ಯಶ್ 39ನೇ ಹುಟ್ಟುಹಬ್ಬಕ್ಕೆ ಭರ್ಜರಿ ಸರ್ಪ್ರೈಸ್; ಮಲೇಷ್ಯಾ ಅಭಿಮಾನಿಗಳಿಂದ 'ಕೆಜಿಎಫ್' ಸಂಭ್ರಮ

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸೆಲೆಬ್ರೆಷನ್ ಈಗಾಗಲೇ ಶುರುವಾಗಿದೆ. ಬರ್ತ್‌ಡೇಗೆ ಇನ್ನೂ ಒಂದು ವಾರವಿದೆ ಅನ್ನುವಾಗಲೇ ಫ್ಯಾನ್ಸ್ ಸಂಭ್ರಮಿಸುವುದಕ್ಕೆ ಶುರು ಮಾಡಿದ್ದಾರೆ. ಈ ಬಾರಿ ಬರ್ತ್‌ಡೇಗೆ ಊರಿನಲ್ಲಿ ಇರೋದಿಲ್ಲ ಅಂತ ಯಶ್ ಹೇಳಿದ್ದರೂ ಅಭಿಮಾನಿಗಳು ಸಂಭ್ರಮ ನಿಲ್ಲಿಸುವುದಕ್ಕೆ ರೆಡಿಯಿಲ್ಲ. ಹೀಗಾಗಿ ರಾಕಿಂಗ್ ಸ್ಟಾರ್ ಯಶ್ ಬರ್ತ್‌ಡೇಯನ್ನು ತಮ್ಮದೇ ಸ್ಟೈಲ್‌ನಲ್ಲಿ ಆಚರಿಸುವುದಕ್ಕೆ ನಿರ್ಧರಿಸಿದ್ದಾರೆ.

ಕರ್ನಾಟಕದ ಮೂಲೆ ಮೂಲೆಯಲ್ಲಿ ರಾಕಿಂಗ್ ಸ್ಟಾರ್ ಅಭಿಮಾನಿಗಳು ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. ಶೂಟಿಂಗ್ ನಿಮಿತ್ತ ರಾಕಿಂಗ್ ಸ್ಟಾರ್ ಯಶ್ ಊರಲ್ಲಿ ಇರುವುದಿಲ್ಲ ಎಂದು ಹೇಳಿದ್ದಾರೆ. ಈ ಬೆನ್ನಲ್ಲೇ ತಮ್ಮ ತಮ್ಮ ಊರಿನಲ್ಲೇ ಅಭಿಮಾನಿಗಳ ಬಳಿಗ ಯಶ್ ಬರ್ತ್‌ಡೇ ಮಾಡುವುದಕ್ಕೆ ಮುಂದಾಗಿದ್ದಾರೆ. ಇದೇ ಬೆನ್ನಲ್ಲೇ ಮತ್ತೊಂದು ಸುದ್ದಿ ಓಡುತ್ತಿದೆ. ಬರ್ತ್‌ಡೇ ಅಂಗವಾಗಿ ಯಶ್‌ ಫ್ಯಾನ್ಸ್ 'ಕೆಜಿಎಫ್ ಚಾಪ್ಟರ್ 1' ಸಿನಿಮಾವನ್ನು ರಿಲೀಸ್ ಮಾಡುತ್ತಿದ್ದಾರೆ ಎನ್ನಲಾಗಿದೆ.

Buzz is that KGF Chapter 1 is re-releasing in Malaysia on Yash s birthday on January 8th

ಸೋಶಿಯಲ್ ಮೀಡಿಯಾದಲ್ಲಿ ಇಂತಹದ್ದೊಂದು ಸುದ್ದಿ ಸದ್ದು ಮಾಡುತ್ತಿದೆ. ಸಾಮಾನ್ಯವಾಗಿ ಸೂಪರ್‌ಸ್ಟಾರ್‌ಗಳು ಬರ್ತ್‌ಡೆಯಂದು ತಮ್ಮ ಅಭಿಮಾನಿಗಳಿಗೆ ಏನಾದರೂ ಸರ್ಪ್ರೈಸ್ ಕೊಡುತ್ತಾರೆ. ಏನಿಲ್ಲ ಅಂದರೂ ಒಂದು ಪೋಸ್ಟ್‌ ಅಂತೂ ರಿಲೀಸ್ ಆಗುತ್ತೆ. ಆದರೆ, ಈ ವರ್ಷ 'ಟಾಕ್ಸಿಕ್‌'ಗೆ ಸಂಬಂಧಿಸಿದ ಒಂದೇ ಒಂದು ಅಪ್‌ಡೇಟ್ ಕೂಡ ಇರುವುದಿಲ್ಲ ಅನ್ನೋ ಮಾಹಿತಿ. ಈ ಮಧ್ಯೆ 'ಕೆಜಿಎಫ್' ರೀ ರಿಲೀಸ್‌ಗೆ ಫ್ಯಾನ್ಸ್ ಮುಂದಾಗಿದ್ದಾರೆ.

ಅಷ್ಟಕ್ಕೂ 'ಕೆಜಿಎಫ್ ಚಾಪ್ಟರ್ 1' ರೀ-ರಿಲೀಸ್‌ಗೆ ಮುಂದಾಗಿರುವುದು ಮಲೇಷ್ಯಾದಲ್ಲಿ ಇರುವ ಯಶ್ ಅಭಿಮಾನಿಗಳು. ಹೀಗೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಮಲೇಷ್ಯಾದ ಯಶ್ ಅಭಿಮಾನಿಗಳು 'ಕೆಜಿಎಫ್' ಚಾಪ್ಟರ್ 1 ಅನ್ನು ಯಶ್ ಹುಟ್ಟುಹಬ್ಬದಂದು ಅದ್ಧೂರಿಯಾಗಿ ರೀ ರಿಲೀಸ್ ಮಾಡುತ್ತಿದ್ದಾರೆ. ಶೀಘ್ರದಲ್ಲಿಥೇ ಆ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಯಶ್ ಫ್ಯಾನ್ಸ್ ಗ್ರೂಪ್ ಹಂಚಿಕೊಳ್ಳುತ್ತಿದೆ.

'ಕೆಜಿಎಫ್' ಸಿನಿಮಾ ಬಳಿಕ ಯಶ್‌ಗೆ ಮಲೆಷ್ಯಾದಲ್ಲೂ ಅಭಿಮಾನಿಗಳು ಹುಟ್ಟಿಕೊಂಡಿದ್ದರು. 'ಕೆಜಿಎಫ್' ರಿಲೀಸ್ ಆದ್ಮೇಲೆ ಅಲ್ಲೂ ಯಶ್‌ಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದರು. 'ಕೆಜಿಎಫ್ 2' ರಾಕಿ ಭಾಯ್ ಅಭಿಮಾನಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿತ್ತು. ಈ ಕಾರಣಕ್ಕೆ ಅಲ್ಲಿನ ಅಭಿಮಾನಿಗಳಿಗೋಸ್ಕರ್ 'ಕೆಜಿಎಫ್' ಸಿನಿಮಾ ರೀ ರಿಲಿಸ್ ಮಾಡುವುದಕ್ಕೆ ಮಲೇಷ್ಯಾ ಫ್ಯಾನ್ಸ್ ಮತ್ತೆ ಮುಂದಾಗಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಆದರೆ, ಹೊಂಬಾಳೆ ಫಿಲ್ಮ್ಸ್‌ ಇನ್ನೂ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ.

ಇನ್ನು ಯಶ್ 'ಟಾಕ್ಸಿಕ್ಸ್' ಸಿನಿಮಾಗೆ ಕೈ ಹಾಕಿದ್ದು ಕೂಡ ಇದೇ ಕಾರಣಕ್ಕೆ ಅನ್ನೋದು ಸ್ಯಾಂಡಲ್‌ವುಡ್‌ನಲ್ಲಿ ಚರ್ಚೆಯಾಗುತ್ತಿದೆ. ಗ್ಲೋಬಲ್ ಮಾರ್ಕೆಟ್‌ಗೆ ರೀಚ್ ಆಗುವುದಕ್ಕೆ ಗ್ಲೋಬಲ್ ಸಬ್ಜೆಕ್ಟ್ ಅನ್ನು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. 'ಟಾಕ್ಸಿಕ್' ಡ್ರಗ್ಸ್ ಮಾಫಿಯಾಗೆ ಸಂಬಂಧಿಸಿದ ಸಿನಿಮಾ ಆಗಿದ್ದು, ಅದಕ್ಕೆ ಗ್ಲೋಬಲ್ ಟಚ್ ಕೊಡಲಾಗಿದೆ. ಮಲೇಷ್ಯಾ ಸೇರಿದಂತೆ ಯಶ್‌ಗೆ ಫ್ಯಾನ್ ಇರುವ ಕಡೆ ಇಂತಹ ಮಾಸ್ ಸಬ್ಜೆಕ್ಟ್ ವರ್ಕ್ ಆಗುತ್ತೆ. ಇದನ್ನು ಗಮನದಲ್ಲಿಟ್ಟುಕೊಂಡೇ ಯಶ್ 'ಟಾಕ್ಸಿಕ್' ಮಾಡುತ್ತಿದ್ದಾರೆ ಅನ್ನೋ ಮಾತುಗಳು ಹೇಳಿ ಬರುತ್ತಿವೆ. ಇದೇ ಸಂದರ್ಭದಲ್ಲಿ ಯಶ್ ಫ್ಯಾನ್ಸ್ ಕಾಮನ್ ಡಿಪಿಯನ್ನು ಜನವರಿ 4ರಂದು ರಿಲೀಸ್ ಮಾಡಲಿದ್ದಾರೆ.

ಇನ್ನು ಯಶ್ ತಮ್ಮ ಹುಟ್ಟುಹಬ್ಬದ ದಿನ 'ಟಾಕ್ಸಿಕ್' ಶೂಟಿಂಗ್‌ನಲ್ಲಿ ಇರುತ್ತಾರೆ. ಸಿನಿಮಾವನ್ನು ಆದಷ್ಟು ಬೇಗ ಮುಗಿಸಿ, 'ರಾಮಾಯಣ' ತಂಡ ಸೇರಿಕೊಳ್ಳಲಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಇನ್ನು ಜನವರಿ 8 ಅವರ ಹುಟ್ಟುಹಬ್ಬದಂದು ಯಶ್ ತಮ್ಮ ಅಭಿಮಾನಿಗಳಿಗೆ ಏನಾದರೂ ಸರ್ಪ್ರೈಸ್ ಕೊಡುತ್ತಾರಾ? ಅಂತ ಗ್ಲೋಬಲ್ ಲೆವೆಲ್‌ನಲ್ಲಿರುವ ಅವರ ಅಭಿಮಾನಿಗಳು ಕಾದು ಕೂತಿದ್ದಾರೆ.

More from Filmibeat

English summary
Buzz is that KGF Chapter 1 is re-releasing in Malaysia on Yash's birthday on January 8th
Read more about: yash kgf birthday
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X