'ಲಿಯೋ' ಬಳಿಕ ಬಾಲಿವುಡ್‌ಗೆ ತ್ರಿಶಾ ಎಂಟ್ರಿ? 'ಟೈಗರ್' ಜೊತೆ ರೊಮ್ಯಾನ್ಸ್ ಅಂತೆ ನಿಜವೇ?

ತಮಿಳು ಚಿತ್ರರಂಗದ ಸ್ಟಾರ್ ನಟಿ ತ್ರಿಶಾ ಮತ್ತೆ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ದಳಪತಿ ವಿಜಯ್ ಜೊತೆ ನಟಿಸಿದ 'ಲಿಯೋ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ತಕ್ಕಮಟ್ಟಿಗೆ ಸದ್ದು ಮಾಡಿತ್ತು. ಇಲ್ಲಿಂದ ತ್ರಿಶಾಗೆ ಮತ್ತಷ್ಟು ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ತ್ರಿಶಾಗೆ ಮತ್ತೆ ಬಾಲಿವುಡ್ ಸಿನಿಮಾದಲ್ಲಿ ನಟಿಸುವ ಬಂಪರ್ ಆಫರ್ ಸಿಕ್ಕಿದೆ ಎನ್ನಲಾಗಿದೆ.

ಕೃಷ್ಣ ಸುಂದರಿ ತ್ರಿಶಾ ದಕ್ಷಿಣ ಭಾರತದಲ್ಲಿ ಸಿಕ್ಕಾಪಟ್ಟೆ ಫೇಮಸ್. ತಮಿಳು, ತೆಲುಗು ಭಾಷೆಯ ಸಿನಿಮಾಗಳಲ್ಲಿ ಈಕೆಗೆ ಅತೀ ಹೆಚ್ಚು ಅಭಿಮಾನಿಗಳು ಇದ್ದಾರೆ. ಕೆಲವು ದಿನಗಳು ಸಿನಿಮಾ ಮಾಡದೆ ಸೈಲೆಂಟ್ ಆಗಿದ್ದ ತ್ರಿಶಾ ಈಗ ಮತ್ತೆ ಬ್ಯುಸಿಯಾಗಿದ್ದಾರೆ. ಇದೇ ವೇಳೆ ಬಾಲಿವುಡ್ ಮತ್ತೆ ಆಫರ್ ಬಂದಿದೆ ಅನ್ನೋ ಮಾತು ಕೇಳಿ ಬರುತ್ತಿವೆ.

Buzz is that after 13 years actress Trisha Krishnan to act with Salman Khan

ಸದ್ಯ ಬಾಲಿವುಡ್‌ನಲ್ಲಿ ಇಂತಹದ್ದೊಂದು ಸುದ್ದಿ ಓಡಾಡುತ್ತಿದೆ. ಬರೋಬ್ಬರಿ 13 ವರ್ಷಗಳ ಬಳಿಕ ತ್ರಿಶಾ ಮತ್ತೆ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. 2010ರಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದ 'ಕಟ್ಟಾ ಮೀಟ' ಸಿನಿಮಾದಲ್ಲಿ ತ್ರಿಶಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಬಳಿಕ ಮತ್ತೆ ಬಾಲಿವುಡ್‌ ಕಡೆ ಮುಖ ಮಾಡುವುದಕ್ಕೆ ಹೋಗಿರಲಿಲ್ಲ.

ಈಗ ತ್ರಿಶಾ 'ಕಟ್ಟಾ ಮೀಟ' ತೆರೆಕಂಡ 13 ವರ್ಷಗಳ ಬಳಿಕ ಮತ್ತೆ ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಅನ್ನೋ ಓಡಾಡುತ್ತಿದೆ. ಅದೂ ತನ್ನ ನೆಚ್ಚಿನ ನಾಯಕ ನಟ ಬಾಲಿವುಡ್ 'ಟೈಗರ್' ಸಲ್ಮಾನ್ ಖಾನ್ ನಟಸುತ್ತಿರುವ 'ದಿ ಬುಲ್' ಸಿನಿಮಾಗೆ ನಾಯಕಿಯಾಗಲಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಸಲ್ಮಾನ್ ಖಾನ್ ಸಿನಿಮಾ 'ಟೈಗರ್ 3' ರಿಲೀಸ್ ಆಗಿತ್ತು.

Buzz is that after 13 years actress Trisha Krishnan to act with Salman Khan

ಸಲ್ಮಾನ್ ಮುಂದಿನ ಸಿನಿಮಾ 'ದಿ ಬುಲ್' ಈ ಸಿನಿಮಾವನ್ನು 'ಪಂಜಾ' ಸಿನಿಮಾದ ನಿರ್ದೇಶಕ ವಿಷ್ಣುವರ್ಧನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದೇ ಸಿನಿಮಾದಲ್ಲಿ ಸಲ್ಮಾನ್ ಖಾನ್ ಜೊತೆ ತ್ರಿಶಾ ಕೃಷ್ಣನ್ ರೊಮ್ಯಾನ್ಸ್ ಮಾಡಲಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ. ಜೊತೆಗೆ ಇದು ನೈಜ ಘಟನೆಯನ್ನು ಆಧರಿಸಿದ ಸಿನಿಮಾ ಎಂದು ಹೇಳಲಾಗುತ್ತಿದೆ.

1988ರಲ್ಲಿ 'ಆಪರೇಷನ್ ಕ್ಯಾಕ್ಟಸ್' ಅನ್ನೋ ಸೇನಾ ಕಾರ್ಯಾಚರಣೆ ನಡೆದಿತ್ತು. ಅಂದು ಮಾಲ್ಡೀವ್ಸ್ ಅಧ್ಯಕ್ಷರನ್ನು ರಕ್ಷಣೆ ಮಾಡುವುದಕ್ಕೆ ಭಾರತೀಯ ಸೇನೆ ಮಾಡಿದ ಮಿಲಿಟರಿ ಕಾರ್ಯಚರಣೆಯನ್ನು ತೆರೆಮೇಲೆ ತರುವುದಕ್ಕೆ ಚಿತ್ರತಂಡ ಹೊರಟಿದೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಸೇನಾ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ತ್ರಿಶಾ ಕೃಷ್ಣನ್ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಅತೀ ದೊಡ್ಡ ಅಭಿಮಾನಿ. ಕೆಲವು ವರ್ಷಗಳ ಹಿಂದೆ ತ್ರಿಶಾ ಸಂದರ್ಶನವೊಂದರಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಜೊತೆ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದರು ಎಂದು ವರದಿಗಳಾಗಿವೆ. ಕೊನೆಗೂ ತ್ರಿಶಾ ಬಾಲಿವುಡ್ 'ಟೈಗರ್' ಸಲ್ಮಾನ್ ಖಾನ್ ಜೊತೆ ನಟಿಸುವ ಅವಕಾಶ ಕೂಡ ಬಂದಿದೆ ಎಂದು ಸಿನಿಮಾ ವಲಯದಲ್ಲಿ ಚರ್ಚೆಯಾಗುತ್ತಿದೆ. ಆದರೆ, ಈ ಬಗ್ಗೆ ಅಧಿಕೃತವಾಗಿ ಯಾರೂ ಮಾಹಿತಿ ಹಂಚಿಕೊಂಡಿಲ್ಲ. ಸದ್ಯ ತ್ರಿಶಾ ಕೈಯಲ್ಲಿ ಅಜಿತ್ ಜೊತೆ ನಟಿಸುತ್ತಿರುವ 'ವಿಡಾ ಮುಯರ್ಚಿ', ಧನುಷ್ 50ನೇ ಸಿನಿಮಾ, ಮೋಹನ್ ಲಾಲ್ ಜೊತೆ ನಟಿಸುತ್ತಿರುವ 'ರಾಮ್' ಹಾಗೂ ಕಮಲ್ ಹಾಸನ್ ಅವರ 234ನೇ ಸಿನಿಮಾ ಕೈಯಲ್ಲಿದೆ.

More from Filmibeat

English summary
Trisha Krishnan to act with Salman Khan in The Bull.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X