ಮದುವೆ ಕರೆಯೋಕೆ ಶುರು ಮಾಡಿದ್ರಾ ಚೈತ್ರಾ ಕುಂದಾಪುರ? ಗಂಗಮ್ಮಜ್ಜಿಯಿಂದನೂ ಸಿಕ್ಕಿತು ನಾಲ್ಕು ಟಿಪ್ಸ್!
ಬಿಗ್‌ಬಾಸ್ ಕನ್ನಡ ಸೀಸನ್ 11 ರಲ್ಲಿ ಫೈಯರ್ ಬ್ರ್ಯಾಂಡ್ ಅಂತಲೇ ಜನಪ್ರಿಯರಾಗಿದ್ದ ಚೈತ್ರಾ ಕುಂದಾಪುರ ಮತ್ತೆ ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್ ಅಂತಹ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಬಳಿಕ ಸುಮ್ಮನೆ ಕೂತಿರಲಿಲ್ಲ. ಕಲರ್ಸ್ ಕನ್ನಡದಲ್ಲಿಯೇ ಆರಂಭ ಆಗಿದ್ದ ಮತ್ತೊಂದು ರಿಯಾಲಿಟಿ ಶೋ ಬಾಯ್ಸ್ Vs ಗರ್ಲ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಈಗ ಅದೂ ಮುಗಿಯುತ್ತಿದ್ದಂತೆ ಮದುವೆ ಬಗ್ಗೆ ಚರ್ಚೆ ಶುರುವಾಗಿದೆ.
ಬಿಗ್ ಬಾಸ್ ಮನೆಯೊಳಗೆ ಇರುವಾಗಲೇ ಚೈತ್ರಾ ಕುಂದಾಪುರ ಮದುವೆ ಬಗ್ಗೆ ಪ್ರಸ್ತಾಪ ಮಾಡಿದ್ದರು. ಎಂಗೇಜ್ಮೆಂಟ್ ಮಾಡಿಕೊಂಡೇ ಬಿಗ್ ಬಾಸ್ ಮನೆಯೊಳಗೆ ಬಂದಿದ್ದೇನೆ ಎಂದು ಹೇಳಿದ್ದರು. ಅಲ್ಲಿಂದ ಇವರ ಮದುವೆ ಯಾವಾಗ ಅಂತ ನೆಟ್ಟಿಗರು ಪ್ರಶ್ನೆ ಮಾಡುತ್ತಲೇ ಇದ್ದಾರೆ. ಚೈತ್ರಾ ಕುಂದಾಪುರ ಕೂಡ ಮದುವೆ ಬಗ್ಗೆ ಕೇಳಿದಾಗಲೆಲ್ಲಾ ನಾಚಿ ನೀರಾಗುತ್ತಲೇ ಇದ್ದಾರೆಯೇ ಹೊರತು ಮದುವೆ ಯಾವಾಗ ಅನ್ನೋದನ್ನು ಮಾತ್ರ ರಿವೀಲ್ ಮಾಡುತ್ತಿಲ್ಲ.

ಇತ್ತೀಚೆಗೆ ಚೈತ್ರಾ ಕುಂದಾಪುರ ಕಲರ್ಸ್ ಕನ್ನಡದ ಮತ್ತೊಂದು ಕಾಮಿಡಿ ಶೋ ಮಜಾ ಟಾಕೀಸ್‌ಗೆ ಅತಿಥಿಯಾಗಿ ಆಗಮಿಸಿದ್ದರು. ಅಲ್ಲೂ ಕೂಡ ಸೃಜನ್ ಲೋಕೇಶ್ ಚೈತ್ರಾ ಕುಂದಾಪುರ ಮದುವೆ ಆಗುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಚೈತ್ರಾ ಅವರ ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯನ್ನು ಹಿಡಿದು ತಿರುಗಿತ್ತಿದ್ದಾರೆ ಅಂತ ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಅಸಲಿಗೆ ಮಾಜಿ ಬಿಗ್ ಬಾಸ್ ಸ್ಪರ್ಧಿ ಮದುವೆಯ ಆಮಂತ್ರಣ ಪತ್ರಿಕೆಯನ್ನು ಹಂಚಿತ್ತಿದ್ದಾರಾ? ಮದುವೆ ಬಗ್ಗೆ ಏನಾದರೂ ಸುಳಿವು ಕೊಟ್ರಾ? ತಿಳಿಯುವುದಕ್ಕೆ ಮುಂದೆ ಓದಿ.
ವೀಕೆಂಡ್‌ನಲ್ಲಿ ಕಾಮಿಡಿ ಕಿಕ್ ಕೊಡುತ್ತಿರುವ ಮಜಾ ಟಾಕೀಸ್‌ನಲ್ಲಿ ಅನುಷಾ ರೈ, ಕೀರ್ತಿ ಧರ್ಮರಾಜ್ ಹಾಗೂ ಚೈತ್ರಾ ಕುಂದಾಪುರ ಅತಿಥಿಗಳಾಗಿ ಬಂದಿದ್ದರೆ. ಈ ಕಾರ್ಯಕ್ರಮದಲ್ಲಿ ಚೈತ್ರಾ ಕುಂದಾಪುರ ಮದುವೆ ಮ್ಯಾಟರ್ ಕೂಡ ಬಂದಿದೆ. ಕೆಲವು ದಿನಗಳಿಂದ ಚೈತ್ರಾ ಈ ಮ್ಯಾಟರ್ ಅನ್ನು ರಹಸ್ಯವಾಗಿಯೇ ಇಟ್ಟಿದ್ದಾರೆ. ಅದು ಈ ಶೋನಲ್ಲಿ ರಿವೀಲ್ ಆಗುವ ಸಾಧ್ಯತೆಯಿದೆ. ಸ್ವತ: ಸೃಜನ್ ಲೋಕೇಶ್ ಬಾಯಲ್ಲಿ ಚೈತ್ರಾ ಕುಂದಾಪುರ ಮದುವೆ ಆಗುತ್ತಿದ್ದಾರೆ. ಟಿಪ್ಟ್ ಕೊಡಿ ಎಂದು ತಮಾಷೆ ಕಾಲೆಳೆದಿದ್ದಾರೆ.
ಇದೇ ವಿಡಿಯೋದಲ್ಲಿ ಗಂಗಮ್ಮಜ್ಜಿ ಕೂಡ ಸುಖ ಸಂಸಾರಕ್ಕೆ ಕೆಲವು ಸೂತ್ರಗಳನ್ನು ಹೇಳಿ ಕೊಟ್ಟಿದ್ದಾರೆ. ಮನೆ ಮುಂದೆ ಹೇಗೆ ರಂಗೋಲಿ ಬಿಡಬೇಕು? ಗಂಡ ಪಕ್ಕದಲ್ಲಿಯೇ ಇದ್ದಾಗ ಹೇಗೆ ರೊಮ್ಯಾಂಟಿಕ್ ಆಗಿ ಮಾತಾಡಿಸಬೇಕು? ಇಂತಹದ್ದೇ ಒಂದಿಷ್ಟು ಟಿಪ್ಸ್ ಅನ್ನು ಕೊಟ್ಟಿದ್ದು, ವೀಕೆಂಡ್‌ನಲ್ಲಿ ಈ ಶೋ ಪ್ರಸಾರ ಆಗುತ್ತಿದೆ. ಅಲ್ಲಿ ಚೈತ್ರಾ ಕುಂದಾಪುರ ಮದುವೆ ಮ್ಯಾಟರ್ ರಿವೀಲ್ ಆಗಬಹುದು.
ಇದೇ ವೇಳೆ ಸೋಶಿಯಲ್ ಮೀಡಿಯಾದಲ್ಲಿ ಚೈತ್ರಾ ಕುಂದಾಪುರ ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯನ್ನು ಹಿಡಿದುಕೊಂಡಿದ್ದಾರೆಂಬ ವಿಡಿಯೋವನ್ನ ಶೇರ್ ಮಾಡುತ್ತಿದ್ದಾರೆ. ಅದು 'ಬಾಯ್ಸ್ Vs ಗರ್ಲ್ಸ್' ರಿಯಾಲಿಟಿ ಶೋ ನಡೆಯುವಾಗ ಸೆಟ್‌ಗೆ ಹೋಗಿದ್ದ ಚೈತ್ರಾ ಕುಂದಾಪುರ ಕೈಯಲ್ಲಿ ಬ್ಯಾಗ್ ಹಿಡಿದುಕೊಂಡು ಹೋಗಿದ್ದರು. ಅದರಲ್ಲಿ ಇರುವುದು ಅವರ ಮದುವೆಯ ಆಮಂತ್ರಣ ಪತ್ರಿಕೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಏನೇ ಇದ್ದರೂ ಸದ್ಯಕ್ಕೆ ಚೈತ್ರಾ ಮದುವೆ ಆಗುತ್ತಿರೋದಂತೂ ಸತ್ಯ. ಆದರೆ, ಯಾವಾಗ ಅನ್ನೋದು ಮಾತ್ರ ಇನ್ನೂ ರಿವೀಲ್ ಆಗಿಲ್ಲ.
ಇನ್ನು ಬಿಗ್ ಬಾಸ್ ಮನೆಯಲ್ಲಿ ತಮ್ಮ ಮದುವೆ ನಿಶ್ವಯವಾಗಿರುವ ಬಗ್ಗೆ ಚೈತ್ರಾ ಕುಂದಾಪುರ ಹೇಳಿಕೊಂಡಿದ್ದರು. ಆದರೆ, ಹುಡುಗ ಯಾರು ಅನ್ನೋದನ್ನು ರಿವೀಲ್ ಮಾಡಿರಲಿಲ್ಲ. ಚೈತ್ರಾ ಕುಂದಾಪುರ ಮದುವೆ ಆಗುವ ಹುಡುಗ ರಿಂಗ್ ಕೊಟ್ಟಿದ್ದರು. ಅದನ್ನು ಟಾಸ್ಕ್ ಒಂದರಲ್ಲಿ ಕಳೆದುಕೊಂಡಿದ್ದರು. ಆವೇಳೆ ಈ ವಿಷಯವನ್ನು ಹೇಳಿಕೊಂಡು ಕಣ್ಣೀರು ಹಾಕಿದ್ದರು. ಬಳಿಕ ಬಿಗ್ ಬಾಸ್ ಆ ಉಂಗುರವನ್ನು ಹುಡುಕಿಕೊಟ್ಟಿತ್ತು. ಸದ್ಯ ಮಜಾ ಟಾಕೀಸ್‌ಯಲ್ಲಿ ಚೈತ್ರಾ ಕುಂದಾಪುರ ಮದುವೆ ವಿಷಯ ಹೈಲೈಟ್ ಆಗುತ್ತಿದೆ.


Click it and Unblock the Notifications











