೂಡಿ' ಸಿನಿಮಾದಿಂದ ವೃತ್ತಿ ಬದುಕು ಆರಂಭಿಸಿದ್ದದರೂ, ಬಾಲಿವುಡ್ ಹ್ಯಾಂಡ್‌ಸಮ್ ಹಂಕ್ ಹೃತಿಕ್ ರೋಷನ್ ನಟಿಸಿದ್ದ 'ಮೊಹೆಂಜೋದಾರೋ' ಸಿನಿಮಾದ ಮೂಲಕ ಗಮನ ಸೆಳೆದರು. ಆದರೆ, ಈ ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿತ್ತು. ಈ ಸಿನಿಮಾಗೂ ಮುನ್ನ ಎರಡು ತೆಲುಗು ಸಿನಿಮಾದಲ್ಲಿ ನಟಿಸಿದ್ದರು. ಅವು ಕೂಡ ಸೋತಿದ್ದವು. ಹೀಗಾಗಿ ಇವರನ್ನು ಆರಂಭದಲ್ಲಿ 'ಐರನ್ ಲೆಗ್' ಎಂದೇ ಕರೆಯುತ್ತಿದ್ದರು.

Buzz is that actress Pooja Hegde receives a massive paycheck for her next film with Dulquer Salmaan

ಒಂದಿಷ್ಟು ಸೋಲುಗಳ ಬಳಿಕ ಪೂಜಾ ಹೆಗ್ಡೆ ಟಾಲಿವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿದರು. ಮಹೇಶ್ ಬಾಬು, ಎನ್‌ಟಿಆರ್, ಪ್ರಭಾಸ್, ರಾಮ್ ಚರಣ್, ಅಲ್ಲು ಅರ್ಜುನ್ ಅಂತ ಸ್ಟಾರ್ ನಟರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದರು. ಅಲ್ಲು ಅರ್ಜುನ್ ಜೊತೆ ನಟಿಸಿದ್ದ 'ಅಲಾ ವೈಕುಂಠಪುರಮುಲೋ' ಸಿನಿಮಾ ಮೆಗಾ ಹಿಟ್ ಆಗಿದ್ದಷ್ಟೇ. ಮತ್ತೆ ಪೂಜಾ ಹೆಗ್ಡೆಗೆ ಬಿಗ್ ಹಿಟ್ ಸಿಗಲೇ ಇಲ್ಲ.

ಇಲ್ಲಿಂದ ಪೂಜಾ ಹೆಗ್ಡೆ ಬರೋಬ್ಬರಿ 8 ಪ್ಲಾಪ್ ಸಿನಿಮಾಗಳನ್ನು ಕೊಟ್ಟರು. ಹಾಗಂತ ಇವರಿಗೆ ಅವಕಾಶವೇನು ಕಮ್ಮಿಯಿಲ್ಲ. ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಅದರಲ್ಲೊಂದು ದುಲ್ಖರ್ ಸಲ್ಮಾನ್ ನಟಿಸುತ್ತಿರುವ 41ನೇ ಸಿನಿಮಾ. ಈ ಸಿನಿಮಾಗಾಗಿ ಪೂಜಾ ಹೆಗ್ಡೆ ಭಾರೀ ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಬ್ಯಾಕ್ ಟು ಬ್ಯಾಕ್ ಪ್ಲಾಪ್ ಸಿನಿಮಾ ನೀಡಿದರೂ ಯಾಕಿಷ್ಟು ಬೇಡಿಕೆ ಅನ್ನೋದು ಕೂಡ ಚರ್ಚೆಯಾಗುತ್ತಿದೆ.

ದುಲ್ಖರ್ ಸಲ್ಮಾನ್ ಸಿನಿಮಾಗೆ ರವಿ ನೇಳಕುಡಿತ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾಗಾಗಿ ಪೂಜಾ ಹೆಗ್ಡೆ ಭಾರಿ ಸಂಭಾವನೆಯನ್ನು ಬೇಡಿಕೆ ಇಟ್ಟಿರೋ ಬಗ್ಗೆ ಸುದ್ದಿಯಾಗಿದೆ. ಅಷ್ಟಕ್ಕೂ ಯಾಕಿಷ್ಟು ಬೇಡಿಕೆ ಎಂದರೆ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಪೂಜಾ ಹೆಗ್ಡೆ ಜನಪ್ರಿಯತೆ ನಟಿ. ಹೀಗಾಗಿ ಸಿನಿಮಾವನ್ನು ಈ ಭಾಷೆಗಳಲ್ಲಿ ರಿಲೀಸ್ ಮಾಡಬಹುದು ಎಂಬ ಕಾರಣಕ್ಕೆ ನಿರ್ಮಾಪಕರು ಅವರ ಬೇಡಿಕೆಯನ್ನು ಒಪ್ಪಿಕೊಂಡಿದ್ದಾರೆ.

ದುಲ್ಖರ್ ಸಲ್ಮಾನ್ ಸಿನಿಮಾಗಾಗಿ ಪೂಜಾ ಹೆಗ್ಡೆ ಬರೋಬ್ಬರಿ ₹3 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಪೂಜಾ ಹೆಗ್ಡೆ ಕೇಳಿದ ಸಂಭಾವನೆಯನ್ನು ನೀಡುವುದಕ್ಕೂ ನಿರ್ಮಾಪಕರು ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ. ಈ ವಿಷಯ ಹೊರಬೀಳುತ್ತಿದ್ದಂತೆ ಪೂಜಾ ಹೆಗ್ಡೆ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್‌ಗಳನ್ನು ಮಾಡುವುದಕ್ಕೆ ಶುರು ಮಾಡಿದ್ದಾರೆ.

ಇನ್ನು ಪೂಜಾ ಹೆಗ್ಡೆ ಇದೇ ಅಕ್ಟೋಬರ್ 13ರಂದು 35ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಈ ವೇಳೆ ಹೊಸ ಸಿನಿಮಾಗಳು ಅನೌನ್ಸ್ ಆಗಬಹುದೆಂಬ ನಿರೀಕ್ಷೆಯಿದೆ. ಸದ್ಯ ದುಲ್ಖರ್ ಸಲ್ಮಾನ್ ಸಿನಿಮಾ ಜೊತೆ ದಳಪತಿ ವಿಜಯ್ ನಟಿಸುತ್ತಿರುವ 'ಜನನಾಯಕನ್', 'ಕಾಂಚನಾ 4' ಮತ್ತು 'ಹೈ ಜವಾನಿ ತೊ ಇಷ್ಕ್ ಹೋನಾ ಹೈ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮತ್ತೆ ಪೂಜಾ ಹೆಗ್ಡೆಗೆ ಸಕ್ಸಸ್ ತಂದುಕೊಡಬಹುದು ಎನ್ನಲಾಗಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X