Shivarajkumar: 'ಜೈಲರ್' ಬಳಿಕ ಶಿವಣ್ಣನಿಗೆ ತಮಿಳಿನಲ್ಲಿ ಡಿಮ್ಯಾಂಡ್.. 4 ವರ್ಷಗಳ ಹಿಂದಿನ ಪ್ರಾಜೆಕ್ಟ್ ಶುರು?
ಸೆಂಚುರಿಸ್ಟಾರ್ ಶಿವರಾಜ್‌ಕುಮಾರ್ ತಮಿಳು ಚಿತ್ರರಂಗಕ್ಕೆ ಕಾಲಿಡುತ್ತಿದ್ದಂತೆ ಅಲ್ಲೂ ಅದೃಷ್ಟ ಲಕ್ಷ್ಮಿ ಒಲಿದುಬಿಟ್ಟಿದ್ದಾಳೆ. ಮೊದಲ ಸಿನಿಮಾದಲ್ಲಿಯೇ ಶಿವಣ್ಣನಿಗೆ ಗೆಲುವು ಸಿಕ್ಕಿಬಿಟ್ಟಿದೆ. ಹೀಗಾಗಿ ಶಿವರಾಜ್‌ಕುಮಾರ್‌ಗೆ ತಮಿಳು ಸಿನಿಮಾಗಳಲ್ಲೂ ಬೇಡಿಕೆ ಹೆಚ್ಚಾಗಿದೆ ಅನ್ನೋ ಸುದ್ದಿ ಓಡಾಡುತ್ತಿದೆ.
'ಜೈಲರ್' ಜೊತೆ ಶಿವಣ್ಣನ ಖದರ್ ನೋಡಿ ಕಳೆದೇ ಹೋಗಿರುವ ಸಿನಿಮಾ ಮಂದಿಗೆ ಆಫರ್‌ಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಈಗಾಗಲೇ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಸಿನಿಮಾದಲ್ಲಿ ಶಿವಣ್ಣ ನಟಿಸೋದು ಕನ್ಫರ್ಮ್ ಆಗಿದೆ. ಈ ಹಿಂದೆನೇ ತಮಿಳು ನಿರ್ಮಾಣ ಸಂಸ್ಥೆಯೊಂದು ಶಿವಣ್ಣನಿಗಾಗಿ ಸಿನಿಮಾ ನಿರ್ಮಾಣ ಆಡುತ್ತಿದೆ ಅನ್ನೋ ಮ್ಯಾಟರ್ ಹೊರಬಿದ್ದಿದೆ.

'ಜೈಲರ್' ಸಿನಿಮಾ ಬಳಿಕ ಧನುಷ್ ಸಿನಿಮಾ 'ಕ್ಯಾಪ್ಟನ್ ಮಿಲ್ಲರ್'ನಲ್ಲೂ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಎಲ್ಲರ ಕಣ್ಣು 'ಕ್ಯಾಪ್ಟನ್ ಮಿಲ್ಲರ್' ಮೇಲೆ ನೆಟ್ಟಿದೆ. ಇದರೊಂದಿಗೆ ತಮಿಳಿನ ನಿರ್ದೇಶಕನೊಂದಿಗೆ ಶಿವಣ್ಣ ಮಾಡುತ್ತಾರೆ ಅನ್ನೋ ಸುದ್ದಿಯೊಂದು ಓಡಾಡುತ್ತಿದೆ. ಈ ಸಿನಿಮಾ ಬಗ್ಗೆ ನಾಲ್ಕು ವರ್ಷಗಳ ಹಿಂದೆನೇ ಸುದ್ದಿ ಹರಿದಾಡಿತ್ತು. ಅಸಲಿಗೆ ಆ ಸುದ್ದಿ ಯಾವುದು? ಅನ್ನೋದನ್ನು ತಿಳಿಯಲು ಮುಂದೆ ಓದಿ..
'ಕ್ಯಾಪ್ಟನ್ ಮಿಲ್ಲರ್' ಜೊತೆ ಶಿವಣ್ಣನ ಖದರ್
'ಜೈಲರ್' ಸಿನಿಮಾದಲ್ಲಿ ಶಿವಣ್ಣ ಲುಕ್ ನೋಡಿ ತಮಿಳು ಮಕ್ಕಳು ಫಿದಾ ಆಗಿದ್ದಾರೆ. ಶಿವಣ್ಣ ಸಿನಿಮಾಗಳನ್ನು ಹುಡುಕಿ ಹುಡುಕಿ ವೀಕ್ಷಣೆ ಮಾಡುತ್ತಿದ್ದಾರೆ. ಈಗ ಮುಂದಿನ ತಮಿಳು ಸಿನಿಮಾ 'ಕ್ಯಾಪ್ಟನ್ ಮಿಲ್ಲರ್'ಗಾಗಿ ಕಾದು ಕೂತಿದ್ದಾರೆ. ಈಗಾಗಲೇ ರಿಲೀಸ್ ಚಿಕ್ಕದೊಂದು ತುಣಿಕಿನಲ್ಲಿ ಶಿವಣ್ಣ ಕುದುರೆ ಏರಿ ಬರುವ ದೃಶ್ಯ ಈಗ ಕಿಕ್ ಕೊಡುವುದಕ್ಕೆ ಶುರು ಮಾಡಿದೆ. ಆದರೆ, ಎಲ್ಲಕ್ಕಿಂತ ಶಿವಣ್ಣ ಹೊಸ ಸಿನಿಮಾ ಅಭಿಮಾನಿಗಳಿಗೆ ಕಿಕ್ ಕೊಡುತ್ತಿದೆ.

ತಮಿಳಿನಲ್ಲಿ ಶಿವಣ್ಣನ ಹೊಸ ಸಿನಿಮಾ?
ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ತಮಿಳನಾಡಿನಲ್ಲಿ ಬೇಡಿಕೆ ಹೆಚ್ಚಾಗಿದೆ ಅನ್ನೋ ಸುದ್ದಿ ಓಡಾಡುತ್ತಿದೆ. ತಮಿಳಿನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಸತ್ಯ ಜ್ಯೋತಿ ಫಿಲ್ಮ್ಸ್ ಶಿವಣ್ಣನ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ ಅನ್ನೋ ಕೇಳಿ ಬರುತ್ತಿದೆ. ತಮಿಳಿನ ನಿರ್ದೇಶಕ ರವಿ ಅರಸು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ ಎನ್ನಲಾಗಿದೆ. 'ಈಟಿ' ಹಾಗೂ 'ಐಂಗಾರನ್' ಅನ್ನೋ ಯಶಸ್ವಿ ಸಿನಿಮಾಗಳನ್ನು ರವಿ ಅರಸು ನಿರ್ದೇಶಿಸಿದ್ದಾರೆ. ಶೀಘ್ರದಲ್ಲಿಯೇ ಈ ಸಿನಿಮಾ ಸೆಟ್ಟೇರಲಿದೆ ಎಂದು ಹೇಳಲಾಗುತ್ತಿದೆ.
ನಾಲ್ಕು ವರ್ಷದ ಹಿಂದೆನೇ ಸೆಟ್ಟೇರಬೇಕಿತ್ತು
2019ರಲ್ಲಿಯೇ ಸತ್ಯ ಜ್ಯೋತಿ ಫಿಲ್ಮ್ಸ್ ಶಿವಣ್ಣನ ಸಿನಿಮಾ ನಿರ್ಮಾಣಕ್ಕೆ ಮುಂದಾಗಿತ್ತು. ಆ ಬಳಿಕ ಅದ್ಯಾಕೋ ಸಿನಿಮಾ ಸೆಟ್ಟೇರಲಿಲ್ಲ. ಈಗ ಮತ್ತೆ ಇದೇ ಸಿನಿಮಾ ಸದ್ದು ಮಾಡುತ್ತಿದೆ. ಈ ಸಿನಿಮಾವನ್ನು ಸತ್ಯ ಜ್ಯೋತಿ ಫಿಲ್ಮ್ಸ್ ತಮಿಳು ಹಾಗೂ ಕನ್ನಡ ಎರಡೂ ಭಾಷೆಯಲ್ಲೂ ಬಿಡುಗಡೆ ಮಾಡುವುದಕ್ಕೆ ಪ್ಲ್ಯಾನ್ ಮಾಡಿದೆ ಎನ್ನಲಾಗಿದೆ. ತಮಿಳಿನಲ್ಲಿ ಶಿವಣ್ಣನಿಗೆ ಫ್ಯಾನ್ ಹೆಚ್ಚಾಗಿರುವುದರಿಂದ ಶೀಘ್ರದಲ್ಲಿಯೇ ಸಿನಿಮಾ ಸೆಟ್ಟೇರಲಿದೆ ಅನ್ನೋ ಮಾತು ಹೇಳಿ ಬರುತ್ತಿದೆ.
ಅಜಿತ್ ಜೊತೆ ಸಿನಿಮಾ ಮಾಡೋ ಆಸೆ
ತಮಿಳುನಾಡಿನಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್‌ಗೆ ಕ್ರೇಜ್ ಹೆಚ್ಚಾಗಿದೆ. ಶಿವಣ್ಣ ಖದರ್‌ಗೆ ಫಿದಾ ಅಂತೂ ಆಗಿದ್ದಾರೆ. ಇದೇ ವೇಳೆ ಇತ್ತೀಚೆಗೆ 'ಜೈಲರ್' ಸಿನಿಮಾ ಸಮಾರಂಭದಲ್ಲಿ ತಮಿಳಿನ ಮತ್ತೊಬ್ಬ ಸೂಪರ್‌ಸ್ಟಾರ್ ಅಜಿತ್ ಜೊತೆ ಸಿನಿಮಾ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದರು. ಸದ್ಯ ಶಿವಣ್ಣನ ಕನ್ನಡ ಸಿನಿಮಾಗಳು ಕೂಡ ತಮಿಳಿನಲ್ಲಿ ಬಿಡುಗಡೆ ಮಾಡುವುದಕ್ಕೂ ವೇದಿಕೆ ಸಿಕ್ಕಂತಾಗಿದೆ.


Click it and Unblock the Notifications











