'ಟಾಕ್ಸಿಕ್'ನ ಆ ದೃಶ್ಯವನ್ನು ಕತ್ತರಿಸುವಂತೆ ದುಂಬಾಲು ಬಿದ್ದರೇ ಕಿಯಾರಾ ಅಡ್ವಾನಿ? ಯಶ್ ನಿರ್ಧಾರವೇನು?
ಎಲ್ಲಾ ಅಂದುಕೊಂಡಂತೆ ಆಗಿದ್ದರೆ, 'ಟಾಕ್ಸಿಕ್' ಸಿನಿಮಾ ಈಗಾಗಲೇ ರಿಲೀಸ್ ಆಗಬೇಕಿತ್ತು. 'ಧುರಂಧರ್ 2' ಸಿನಿಮಾ ಬಿಡುಗಡೆಯಾದ ದಿನವೇ ಯಶ್ ಅಖಾಡಕ್ಕೆ ಇಳಿಯಬೇಕಿತ್ತು. ಆದರೆ, ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವೆ ನಡೆಯುತ್ತಿರುವ ಯುದ್ಧದ ಈ ಸಂದರ್ಭದಲ್ಲಿ ಸಿನಿಮಾ ಬಿಡುಗಡೆ ಮಾಡೋದು ಬೇಡವೆಂದು ಚಿತ್ರತಂಡ ನಿರ್ಧಾರವನ್ನು ತೆಗೆದುಕೊಂಡಿತ್ತು. ಹೀಗಾಗಿ ಸಿನಿಮಾವನ್ನು ಮುಂದೂಡಲಾಗಿದೆ.
'ಟಾಕ್ಸಿಕ್' ತುಣುಕುಗಳನ್ನು ನೋಡಿದ ಬಳಿಕ ಸಿನಿಮಾ ಮಂದಿ ಹಾಗೂ ಪ್ರೇಕ್ಷಕರು ಕಂಗಾಲಾಗಿದ್ದರು. ಆದರೂ, ಯಶ್ ಇಂತಹ ದೃಶ್ಯಗಳಲ್ಲಿ ಸುಮ್ಮನೆ ನಟಿಸುವವರೇನು ಅಲ್ಲ. ಹಸಿ ಬಿಸಿ ದೃಶ್ಯಗಳು ಉಲ್ಟಾ ಹೊಡೆದರೆ, ಅದರ ಪ್ರಭಾವ ಹೇಗಿರುತ್ತೆ? ಅನ್ನೋದು ಅವರಿಗೆ ಗೊತ್ತಿದೆ. ಹೀಗಿದ್ದರೂ, ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದ ದೃಶ್ಯಗಳಲ್ಲಿ ಯಶ್ ನಟಿಸಿದ್ದಾರೆಂದರೆ ಬಲವಾದ ಕಾರಣವಿದ್ದೇ ಇರುತ್ತೆ.

ಇತ್ತೀಚೆಗೆ 'ಕೆಡಿ' ವಿವಾದದ ಬಳಿಕ ಹಸಿ ಬಿಸಿ ದೃಶ್ಯಗಳಲ್ಲಿ ನಟಿಸುವುದಕ್ಕೆ ನಟಿಯರು ಬೆಚ್ಚಿಬೀಳುತ್ತಿದ್ದಾರೆ. ಈಗ ಬಾಲಿವುಡ್ ಅಂಗಳದಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ. ನಟಿ ಕಿಯಾರಾ ಅಡ್ವಾಣಿ 'ಟಾಕ್ಸಿಕ್'ನಲ್ಲಿರುವ ತನ್ನ ಹಸಿಬಿಸಿ ದೃಶ್ಯಗಳನ್ನು ತೆಗೆದು ಹಾಕುವಂತೆ ಮನವಿ ಮಾಡಿಕೊಂಡಿದ್ದಾರೆ ಅನ್ನೋದು ಸುದ್ದಿ. ಅಷ್ಟಕ್ಕೂ ಕಿಯಾರಾ ಅಡ್ವಾಣಿ ಆತಂಕವೇನು? ಯಾಕೀ ನಿರ್ಧಾರ? ತಿಳಿಯುವುದಕ್ಕೆ ಮುಂದೆ ಓದಿ..
ರಾಕಿಂಗ್ ಸ್ಟಾರ್ ಯಶ್ ನಟಿಸಿದ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್' ಸ್ಯಾಂಡಲ್‌ವುಡ್ ಅಷ್ಟೇ ಅಲ್ಲದೆ, ಭಾರತೀಯ ಚಿತ್ರರಂಗ ಸೇರಿದಂತೆ ವಿದೇಶಗಳಲ್ಲೂ ರಿಲೀಸ್ ಆಗುತ್ತಿದೆ. ಹೀಗಾಗಿ 2026ಕ್ಕೆ ದೊಡ್ಡ ಮಟ್ಟಕ್ಕೆ ಸದ್ದು ಮಾಡುವ ನಿರೀಕ್ಷೆಯಿದೆ. ಮಾರ್ಚ್ 19ರಂದು ರಿಲೀಸ್ ಆಗಬೇಕಿದ್ದ ಸಿನಿಮಾ ಜೂನ್ 4ರಂದು ರಿಲೀಸ್ ಆಗಲಿದೆ. ಈ ಮಧ್ಯೆ ಕಿಯಾರಾ ಅಡ್ವಾನಿ ತಮ್ಮ ಯಶ್ ನಡುವಿನ ಹಸಿ ಬಿಸಿ ದೃಶಗಳನ್ನು ತೆಗೆದು ಹಾಕುವಂತೆ ಚಿತ್ರತಂಡಕ್ಕೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
'ಟಾಕ್ಸಿಕ್' ಅನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್‌ನಲ್ಲಿ ವೆಂಕಟ್ ಕೆ ನಾರಾಯಣ್ ಹಾಗೂ ಯಶ್ ದೊಡ್ಡ ಬಜೆಟ್‌ನಲ್ಲಿ 'ಟಾಕ್ಸಿಕ್' ನಿರ್ಮಿಸಿದ್ದಾರೆ. ಮಲಯಾಳಂನ ಖ್ಯಾತ ನಟಿ-ನಿರ್ದೇಶಕಿ ಗೀತು ಮೋಹನ್‌ದಾಸ್ ಆಕ್ಷನ್ ಕಟ್ ಹೇಳಿದ್ದಾರೆ. ಯಶ್ ಜೊತೆ ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಸೇರಿ ಐವರು ನಾಯಕಿಯರು ಸ್ಕ್ರೀನ್ ಶೇರ್ ಮಾಡಿದ್ದಾರೆ. ಹಾಗೇ ಅಕ್ಷಯ್ ಒಬೆರಾಯ್, ಬಿಟ್ರೀಸ್ ತೌಫಾನ್‌ಬಾಚ್, ಡ್ಯಾರಿಲ್ ಡಿಸಿಲ್ವಾ, ಸುದೇವ್ ನಾಯರ್, ಅಮಿತ್ ತಿವಾರಿ, ಟೋವಿನೋ ಥಾಮಸ್, ಕೈಲ್ ಪಾಲ್ ಅವರ ಪಾತ್ರವಿದೆ.
"ಸದ್ಯ ಚರ್ಚೆ ಆಗುತ್ತಿರುವ ವಿಷಯಕ್ಕೆ ಬಂದರೆ, ಯಶ್ ಜೊತೆ ಕಿಯಾರಾ ಅಡ್ವಾಣಿ ಕೆಲವು ಹಸಿ ಬಿಸಿ ದೃಶ್ಯಗಳಲ್ಲಿ ನಟಿಸಿದ್ದಾರೆ ಎನ್ನಲಾಗಿದೆ. ಅತೀ ಅನ್ನೋನ್ಯದ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಂತಹ ಹಸಿ ಬಿಸಿ ದೃಶ್ಯ ನಟಿಸಲು ಕಿಲಿಯಾರಾ ಅಡ್ವಾಣಿ ಮನಸ್ಸು ಮಾಡಿಲ್ಲ ಎನ್ನಲಾಗಿದೆ. ತಮ್ಮ 'ಕ್ಲೀನ್ ಇಮೇಜ್' ಮತ್ತು ವಿವಾಹಿತೆಯಾಗಿ, ಮಕ್ಕಳ ತಾಯಿಯಾಗಿ ಅನಗತ್ಯ ವಿವಾದ ಬೇಡ ಎಂದು ಅವರು ಹಿಂಜರಿದಿದ್ದಾರೆ ಎನ್ನಲಾಗಿದೆ.
ಈ ದೃಶ್ಯದ ತೀವ್ರತೆಯನ್ನು ಕಡಿಮೆ ಮಾಡಲು ಅಥವಾ ಸಿನಿಮಾದಿಂದ ತೆಗೆದುಹಾಕಲು ಕಿಯಾರಾ ಅಡ್ವಾನಿ, ಯಶ್, ನಿರ್ದೇಶಕಿ ಮತ್ತು ನಿರ್ಮಾಪಕರ ಗಮನಕ್ಕೆ ಇದನ್ನು ತಂದಿದ್ದಾರೆ. ಯಶ್ ಹಾಗೂ ಗೀತು ಮೋಹನ್‌ದಾಸ್ ಅಂತಿಮ ನಿರ್ಧಾರ ತಳೆದಿಲ್ಲ. ಕಿಯಾರಾ ಮನವಿಗೆ ಮೆಚ್ಚಿ ಒಪ್ಪುತ್ತಾರೋ ಅಥವಾ ಅವರನ್ನು ಒಪ್ಪಿಸಿ ಈ ದೃಶ್ಯ ಚಿತ್ರೀಕರಿಸುತ್ತಾರೋ ಇನ್ನೂ ನಿರ್ಧಾರ ಇನ್ನೂ ಹೊರ ಬೀಳಬೇಕಿದೆ.


Click it and Unblock the Notifications











