Gilli Nata: ಕೆವಿಎನ್ ಪ್ರೊಡಕ್ಷನ್‌ನಲ್ಲಿ ಗಿಲ್ಲಿ ನಟ ಹೀರೋ; ಸಂಭಾವನೆ ಪಡೆದಿದ್ದು ಇಷ್ಟೊಂದು ಅಂತೆ!
ಬಿಗ್ ಬಾಸ್ ರಿಯಾಲಿಟಿ ಶೋ ಅದೆಷ್ಟೋ ಪ್ರತಿಭೆಗಳಿಗೆ ವೇದಿಕೆಯಾಗಿದೆ. ಈ ರಿಯಾಲಿಟಿ ಶೋನಿಂದ ಹೊರ ಬರುತ್ತಿದ್ದಂತೆ ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತವೆ. ಇದೇ ನಿರೀಕ್ಷೆಯಲ್ಲಿಯೇ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವುದಕ್ಕೆ ತುದಿಗಾಲಲ್ಲಿ ನಿಲ್ಲತ್ತಾರೆ. ಆದರೆ, ಬಿಗ್ ಬಾಸ್ ಕನ್ನಡದ 12ನೇ ಸೀಸನ್ ಕಿರುತೆರೆಯಲ್ಲಿ ಕ್ರಾಂತಿಯನ್ನೇ ಮಾಡಿತ್ತು.
ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭ ಆದ ದಿನದಿಂದಲೂ ಗಿಲ್ಲಿ ನಟನ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದ್ದರು. ಗಿಲ್ಲಿ ನಟ ಬಿಗ್ ಬಾಸ್ ಗೆದ್ದು ಹೊರಬರುತ್ತಿದ್ದಂತೆ ಒಬ್ಬ ಸ್ಟಾರ್ ಹೀರೋ ಸಿಕ್ಕಷ್ಟೇ ಫ್ಯಾನ್ ಫಾಲೋವಿಂಗ್ ಸಿಕ್ಕಿತ್ತು. ಆದರೂ ರಿಯಾಲಿಟಿ ಶೋನಿಂದ ಹೊರಬಂದ ಬಳಿಕ ರಿಲೀಸ್ ಆದ ಸಿನಿಮಾಗಳು ಥಿಯೇಟರ್‌ನಲ್ಲಿ ಜಾದು ಮಾಡಿರಲಿಲ್ಲ. ಹೀಗಾಗಿ ಗಿಲ್ಲಿಯ ಸಿನಿಮಾ ಭವಿಷ್ಯವೇನು? ಅಂತ ಅವರ ಅಭಿಮಾನಿಗಳು ಕೂತುಹಲದಿಂದಲೇ ನೋಡುತ್ತಿದ್ದರು.

ಬಿಗ್ ಬಾಸ್ ಕನ್ನಡದ 12ನೇ ಸೀಸನ್ ಮುಗಿದು, 13ನೇ ಸೀಸನ್ ಶುರುವಾಗುವ ಹೊತ್ತಿಗೆ ಗಿಲ್ಲಿ ನಟನ ಹೊಸ ಸಿನಿಮಾ ಅನೌನ್ಸ್ ಆಗಿದೆ. ಅದೂ ಕೆವಿಎನ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಈ ಸಿನಿಮಾ ಸೆಟ್ಟೇರುತ್ತಿರುವುದು ಗಿಲ್ಲಿಗೆ ಕರಿಯರ್‌ಗೆ ಕಿಕ್ ಸ್ಟಾರ್ಟ್ ಸಿಕ್ಕಂತೆ ಆಗಿದೆ. ಆದರೆ, ಗಿಲ್ಲಿ ಸೋಲೋ ಹೀರೋ ಆಗಿ ನಟಿಸುತ್ತಿರುವ ಈ ಸಿನಿಮಾ ಪಡೆದ ಸಂಭಾವನೆ ಎಷ್ಟು ಗೊತ್ತೇ? ಸಿನಿಮಾ ಮಂದಿ ಎಷ್ಟು ಸಂಭಾವನೆ ಕೊಟ್ಟಿರಬಹುದು? ಈ ಪ್ರಶ್ನೆಗೆ ಗಾಂಧಿನಗರದ ಗಲ್ಲಿ ಗಲ್ಲಿಯಲ್ಲೊಂದು ಸಂಖ್ಯೆ ಹರಿದಾಡುವುದಕ್ಕೆ ಶುರುವಾಗಿದೆ.
ಗಿಲ್ಲಿ ನಟ ಈಗ ಸೋಲೋ ಹೀರೊ
ಗಿಲ್ಲಿ ನಟ ಬಿಗ್ ಬಾಸ್‌ಗೂ ಮುನ್ನ ಹಲವು ಕಾಮಿಡಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು. ಆದರೆ, ಬಿಗ್ ಬಾಸ್ ಅವರಿಗೆ ವೃತ್ತಿ ಬದುಕಿಗೆ ಬೇರೆಯದ್ದೇ ಇಮೇಜ್ ಕೊಟ್ಟಿದೆ. ಅವರ ಅಭಿಮಾನಿಗಳು ಗಿಲ್ಲಿಯನ್ನು ಹೀರೋ ಆಗಿ ಸಿಲ್ವರ್ ಸ್ಕ್ರೀನ್‌ನಲ್ಲಿ ನೋಡಬೇಕು ಅಂತ ಬಯಸಿದ್ದಾರೆ. ಬಿಗ್ ಬಾಸ್ ಫೇಮ್ ಅನ್ನು ಸಿನಿಮಾದವರೆಗೂ ಹಾಗೇ ಉಳಿಸಿಕೊಂಡು ಬರುವುದಕ್ಕೆ ಗಿಲ್ಲಿ ನಟ ಇಷ್ಟು ಸಮಯ ತೆಗೆದುಕೊಂಡಿದ್ದಾರೆ. ಕೊನೆಗೆ ಗಿಲ್ಲಿ ಸೋಲೋ ಹೀರೋ ಆಗಿ ನಟಿಸುತ್ತಿರುವ ಚೊಚ್ಚಲ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ಪ್ರೆಸೆಂಟ್ ಮಾಡುತ್ತಿರೋದು ಹೊಸ ಹುರುಪು ಕೊಟ್ಟಿದೆ.
ಗಿಲ್ಲಿ ಪಡೆದ ಸಂಭಾವನೆ ಎಷ್ಟು?
ಗಿಲ್ಲಿ ನಟ ಸೋಲೋ ಹೀರೋ ಆಗಿ ಎಂಟ್ರಿ ಕೊಡುವುದಕ್ಕೆ ವೇದಿಕೆ ಏನೋ ಸಿದ್ಧವಾಗಿದೆ. ಆದರೆ, ಚೊಚ್ಚಲ ಸಿನಿಮಾಗೆ ಎಷ್ಟು ಸಂಭಾವನೆ ಪಡೆದಿರಬಹುದು? ಈ ಪ್ರಶ್ನೆಯಂತೂ ಅವರ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದೆ. ಅದಕ್ಕೆ ಕಾರಣ ಅನೌನ್ಸ್‌ಮೆಂಟ್ ವಿಡಿಯೋದಲ್ಲಿ ಗಿಲ್ಲಿ ನಟ ಸಂಭಾವನೆಯ ಬಗ್ಗೆ ಮಾತಾಡುತ್ತಾರೆ. ನಿರ್ಮಾಪಕ ಹಾಗೂ ಗಿಲ್ಲಿ ಮಧ್ಯೆ ಸಂಭಾವನೆ ವಿಷಯಕ್ಕೆ ಚರ್ಚೆಯಾಗುತ್ತವೆ. ಅಲ್ಲಿ ಗುಟ್ಟು ಬಿಡದೇ ಹೋದರೂ, ಗಿಲ್ಲಿ ಪಡೆದ ಸಂಭಾವನೆ ಬಗ್ಗೆ ಗಾಂಧಿನಗರದ ಮಂದಿಯಂತೂ ಮಾತಾಡಿಕೊಳ್ಳುತ್ತಿದ್ದಾರೆ. ಈ ಸಿನಿಮಾಗೆ ಗಿಲ್ಲಿ ಬರೋಬ್ಬರಿ 60 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆಂದು ಗಾಂಧಿನಗರದಲ್ಲಿ ಚರ್ಚೆಯಾಗುತ್ತಿದೆ. ಕೆಲವು ವರದಿಗಳಲ್ಲಿ ಒಂದು ಕೋಟಿ ಎಂದು ಹೇಳಲಾಗಿದೆ. ಆದರೆ, ಈ ಬಗ್ಗೆ ಚಿತ್ರತಂಡ ಚಿಕ್ಕದೊಂದು ಮಾಹಿತಿಯನ್ನೂ ಹಂಚಿಕೊಂಡಿಲ್ಲ.

ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಶುರು
ಕಾದೂ ಕಾದು ಸುಸ್ತಾಗಿದ್ದ ಗಿಲ್ಲಿ ನಟನ ಅಭಿಮಾನಿಗಳಿಗೆ ಡಬಲ್ ಖುಷಿ. ಇದೇ ಜೂನ್ 21ರಂದು ಗಿಲ್ಲಿ ನಟ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅದೇ ದಿನ ಸಿನಿಮಾವನ್ನು ಸೆಟ್ಟೇರಿಸುವುದಕ್ಕೆ ಚಿತ್ರತಂಡ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಸದ್ಯಕ್ಕೆ ಇನ್ನೂ ಸಿನಿಮಾ ತಂಡ ಟೈಟಲ್ ಫಿಕ್ಸ್ ಮಾಡಿಲ್ಲ. ಮುಹೂರ್ತದ ದಿನ ಸಿನಿಮಾದ ಶೀರ್ಷಿಕೆ ಅನಾವರಣ ಆಗಬಹುದೆಂದು ಹೇಳಲಾಗುತ್ತಿದೆ.
ಸಂಭಾವನೆ ಕಡಿಮೆ ಆಯ್ತೇ?
ಗಿಲ್ಲಿ ನಟ ಸೋಲೋ ಹೀರೋ ಆಗಿ ನಟಿಸುತ್ತಿರುವ ಈ ಸಿನಿಮಾಗೆ ಸಿಕ್ಕಿರುವ ಸಂಭಾವನೆ ಬಗ್ಗೆ ಚರ್ಚೆಯಾಗುತ್ತಿದೆ. ಗಿಲ್ಲಿ ಪಡೆದಿರುವ ಸಂಭಾವನೆ ಅವರ ಅಭಿಮಾನಿಗಳಿಗೆ ತೃಪ್ತಿಕೊಟ್ಟಂತೆ ಕಾಣುತ್ತಿಲ್ಲ. 60 ಲಕ್ಷ ರೂಪಾಯಿ ಕಮ್ಮಿನೇ ಅಂತ ಅವರ ಅಭಿಮಾನಿಗಳು ಮಾತಾಡಿಕೊಳ್ಳುತ್ತಿದ್ದಾರೆ. ಇನ್ನೊಂದು ಕಡೆ ಒಂದು ಕೋಟಿ ರೂಪಾಯಿ ಎಂದು ವರದಿಯಾಗಿದೆ. ಆದರೂ ಅಭಿಮಾನಿಗಳು ತೃಪ್ತಿಯಾಗಿಲ್ಲ ಎಂದು ಹೇಳಲಾಗಿದೆ.


Click it and Unblock the Notifications
