'ಕೆಡಿ' ಮುಗಿಸಿದ ಕೂಡಲೇ ಬಾಲಿವುಡ್ ಕಡೆ ಪಯಣ; ಸಲ್ಮಾನ್ ಖಾನ್‌ಗೆ ಜೋಗಿ ಪ್ರೇಮ್ ಆಕ್ಷನ್ ಕಟ್?

2024ರ ಮೋಸ್ಟ್ ಎಕ್ಸ್‌ಪೆಕ್ಟೆಡ್ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ 'ಕೆಡಿ' ಕೂಡ ಒಂದು. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಇದೇ ಮೊದಲ ಬಾರಿಗೆ ಜೋಗಿ ಪ್ರೇಮ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಲ್ಲದೆ ಪ್ರೇಮ್‌ಗೂ ಇದು ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಈ ಕಾರಣಕ್ಕೆ 'ಕೆಡಿ' ಮೇಲೆ ಭಾರತೀಯ ಚಿತ್ರರಂಗ ಕಣ್ಣಿಟ್ಟಿದೆ.

ಇನ್ನು ಜೋಗಿ ಪ್ರೇಮ್ ಅಂದ್ಮೇಲೆ ಪ್ರಚಾರಕ್ಕೇನು ಕೊರತೆಯಿರೋದಿಲ್ಲ. ಸಿನಿಮಾ ಶೂಟಿಂಗ್ ಮುಗಿಯುತ್ತಿದ್ದಂತೆ ಪ್ರೇಮ್ಸ್ ಸ್ಟ್ರಾಟಜಿ ಆರಂಭ ಆಗುತ್ತೆ. ಆದರೆ, ಈ ಬಾರಿ ಕೆಡಿ ಮುಗಿಯುವುದಕ್ಕೂ ಮುನ್ನವೇ ಸಿನಿಪ್ರಿಯರಿಗೆ ಸರ್ಪ್ರೈಸಿಂಗ್ ಸುದ್ದಿಯೊಂದು ಸಿಕ್ಕಿದೆ. 'ಕೆಡಿ' ಮುಗಿಸಿದ ಕೂಡಲೇ ಜೋಗಿ ಪ್ರೇಮ್ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಅದೂ ಸಲ್ಮಾನ್ ಖಾನ್‌ಗೆ ಆಕ್ಷನ್ ಕಟ್ ಹೇಳ್ತಿದ್ದಾರೆ ಅನ್ನುವ ಸುದ್ದಿ ಹರಿದಾಡುತ್ತಿದೆ.

Buzz is that Jogi Prem to direct bollywood hero Salman Khan here is the details

ಜೋಗಿ ಪ್ರೇಮ್ ಸದ್ಯ 'ಕೆಡಿ' ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಧ್ರುವ ಸರ್ಜಾ ಹಾಗೂ ಪ್ರೇಮ್ ಇಬ್ಬರಿಗೂ ಇದು ಚೊಚ್ಚಲ ಪ್ಯಾನ್ ಇಂಡಿಯಾ ಸಿನಿಮಾ. ಹೀಗಾಗಿ ಈ ಸಿನಿಮಾ ಪ್ರೇಮ್ ಕರಿಯರ್‌ಗೆ ತುಂಬಾನೇ ಮುಖ್ಯವಾದ ಸಿನಿಮಾ. ಅಲ್ಲದೆ ಕನ್ನಡದ ಶ್ರೀಮಂತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಕೂಡ ಪ್ರೇಮ್ ಮೇಲೆ ವಿಶ್ವಾಸವಿಟ್ಟು ಹಣ ಹೂಡಿಕೆ ಮಾಡಿದೆ. ಇದೇ ಗ್ಯಾಪ್‌ನಲ್ಲೇ ಸಲ್ಮಾನ್ ಖಾನ್‌ಗೆ ಪ್ರೇಮ್ ಆಕ್ಷನ್ ಕಟ್ ಹೇಳುತ್ತಾರೆ ಅನ್ನೋದು ಸುದ್ದಿ ಹಲ್‌ಚಲ್ ಎಬ್ಬಿಸಿದೆ.

ಕನ್ನಡ ನಿರ್ದೇಶಕರೊಬ್ಬರು ಬಾಲಿವುಡ್‌ ಸೂಪರ್‌ಸ್ಟಾರ್‌ಗೆ ಆಕ್ಷನ್ ಕಟ್ ಹೇಳ್ತಿದ್ದಾರೆ ಅನ್ನೋ ಸಂಗತಿ ಹೆಮ್ಮಯ ವಿಷಯ. ಆದರೂ, ಜೋಗಿ ಪ್ರೇಮ್‌ಗೂ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್‌ಗೂ ಹೇಗೆ ಲಿಂಕ್..? ಎಲ್ಲಿಂದ ಎಲ್ಲಿಗೆ ಸಂಬಂಧ ಅನ್ನೋ ಪ್ರಶ್ನೆ ಮಾಡುವುದಂತೂ ನಿಜ. ಆದರೆ ಅದಕ್ಕೂ ಮುನ್ನ ಜೋಗಿ ಪ್ರೇಮ್ ಬಾಲಿವುಡ್‌ಗೆ ಲಿಂಕ್ ಬೆಳೆದಿದ್ದು ಹೇಗೆ? ಅಂತ ಕುತೂಹಲನೂ ಮೂಡುತ್ತೆ. ಇತ್ತ ಸ್ಯಾಂಡಲ್‌ವುಡ್ ಮಂದಿ 'ಕೆಡಿ' ಸಿನಿಮಾ ಕೊಡುವ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ.

ಜೋಗಿ ಪ್ರೇಮ್ ನಿರ್ದೇಶನ ಮಾಡುತ್ತಿರುವ 'ಕೆಡಿ' ಸಿನಿಮಾದಲ್ಲಿ ಬಾಲಿವುಡ್ ದಂಡೇ ಇದೆ. ಬಾಲಿವುಡ್ ದಿಗ್ಗಜ ಸಂಜಯ್ ದತ್, ಶಿಲ್ಪಾ ಶೆಟ್ಟಿ ಇತ್ತೀಚೆಗಷ್ಟೇ ಐಟಂ ಸಾಂಗ್ ಒಂದಕ್ಕೆ ನೂರಾ ಫತೇಹಿ ಬಂದು ಹೆಜ್ಜೆ ಹಾಕಿ ಹೋಗಿದ್ದಾರೆ. ಈ ಸಿನಿಮಾಗೆ ಬಂದ ಬಾಲಿವುಡ್ ತಾರೆಯರು ಪ್ರೇಮ್ ಬಗ್ಗೆ ಸಲ್ಮಾನ್ ಖಾನ್‌ಗೆ ವರದಿ ಒಪ್ಪಿಸಿರಬಹುದೆಂಬ ಅನುಮಾನ ಮೂಡಿದೆ.

Buzz is that Jogi Prem to direct bollywood hero Salman Khan here is the details

ಇನ್ನು ಸಂಜಯ್ ದತ್ ಅಂತೂ ಜೋಗಿ ಪ್ರೇಮ್ ಜೊತೆ ಆತ್ಮೀಯರಾಗಿದ್ದಾರೆ. ಜೋಗಿ ಪ್ರೇಮ್ ಕರೆದ ಕಡೆಯಲ್ಲ ಆರಾಮಾಗಿ ಓಡಾಡಿಕೊಂಡು ಬರುತ್ತಿದ್ದಾರೆ. ಸಂಜಯ್ ದತ್‌ರನ್ನು ಚಾಮುಂಡೇಶ್ವರಿ ದೇವಸ್ಥಾನಕ್ಕೆ ಕರೆದುಕೊಡು ಹೋಗಿ ದರ್ಶನ ಮಾಡಿಸಿದ್ದರು. ಇತ್ತೀಚೆಗಷ್ಟೇ ಧ್ರುವ ಸರ್ಜಾ ಮಕ್ಕಳ ನಾಮಕರಣ ಕಾರ್ಯಕ್ರಮದಲ್ಲೂ ಸಂಜಯ್ ದತ್ ಹಾಗೂ ಜೋಗಿ ಪ್ರೇಮ್ ಕಾಣಿಸಿಕೊಂಡಿದ್ದರು. ಹೀಗಾಗಿ ಇಬ್ಬರ ನಡುವೆ ಓಡನಾಡ ಚೆನ್ನಾಗಿರೋದ್ರಿಂದ ಸಂಜಯ್ ದತ್ ಅವರೇ ಪ್ರೇಮ್ ಹೆಸರನ್ನು ಸಲ್ಮಾನ್ ಖಾನ್‌ಗೆ ಸೂಚಿಸಿರಬಹುದು ಎಂದು ಅಂದಾಜಿಸಲಾಗುತ್ತಿದೆ.

ಅಂದ್ಹಾಗೆ, ಜೋಗಿ ಪ್ರೇಮ್ ಕೆವಿಎನ್ ಸಂಸ್ಥೆಗೆ ಸಿನಿಮಾ ಮಾಡುತ್ತಿರುವುದರಿಂದ ಅವರೇ ನಿರ್ಮಾಣ ಮಾಡುತ್ತಿರಬಹುದಾ? ಅನ್ನೋ ಅನುಮಾನ ಸಹಜ. ಆದರೆ, ಸದ್ಯಕ್ಕಿರೋ ಮಾಹಿತಿ ಪ್ರಕಾರ, ಸಲ್ಮಾನ್ ಖಾನ್ ಗೆಳೆಯ ಹಾಗೂ ಬಾಲಿವುಡ್‌ನ ಹಿರಿಯ ನಿರ್ಮಾಪಕ ಸಾಜಿದ್ ನಾಡಿಯದ್ವಾಲ ಸಿನಿಮಾ ನಿರ್ಮಾಣ ಎನ್ನಲಾಗುತ್ತಿದೆ. ಸದ್ಯ ಈ ಬಗ್ಗೆ ಜೋಗಿ ಪ್ರೇಮ್, ಸಲ್ಮಾನ್ ಖಾನ್ ಹಾಗೂ ಸಾಜಿದ್ ನಾಡಿಯದ್ವಾಲ ಮೂವರಿಂದ ಅಧಿಕೃತ ಹೇಳಿಕೆ ಬಂದಿಲ್ಲ. ಆದರೆ, ಸ್ಯಾಂಡಲ್‌ವುಡ್‌ನಲ್ಲಿ ಇಂತಹದ್ದೊಂದು ಸುದ್ದಿ ಹರಿದಾಡುತ್ತಿರೋದಂತೂ ನಿಜ.

More from Filmibeat

English summary
Buzz: Jogi Prem to Direct Salman Khan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X