Anushka Shetty: ತ್ರಿಶಾ ಮಾಡಿದ ಪಾತ್ರ ತಿರಸ್ಕರಿಸಿದ್ದ ಅನುಷ್ಕಾ ಶೆಟ್ಟಿ..? 2 ಕಾರಣಗಳಿಗೆ ಮಣಿರತ್ನಂ ಸಿನಿಮಾನೇ ರಿಜೆಕ್ಟ್?
ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ದಶಕಗಳ ಕಾಲ ಮಿಂಚಿದ ನಟಿ ಅನುಷ್ಕಾ ಶೆಟ್ಟಿ. 'ಅರುಂಧತಿ', 'ಬಾಹುಬಲಿ'ಯಂತಹ ಸಿನಿಮಾಗಳೇ ಅನುಷ್ಕಾ ಶೆಟ್ಟಿಯ ಸಿನಿಮಾ ಜರ್ನಿಯನ್ನು ಹೇಳುತ್ತವೆ. ರಾಜಮನೆತನದ ಹಿನ್ನೆಲೆಯುಳ್ಳ ಸಿನಿಮಾಗಳಲ್ಲಿ ಅನುಷ್ಕಾ ಶೆಟ್ಟಿಗೆ ಸಿಕ್ಕಷ್ಟು ಸಕ್ಸಸ್ ಮತ್ಯಾರಿಗೂ ಸಿಕ್ಕೇ ಇಲ್ಲ.
'ಬಾಹುಬಲಿ' ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿರೋ ಅನುಷ್ಕಾ ಶೆಟ್ಟಿ ಮನಸ್ಸು ಮಾಡಿದ್ದರೆ ಮತ್ತೊಂದು ಐತಿಹಾಸಿಕ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ, ಅನುಷ್ಕಾ ಶೆಟ್ಟಿ ಒಪ್ಪಲಿಲ್ಲ ಅಂತ ಕಾಲಿವುಡ್ ಮೂಲಗಳು. ಸದ್ಯ ಇಂತಹದ್ದೊಂದು ಸುದ್ದಿ ತಮಿಳು ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಮಣಿರತ್ನಂ ನಿರ್ದೇಶಿಸಿದ 'ಪೊನ್ನಿಯಿನ್ ಸೆಲ್ವನ್' ಸೀರಿಸ್‌ನಲ್ಲಿ ಅನುಷ್ಕಾ ಶೆಟ್ಟಿ ನಟಿಸಬೇಕಿತ್ತು. ಎರಡು ಕಾರಣಕ್ಕೆ ಟಾಲಿವುಡ್ ಸ್ವೀಟಿ ಈ ಸಿನಿಮಾದಿಂದ ಹೊರಬಂದರು ಅನ್ನೋದು ಗುಸುಗುಸು. ಅಸಲಿಗೆ ಅನುಷ್ಕಾ ಕೊಟ್ಟ ಎರಡು ಕಾರಣ ಯಾವುದು? ವೈರಲ್ ಆಗುತ್ತಿರೋ ಸುದ್ದಿಯೇನು?

'ಪೊನ್ನಿಯನ್ ಸೆಲ್ವನ್' ರಿಜೆಕ್ಟ್ ಮಾಡಿದ್ರಾ ಅನುಷ್ಕಾ?
'ಪೊನ್ನಿಯನ್ ಸೆಲ್ವನ್' ಸಿನಿಮಾಗೆ ನಿರ್ದೇಶಕ ಮಣಿರತ್ನಂ ಮೊದಲ ಆಯ್ಕೆ ತ್ರಿಶಾಗೂ ಮುನ್ನ ಅನುಷ್ಕಾ ಶೆಟ್ಟಿ ಆಗಿದ್ದರು. ತ್ರಿಶಾ ನಟಿಸಿದ ಕುಂದವಿ ಪಾತ್ರಕ್ಕೆ ಅನುಷ್ಕಾ ಶೆಟ್ಟಿಗೆ ಮೊದಲ ಅಪ್ರೋಚ್ ಮಾಡಲಾಗಿತ್ತು. 'ಅರುಂಧತಿ', 'ಬಾಹುಬಲಿ' ಅಂತಹ ಸಿನಿಮಾ ಮಾಡಿದ್ದರಿಂದ ಈ ಪಾತ್ರಕ್ಕೆ ಅನುಷ್ಕಾನೇ ಸೂಕ್ತ ಎಂದು ಮಣಿರತ್ನಂ ನಿರ್ಧರಿಸಿದ್ದರು ಎನ್ನಲಾಗಿದೆ. ಆದರೆ, ಅನುಷ್ಕಾ ಶೆಟ್ಟಿ ಎರಡು ಕಾರಣಗಳನ್ನು ಕೊಟ್ಟು ಈ ಸಿನಿಮಾದಿಂದ ಹೊರಬಂದಿದ್ದರು ಅನ್ನೋದು ಸದ್ಯದ ಸುದ್ದಿ.
ಆ ಎರಡು ಕಾರಣಗಳೇನು?
ಅನುಷ್ಕಾ ಶೆಟ್ಟಿ 'ಬಾಹುಬಲಿ' ಬಳಿಕ ದೊಡ್ಡ ಸಕ್ಸಸ್‌ಫುಲ್ ಸಿನಿಮಾವನ್ನು ಕೊಟ್ಟಿಲ್ಲ. ಒಂದ್ಮೇಲೆ 'ಪೊನ್ನಿಯಿನ್ ಸೆಲ್ಪನ್' ಒಪ್ಪಿದ್ದರೆ, ಮತ್ತೊಂದು ಮೆಗಾ ಸಕ್ಸಸ್ ಸಿಗುತ್ತಿತ್ತು ಅನ್ನೋದು ಹಲವರ ನಂಬಿಕೆ. ಆದರೆ, ಅನುಷ್ಕಾ ಶೆಟ್ಟಿ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದರು. ಅದಕ್ಕೆ ಪ್ರಮುಖ ಕಾರಣ ಸಂಭಾವನೆ. ಅನುಷ್ಕಾ ಈ ಸಿನಿಮಾದಲ್ಲಿ ನಟಿಸುವುದಕ್ಕೆ 4 ಕೋಟಿ ರೂಪಾಯಿ ಸಂಭಾವನೆ ಕೇಳಿದ್ದರು. ಆದರೆ, ಚಿತ್ರತಂಡ ಕೇವಲ 1 ಕೋಟಿ ರೂಪಾಯಿ ಆಫರ್ ಮಾಡಿತ್ತು ಎನ್ನಲಾಗಿದೆ. ಇನ್ನೊಂದು ತಮಿಳು ಸಿನಿ ಸಾಹಿತಿ ವೈರಮುತ್ತು.
ವೈರಮುತ್ತು ಸೀನ್‌ನಲ್ಲಿ ಬಂದಿದ್ದೇಗೆ?
ಅನುಷ್ಕಾ ಶೆಟ್ಟಿ 'ಪೊನ್ನಿಯನ್ ಸೆಲ್ವನ್' ಸಿನಿಮಾವನ್ನು ತಿರಸ್ಕರಿಸಲು ವೈರಮುತ್ತುನೂ ಕಾರಣ ಎನ್ನಲಾಗಿದೆ. ಮೀಟೂ ಪ್ರಕರಣದಲ್ಲಿ ತಮಿಳು ಸಿನಿ ಸಾಹಿತಿ ವೈರಮುತ್ತು ಹೆಸರು ಕೇಳಿಬಂದಿತ್ತು. ಆರಂಭದಲ್ಲಿ ಈ ಸಿನಿಮಾದ ಹಾಡುಗಳಿಗೆ ಇವರೇ ಸಾಹಿತ್ಯ ರಚಿಸುತ್ತಾರೆ ಅನ್ನೋ ಮಾತು ಕೇಳಿ ಬಂದಿತ್ತು. ಹೀಗಾಗಿ ಅನುಷ್ಕಾ 'ಪೊನ್ನಿಯನ್ ಸೆಲ್ವನ್' ಸಿನಿಮಾವನ್ನು ರಿಜೆಕ್ಟ್ ಮಾಡಿದ್ದರು ಎನ್ನಲಾಗಿದೆ.

ತ್ರಿಶಾ ಪಾಲಾದ ಅನುಷ್ಕಾ ಪಾತ್ರ?
ಅನುಷ್ಕಾ ಶೆಟ್ಟಿ ಈ ಸಿನಿಮಾವನ್ನು ರಿಜೆಕ್ಟ್ ಮಾಡುತ್ತಿದ್ದಂತೆ ಕುಂದವಿ ಪಾತ್ರ ತ್ರಿಶಾ ಪಾಲಾಯ್ತು. ಆದರೆ, ತ್ರಿಶಾಗೆ ಬಾಲಿವುಡ್ ನಟಿ ಐಶ್ವರ್ಯಾ ರೈ ನಟಿಸಿದ ನಂದಿನಿ ಪಾತ್ರ ಇಷ್ಟ ಆಗಿತ್ತು. ಅದಾಗಲೇ ಐಶ್ವರ್ಯಾ ಪಾಲಾಗಿದ್ದರಿಂದ ಕುಂದವಿ ಪಾತ್ರಕ್ಕೆ ತ್ರಿಶಾ ತೃಪ್ತಿ ಪಟ್ಟುಕೊಳ್ಳಬೇಕಾಯ್ತು. ಈ ಸಿನಿಮಾದಲ್ಲಿ ಐಶ್ವರ್ಯ ರೈ, ವಿಕ್ರಮ್, ಜಯಂ ರವಿ, ಕಾರ್ತಿ, ತ್ರಿಷಾ, ಪಾರ್ಥಿಪನ್, ಶರತ್‌ಕುಮಾರ್, ಐಶ್ವರ್ಯ ಲಕ್ಷ್ಮಿ, ಶೋಭಿತಾ ಧೂಳಿಪಾಲ ಸೇರಿದಂತೆ ಪ್ರಮುಖ ದಿಗ್ಗಜರು ನಟಿಸಿದ್ದರು.


Click it and Unblock the Notifications











