ಯಶ್ ಹಾದಿ ಹಿಡಿದ ಅಲ್ಲು ಅರ್ಜುನ್; ಮುಂಬೈನಲ್ಲಿ ಬಾಡಿಗೆ ಮನೆ.. ಬಾಡಿಗೆ ಎಷ್ಟು ಲಕ್ಷ ಗೊತ್ತೇ?

ದಕ್ಷಿಣ ಭಾರತದ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್‌ಗಳಲ್ಲಿ ಇಬ್ಬರು ಮುಂಬೈನಲ್ಲೂ ನೆಲೆ ಕಂಡುಕೊಳ್ಳುತ್ತಿದ್ದಾರೆ. 'ಕೆಜಿಎಫ್ 2' ಮೆಗಾ ಸಕ್ಸಸ್ ಕಂಡ ಬಳಿಕ ಯಶ್ ಮುಂಬೈನಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಮೂಲಗಳ ಪ್ರಕಾರ, ಅಲ್ಲಿಯೇ ಯಶ್‌ ಮನೆ ಕೂಡ ಮಾಡಿಕೊಂಡಿದ್ದಾರೆ. ಈಗ ಮತ್ತೊಬ್ಬ ಪ್ಯಾನ್ ಇಂಡಿಯಾ ಸ್ಟಾರ್ ಅಲ್ಲು ಅರ್ಜುನ್ ಕೂಡ ಮುಂಬೈ ಕಡೆ ಪಯಣ ಬೆಳೆಸಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಅಲ್ಲು ಅರ್ಜುನ್ ಮುಂಬೈಗೆ ಶಿಫ್ಟ್ ಆಗುತ್ತಿದ್ದಾರೆಂಬ ಸುದ್ದಿ ಜೋರಾಗಿಯೇ ಸದ್ದು ಮಾಡಿತ್ತು. ಪ್ಯಾನ್ ಇಂಡಿಯಾ ಸ್ಟಾರ್ ಆದ್ಮೇಲೆ ಅವಕಾಶಗಳು ಹೆಚ್ಚು ಬರುತ್ತಿರುವುದರಿಂದ ಅಲ್ಲಿಯೇ ನೆಲೆಸುವುದಕ್ಕೆ ನಿರ್ಧಾರಿಸಿದ್ದಾರೆಂದು ಸುದ್ದಿಯಾಗಿತ್ತು. ಆದರೆ, ಅದನ್ನು ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ ಅಲ್ಲಗಳೆದಿದ್ದರು. ಮುಂಬೈಗೆ ಶಿಫ್ಟ್ ಆಗಿಲ್ಲ ಅನ್ನೋದನ್ನು ಖಚಿತ ಪಡಿಸಿದ್ದರು.

Buzz is that Allu Arjun paying huge Rs 16 lakh rent for his Mumbai house

'ಪುಷ್ಪ 2' ಸಿನಿಮಾ ಬಳಿಕ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. ಹೀಗಾಗಿ ಅವರಿಗೆ ಬಾಲಿವುಡ್ ಸೇರಿದಂತೆ ಹಲವು ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳಿಂದ ಆಫರ್‌ಗಳು ಬರುತ್ತಿವೆ. ಅದರಲ್ಲೂ ಬಾಲಿವುಡ್ ನಿರ್ಮಾಣ ಸಂಸ್ಥೆಗಳು ಇವರ ಹಿಂದೆ ಬಿದ್ದಿವೆ ಅನ್ನೋ ಸುದ್ದಿಯಿದೆ. ಕಥೆ ಕೇಳುವುದರಿಂದ ಹಿಡಿದು ಸಿನಿಮಾ ಹಾಗೂ ವ್ಯವಹಾರಕ್ಕೆ ಅಗತ್ಯವಿರುವುದರಿಂದ ಮುಂಬೈನಲ್ಲಿ ಬಾಡಿಗೆ ಮನೆ ಪಡೆದಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ದುಬಾರಿ ಮೊತ್ತವನ್ನು ಬಾಡಿಗೆ ರೂಪದಲ್ಲಿ ನೀಡುತ್ತಿದ್ದಾರೆಂಬ ಚರ್ಚೆ ಟಾಲಿವುಡ್‌ನಲ್ಲಿ ಆಗುತ್ತಿದೆ.

ಅಲ್ಲು ಅರ್ಜುನ್ ಸದ್ಯಕ್ಕೀಗ ಅಟ್ಲಿ ನಿರ್ದೇಶಿಸುತ್ತಿರುವ ಬಹುಕೋಟಿ ವೆಚ್ಚದ ಸಿನಿಮಾ 'ರಾಕಾ'ದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಫಸ್ಟ್ ಲುಕ್ ಅಲ್ಲು ಅರ್ಜುನ್ ಅಭಿಮಾನಿಗಳನ್ನು ನಿದ್ದೆ ಕೆಡಿಸಿದೆ. ಸಿನಿಮಾವನ್ನು ಕಣ್ತುಂಬಿಕೊಳ್ಳುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಈ ಮಧ್ಯೆ ಅಲ್ಲು ಅರ್ಜುನ್ ಬಾಲಿವುಡ್‌ನ ಕೆಲವು ನಿರ್ಮಾಣ ಸಂಸ್ಥೆಗಳೊಂದಿಗೆ ಹೊಸ ಪ್ರಾಜೆಕ್ಟ್‌ಗಳ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Also Read
ಭಾರತದ ಟಾಪ್ 10 ಹೀರೋಗಳು ಯಾರು? ಪ್ರಭಾಸ್.. ಅಲ್ಲು ಅರ್ಜುನ್.. ವಿಜಯ್ ಓಕೆ.. ಯಶ್ ಎಲ್ಲಿ?
ಭಾರತದ ಟಾಪ್ 10 ಹೀರೋಗಳು ಯಾರು? ಪ್ರಭಾಸ್.. ಅಲ್ಲು ಅರ್ಜುನ್.. ವಿಜಯ್ ಓಕೆ.. ಯಶ್ ಎಲ್ಲಿ?

ಹಾಗಂತ ಸಿನಿಮಾ ಬಗ್ಗೆ ಮಾತುಕತೆ ಅಷ್ಟೇ ಅಲ್ಲ. ಅಲ್ಲು ಅರ್ಜುನ್ ಪ್ರತಿಷ್ಠಿತ ಬ್ರ್ಯಾಂಡ್‌ಗಳ ಜಾಹೀರಾತಿನಲ್ಲಿಯೂ ನಟಿಸುತ್ತಿದ್ದಾರೆ. ಹೀಗಾಗಿ ಮುಂಬೈನ ಪ್ರತಿಷ್ಠಿತ ಏರಿಯಾದಲ್ಲಿ ಸೀ ಫೇಸಿಂಗ್ ಇರುವ ಬಾಡಿಗೆ ಮನೆಯನ್ನು ಖರೀದಿ ಮಾಡಿದ್ದಾರಂತೆ. ಇದಕ್ಕೆ ಬರೋಬ್ಬರಿ ತಿಂಗಳಿಗೆ 16 ಲಕ್ಷ ರೂಪಾಯಿ ಬಾಡಿಗೆ ಕಟ್ಟುತ್ತಿದ್ದಾರೆ ಎಂದು ಬಾಲಿವುಡ್‌ನಲ್ಲಿ ಗುಲ್ಲೆದ್ದಿದೆ. ಇದೊಂದು ಐಷಾರಾಮಿ ಅಪಾರ್ಟ್‌ಮೆಂಟ್ ಆಗಿದ್ದು, ಇಲ್ಲಿ ಅಲ್ಲು ಅರ್ಜುನ್ ಲೈಫ್ ಸ್ಟೈಲ್‌ಗೆ ಬೇಕಿರೋ ಎಲ್ಲಾ ಸೌಲಭ್ಯಗಳು ಇವೆ ಎಂದು ಹೇಳಲಾಗುತ್ತಿದೆ.

Buzz is that Allu Arjun paying huge Rs 16 lakh rent for his Mumbai house

ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಅಲ್ಲು ಅರ್ಜುನ್ ಮುಂಬೈನ ಜುಹುವಿನಲ್ಲಿ 5 ಬೆಡ್ ರೂಂ ಅಪಾರ್ಟ್‌ಮೆಂಟ್ ಖರೀದಿ ಮಾಡಿದ್ದಾರೆ. ಮೂರು ವರ್ಷಗಳಿಗೆ ತಿಂಗಳಿಗೆ 16 ಲಕ್ಷ ರೂಪಾಯಿ ಬಾಡಿಗೆಯಂತೆ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ ಎಂದು ವರದಿ ಆಗಿದೆ. ಅಲ್ಲು ಅರ್ಜುನ್ ತನ್ನ ಕೆಲಸವನ್ನು ಮುಂಬೈ ಹಾಗೂ ಹೈದರಾಬಾದ್ ಎರಡೂ ಕಡೆ ಹಂಚಿಕೆ ಮಾಡಿಕೊಂಡಿದ್ದು, ಅದಕ್ಕಾಗಿ ದುಬಾರಿ ಅಪಾರ್ಟ್‌ಮೆಂಟ್ ಅನ್ನು ಬಾಡಿಗೆ ಪಡೆದಿದ್ದಾರೆ ಎನ್ನಲಾಗಿದೆ.

ಇನ್ನು ಮಿಡ್ ಡೇ ವರದಿಯಲ್ಲಿ ಅಲ್ಲು ಅರ್ಜುನ್ ತನ್ನ ಪತ್ನಿ ಸ್ನೇಹಾ ಹಾಗೂ ಇಬ್ಬರು ಮಕ್ಕಳಿಗಾಗಿ ಬೀಚ್ ಸೈಡ್‌ನಲ್ಲಿರುವ ಅಪಾರ್ಟ್‌ಮೆಂಟ್ ಹುಡುಕುತ್ತಿದ್ದರು. ಇಬ್ಬರು ಮಕ್ಕಳು ಅಲ್ಲು ಅಯಾನ್ ಹಾಗೂ ಅಲ್ಲು ಅರ್ಹಾ ಶಾಲೆಗಳಿಗೆ ರಜೆ ಇದ್ದಾಗ ಅಲ್ಲು ಅರ್ಜುನ್ ಜೊತೆ ನೆಲೆಸುತ್ತಾರೆ. ಸುಮಾರು 6000 ಚದರ ಅಡಿಯ ಈ ಅಪಾರ್ಟ್‌ಮೆಂಟ್‌ನಲ್ಲಿ ಸ್ವಿಮ್ಮಿಂಗ್ ಪೂಲ್ ಹಾಗೂ 4 ಕಾರು ಪಾರ್ಕ್ ಮಾಡಬಹುದಾದ ಸೌಲಭ್ಯವಿದೆ ಎಂದು ವರದಿ ಮಾಡಿದೆ.

English summary
Buzz is that Allu Arjun paying huge Rs 16 lakh rent for his Mumbai house.
Read more about: allu arjun mumbai house
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X