ರೋಜಾ ವಿರುದ್ಧ ಅನುಷ್ಕಾ ಶೆಟ್ಟಿ ಸ್ಪರ್ಧೆ? ಸ್ವೀಟಿ ಕಣಕ್ಕಿಳಿಸಿ ಸೇಡು ತೀರಿಸಿಕೊಳ್ತಾರಾ ಪವನ್ ಕಲ್ಯಾಣ್?
ಈಗ ಎಲ್ಲಿ ನೋಡಿದರೂ ಚುನಾವಣೆ ಬಗ್ಗೆನೇ ಚರ್ಚೆ. ದೇಶಾದ್ಯಂತ ಲೋಕಸಭಾ ಚುನಾವಣೆ ಬಗ್ಗೆ ಚರ್ಚೆಯಾಗುತ್ತಿದ್ದರೆ, ಆಂಧ್ರ ಪ್ರದೇಶದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಬಗ್ಗೆ ಜನರು ತಲೆ ಕೆಡಿಸಿಕೊಂಡಿದ್ದಾರೆ. ಅದರಲ್ಲೂ ಆಂಧ್ರ ವಿಧಾನ ಸಭೆ ಚುನಾವಣೆ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ. ಈ ಮಧ್ಯೆ ಕಳೆದ ಕೆಲವು ದಿನಗಳಿಂದ ಅನುಷ್ಕಾ ಶೆಟ್ಟಿ ಹೆಸರು ಕೇಳಿ ಬರುತ್ತಿದೆ.
ಈ ಬಾರಿ ಆಂಧ್ರ ವಿಧಾನಸಭೆಯ ಚುನಾವಣೆಯಲ್ಲಿ ಗೆಲ್ಲಲೇ ಬೇಕು ಅಂತ ಮೂರು ಪಕ್ಷಗಳು ಜಿದ್ದಾಜಿದ್ದಿಗೆ ಬಿದ್ದಿವೆ. ಒಂದು ಕಡೆ ಜಗನ್ ನಾಯಕತ್ವ ವೈಎಸ್‌ಆರ್ ಕಾಂಗ್ರೆಸ್, ಚಂದ್ರಬಾಬು ನಾಯ್ಡು ಮುಂದಾಳತ್ವದ ಟಿಡಿಪಿ ಹಾಗೂ ಪವನ್ ಕಲ್ಯಾಣ್ ಪಕ್ಷ ಜನಸೇನಾ ಪಕ್ಷ ಗಮನ ಸೆಳೆಯುತ್ತಿವೆ. ಹೀಗಾಗಿ ಈ ಬಾರಿ ಆಂಧ್ರ ಪ್ರದೇಶ ಚುನಾವಣೆಯಲ್ಲಿ ಸಿಕ್ಕಾಪಟ್ಟೆ ಫೈಟ್ ಅನ್ನು ನಿರೀಕ್ಷೆ ಮಾಡಬಹುದು.

ಈಗ ಟಾಲಿವುಡ್‌ನ ಸ್ಟಾರ್ ಹೀರೋಯಿನ್ ಅನುಷ್ಕಾ ಶೆಟ್ಟಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿರೋ ಬಗ್ಗೆ ಸುದ್ದಿ ಹರಿದಾಡುತ್ತಿದೆ. ತೆಲುಗು ಮಂದಿಯ ಫೇವರಿಟ್ ನಟಿ ಅನುಷ್ಕಾ ಶೆಟ್ಟಿಯನ್ನು ರಾಜಕೀಯಕ್ಕೆ ಕರೆದುಕೊಂಡು ಬರುವುದಕ್ಕೆ ಪವನ್ ಕಲ್ಯಾಣ್ ನಿರ್ಧರಿಸಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಅಸಲಿಗೆ ಈ ಸುದ್ದಿ ನಿಜವೇ ಆಗಿದ್ದರೆ, ಪವನ್ ಕಲ್ಯಾಣ್ ಮಾಸ್ಟರ್ ಪ್ಲ್ಯಾನ್ ಏನು? ಅನ್ನುವುದನ್ನು ತಿಳಿಯಲು ಮುಂದೆ ಓದಿ.
ಅನುಷ್ಕಾ ಶೆಟ್ಟಿ ರಾಜಕೀಯ ಎಂಟ್ರಿ ಪಕ್ಕಾನಾ?
ಅನುಷ್ಕಾ ಶೆಟ್ಟಿ ರಾಜಕೀಯಕ್ಕೆ ಪ್ರವೇಶ ಮಾಡುತ್ತಾರಾ? ಈ ಪ್ರಶ್ನೆಗೆ ಅಧಿಕೃತ ಉತ್ತರ ಇನ್ನೂ ಸಿಕ್ಕಿಲ್ಲ. ಆದರೆ, ಆಂಧ್ರ ರಾಜಕೀಯದಲ್ಲಿ ಕಳೆದ ಕೆಲವು ದಿನಗಳಿಂದ ಇಂತಹ ಸುದ್ದಿಯಂತೂ ಓಡಾಡುತ್ತಿದೆ. 'ಅರುಂಧತಿ', 'ಭಾಗಾಮತಿ', 'ಬಾಹುಬಲಿ' ಅಂತಹ ಮೆಗಾ ಸಿನಿಮಾಗಳಲ್ಲಿ ನಟಿಸಿರುವ ಅನುಷ್ಕಾ ಶೆಟ್ಟಿ ಚುನಾವಣೆಗೆ ಎಂಟ್ರಿ ಕೊಡುವುದು ಬಹುತೇಕ ಖಚಿತ ಅನ್ನುವ ಮಾತುಗಳು ಕೇಳಿಬರುತ್ತಿವೆ.
ಜನಸೇನಾ ಸೇರುತ್ತಾರಾ?
ಅನುಷ್ಕಾ ಶೆಟ್ಟಿ ಸಿಕ್ಕಾಪಟ್ಟೆ ಲೆಕ್ಕಾಚಾರ ಹಾಕಿ ರಾಜಕೀಯ ಎಂಟ್ರಿ ಕೊಡುತ್ತಿದ್ದಾರೆ ಅಂತ ಚರ್ಚೆ ಆಗುತ್ತಿದೆ. ಕಳೆದ ಕೆಲವು ದಿನಗಳಿಂದ ಅನುಷ್ಕಾ ಶೆಟ್ಟಿ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಜೊತೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಪವನ್ ಕಲ್ಯಾಣ್ ಅವರೇ ಅನುಷ್ಕಾರನ್ನು ರಾಜಕೀಯಕ್ಕೆ ಕರೆ ತರುತ್ತಿದ್ದಾರೆ ಅನ್ನೋ ಮಾತುಗಳು ಓಡಾಡುತ್ತಿವೆ. ಆದರೆ, ಅನುಷ್ಕಾ ಶೆಟ್ಟಿಯನ್ನು ಕರೆ ತರುವುದರ ಹಿಂದೊಂದು ಸೇಡಿನ ಕಥೆಯಿದೆ ಎಂದೂ ಚರ್ಚೆಯಾಗುತ್ತಿದೆ.

ಪವನ್ ಕಲ್ಯಾಣ್ Vs ರೋಜಾ
ಕಳೆದ ಕೆಲವು ದಿನಗಳಿಂದ ಪವನ್ ಕಲ್ಯಾಣ್ ಹಾಗೂ ರೋಜಾ ನಡುವೆ ಕಿತ್ತಾಟ ನಡೆಯುತ್ತಿದೆ. ರೋಜಾ ಆಗಾಗ ಪವನ್ ಕಲ್ಯಾಣ್ ವಿರುದ್ಧ ತಿರುಗಿ ಬೀಳುತ್ತಿದ್ದಾರೆ. ಇತ್ತೀಚೆಗಷ್ಟೇ ಪವನ್ ಕಲ್ಯಾಣ್ ಜೀವಮಾನದಲ್ಲಿ ಶಾಸಕರಾಗುವುದಿಲ್ಲ ಎಂದು ರೋಜಾ ಭವಿಷ್ಯ ನುಡಿದಿದ್ದರು. ಮತ್ತೊಂದು ಸಂದರ್ಭದಲ್ಲಿ "ಸಂಸ್ಕಾರದ ಬಗ್ಗೆ ಪವನ್ ಕಲ್ಯಾಣ್ ಮಾತನಾಡುವುದು ನೋಡುತ್ತಿದ್ದರೆ ಸನ್ನಿ ಲಿಯೋನ್ ಬಾಯಲ್ಲಿ ವೇದಗಳನ್ನು ಕೇಳಿದಂತಿದೆ" ಎಂದು ರೋಜಾ ವ್ಯಂಗ್ಯವಾಡಿದ್ದರು. ಹೀಗೆ ಪವನ್ ಕಲ್ಯಾಣ್‌ಗೆ ಟಕ್ಕರ್ ಕೊಡುತ್ತಿರುವ ರೋಜಾ ಕಟ್ಟಿ ಹಾಕಲು ಪವನ್ ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.
ರೋಜಾ Vs ಅನುಷ್ಕಾ ಶೆಟ್ಟಿ
ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ರೋಜಾ ಚಿತ್ತೂರು ಜಿಲ್ಲೆಯ ನಗಾರಿ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ. ಹೀಗಾಗಿ ಅದೇ ಕ್ಷೇತ್ರದಿಂದ ಅನುಷ್ಕಾ ಶೆಟ್ಟಿಯನ್ನು ನಿಲ್ಲಿಸಲು ಪವನ್ ಕಲ್ಯಾಣ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅನುಷ್ಕಾ ಶೆಟ್ಟಿ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಜನಸೇನಾ ಪಕ್ಷಗೆ ಬಹುಮತ ಬಂದರೆ, ಅನುಷ್ಕಾ ಶೆಟ್ಟಿ ಗೆದ್ದಿದ್ದೇ ಆದರೆ, ಮಂತ್ರಿ ಸ್ಥಾನ ನೀಡುವುದಾಗಿ ಆಫರ್ ಕೊಟ್ಟಿದ್ದಾರೆ ಎನ್ನಲಾಗಿದೆ. ಆದರೆ, ಪವನ್ ಕಲ್ಯಾಣ್ ಹಾಗೂ ಅನುಷ್ಕಾ ಶೆಟ್ಟಿ ಈ ಬಗ್ಗೆ ಅಧಿಕೃತವಾಗಿ ಎಲ್ಲೂ ಹೇಳಿಕೊಂಡಿಲ್ಲ.


Click it and Unblock the Notifications











