ಬಿಗ್‌ಬಾಸ್ ಕನ್ನಡ ಸೀಸನ್ 12 ನಿರೂಪಣೆಗೆ ಷರತ್ತು ವಿಧಿಸಿದರೇ ಕಿಚ್ಚ ಸುದೀಪ್? ಏನಿದು ಸುದ್ದಿ?

ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ. ಈ ಶೋಗೆ ಅದರದ್ದೇ ಆದ ಫ್ಯಾನ್ ಫಾಲೋವಿಂಗ್‌ಯಿದೆ. ಅದಕ್ಕೆ ಪ್ರಮುಖ ಕಾರಣ ಸ್ಯಾಂಡಲ್‌ವುಡ್ ಬಾದ್‌ಷಾ ಕಿಚ್ಚ ಸುದೀಪ್. ಆದರೆ, ಕಳೆದ ಸೀಸನ್ ಮುಗಿಯುತ್ತಿದ್ದಂತೆ ಸುದೀಪ್ ಮುಂದಿನ ಸೀಸನ್ ನಿರೂಪಣೆ ಮಾಡುವುದಿಲ್ಲ ಎಂದು ಹೇಳಿದ್ದರು. ಇದು ಕಿರುತೆರೆ ವೀಕ್ಷಕರಿಗೆ ಹಾಗೂ ಅವರ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ನಿರಾಸೆನೂ ಆಗಿತ್ತು.

ಕಿಚ್ಚ ಸುದೀಪ್ ಬಿಗ್ ಬಾಸ್ ನಿರೂಪಣೆಯಿಂದ ಹೊರ ಬಂದಿದ್ದಕ್ಕೆ ಕಾರಣವೇನು ಎನ್ನುವ ಬಗ್ಗೆ ನೂರೆಂಟು ಚರ್ಚೆಯಾಗಿತ್ತು. ಕಳೆದ ಸೀಸನ್ ಆರಂಭದಲ್ಲಿ ಗಲಾಟೆ, ಕಿತ್ತಾಟ ಹೆಚ್ಚಾಗಿದ್ದರೂ, ನಂತರದ ದಿನಗಳಲ್ಲಿ ಕಿಕ್ ಕೊಟ್ಟಿತ್ತು. ಹಳ್ಳಿಹೈದ ಹನುಮಂತು ಬಿಗ್‌ ಬಾಸ್ ವಿನ್ನರ್ ಆಗಿ ಹೊರಹೊಮ್ಮಿದ್ದರು. ವೈಲ್ಡ್ ಕಾರ್ಡ್ ಪಡೆದು ಎಂಟ್ರಿ ಕೊಟ್ಟಿದ್ದ ಹನುಮಂತು ವೀಕ್ಷಕರ ಮನ ಗೆದ್ದಿದ್ದರು. ಇದೆಲ್ಲದಕ್ಕಿಂತ ಹೆಚ್ಚಾಗಿ ಕಿಚ್ಚ ಸುದೀಪ್ ಇದು ನನ್ನ ಕೊನೆಯ ಸೀಸನ್ ಎಂದಿದ್ದು ಅವರ ಅಭಿಮಾನಿಗಳಿಗೆ ತಡೆದುಕೊಳ್ಳುವುದಕ್ಕೆ ಆಗಿರಲಿಲ್ಲ.

Buzz is that Kichcha Sudeep has set some conditions for hosting Bigg Boss Kannada 12

ಈಗ ಮತ್ತೆ ಬಿಗ್‌ಬಾಸ್‌ ಕನ್ನಡ ಸೀಸನ್ 12ರ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ದಿಢೀರನೇ ಕಿಚ್ಚ ಸುದೀಪ್ 12ನೇ ಸೀಸನ್ ಮಾಡುವುದಕ್ಕೆ ಒಂದಿಷ್ಟು ಷರತ್ತುಗಳನ್ನು ಹಾಕಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಮತ್ತೆ ಬಿಗ್ ಬಾಸ್ ಕನ್ನಡದ 12ನೇ ಸೀಸನ್ ನಿರೂಪಣೆಗೆ ಮರಳಬಹುದೇ ಕಿಚ್ಚ ಸುದೀಪ್? ಅಸಲಿಗೆ ಆ ಕಂಡೀಷನ್‌ಗಳೇನು? ಸಿನಿಮಾಗಳ ಕಥೆಯೇನು?

ಮುಂದೆ ಓದಿ

ಕಿಚ್ಚ ಸುದೀಪ್ ಬಿಗ್ ಬಾಸ್ ಕನ್ನಡ 12 ನಿರೂಪಣೆಗೆ ಒಪ್ಪಿದ್ದಾರಾ?
ಬಿಗ್‌ ಬಾಸ್ ಕನ್ನಡ 12 ನಿರೂಪಣೆ ಸುದೀಪ್ ಕಂಡೀಷನ್ ಹಾಕಿದ್ರಾ?
ಕಿಚ್ಚ ಸುದೀಪ್ ನಟಿಸುತ್ತಿರುವ ಸಿನಿಮಾಗಳ ಕಥೆ ಏನು?

ಹೌದು, ಕಳೆದ ಎರಡು ದಿನಗಳಿಂದ ಕಿಚ್ಚ ಸುದೀಪ್ 12ನೇ ಬಿಗ್ ಬಾಸ್ ಕನ್ನಡ ಸೀಸನ್ ಅನ್ನು ನಿರೂಪಣೆ ಮಾಡಬಹುದೆಂಬ ಸುದ್ದಿ ಹರಿದಾಡುತ್ತಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ಹುಟ್ಟಿಕೊಂಡಿದ್ದಾ? ಇಲ್ಲ ಸುದೀಪ್ ಅಥವಾ ಕಲರ್ಸ್ ಕನ್ನಡ ಮೂಲದಿಂದ ಹೊರ ಹೊಮ್ಮಿದ ಸುದ್ದಿನಾ? ಎನ್ನುವುದು ಇನ್ನೂ ಗೊತ್ತಾಗಿಲ್ಲ. ಆದರೆ, ಕಲರ್ಸ್ ಕನ್ನಡ ಬಿಗ್ ಬಾಸ್ ನಿರೂಪಣೆ ಮಾಡುವುದಕ್ಕೆ ಸುದೀಪ್ ಮೇಲೆ ಒತ್ತಡ ಹಾಕಿದ್ದಾರೆಂಬ ಸುದ್ದಿ ಓಡಾಡುತ್ತಿದೆ. ಬಿಗ್ ಬಾಸ್ ಮುಗಿದು ಹೆಚ್ಚು ಕಡಿಮೆ 6 ತಿಂಗಳಾಗುತ್ತಿದೆ. ಇನ್ನೇನು ಮುಂದಿನ ಸೀಸನ್‌ಗೆ ರೆಡಿಯಾಗಬೇಕಿದೆ. ಹೀಗಾಗಿ ಮತ್ತೆ ಸುದೀಪ್ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Buzz is that Kichcha Sudeep has set some conditions for hosting Bigg Boss Kannada 12

ಸಾಮಾನ್ಯವಾಗಿ ವರ್ಷದ ಕೊನೆಯಲ್ಲಿ ಶುರುವಾಗುವ 'ಬಿಗ್‌ ಬಾಸ್ ಕನ್ನಡ' ರಿಯಾಲಿಟಿ ಶೋಗೆ ನಾಲ್ಕೈದು ತಿಂಗಳಿಂದಲೇ ತಯಾರಿ ನಡೆಯುತ್ತದೆ. ಹೀಗಾಗಿ ಕಲರ್ಸ್ ಕನ್ನಡ ಸುದೀಪ್ ಅವರನ್ನು ಮತ್ತೆ ನಿರೂಪಣೆಗೆ ಅಪ್ರೋಚ್ ಮಾಡಿರುವ ಸಾಧ್ಯತೆಯಿದೆ. ಈಗಾಗಲೇ ಹಬ್ಬಿರುವ ಸುದ್ದಿಯ ಪ್ರಕಾರ, ಸುದೀಪ್ ಬಿಗ್ ಬಾಸ್ ನಿರೂಪಣೆ ಮಾಡುವುದಕ್ಕೆ ಕೆಲವು ಕಂಡೀಷನ್‌ಗಳನ್ನು ಹಾಕಿದ್ದಾರೆಂಬ ಸುದ್ದಿನೂ ಅಷ್ಟೇ ಚರ್ಚೆಗೆ ಗ್ರಾಸವಾಗಿದೆ.

ಉದಯವಾಣಿಯಲ್ಲಿ ವರದಿಯ ಪ್ರಕಾರ, ಕಿಚ್ಚ ಸುದೀಪ್ ಬಿಗ್ ಬಾಸ್ ನಿರೂಪಣೆಗೆ ಕೆಲವು ಕಂಡೀಷನ್ ಹಾಕಿದ್ದಾರೆ. ಬಿಗ್ ಬಾಸ್ ಮನೆ ಕಲರ್‌ಫುಲ್ ಆಗಿರಬೇಕು. ಕನ್ನಡ ಭಾಷೆಗೆ ಮೊದಲು ಪ್ರಾಮುಖ್ಯತೆಯನ್ನು ನೀಡಬೇಕು. ಈ ರಿಯಾಲಿಟಿ ಶೋನಲ್ಲಿ ಕನ್ನಡವೇ ಅಲ್ಟಿಮೇಟ್. ಹಾಗೆ ವಿವಾದಗಳನ್ನು ಎದುರಿಸುವುದಕ್ಕೆ ಒಳ್ಳೆಯ ಲೀಗಲ್ ಟೀಮ್ ಇರಬೇಕು. ವಿವಾದದಲ್ಲಿ ಸಿಕ್ಕಿಕೊಂಡವರನ್ನು ಆರಿಸಬಾರದು ಎಂದು ಕನ್ನಡ ಕನ್ನಡದ ಮುಖ್ಯಸ್ಥರಿಗೆ ಸುದೀಪ್ ಷರತ್ತು ಹಾಕಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯಿಲ್ಲ.

ಬಿಗ್ ಬಾಸ್ ಕನ್ನಡದ ನಿರೂಪಣೆಯನ್ನು ಕಿಚ್ಚ ಸುದೀಪ್ ಬಿಟ್ಟರೆ, ಬೇರೆ ಯಾರನ್ನೂ ಊಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಸುದೀಪ್ ಇದೇ ನನ್ನ ಕೊನೆಯ ಶೋ ಎಂದಾಗಲೂ ವೀಕ್ಷಕರ ಅಭಿಪ್ರಾಯ ಕೂಡ ಅದೇ ಆಗಿತ್ತು. ಆದರೂ, ರಿಷಬ್ ಶೆಟ್ಟಿ, ಗಣೇಶ್, ರಮೇಶ್ ಅರವಿಂದ್ ಹೆಸರುಗಳು ಕೇಳಿ ಬಂದಿದ್ದವು. ಈಗ ಮತ್ತೆ ಕಿಚ್ಚ ಸುದೀಪ್ ಹೆಸರೇ ಓಡಾಡುತ್ತಿದೆ. ನಿಜಕ್ಕೂ ಕಲರ್ಸ್ ಕನ್ನಡ ಮುಖ್ಯಸ್ಥರು ಸುದೀಪ್ ಜೊತೆ ಮಾತುಕತೆ ನಡೆಸಿದ್ದಾರಾ? ಇಲ್ಲವೇ ಇದು ಕೇವಲ ಹಬ್ಬಿರುವ ಸುದ್ದಿ ಅಷ್ಟೇನಾ? ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

More from Filmibeat

English summary
Buzz is that Kichcha Sudeep has set some conditions for hosting Bigg Boss Kannada 12;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X