ವಿಚ್ಚೇದನದ ಘೋಷಿಸಿ ಬೇರ್ಪಟ್ಟ ಧನುಷ್-ಐಶ್ವರ್ಯಾ ಮತ್ತೆ ಒಂದಾಗ್ತಾರಾ? ವಿಮರ್ಶಕನ ಭವಿಷ್ಯವಾಣಿ ಏನು?

ಸೆಲೆಬ್ರೆಟಿಗಳು ಗ್ರ್ಯಾಂಡ್ ಮದುವೆಗಳನ್ನು ನೋಡಿದ್ದೇವೆ. ಅದೇ ಕೆಲವು ವರ್ಷಗಳಲ್ಲಿ ಇದೇ ಜೋಡಿ ವಿಚ್ಛೇದನಕ್ಕೆ ಮುಂದಾಗಿದ್ದನ್ನೂ ಕಂಡಿದ್ದೇವೆ. ಪ್ರೀತಿಸಿ ಮದುವೆ ಆದವರು ಯಾಕೆ ಹೀಗಾದ್ರು? ಅವರು ವೈವಾಹಿಕ ಬದುಕಿನಲ್ಲಿ ಅಂತಹದ್ದೇನಾಯ್ತು? ಅಂತ ಊಹಿಸಿಕೊಳ್ಳುವುದಕ್ಕೂ ಆಗುವುದಿಲ್ಲ. ಈಗ ಧನುಷ್ ಹಾಗೂ ಐಶ್ವರ್ಯಾ ರಜನಿಕಾಂತ್ ದಾಂಪತ್ಯ ಕೂಡ ಹಾಗೇ ಆಗಿದೆ

ಧನುಷ್ ತನ್ನ ವೃತ್ತಿ ಬದುಕಿನ ಆರಂಭದ ದಿನಗಳಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾರನ್ನು ಪ್ರೀತಿಸಿ ವಿವಾಹವಾಗಿದ್ದರು. ಆರಂಭದಲ್ಲಿ ಇವರು ಸಂಸಾರದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಯಾತ್ರಾ, ಲಿಂಗ ಎಂಬ ಇಬ್ಬರು ಗಂಡು ಮಕ್ಕಳು ಕೂಡ ಜನಿಸಿದ್ದರು. ಎಲ್ಲಾ ಚೆನ್ನಾಗಿದ್ದ ಸಂಸಾರದಲ್ಲಿ ಇದ್ದಕ್ಕಿಂದ್ದ ವೈಮಸ್ಸು ಆರಂಭ ಆಗಿತ್ತು. ಧನುಷ್ ಬೆಳೆಯುತ್ತಿದ್ದಂತೆ ಇತ್ತ ಸಂಸಾರ ಕಲಹ ಕೂಡ ಬೆಳೆಯುತ್ತಾ ಹೋಯ್ತು.

Buzz is that Dhanush and Aishwarya Rajinikanth will reunite after separation

ಧನುಷ್ ಹಾಗೂ ಐಶ್ವರ್ಯಾ ಬೇರೆಯಾದಲ್ಲಿಂದ ಇವರನ್ನು ಒಂದು ಮಾಡುವುದಕ್ಕೆ ರಜನಿಕಾಂತ್ ಪ್ರಯತ್ನ ಪಡುತ್ತಿದ್ದಾರೆ. ಧನುಷ್ ಮೇಲೆ ರಜನಿಗೆ ಇನ್ನಿಲ್ಲದ ಅಕ್ಕರೆಯಿದೆ ಅಂತ ಸುದ್ದಿ ಆಗುತ್ತಲೇ ಇದೆ. ಆದರೆ, ಇಂತಹ ಸುದ್ದಿಗಳಲ್ಲಿ ಎಷ್ಟು ಸತ್ಯ ಅಡಗಿದೆ ಅನ್ನೋದು ಅವರಿಗಷ್ಟೇ ಗೊತ್ತು. ಆದರೆ, ಇತ್ತೀಚೆಗೆ ತಮಿಳಿನ ವಿವಾದಾತ್ಮಕ ಯೂಟ್ಯೂಬರ್ ಬೈಲ್ವಾನ್ ರಂಗನಾಥನ್ ಹೊಸ ಸಂಗತಿಯನ್ನು ಹೊರ ಹಾಕಿದ್ದಾರೆ. ಅದೇನು ಅಂತ ತಿಳಿಯಲು ಮುಂದೆ ಓದಿ.

ಧನುಷ್ ಕಾಲಿವುಡ್‌ನ ಟ್ಯಾಲೆಂಟೆಡ್ ಆಕ್ಟರ್ ಅನ್ನುವುದರಲ್ಲಿ ಅನುಮಾನವಿಲ್ಲ. ಈ ನಟನ ಸಿನಿಮಾಗಳು ಬೇರೆಯವರಿಗಿಂತ ವಿಭಿನ್ನವಾಗಿರುತ್ತೆ. ಬೇರೆಯವರೆಲ್ಲ ಮಾಸ್, ಕ್ಲಾಸ್ ಅಂತ ಒಂದು ಹಾದಿ ಹಿಡಿದು ಹೋದರೆ, ಧನುಷ್ ಮಾತ್ರ ಮಾಸ್, ಕ್ಲಾಸ್ ಎಲಿಮೆಂಟ್‌ಗಳನ್ನು ಇಟ್ಟುಕೊಂಡು ಬೇರೆ ಏನೋ ಹೇಳುತ್ತಾರೆ. ಅದಕ್ಕೆ ಧನುಷ್ ಮಾಸ್‌ಗೆ ಮಾಸ್. ಕ್ಲಾಸ್‌ಗೆ ಕ್ಲಾಸ್ ಆಕ್ಟರ್. ವೃತ್ತಿ ಬದುಕೇನೋ ಕಾಲಿವುಡ್‌ನಿಂದ ಹಾಲಿವುಡ್ ವರೆಗೂ ಹೋಗುವಷ್ಟು ಯಶಸ್ಸು ಕಂಡಿದೆ. ಅದೇ ವೈಯಕ್ತಿಕ ಬದುಕು ಮಾತ್ರ ಉಲ್ಟಾ ಆಗಿದೆ.

Buzz is that Dhanush and Aishwarya Rajinikanth will reunite after separation

ಧನುಷ್ ಹಾಗೂ ಐಶ್ವರ್ಯಾ ಇಬ್ಬರೂ ಬೇರೆಯಾಗುವುದಕ್ಕೆ ಏನು ಕಾರಣ? ಈ ಪ್ರಶ್ನೆಗೆ ಉತ್ತರ ಅವರ ಅಭಿಮಾನಿಗಳಿಗೂ ಗೊತ್ತಿಲ್ಲ. ಆದರೆ, ಮತ್ತೆ ಒಂದಾಗಲಿ ಅಂತ ಬಯಸುತ್ತಿರುವುದೇನೋ ನಿಜ. ಒಮ್ಮೆ ಇಬ್ಬರೂ ಮತ್ತೆ ಒಂದಾಗುತ್ತಾರೆ ಅನ್ನೋ ಸುದ್ದು ಓಡಾಡುತ್ತೆ. ಇನ್ನೊಮ್ಮೆ ಅದು ಸಾಧ್ಯವೇ ಇಲ್ಲ ಅನ್ನೋ ಸುದ್ದಿ ಹರಿದಾಡುತ್ತೆ. ಹೀಗಾಗಿ ಈ ಜೋಡಿ ಸಾಂಸಾರಿಕ ಜೀವನ ಗೊಂದಲದ ಗೂಡಾಗಿದೆ. ಈ ಮಧ್ಯೆ ವಿವಾದಾತ್ಮಕ ಪತ್ರಕರ್ತ ಕಮ್ ಯೂಟ್ಯೂಬರ್ ಬೈಲ್ವಾನ್ ರಂಗನಾಥನ್ ಹೊಸ ವಿಷಯವೊಂದನ್ನು ರಿವೀಲ್ ಮಾಡಿದ್ದಾರೆ.

ಧನುಷ್ ಹಾಗೂ ಐಶ್ವರ್ಯಾ ಇನ್ನೂ ಕಾನೂನುಬದ್ಧವಾಗಿ ಬೇರ್ಪಟ್ಟಿಲ್ಲ. ಆದರೆ, ಇಬ್ಬರನ್ನೂ ಒಟ್ಟಿಗೆ ಸೇರಿಸುವುದಕ್ಕೆ ಎರಡೂ ಮನೆಯವರು ಶತಪ್ರಯತ್ನ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಲೇ ಇದೆ. ಬೈಲ್ವಾನ್ ರಂಗನಾಥನ್ ಪ್ರಕಾರ, ಧನುಷ್ ಹಾಗೂ ಐಶ್ವರ್ಯಾ ಜೋಡಿ ಶೀಘ್ರದಲ್ಲಿಯೇ ಒಂದಾಗುತ್ತಾರೆ. ಮತ್ತೆ ಒಟ್ಟಿಗೆ ಬಾಳುತ್ತಾರೆ ಎಂದು ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ.

ಇಷ್ಟೇ ಅಲ್ಲದೆ ಆಂಧ್ರದ ಐಷಾರಾಮಿ ಹೋಟೆಲ್ ಒಂದರಲ್ಲಿ ಧನುಷ್ ಹಾಗೂ ಐಶ್ವರ್ಯಾ ಇಬ್ಬರೂ ಬೇರೆಯಾಗುತ್ತಿರುವುದಾಗಿ ಘೋಷಿಸಿದ್ದರು. ಇದು ರಜನಿ ಹಾಗೂ ಅವರ ಪತ್ನಿಗೆ ದೊಡ್ಡ ಆಘಾತ ತಂದಿತ್ತು. ಅಲ್ಲಿಂದ ಇಬ್ಬರನ್ನೂ ಒಂದು ಮಾಡುವುದಕ್ಕೆ ರಜನಿಕಾಂತ್ ಓಡಾಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಹಾಗೇ ಐಶ್ವರ್ಯಾ ರಜನಿಕಾಂತ್ ತಮ್ಮ ಮಕ್ಕಳು ಯಾತ್ರಾ ಹಾಗೂ ಲಿಂಗಗಾಗಿ ಮತ್ತೆ ಧನುಷ್ ಜೊತೆ ಸಂಸಾರ ಮಾಡುವುದಕ್ಕೆ ನಿರ್ಧರಿಸಿದ್ದು, ಶೀಘ್ರದಲ್ಲಿಯೇ ಇಬ್ಬರೂ ಒಂದಾಗುತ್ತಾರೆ ಎಂದು ಹೇಳಿದ್ದಾರೆ.

More from Filmibeat

English summary
Are Dhanush and Aishwarya Rajinikanth reuniting?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X