Yash: ಯಶ್‌ಗೆ ಮತ್ತೆ ಪ್ರಶಾಂತ್ ನೀಲ್ ಆಕ್ಷನ್ ಕಟ್? ರಾಕಿ ಭಾಯ್ 19ನೇ ಸಿನಿಮಾ ಇದೇನಾ?

'ಕೆಜಿಎಫ್ 2' ಹೆಚ್ಚು ಕಡಿಮೆ ಒಂದು ವರ್ಷ ಆಗುತ್ತಿದೆ. ಇನ್ನೊಂದು ತಿಂಗಳು ಮುಗಿದರೆ, ಕನ್ನಡದ ಮೆಗಾ ಬ್ಲಾಕ್‌ ಬಸ್ಟರ್ ಸಿನಿಮಾ 'ಕೆಜಿಎಫ್ 2' ಮೊದಲ ವಾರ್ಷಿಕೋತ್ಸವವನ್ನು ಆಚರಣೆ ಮಾಡುತ್ತೆ. ಆದರೂ, ಯಶ್ 19ನೇ ಸಿನಿಮಾ ಅನೌನ್ಸ್ ಆಗಿಲ್ಲ. ಇತ್ತ ಫ್ಯಾನ್ಸ್ ಕೂಡ ಕಾದೂ ಕಾದು ಸಿನಿಮಾ ಯಾವಾಗ ಅಂತ ಕೇಳುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ.

ಮತ್ತೊಂದು ಕಡೆ ಯಶ್‌ಗೆ ಡೈರೆಕ್ಟ್ ಮಾಡುವ ನಿರ್ದೇಶಕರ ಒಂದಷ್ಟು ಹೆಸರುಗಳು ಬಂದು ಹೋಗಿವೆ. ಅದ್ಯಾವುದೂ ಅಲ್ಲ ಅನ್ನೋದು ಈಗ ಗೊತ್ತಾಗಿದೆ. ಹಾಗಿದ್ದರೆ, ಯಶ್ 19ನೇ ಸಿನಿಮಾ ಅನೌನ್ಸ್ ಮಾಡುವುದಕ್ಕೆ ಇನ್ನೂ ಎಷ್ಟು ದಿನ ಬೇಕು? ಅನ್ನೋ ಪ್ರಶ್ನೆ ಅಂತೂ ಎದ್ದಿದೆ. ಅದಕ್ಕೆ ಯಶ್ ಸಮಯದ ಬೊಟ್ಟು ಮಾಡಿ ತೋರಿಸಿದ್ದಷ್ಟೇ ಬಂತು. ಈಗ ಟಾಲಿವುಡ್‌ ಅಂಗಳದಲ್ಲಿ ಯಶ್ ಬಗ್ಗೆ ಹೊಸ ಸುದ್ದಿಯೊಂದು ಓಡಾಡುತ್ತಿದೆ. ಅದೇ 19ನೇ ಸಿನಿಮಾ ಆದ್ರೂ ಆಗಬಹುದು ಎನ್ನಲಾಗುತ್ತಿದೆ.

ಯಶ್ 19ನೇ ಸಿನಿಮಾ ಇದೇನಾ?

ಯಶ್ 19ನೇ ಸಿನಿಮಾ ಎಲ್ಲಾ ಚಿತ್ರರಂಗಕ್ಕೂ ದೊಡ್ಡ ಮಿಸ್ಟರಿ ಆಗೋಗಿದೆ. ರಾಕಿ ಭಾಯ್ ಮುಂದಿನ ಸಿನಿಮಾ ಬಗ್ಗೆ ಅಷ್ಟೊಂದು ಸೀಕ್ರೆಟ್ ಯಾಕೆ? ಹೋಗಲಿ ಸಿನಿಮಾ ಅನೌನ್ಸ್ ಆಗದೇ ಹೋದರೂ, ಕಥೆ ಹೆಣೆತ್ತಿರೋದು ಯಾರು? ಪ್ರಿ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆಯಾ? ಇಂತಹ ವಿಷಯಗಳಾದರೂ ಹೊರಬೀಳಬೇಕಿತ್ತು. ಅದರ ಸುಳಿವೂ ಇಲ್ಲ. ಇದೇ ವೇಳೆ ಟಾಲಿವುಡ್‌ನಲ್ಲಿ 'ಕೆಜಿಎಫ್ 2' ಬಳಿಕ ಯಶ್ ನಟಿಸಲಿರುವ ಸಿನಿಮಾ ಬಗ್ಗೆ ವರದಿ ಮಾಡಿದೆ.

Buzz Is that KGF Star Yash Is Part Of Prabhas Prashanth Neel Movie Salaar Will join In Europe

'ಸಲಾರ್' ಸಿನಿಮಾ ನಿರ್ದೇಶಿಸುತ್ತಿರುವ ಪ್ರಶಾಂತ್ ನೀಲ್ ಮತ್ತೆ ಯಶ್‌ಗೆ ಆಕ್ಷನ್ ಕಟ್ ಹೇಳಲಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ. ಅಸಲಿಗೆ ಆ ಸಿನಿಮಾ ಯಾವುದು ಅಂತಿರಾ? ಟಾಲಿವುಡ್ ಮಂದಿಯ ಪ್ರಕಾರ, ಯಶ್ 'ಸಲಾರ್' ಸಿನಿಮಾದಲ್ಲಿ ನಟಿಸುತ್ತಿದ್ದಾರಂತೆ. ಇದೇ ಅವರ 19ನೇ ಸಿನಿಮಾ ಆಗಬಹುದು ಎನ್ನಲಾಗುತ್ತಿದೆ.

ಇದೇ ತಿಂಗಳಿಂದ ಯುರೋಪ್‌ನಲ್ಲಿ ಶೂಟಿಂಗ್

ಹೌದು, ಯಶ್ 'ಸಲಾರ್' ಸಿನಿಮಾದಲ್ಲಿಸ ನಟಿಸುತ್ತಿದ್ದಾರೆ ಅಂತ ಟಾಲಿವುಡ್‌ನಲ್ಲಿ ಜೋರಾಗಿ ಸುದ್ದಿ ಹಬ್ಬಿದೆ. ಯಶ್ ಭಾಗದ ಶೂಟಿಂಗ್ ಅನ್ನು ಯುರೋಪ್‌ನಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆಯಂತೆ. ಅದಕ್ಕೆ ಪ್ರಶಾಂತ್ ನೀಲ್ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರಂತೆ. ಕೆಲವು ತೆಲುಗು ಮಾಧ್ಯಮಗಳು ಇದೇ ತಿಂಗಳಿಂದ ಶೂಟಿಂಗ್ ಆರಂಭ ಅಂತಲೂ ವರದಿ ಮಾಡಿವೆ.

ಅಂದ್ಹಾಗೆ ಯಶ್, 'ಸಲಾರ್' ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಸಿನಿಮಾದಲ್ಲಿ ಹೆಚ್ಚು ಕಡಿಮೆ 7 ನಿಮಿಷ ರಾಕಿ ಭಾಯ್ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಆದರೆ, ಯಶ್ ಮುಂದಿನ ಸಿನಿಮಾ ಬಗ್ಗೆ ಈಗಾಗಲೇ ಹಲವು ಸುದ್ದಿಗಳು ಹರಿದಾಡಿದ್ದು, ಎಲ್ಲವೂ ಸುಳ್ಳು ಸುದ್ದಿ ಅಂತಲೇ ಸಾಬೀತಾಗಿದೆ. ಇನ್ನು ಯಶ್ 'ಸಲಾರ್‌'ನಲ್ಲಿ ನಟಿಸುತ್ತಾರೆ ಅನ್ನೋ ಬಗ್ಗೆ ನಿರ್ಮಾಣ ಸಂಸ್ಥೆ ಅಧಿಕೃತವಾಗಿ ಹೇಳಬೇಕಿದೆ.

ಸೂಪರ್‌ಸ್ಟಾರ್‌ಗಳ ಜೊತೆ ಪ್ರಭಾಸ್

ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ 'ಸಲಾರ್' ಸಿನಿಮಾ ನೋಡಲು ಡಾರ್ಲಿಂಗ್ಸ್ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಭಾರಿ ಬಜೆಟ್‌ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.ಶೃತಿ ಹಾಸನ್ ಈಗಾಗಲೇ ಶೂಟಿಂಗ್ ಮುಗಿಸಿದ್ದಾರೆ. ಪ್ರಭಾಸ್ ಜೊತೆಗೆ ಜಗಪತಿ ಬಾಬು, ಮಲಯಾಳಂ ಸ್ಟಾರ್ ಹೀರೊ ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Buzz Is that KGF Star Yash Is Part Of Prabhas Prashanth Neel Movie Salaar Will join In Europe

ಪ್ರಶಾಂತ್ ನೀಲ್ ಮೇಲೆ ಎಲ್ಲರ ನಿರೀಕ್ಷೆ ಹೆಚ್ಚಾಗಿದೆ. ಈಗ ಯಶ್ ಕೂಡ ಕ್ಲೈಮ್ಯಾಕ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ ಅನ್ನೋ ಸುದ್ದಿ ಸಂಚಲನ ಸೃಷ್ಟಿಸಿದೆ. ಆದರೆ, ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ಸುದ್ದಿ ಅಧಿಕೃತವೇ ಅನ್ನೋದಷ್ಟೇ ಗೊತ್ತಾಗಬೇಕಿದೆ. ಒಂದು ವೇಳೆ ನಿಜವಾದ ರಾಕಿ ಭಾಯ್ ಅಭಿಮಾನಿಗಳಿಗೆ ಸ್ವಲ್ಪ ಜೀವ ಬಂದಂತಾಗುತ್ತೆ.

More from Filmibeat

English summary
Buzz Is that KGF Star Yash Is Part Of Prabhas Prashanth Neel Movie Salaar Will join In Europe, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X