ಕಿಚ್ಚ ಸುದೀಪ್ 47ನೇ ಸಿನಿಮಾಗೆ 'ಮಾರ್ಕ್' ಅಂತ ಟೈಟಲ್ ಇಡುವುದಕ್ಕೂ ಈ ಟೈಟಲ್ ಇಟ್ಟಿದ್ದರೇ?
ಕಿಚ್ಚ ಸುದೀಪ್ 52ನೇ ಹುಟ್ಟುಹಬ್ಬಕ್ಕೆ ಅವರ 47ನೇ ಸಿನಿಮಾ ಟೈಟಲ್ ಅನೌನ್ಸ್ ಮಾಡಲಾಗಿದೆ. ಈ ಬಾರಿ ಕಿಚ್ಚ ಸುದೀಪ್ ಅದ್ಧೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಅಭಿಮಾನಿಗಳಿಗೆ ಸಂಭ್ರಮವೋ ಸಂಭ್ರಮ. ಬರ್ತ್‌ಡೇ ಈ ಸಂಭ್ರಮದಲ್ಲಿ ಕಿಚ್ಚ ಸುದೀಪ್ ನಟಿಸುತ್ತಿರುವ ಸಿನಿಮಾ ತಂಡದಿಂದ ಸರ್ಪ್ರೈಸ್ ಸಿಗಬಹುದು. ಹಾಗೇ ಬಿಗ್ ಬಾಸ್ ರಿಯಾಲಿಟಿ ಶೋನ ಝಲಕ್ ಕೂಡ ರಿಲೀಸ್ ಆಗಬಹುದು.
'ಮ್ಯಾಕ್ಸ್' ಸಿನಿಮಾ ಕಿಚ್ಚ ಸುದೀಪ್‌ಗೆ ಸೂಪರ್ ಸಕ್ಸಸ್ ಕೊಟ್ಟಿತ್ತು. ಇದೇ ಯಶಸ್ಸು ಮುಂದುವರೆಸುವುದಕ್ಕೆ ಸುದೀಪ್ ಹಾಗೂ ವಿಜಯ್ ಕಾರ್ತಿಕೇಯ ಇಬ್ಬರೂ ಮತ್ತೆ ಜೊತೆಯಾಗಿದ್ದಾರೆ. ಹೇಗಾದರೂ ಮಾಡಿ ಇದೇ ವರ್ಷ 'ಮ್ಯಾಕ್ಸ್' ಡೇಟ್‌ಗೆ ರಿಲೀಸ್ ಮಾಡಲೇಬೇಕು ಎಂದು ಪಟ್ಟು ಹಿಡಿದು ಕೂತಿದ್ದಾರೆ. ಅದಕ್ಕಾಗಿ ಹಗಲು ರಾತ್ರಿ ಎನ್ನದೆ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

ಕಿಚ್ಚ ಸುದೀಪ್ 47ನೇ ಸಿನಿಮಾ 'ಮಾರ್ಕ್' ಆರಂಭದ ಆಗುವುದಕ್ಕೀ ಮುನ್ನವೇ ಡಿಸೆಂಬರ್‌ಗೆ ರಿಲೀಸ್‌ಗೆ ಶ್ರಮಿಸುತ್ತಿರುವುದಾಗಿ ಹೇಳಿದ್ದರು. ಈಗ ಅದೇ ಡೇಟ್ ಸಿನಿಮಾ ರಿಲೀಸ್ ಆಗುವುದಾಗಿ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಈ ಮಧ್ಯೆ ಸಿನಿಮಾದ ಟೈಟಲ್ ಬಗ್ಗೆನೂ ಚರ್ಚೆ ಶುರುವಾಗಿದೆ. ಸುದೀಪ್ ಬರ್ತ್‌ಡೇಗೆ ಟೈಟಲ್ ಟೀಸರ್ ಅನ್ನೇನೋ ಅನೌನ್ಸ್ ಮಾಡಲಾಗಿದೆ. ಆದರೆ, ಇದು ಮೊದಲ ಇಟ್ಟಿದ್ದ ಟೈಟಲ್ ಆಲ್ಲ ಅಂತ ಗಾಂಧಿನಗರ ಮಾತಾಡಿಕೊಳ್ಳುತ್ತಿದೆ.
ಸುದೀಪ್ ಬರ್ತ್‌ಡೇ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ ಎನ್ನುವಾಗಿನಿಂದ ಈ ಶೀರ್ಷಿಕೆ ಬಗ್ಗೆ ಚರ್ಚೆ ಶುರುವಾಗಿತ್ತು. ಕೊನೆಗೂ ಸಿನಿಮಾ ಟೈಟಲ್ ಏನು ಅನ್ನೋದು ಈಗ ರಿವೀಲ್ ಆಗಿದೆ. ಆದರೆ, ಗಾಂಧಿನಗರದ ಮಂದಿಯ ಬಾಯಲ್ಲಿ ಬೇರೆಯದ್ದೇ ಟೈಟಲ್ ಹರಿದಾಡುತ್ತಿತ್ತು. ಕಿಚ್ಚ ಹಾಗೂ ಅವರ ತಂಡ 47ನೇ ಸಿನಿಮಾ ಟೈಟಲ್ ಏನು ಇಡಬೇಕು ಅನ್ನೋದನ್ನು ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿತ್ತು. 'ಮ್ಯಾಕ್ಸ್' ಬರುವಂತಹದ್ದೇ ಟೈಟಲ್ ಇಡಬೇಕು ಅಂತ ತಲೆ ಕೆಡಿಸಿಕೊಂಡಿತ್ತು. ಹೀಗಾಗಿ 'ಮಾರ್ಕ್' ಅಂತ ಶೀರ್ಷಿಕೆ ಇಟ್ಟಿದೆ ಎನ್ನಲಾಗುತ್ತಿದೆ.
ಅದೇ ಇನ್ನೊಂದು ಕಡೆ ಕಿಚ್ಚನ 47ನೇ ಸಿನಿಮಾದ ಮೊದಲ ಟೈಟಲ್ 'ಮಾರ್ಕ್' ಆಗಿರಲಿಲ್ಲ. ಇಡೀ ತಂಡ ಸೇರಿ 'ಮ್ಯಾಕ್ಸ್ 2' ಅಂತನೇ ಇಡುವುದಕ್ಕೆ ನಿರ್ಧರಿಸಿದ್ದರು. 'ಮ್ಯಾಕ್ಸ್' ಈ ಸಿನಿಮಾಗೂ ಯಾವುದೇ ನಂಟು ಇಲ್ಲದೇ ಇದ್ದರೂ, ಕ್ಲೈಮ್ಯಾಕ್ಸ್‌ನಲ್ಲಿ 'ಮ್ಯಾಕ್ಸ್ 3'ಗೆ ಲೀಡ್ ಕೊಡುವುದಕ್ಕೆ ಮುಂದಾಗಿದ್ದರು. ಕೊನೆಯ ಕ್ಷಣದಲ್ಲಿ 'ಮ್ಯಾಕ್ಸ್ 2' ಬೇಡ. 'ಮಾರ್ಕ್' ಅಂತಲೇ ಇಡೋಣ ಅಂತ ನಿರ್ಧರ ಮಾಡಲಾಯ್ತು. ಹೀಗಂತ ಗಾಂಧೀನಗರದ ಮಂದಿ ಹೇಳುತ್ತಿದ್ದಾರೆ.
ಅಸಲಿಗೆ ಈ ಸಿನಿಮಾವನ್ನು ಆರಂಭ ಮಾಡುವ ಮೊದಲೇ ಸ್ವತ: ಕಿಚ್ಚ ಸುದೀಪ್ ಇದು 'ಮ್ಯಾಕ್ಸ್' ಸೀಕ್ವೆಲ್ ಅಲ್ಲ ಅನ್ನೋದನ್ನು ಸ್ಪಷ್ಟಪಡಿಸಿದ್ದರು. ಇದು ಬೇರೆಯದ್ದೇ ಕಥೆ. ಆದರೆ, ಇಲ್ಲೂ ಕೂಡ ಪೊಲೀಸ್ ಅಧಿಕಾರಿಯಾಗಿಯೇ ಕಾಣಿಸಿಕೊಳ್ಳುತ್ತೇನೆ ಎಂದು ಕಿಚ್ಚ ಹೇಳಿದ್ದರು. ಹೀಗಾಗಿ ಮತ್ಯಾಕೆ 'ಮ್ಯಾಕ್ಸ್ 2' ಅಂತ ಟೈಟಲ್ ಇಡುವ ಆಲೋಚನೆ ಮಾಡುತ್ತಾರೆ ಎಂಬ ಪ್ರಶ್ನೆ ಕೂಡ ಕಾಡುತ್ತೆ. ಅಲ್ಲದೆ ಈ ಬಗ್ಗೆ ಅಧಿಕೃತವಾಗಿ ಯಾರೂ ಹೇಳಿಕೊಂಡಿಲ್ಲ.
ಇನ್ನು ಸಿನಿಮಾ ರಿಲೀಸ್ ಮಾಡುವ ಕಡೆಗೆ ಬರೋದಾರೆ, ಕಿಚ್ಚ ಸುದೀಪ್ 2025, ಡಿಸೆಂಬರ್ 25 ಕ್ರಿಸ್‌ಮಸ್‌ಗೆ ರಿಲೀಸ್ ಮಾಡುವುದಕ್ಕೆ ನಿರ್ಧರಿಸಿದ್ದಾರೆ. ಆದರೆ, ಅದೇ ದಿನ ಶಿವಣ್ಣ, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟನೆಯ '45' ಕೂಡ ರಿಲೀಸ್ ಆಗುತ್ತಿದೆ. ಹೀಗಾಗಿ ಮತ್ತೆ ಎರಡು ಬಿಗ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಕ್ಲ್ಯಾಶ್ ಆಗುವುದನ್ನು ಡಿಸೆಂಬರ್‌ನಲ್ಲಿ ಮತ್ತೆ ನೋಡಬಹುದು. ಸದ್ಯ ಈ ಕ್ಲ್ಯಾಶ್ ಆದರೆ, ಮುಂದೇನು ಅನ್ನೋ ಪ್ರಶ್ನೆಯಂತೂ ಕಾಡುತ್ತಿದೆ.


Click it and Unblock the Notifications











