Chiranjeevi:ವಿಜಯ್ ಜೊತೆ ಬ್ರೇಕಪ್ ಸುದ್ದಿಯನ್ನು ಬಹಿರಂಗ ಪಡಿಸುವಂತೆ ತಮನ್ನಾಗೆ ಹೇಳಿದ್ರಾ ಚಿರಂಜೀವಿ?
ಮಿಲ್ಕಿ ಬ್ಯೂಟಿ ತಮನ್ನಾ ಬಾಟಿಯಾ ಈಗ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿಲ್ಲ. ಅವರ ಗಮನ ಏನಿದ್ದರೂ ಬಾಲಿವುಡ್ ಪ್ರಾಜೆಕ್ಟ್‌ಗಳ ಕಡೆಗೆ ಹೆಚ್ಚಿದೆ. ಹೀಗಾಗಿ ಕೆಲವು ವರ್ಷಗಳಿಂದ ಬಾಲಿವುಡ್ ಸಿನಿಮಾ ಹಾಗೂ ವೆಬ್ ಸೀರಿಸ್‌ಗಳಲ್ಲೇ ಹೆಚ್ಚಾಗಿ ಕಾಣಿಸುತ್ತಿದ್ದಾರೆ. ಈ ಮಧ್ಯೆ ತಮನ್ನಾಗೆ ನಟ ವಿಜಯ್ ವರ್ಮಾ ಜೊತೆ ಲವ್ ಬೇರೆ ಆಗಿತ್ತು.
ಎರಡು ವರ್ಷ ತಮನ್ನಾ ಬಾಟಿಯಾ ಹಾಗೂ ವಿಜಯ್ ವರ್ಮಾ ಇಬ್ಬರೂ ಡೇಟಿಂಗ್ ಮಾಡಿದ್ದರು. ಆದ್ರೀಗ ಈ ಜೋಡಿ ಬ್ರೇಕಪ್ ಮಾಡಿಕೊಂಡಿದೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಆದರೆ, ಇಬ್ಬರೂ ಅಧಿಕೃತವಾಗಿ ತಮ್ಮ ಬ್ರೇಕಪ್ ಬಗ್ಗೆ ಬಹಿರಂಗವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ. ಇಂತಹದ್ದೊಂದು ಸುದ್ದಿ ಹೊರಬಿದ್ದ ಬೆನ್ನಲ್ಲೇ ರವೀನಾ ಟಂಡನ್ ಆಯೋಜಿಸಿದ ಹೋಳಿ ಪಾರ್ಟಿಯಲ್ಲಿ ಇವರಿಬ್ಬರೂ ಭಾಗವಹಿಸಿದ್ದರು.

ಇಷ್ಟೆಲ್ಲ ಸುದ್ದಿಗಳು ಹರಿದಾಡುತ್ತಿರುವಾಗಲೇ ತಮನ್ನಾ ಬಾಟಿಯಾ ಹಾಗೂ ವಿಜಯ್ ವರ್ಮಾ ಮಧ್ಯೆ ಮೆಗಾಸ್ಟಾರ್ ಚಿರಂಜೀವಿ ಪ್ರವೇಶ ಮಾಡಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ತಮನ್ನಾಗೆ ತಮ್ಮ ಬ್ರೇಕಪ್ ಸುದ್ದಿಯನ್ನು ಮಾಧ್ಯಮಗಳ ಮುಂದೆ ಬಹಿರಂಗ ಪಡಿಸುವಂತೆ ಸಲಹೆ ನೀಡಿದ್ದಾರಂತೆ. ಅಸಲಿಗೆ ಇವರಿಬ್ಬರ ಮಧ್ಯೆ ಚಿರಂಜೀವಿ ಎಂಟ್ರಿ ಕೊಟ್ಟಿದ್ದೇಕೆ? ತಮನ್ನಾ-ವಿಜಯ್ ಮ್ಯಾಟರ್ ಅಷ್ಟೊಂದು ಗಂಭೀರವಾಗಿದೆಯೇ? ತಿಳಿಯಲು ಮುಂದೆ ಓದಿ.
ತಮನ್ನಾ-ವಿಜಯ್ ವಿಡಿಯೋ ವೈರಲ್
ಡಿಸೆಂಬರ್, 2022 ತಮನ್ನಾ ಬಾಟಿಯಾ ಹಾಗೂ ವಿಜಯ್ ವರ್ಮಾ ಇಬ್ಬರೂ ಗೋವಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇಲ್ಲಿಂದ ಇವರಿಬ್ಬರ ಲವ್ ಸ್ಟೋರಿ ಜೋರಾಗಿಯೇ ಸದ್ದು ಮಾಡುವುದಕ್ಕೆ ಶುರುಮಾಡಿತ್ತು. ಹೊಸ ವರ್ಷದ ಸಂಭ್ರಮದಲ್ಲಿಈ ಜೋಡಿ ಜೊತೆಯಾಗಿ ಪಾರ್ಟಿ ಮಾಡಿದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡಿತ್ತು. ಆ ಬಳಿಕ ಇಬ್ಬರ ಬಹಿರಂಗವಾಗಿಯೇ ಕಾಣಿಸಿಕೊಳ್ಳುವುದಕ್ಕೆ ಶುರು ಮಾಡಿದ್ದರು.

ಡೇಟಿಂಗ್ ಬಹಿರಂಗ ಪಡಿಸಿದ್ದ ತಮನ್ನಾ
ಹೆಚ್ಚು ಕಡಿಮೆ ಒಂದು ವರ್ಷ ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ರಹಸ್ಯವಾಗಿ ಡೇಟಿಂಗ್ ಮಾಡಿದ್ದರು. ಆ ಬಳಿಕ ಖುದ್ದಾಗಿ ನಟಿ ತಮನ್ನಾ ಅವರೇ ಈ ವಿಷಯವನ್ನು ಬಹಿರಂಗ ಪಡಿಸಿದ್ದರು. 'ಲಸ್ಟ್ ಸ್ಟೋರೀಸ್ 2' ಶೂಟಿಂಗ್ ವೇಳೆ ಇಬ್ಬರಿಗೂ ಲವ್ ಆಗಿತ್ತು ಅನ್ನೋದನ್ನು ತಮನ್ನಾ ಅವರೇ ಬಹಿರಂಗ ಪಡಿಸಿದ್ದರು. ಬಳಿಕ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುವುದಕ್ಕೆ ಶುರು ಮಾಡಿದ್ದರು.
ಅಪ್ಪನಿಗೆ ಇಷ್ಟವಿರಲಿಲ್ಲ
ಆರಂಭದ ದಿನಗಳಲ್ಲಿ ವಿಜಯ್ ವರ್ಮಾ ಜೊತೆ ಡೇಟಿಂಗ್ ಮಾಡುವುತ್ತಿರುವುದು ತಮನ್ನಾ ತಂದೆಗೆ ಇಷ್ಟವಿರಲಿಲ್ಲ. ಬಳಿಕ ಇಬ್ಬರ ಮದುವೆಗೆ ಒಪ್ಪಿಗೆ ನೀಡಿದ್ದರು. ಆದರೆ, ಆ ವೇಳೆ ತಮನ್ನಾ ಮನಸ್ಸು ಬದಲಿಸಿದ್ದರು. ವಿಜಯ್ ವರ್ಮಾ ತನಗೆ ಕಮಿಟ್ ಆಗಿಲ್ಲ ಎಂದು ಹೇಳಿದ್ದರು. ಅಲ್ಲದೆ ಪ್ರತಿ ಬಾರಿ ವಿಜಯ್ ಜೊತೆಯಲ್ಲಿ ಕಾಣಿಸಿಕೊಳ್ಳುವುದು ಇಷ್ಟ ಆಗಿತ್ತಿಲ್ಲ ಎಂದು ತಮನ್ನಾ ಹೇಳಿದ್ದರು ಎಂದು ಸೋಶಿಯಲ್ ಮೀಡಿಯಾ ಇನ್ಪ್ಯೂಯೆನ್ಸೆರ್ ವಿಕ್ಕಿ ಲಾಲ್ವಾನಿ ಹೇಳಿದ್ದಾರೆಂದು ವೈರಲ್ ಬಯಾನಿ ಪೋಸ್ಟ್ ಮಾಡಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ಎಂಟ್ರಿ
ತಮನ್ನಾ ಹಾಗೂ ವಿಜಯ್ ವರ್ಮಾ ಬ್ರೇಕಪ್ ಮ್ಯಾಟರ್‌ಗೆ ಮೆಗಾಸ್ಟಾರ್ ಚಿರಂಜೀವಿ ಎಂಟ್ರಿ ಕೊಟ್ಟಿದ್ದಾರೆ. ಚಿರಂಜೀವಿ ಕುಟುಂಬದೊಂದಿಗೆ ತಮನ್ನಾ ಫ್ಯಾಮಿಲಿ ಉತ್ತಮ ಒಡನಾಟ ಇಟ್ಟುಕೊಂಡಿದ್ದು, ಬ್ರೇಕಪ್ ಮ್ಯಾಟರ್ ಅನ್ನು ತಮನ್ನಾ ಮಾಧ್ಯಮಕ್ಕೆ ಬಹಿರಂಗಗೊಳಿಸುವುದು ಉತ್ತಮವೆಂದು ಸಲಹೆ ನೀಡಿದ್ದಾರೆಂದು ಇದೇ ಪೋಸ್ಟ್‌ನಲ್ಲಿ ಹೇಳಲಾಗಿದೆ. ಅಷ್ಟಕ್ಕೂ ಚಿರಂಜೀವಿ ಎಂಟ್ರಿ ಏಕೆ? ತಮನ್ನಾ ವಿಜಯ್ ನಡುವೆ ಏನಾದರೂ ಸಮಸ್ಯೆ ಇದೆಯಾ? ಅನ್ನೋ ಪ್ರಶ್ನೆ ಅಂತೂ ಮೂಡಿದೆ.


Click it and Unblock the Notifications











