ನಾಗ ಚೈತನ್ಯ ನಿಶ್ವಿತಾರ್ಥದ ಬಳಿಕ ನೊಂದುಕೊಂಡ ಸಮಂತಾ? ನಟಿ ತೆಗೆದುಕೊಂಡ ಶಾಕಿಂಗ್ ನಿರ್ಧಾರವೇನು?
ಸಮಂತಾಗೆ ವಿಚ್ಛೇದನ ನೀಡಿದ ಬಳಿಕ ನಾಗ ಚೈತನ್ಯ ಎರಡನೇ ಬಾರಿ ಮದುವೆ ಆಗಲು ರೆಡಿಯಾಗಿದ್ದಾರೆ. ಬಹುಭಾಷಾ ನಟಿ ಶೋಭಿತಾ ಧುಲಿಪಾಲಾ ಅವರೊಂದಿಗೆ ನಾಗ ಚೈತನ್ಯ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ. ಇಲ್ಲಿಂದ ಸಮಂತಾ ರಿಯಾಕ್ಷನ್ ಏನು ಅನ್ನೋದನ್ನು ನೋಡುವುದಕ್ಕೆ ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
ಇದೇ ವೇಳೆ ಟಾಲಿವುಡ್‌ನಲ್ಲಿ ಸಮಂತಾ ಬಗ್ಗೆ ಸುದ್ದಿಯೊಂದಿಗೆ ಹರಿದಾಡುವುದಕ್ಕೆ ಶುರು ಮಾಡಿದೆ. ನಾಗ ಚೈತನ್ಯ ಹಾಗೂ ಶೋಭಿತಾ ಧೂಲಿಪಾಲಾ ನಿಶ್ಚಿತಾರ್ಥದ ಬಳಿಕ ಸಮಂತಾ ಒಂದು ಖಡಕ್ ನಿರ್ಧಾರ ತೆಗೆದುಕೊಂಡಿದ್ದಾರಂತೆ. ಈ ನಿರ್ಧಾರದ ಬಗ್ಗೆ ಸದ್ಯ ಟಾಲಿವುಡ್ ಜೋರಾಗಿಯೇ ಹರಿದಾಡುತ್ತಿದೆ.

ಸಮಂತಾ ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯ ಸಿನಿಮಾಗಳಲ್ಲಿ ಸಮಂತಾ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಸದ್ಯ ಸಮಂತಾ ನಟಿಸಿರುವ ಬಹುನಿರೀಕ್ಷಿತ ವೆಬ್ ಸೀರಿಸ್ 'ಸಿಟಾಡೆಲ್ ಹನಿ ಬನ್ನಿ' ರಿಲೀಸ್ ಆಗಬೇಕಿದೆ. ಅಮೆಜಾನ್ ಪ್ರೈಮ್‌ನಲ್ಲಿ ಈ ವೆಬ್ ಸೀರಿಸ್ ರಿಲೀಸ್ ಆಗುತ್ತಿದೆ. ಆ ವೆಬ್ ಸೀರಿಸ್ ರಿಲೀಸ್ ಆಗುವ ಮುನ್ನವೇ ನಾಗ ಚೈತನ್ಯ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸಮಂತಾ ಖಡಕ್ ನಿರ್ಧಾರವನ್ನು ತೆಗೆದುಕೊಂಡಿರೋ ಸುದ್ದಿ ಟಾಲಿವುಡ್‌ನಲ್ಲಿ ಹಲ್‌ಚಲ್ ಎಬ್ಬಿಸಿದೆ.
ಸಮಂತಾ ಅನಾರೋಗ್ಯದಿಂದ ಬಳಲುತ್ತಿರುವುದು ಗೊತ್ತೇ ಇದೆ. ಮಯೋಸೈಟಿಸ್ ಎಂಬ ಖಾಯಿಲೆಯಿಂದ ಬಳಲುತ್ತಿರುವುದರಿಂದ ಸಿನಿಮಾದಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದಾರೆ. 'ಸಿಟಾಡೆಲ್' ವೆಬ್ ಸೀರಿಸ್ ಮುಗಿಯುತ್ತಿದ್ದಂತೆ ಹೊಸ ಪ್ರಾಜೆಕ್ಟ್‌ಗಳಿಗೆ ಬ್ರೇಕ್ ಕೊಟ್ಟಿದ್ದರು. ಸದ್ಯ 'ಸಿಟಾಡೆಲ್' ವೆಬ್ ಸೀರಿಸ್ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೊಂದು ಕಡೆ ನಾಗ ಚೈತನ್ಯ ನಿಶ್ಚಿತಾರ್ಥ ಮಾಡಿಕೊಂಡ ಸುದ್ದಿಯಿಂದ ಸಮಂತಾಗೆ ಬೇಸರ ಆಗಿದೆಯಂತೆ.

ಸಮಂತಾ ಮಾಜಿ ಪತಿ ನಾಗ ಚೈತನ್ಯ ಎರಡನೇ ಮದುವೆಗೆ ಸಜ್ಜಾಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಅನೇಕ ರೀತಿಯ ಕಾಮೆಂಟ್ ಮಾಡುತ್ತಿದ್ದಾರೆ. ಇವರೊಂದಿಗೆ ಸಮಂತಾ ಹೆಸರು ಕೂಡ ಪ್ರಸ್ತಾಪ ಆಗುತ್ತಿದೆ. ಹೀಗಾಗಿ ಸಮಂತಾ ಸಿಕ್ಕಾಪಟ್ಟೆ ಬೇಸರ ಆಗಿದ್ದಾರೆ ಎನ್ನಲಾಗಿದೆ. ಈ ವೇಳೆ ಸಮಂತಾ ಶಾಕಿಂಗ್ ನಿರ್ಧಾರ ತೆಗೆದುಕೊಂಡಿದ್ದಾರೆ ಅನ್ನೋ ಸುದ್ದಿ ತೆಲುಗು ಮಾಧ್ಯಮಗಳಲ್ಲಿ ಓಡಾಡುತ್ತಿದೆ.
ಅನಾರೋಗ್ಯದಿಂದ ಚೇತರಿಸಿಕೊಂಡಿರುವ ಸಮಂತಾ ಸಿನಿಮಾಗಳಿಗೆ ಕಮ್‌ಬ್ಯಾಕ್ ಮಾಡುವುದಕ್ಕೆ ನಿರ್ಧರಿಸಿದ್ದರು. ಲಾಂಗ್ ಬ್ರೇಕ್ ಬಳಿಕ ಸಮಂತಾ ತೆಲುಗು ಚಿತ್ರರಂಗಕ್ಕೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದರು. ಆದ್ರೀಗ ತೆಲುಗು ಚಿತ್ರರಂಗದಿಂದ ದೂರವೇ ಉಳಿಯಬೇಕು ಎಂದು ನಿರ್ಧರಿಸಿದ್ದಾರಂತೆ. ಇಂತಹದ್ದೊಂದು ಸುದ್ದಿ ಟಾಲಿವುಡ್‌ನಲ್ಲಿ ಸದ್ದು ಮಾಡುತ್ತಿದೆ.
'ಸಿಟಾಡೆಲ್' ಬಿಡುಗಡೆ ವೇಳೆ ಸಮಂತಾ ಈ ಎಲ್ಲಾ ವದಂತಿಗಳಿಗೆ ಬ್ರೇಕ್ ಕೊಡುತ್ತಾರಾ? ಅನ್ನೋದು ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಒಂದು ವೇಳೆ ವೆಬ್ ಸೀರಿಸ್ ಸಿಕ್ಕಾಪಟ್ಟೆ ಸದ್ದು ಮಾಡಿದರೆ, ಬಾಲಿವುಡ್‌ನಲ್ಲಿಯೇ ಅವಕಾಶಗಳು ಹೆಚ್ಚು ಸಿಗಬಹುದು. ಆ ಬಳಿಕ ತೆಲುಗು ಸಿನಿಮಾಗಳಲ್ಲಿ ನಟಿಸದೆ ಹಿಂದೆ ಉಳಿಯುವ ಸಾಧ್ಯತೆಗಳು ಇವೆ. ಆದರೆ, ಸಮಂತಾ ಬಗ್ಗೆ ಹರಿದಾಡುತ್ತಿರುವ ಈ ಸುದ್ದಿ ಅಸಲಿಗೆ ನಿಜವೇ? ಇಲ್ಲ ಕೇವಲ ವದಂತಿಯಷ್ಟೇನಾ? ಅನ್ನೋದು ಪ್ರಶ್ನೆಗೆ ಉತ್ತರ ಸಿಗಬೇಕಿದೆ.


Click it and Unblock the Notifications











