ಮಲೈಕಾ ಜೊತೆ ವಿಚ್ಛೇದನ ಪಡೆದ ಬಳಿಕ 2ನೇ ಮದುವೆಗೆ ಸಜ್ಜಾದ 56 ವರ್ಷದ ಅರ್ಬಾಜ್ ಖಾನ್‌? ಹುಡುಗಿ ಯಾರು?

ಬಾಲಿವುಡ್‌ನ ಎವರ್‌ಗ್ರೀನ್ ಬ್ಯೂಟಿ ಮಲೈಕಾ ಅರೋರಾ ಜೊತೆ ಅರ್ಬಾಜ್ ಖಾನ್ ವಿಚ್ಛೇದನ ಪಡೆದಿದ್ದರು. ಆ ಬಳಿಕ ಮಾಡಲ್ ಜಾರ್ಜಿಯಾ ಆಂಡ್ರಿಯಾನಿ ಜೊತೆ ಡೇಟಿಂಗ್ ಮಾಡುತ್ತಿದ್ದ ಸುದ್ದಿ ಬಾಲಿವುಡ್‌ನ ಗಲ್ಲಿಗಲ್ಲಿಯಲ್ಲೂ ಹಬ್ಬಿತ್ತು. ಇನ್ನೇನು ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡುತ್ತೆ ಅನ್ನುವಾಗಲೇ ನಾನೊಂದು ತೀರ, ನೀನೊಂದು ತೀರ ಅಂತ ಬೇರೆಯಾಗಿಬಿಟ್ರು.

ಗರ್ಲ್‌ಫ್ರೆಂಡ್ ಜೊತೆ ಅರ್ಬಾಜ್ ಖಾನ್ ಬ್ರೇಕಪ್ ಮಾಡಿಕೊಂಡ ಬಳಿಕ ಎರಡನೇ ಮದುವೆ ಸಜ್ಜಾಗಿದ್ದಾರೆ ಅನ್ನೋ ಸುದ್ದಿ ಬಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಕ್ರಿಸ್‌ಮಸ್ ಹಬ್ಬಕ್ಕೂ ಮುನ್ನ ಅರ್ಬಾಜ್ ಖಾನ್ ತನಗಿಂತ 22 ವರ್ಷ ಕಿರಿಯಳೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ. ಆದರೆ, ಈ ಬಗ್ಗೆ ಇನ್ನೂ ಅರ್ಬಾಜ್ ಖಾನ್ ಅಧಿಕೃತ ಮಾಹಿತಿ ಹೇಳಿಕೆ ಕೊಟ್ಟಿಲ್ಲ.

Buzz is that Arbaaz Khan getting married to bollywood makeup artist Shura Khan

ಅಂದ್ಹಾಗೆ 56 ವರ್ಷದ ಅರ್ಬಾಜ್ ಖಾನ್ ಜೊತೆ ತಳುಕು ಹಾಕಿಕೊಂಡಿರುವ ಹುಡುಗಿ ಹೆಸರು ಶುರಾ ಖಾನ್. ಬಾಲಿವುಡ್‌ನಲ್ಲಿ ಸೆಲೆಬ್ರೆಟಿಗಳ ಮೇಕಪ್ ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿದ್ದಾರೆ. ಅರ್ಬಾಜ್ ಖಾನ್ ನಿರ್ಮಾಣ ಮಾಡುತ್ತಿರುವ 'ಪಾಟ್ನಾ ಶುಕ್ಲಾ' ಸಿನಿಮಾದ ವೇಳೆ ಇಬ್ಬರಿಗೂ ಪರಿಚಯವಾಗಿ, ಅದು ಪ್ರೀತಿಗೆ ತಿರುಗಿದೆ ಅನ್ನೋದು ಬಾಲಿವುಡ್‌ನಲ್ಲಿ ಹರಿದಾಡುತ್ತಿರುವ ಸುದ್ದಿ.

ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಇತ್ತೀಚೆಗೆ ಸಿನಿಮಾಗಿಂತ ಹೆಚ್ಚಾಗಿ ತಮ್ಮ ವೈಯಕ್ತಿಕ ಕಾರಣಗಳಿಗಾಗಿ ಹೆಚ್ಚು ಸುದ್ದಿಯಲ್ಲಿದ್ದಾರೆ. 2016ರಲ್ಲಿ ಬಾಲಿವುಡ್ ನಟಿ, ಮಾಡಲ್ ಮಲೈಕಾ ಅರೋರಾ ಜೊತೆ ಬೇರೆಯಾಗಿರುವುದಾಗಿ ಘೋಷಣೆ ಮಾಡಿದ್ದರು. ಮೇ 11, 2017ರಲ್ಲಿ ಅಧಿಕೃತವಾಗಿ ತಮ್ಮ 19 ವರ್ಷಗಳ ದಾಂಪತ್ಯಕ್ಕೆ ಬ್ರೇಕ್ ಹಾಕಿದ್ದರು.

ಮಲೈಕಾ ಜೊತೆ ವಿಚ್ಛೇದನ ಪಡೆದ ಬಳಿಕ ಅರ್ಬಾಜ್ ಖಾನ್ ಮಾಡಲ್ ಜಾರ್ಜಿಯಾ ಆಂಡ್ರಿಯಾನಿ ಜೊತೆ ಡೇಟಿಂಗ್ ಮಾಡುತ್ತಿದ್ದರು. ಇಬ್ಬರು ಇನ್ನೇನು ಮದುವೆ ಆಗೇ ಬಿಡುತ್ತಾರೆ ಅಂತಲೂ ಸುದ್ದಿ ಓಡಾಡಿತ್ತು. ಆದರೆ, ಜಾರ್ಜಿಯಾ ಆಂಡ್ರಿಯಾನಿ ಪಿಂಕ್ ವಿಲ್ಲಾಗೆ ನೀಡಿದ ಸಂದರ್ಶನದಲ್ಲಿ ಅರ್ಬಾಜ್ ಜೊತೆ ಬ್ರೇಕಪ್ ಮಾಡಿಕೊಂಡಿರುವ ಸುದ್ದಿಯನ್ನು ಖಚಿತ ಪಡಿಸಿದ್ದರು.

Buzz is that Arbaaz Khan getting married to bollywood makeup artist Shura Khan

ಶುರಾ ಖಾನ್ ಬಾಲಿವುಡ್‌ನಲ್ಲಿ ಸೆಲೆಬ್ರೆಟಿಗಳ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅದರಲ್ಲೂ ಬಾಲಿವುಡ್ ನಟಿ ರವೀನಾ ಟಂಡನ್ ಹಾಗೂ ಅವರ ಪುತ್ರಿ ರಶಾ ಟಂಡನ್ ಜೊತೆ ಹೆಚ್ಚು ಕ್ಲೋಸ್ ಆಗಿದ್ದಾರೆ. ಬಾಲಿವುಡ್ ತಾರೆಯರೊಂದಿಗೆ ನಂಟು ಹೊಂದಿದ್ದರೂ, ಶುರಾ ಖಾನ್ ತೆರೆಮರೆಯಲ್ಲಿ ಇದ್ದಾರೆ.

ಈಗ ಹಬ್ಬಿರುವ ಸುದ್ದಿಯ ಪ್ರಕಾರ ಡಿಸೆಂಬರ್ 24ರಂದು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಅರ್ಬಾಜ್ ಮತ್ತು ಶುರಾ ಖಾನ್ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಕೇವಲ ಎರಡು ಕುಟುಂಬದ ಆಪ್ತರಷ್ಟೇ ಈ ಮದುವೆ ಸಮಾರಂಭದಲ್ಲಿ ಭಾಗಿಯಾಗುತ್ತಿರೋ ಬಗ್ಗೆ ವರದಿಯಾಗಿದೆ. ಆದರೆ, ಇಬ್ಬರೂ ತಮ್ಮ ಮದುವೆ ಬಗ್ಗೆ ಅಧಿಕೃತವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ.

More from Filmibeat

English summary
Buzz: Arbaaz Khan marriage with makeup artist Shura Khan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X