BBK 12: ಬಿಗ್ ಬಾಸ್ ಸೀಸನ್ 12 ನಿರೂಪಣೆಗೆ ಕಿಚ್ಚ ಸುದೀಪ್ ಮನವೊಲಿಸಿತೇ ಕಲರ್ಸ್ ಕನ್ನಡ? ಏನಿದು ಸುದ್ದಿ?

ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಮತ್ತೊಂದು ಸೀಸನ್‌ಗೆ ವೇದಿಕೆ ರೆಡಿಯಾಗುತ್ತಿದೆ. ಕಲರ್ಸ್ ಕನ್ನಡ ಈಗಾಗಲೇ ತೆರೆಮರೆಯಲ್ಲಿ 12ನೇ ಸೀಸನ್‌ಗೆ ವೇದಿಕೆಯನ್ನೂ ರೆಡಿ ಮಾಡಿಕೊಳ್ಳುತ್ತಿದೆ. ಹೊಸ ಸೀಸನ್ ಆರಂಭ ಆಗುವುದಕ್ಕೆ ಇನ್ನೇನು ಮೂರರಿಂದ ನಾಲ್ಕು ತಿಂಗಳು ಮಾತ್ರ ಉಳಿದುಕೊಂಡಿದೆ. ಹೀಗಾಗಿ ಈ ಬಾರಿ ಮನೆಯೊಳಗೆ ಯಾರೆಲ್ಲ ಹೋಗಬಹುದು ಎಂಬ ಕುತೂಹಲ ಹೆಚ್ಚಾಗಿದೆ.

ಈಗಾಗಲೇ ಒಂದಿಷ್ಟು ಮಂದಿಯನ್ನು ಕರೆದು ಮಾತುಕತೆಯನ್ನೂ ನಡೆಸಿದೆ ಸುದ್ದಿ ಕೂಡ ಹೊರಬಿದ್ದಿದೆ. ಕೆಲವು ಹೆಸರುಗಳು ಕೂಡ ಸೋಶಿಯಲ್ ಮೀಡಿಯಾ ಸೇರಿದಂತೆ ಕಿರುತೆರೆ ವಲಯದಲ್ಲಿ ಓಡಾಡುತ್ತಿದೆ. ಆದರೆ, ಬಿಗ್ ಬಾಸ್ ಮನೆಯೊಳಗೆ ಯಾರು ಹೋಗುತ್ತಾರೆ ಎನ್ನುವುದಕ್ಕಿಂತ ಹೆಚ್ಚಾಗಿ ಕಿಚ್ಚ ಸುದೀಪ್ 12ನೇ ಸೀಸನ್‌ ಅನ್ನು ನಿರೂಪಣೆ ಮಾಡುತ್ತಾರಾ? ಎಂಬ ಪ್ರಶ್ನೆ ಕಿರುತೆರೆ ವೀಕ್ಷಕರನ್ನು ಕಾಡುತ್ತಿದೆ.

Buzz is that Colors Kannada has succeeded in convincing Kichcha Sudeep to host Bigg Boss Kannada Season 12

ಬಿಗ್ ಬಾಸ್ ಕನ್ನಡ 11ನೇ ಸೀಸನ್ ಮುಗಿಯುವ ಹೊತ್ತಿಗೆ ಕಿಚ್ಚ ಸುದೀಪ್ ಇದೇ ತನ್ನ ಕೊನೆಯ ಸೀಸನ್ ಎಂದು ಹೇಳಿದ್ದರು. ಹೀಗಾಗಿ ಕಿಚ್ಚನ ಬಿಟ್ಟರೆ ಮತ್ಯಾರು ನಿರೂಪಣೆ ಮಾಡಬಹುದು ಎಂದು ಗೆಸ್ ಮಾಡಿ ವೀಕ್ಷಕರು ಸುಸ್ತಾಗಿದ್ದರು. ಈ ವೇಳೆ ಹಲವು ಬಾರಿ ಕಿಚ್ಚ ಸುದೀಪ್ ಅವರನ್ನೇ ಬಿಗ್ ಬಾಸ್ ಕನ್ನಡ ಸೀಸನ್ 12 ಅನ್ನು ನಿರೂಪಣೆ ಮಾಡುತ್ತೀರಾ? ಎಂಬ ಪ್ರಶ್ನೆ ಕೇಳಿದಾಗಲೂ ಕಿಚ್ಚ ಸ್ಪಷ್ಟ ಉತ್ತರವನ್ನು ಕೊಟ್ಟಿರಲಿಲ್ಲ. ಆದ್ರೀಗ 12ನೇ ಸೀಸನ್‌ ನಿರೂಪಣೆ ಮಾಡುವುದಕ್ಕೆ ಸುದೀಪ್ ಮನವೊಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಕಳೆದ 11 ಸೀಸನ್‌ಗಳಿಂದ ನಿರಂತರವಾಗಿ ಕಿಚ್ಚ ಸುದೀಪ್ ಬಿಗ್ ಬಾಸ್ ನಿರೂಪಣೆ ಮಾಡುತ್ತ ಬಂದಿದ್ದಾರೆ. ಬೇರೆ ಭಾಷೆಗಳಲ್ಲಿ ಬಿಗ್ ಬಾಸ್ ನಿರೂಪಣೆ ಮಾಡುವ ಸ್ಟಾರ್‌ಗಳು ಬದಲಾಗಿದ್ದಾರೆ. ಆದರೆ, ಕನ್ನಡದಲ್ಲಿ ಹಾಗಾಗಿರಲಿಲ್ಲ. ಕಿಚ್ಚ ಸುದೀಪ್ ನಿರೂಪಣಾ ಶೈಲಿಯನ್ನು ಮೆಚ್ಚಿಕೊಂಡಿದ್ದ ವೀಕ್ಷಕರು ಇವರ ಸ್ಥಾನಕ್ಕೆ ಬೇರೆ ನಿರೂಪಕರನ್ನು ಊಹಿಸುವುದಕ್ಕೂ ಸಾಧ್ಯವಾಗಿರಲಿಲ್ಲ. ಆದ್ರೀಗ ಕಲರ್ಸ್ ಕನ್ನಡ ಕಿಚ್ಚ ಸುದೀಪ್ ಮನವೊಲಿಸುವಲ್ಲಿ ಯಶಸ್ವಿಯಾಗಿದೆ ಎಂಬ ಸುದ್ದಿಯೊಂದು ಹೊರಬಿದ್ದಿದೆ.

ನಾಳೆ (ಜೂನ್ 30) ಕಲರ್ಸ್ ಕನ್ನಡ ಹಾಗೂ ಅದರ ಆಯೋಜಕರು ಪತ್ರಿಕಾಗೋಷ್ಠಿಯನ್ನು ಕರೆದಿದ್ದಾರೆ. ಇದರಲ್ಲಿ ಕಿಚ್ಚ ಸುದೀಪ್ ಮತ್ತೆ ನಿರೂಪಣೆ ಮಾಡುವ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುವ ಸಾಧ್ಯತೆಯಿದೆ. ಈ ಬಾರಿ ಕಿಚ್ಚ ಸುದೀಪ್ ಅವರೇ ಸೀಸನ್ 12 ಅನ್ನು ನಿರೂಪಣೆ ಮಾಡುತ್ತಿದ್ದಾರೆ. ಕಲರ್ಸ್ ಕನ್ನಡ ಹಾಗೂ ಕಿಚ್ಚನ ಮಧ್ಯೆ ನಡೆದ ಮಾತುಕತೆ ಯಶಸ್ವಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಪತ್ರಿಕಾಗೋಷ್ಠಿಯಲ್ಲಿ ಸಿಗುವ ಸಾಧ್ಯತೆಯಿದೆ.

Buzz is that Colors Kannada has succeeded in convincing Kichcha Sudeep to host Bigg Boss Kannada Season 12

ಕಿಚ್ಚ ಸುದೀಪ್ ಕೆಲವು ಷರತ್ತುಗಳನ್ನು ಹಾಕಿದ್ದರು. ಅದರಲ್ಲಿ ಬಲವಾಗಿ ಕೇಳಿ ಬರುತ್ತಿದ್ದಿದ್ದು ಕನ್ನಡ ಪ್ರಾಮುಖ್ಯತೆ ನೀಡಬೇಕು ಎಂಬುದಾಗಿತ್ತು. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಕನ್ನಡಕ್ಕಿಂತ ಹೆಚ್ಚಾಗಿ ಬೇರೆ ಭಾಷೆಯನ್ನೇ ಬಳಸುವುದಕ್ಕೆ ಅಸಮಧಾನಗೊಂಡಿದ್ದರು. ಅದಕ್ಕೆ ಕಿಚ್ಚ ಸುದೀಪ್ ಕನ್ನಡ ಬಳಕೆಯಾಗಬೇಕು ಎಂದು ಹೇಳಿದ್ದರು ಎನ್ನುಲಾಗಿದೆ. ಇದರೊಂದಿಗೆ ಇನ್ನೂ ಕೆಲವು ಷರತ್ತುಗಳನ್ನು ಹಾಕಿದ್ದರು. ಆ ಬಗ್ಗೆ ಮಾತುಕತೆ ನಡೆದು, ಕೊನೆಗೆ ಕಿಚ್ಚನ ಮನವೊಲಿಸುವಲ್ಲಿ ಕಲರ್ಸ್ ಕನ್ನಡ ಯಶಸ್ವಿಯಾಗಿದೆ ಎಂಬ ಸುದ್ದಿ ಕೇಳಿ ಬರುತ್ತಿದೆ.

ಇನ್ನು ಸ್ಪರ್ಧಿಗಳ ವಿಚಾರಕ್ಕೆ ಬರುವುದಾದರೇ ಬಿಗ್ ಬಾಸ್ ಟೀಮ್ ಕೆಲವು ಸೆಲೆಬ್ರೆಟಿಗಳಿಗೆ ಅಪ್ರೋಚ್ ಮಾಡಿದ್ದಾರೆ. ಅದರಲ್ಲಿ ನ್ಯೂಸ್ ಆಂಕರ್ ಚಂದನ್ ಶರ್ಮಾ, ಅರ್ಚನಾ ಜೋಯಿಸ್, ಶ್ರೀಮಹಾದೇವ್, ಡಾ. ಬ್ರೋ, ಪ್ರಿಯಾಂಕಾ ಉಪೇಂದ್ರ ಸೇರಿದಂತೆ ಹಲವರನ್ನು ಸಂಪರ್ಕಿಸಿರುವ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಆದರೆ, ಇದ್ಯಾವುದನ್ನೂ ಅಧಿಕೃತವಾಗಿ ಹೇಳಿಲ್ಲ. ಪತ್ರಿಕಾಗೋಷ್ಠಿಯಲ್ಲಿ ಈ ಎಲ್ಲಾ ಸುದ್ದಿಗಳಿಗೂ ಮಾಹಿತಿ ಸಿಗಬಹುದು.

More from Filmibeat

English summary
Buzz is that Colors Kannada has succeeded in convincing Kichcha Sudeep to host Bigg Boss Kannada Season 12.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X