BBK 11: ಈ ವಾರ ಬಿಗ್‌ಬಾಸ್ ಮನೆಯಿಂದ ಅಚ್ಚರಿಯ ಎಲಿಮಿನೇಷನ್; ಹೊರಬಿದ್ದರೇ 'ನವಗ್ರಹ' ನಟ?
ಬಿಗ್ ಬಾಸ್ ಕನ್ನಡ ಸೀಸನ್ 11 ದಿನದಿಂದ ದಿನಕ್ಕೆ ರೋಚಕ ಘಟ್ಟ ತಲುಪುತ್ತಿದೆ. ಮನೆಯೊಳಗಿರುವ ಸ್ಪರ್ಧಿಗಳು ಮೈಂಡ್ ಗೇಮ್ ಮಾಡಿ ನಾಮಿನೇಷನ್ ಮಾಡುತ್ತಿದ್ದಾರೆ. ಇದರಲ್ಲಿ ಕೆಲವರ ಲೆಕ್ಕಚಾರ ಕೈ ಹಿಡಿದಿದೆ. ಅದೇ ಮತ್ತೆ ಕೆಲವರ ಲೆಕ್ಕಾಚಾರ ಕೈ ಕೊಟ್ಟಿದೆ. ಇನ್ನು ಕೆಲವರು ಬಿಗ್ ಬಾಸ್ ಮನೆಯೊಳಗೆ ಹೊಂದಿಕೊಳ್ಳುವುದಕ್ಕೆ ಇನ್ನೂ ಕಷ್ಟ ಪಡುತ್ತಿದ್ದಾರೆ.
ಪ್ರತಿ ವೀಕೆಂಡ್ ಬಂತು ಅಂದರೆ, ಎಲಿಮಿನೇಷನ್ ಪ್ರಕ್ರಿಯೆ ಹೇಗಿರುತ್ತೋ? ಈ ವಾರ ಯಾರು ಮನೆಯಿಂದ ಹೊರಗೆ ಹೋಗುತ್ತಾರೋ ಅನ್ನು ಕುತೂಹಲ ಹೆಚ್ಚಾಗುತ್ತೆ. ಇಂದು (ನವೆಂಬರ್ 24) ಬಿಗ್ ಬಾಸ್ ಮನೆಯಿಂದ ಒಬ್ಬರು ಹೊರ ಬರುವುದು ಗ್ಯಾರಂಟಿ. ಆದರೆ, ಎಪಿಸೋಡ್ ಪ್ರಸಾರ ಆಗುವುದಕ್ಕೂ ಮುನ್ನವೇ ಹೊರ ಬಂದಿರುವ ಸ್ಪರ್ಧಿ ಇವರೇ ಅಂತ ಚರ್ಚೆ ಆಗುವುದಕ್ಕೆ ಶುರುವಾಗಿದೆ.

ಶೋಭಾ ಶೆಟ್ಟಿ ಹಾಗೂ ರಜತ್ ಇಬ್ಬರೂ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಮೇಲೆ ಬಿಗ್‌ಬಾಸ್ ಮನೆ ರಂಗೇರಿದೆ. ಮೈಂಡ್ ಗೇಮ್, ಗಲಾಟೆ, ಕಿತ್ತಾಟ ಎಲ್ಲವೂ ಹೆಚ್ಚಾಗಿದೆ. ಹೀಗಾಗಿ ಈ ವಾರ ಎಲಿಮಿನೇಷನ್ ಕುತೂಹಲ ಸೃಷ್ಟಿಸಿದೆ. ಹಾಗಿದ್ದರೆ, ಈ ವಾರ ಬಿಗ್ ಬಾಸ್ ಮನೆಯಿಂದ ಹೊರಬಂದ ಸ್ಪರ್ಧಿ ಇವರೇನಾ? ಯಾರದು ತಿಳಿಯಲು ಮುಂದೆ ಓದಿ..
ಬಿಗ್ ಬಾಸ್ ಮನೆಯಲ್ಲಿ ಮಿಸ್ಟರ್ ಡಿಪ್ಲಾಮೆಟಿಕ್ ಅಂತಲೇ ಕರೆಸಿಕೊಳ್ಳುವ ಧರ್ಮ ಕೀರ್ತಿರಾಜ್ ಎಲಿಮಿನೇಟ್ ಆಗಿದ್ದಾರೆ ಅನ್ನೋದು ಸುದ್ದಿ. ಬಿಗ್ ಬಾಸ್ ಮನೆಯೊಳಗೆ ಪ್ರಮೇಶ ಪಡೆದ ದಿನದಿಂದ ಧರ್ಮ ಕೀರ್ತಿರಾಜ್ ತಾನಾಯ್ತು. ತನ್ನ ಟಾಸ್ಕ್ ಆಯ್ತು ಅಂತ ಇದ್ದಿದ್ದು ಹೆಚ್ಚು. ಎಲ್ಲರೊಂದಿಗೂ ಚೆನ್ನಾಗಿ ಇರಬೇಕು ಅನ್ನುವ ಮನಸ್ಥಿತಿಯಲ್ಲೇ ಇಲ್ಲಿವರೆಗೂ ಇದ್ದರು. ಅಲ್ಲದೆ ಜಗಳ ಬಿಡಿಸುವುದರಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದರು.

ಈ ವಾರ ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಏಳು ಮಂದಿ ನಾಮಿನೇಟ್ ಆಗಿದ್ದರು. ಅದರಲ್ಲಿ ಧರ್ಮ ಕೀರ್ತಿರಾಜ್ ಕೂಡ ಒಬ್ಬರು. ಇವರೊಂದಿಗೆ ಚೈತ್ರಾ ಕುಂದಾಪುರ, ತ್ರಿವಿಕ್ರಮ್, ಮೋಕ್ಷಿತಾ, ಗೌತಮಿ ಜಾದವ್, ಉಗ್ರಂ ಮಂಜು ಹಾಗೂ ಹನುಮಂತ ನಾಮಿನೇಟ್ ಆಗಿದ್ದರು. ಇವರಲ್ಲಿ ಯಾರು ಬಿಗ್ ಬಾಸ್ ಮನೆಯಿಂದ ಹೊರ ಹೋಗಬಹುದು ಅನ್ನುವ ಲೆಕ್ಕಾಚಾರ ಈ ವಾರ ಪೂರ್ತಿ ನಡೆಯುತ್ತಲೇ ಇತ್ತು.
ನಿನ್ನೆ (ನವೆಂಬರ್ 23) ಕಿಚ್ಚ ಸುದೀಪ್ ಇಬ್ಬರು ಸ್ಪರ್ಧಿಗಳನ್ನು ಸೇಫ್ ಮಾಡಿದ್ದಾಗಿದೆ. ಕಿರುತೆರೆ ನಟಿ ಮೋಕ್ಷಿತಾ ಹಾಗೂ ಹನುಮಂತ ಈ ವಾರದ ಎಲಿಮಿನೇಷನಿಂದ ಪಾರಾಗಿದ್ದಾರೆ. ಇನ್ನು ಉಳಿದವರು ಈ ವಾರ ಸೇಫ್ ಆಗಲಿದ್ದು, 'ನವಗ್ರಹ' ನಟ ಧರ್ಮ ಕೀರ್ತಿರಾಜ್ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬಿದ್ದಿದ್ದಾರೆ. ಅನುಷಾ ರೈ ಔಟ್ ಆದ ಬೆನ್ನಲ್ಲೇ ಧರ್ಮ ಕೂಡ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗಿದೆ.
ಧರ್ಮ ಕೀರ್ತಿರಾಜ್ ಬಿಗ್ ಬಾಸ್ ವೇದಿಕೆಯನ್ನು ಉತ್ತಮವಾಗಿ ಬಳಸಿಕೊಳ್ಳಬಹುದಿತ್ತು. ಆದರೆ, ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟ ದಿನದಿಂದ ಸೈಲೆಂಟ್ ಆಗಿ ಕಂಡಿದ್ದೇ ಹೆಚ್ಚು. ಇನ್ನೂ ಹೆಚ್ಚು ಸದ್ದು ಮಾಡಬೇಕಿತ್ತು ಅನ್ನೋದು ಸೋಶಿಯಲ್ ಮೀಡಿಯಾದ ಆಗುತ್ತಿರುವ ಚರ್ಚೆ. ಧರ್ಮ ಕೀರ್ತಿರಾಜ್‌ಗೆ ಬಿಗ್ ಬಾಸ್ ವೇದಿಕೆ ಕೂಡ ವರ್ಕ್‌ಔಟ್ ಆಗಿಲ್ಲ. ಚರ್ಚೆಯಾಗುತ್ತಿರುವಂತೆ ಧರ್ಮ ಬಿಗ್ ಬಾಸ್ ಎಲಿಮಿನೇಟ್ ಆಗಿದ್ದರೆ, ಮುಂದೇನು ಅವರ ನಡೆ ಏನು ಅನ್ನೋದು ಇಂದು (ನವೆಂಬರ್ 24) ಕಿಚ್ಚ ಸುದೀಪ್ ಮುಂದೆ ರಿವೀಲ್ ಆಗಲಿದೆ.


Click it and Unblock the Notifications











