Kokila Mohan: ಕೋಕಿಲಾ ಮೋಹನ್ 3ನೇ ಇನ್ನಿಂಗ್ಸ್.. ರೂಲ್ಸ್ ಬ್ರೇಕ್ ವಿಜಯ್ 68ನೇ ಸಿನಿಮಾಗೆ ಎಂಟ್ರಿ?
80 ಹಾಗೂ 90 ದಶಕದ ಸಿನಿಮಾಗಳಲ್ಲಿ ಹೀರೊ ಆಗಿ ಮಿಂಚಿದ್ದ ಕನ್ನಡದ ಕೋಕಿಲಾ ಮೋಹನ್. ಕೋಕಿಲಾ ಅಂತ ಹೆಸರು ಕೇಳುತ್ತಿದ್ದಂತೆ ಮೋಹನ್ ಕಣ್ತುಂದೆ ಬರುತ್ತಾರೆ. ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರೊ ನಟ ಇತ್ತೀಚೆಗೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ.
ಕನ್ನಡದವರೇ ಆಗಿ, ಕನ್ನಡದ ಕೋಕಿಲಾ ಸಿನಿಮಾದಿಂದಲೇ ಜನಪ್ರಿಯರಾಗಿದ್ದ ನಟ ತಮಿಳಿನಲ್ಲಿ ಹೆಚ್ಚು ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದರು. ಇಂದಿಗೂ ತಮಿಳರ ಪಾಲಿಗೆ ಕೋಕಿಲಾ ಮೋಹನ್ ಸಿಲ್ವರ್ ಜುಬಿಲಿ ಸ್ಟಾರ್.

1977 ರಿಂದ 1991ರವರೆಗ ಕೋಕಿಲಾ ಮೋಹನ್ ಆಕ್ಟೀವ್ ಆಗಿದ್ದರು. ಸುಮಾರು 99 ಸಿನಿಮಾಗಳಲ್ಲಿ ನಟಿಸಿದ್ದರು. ಇಲ್ಲಿ ಒಂದು ಲಾಂಗ್ ಬ್ರೇಕ್ ತೆಗೆದುಕೊಂಡಿದ್ದ ನಟ ಮತ್ತೆ 100ನೇ ಸಿನಿಮಾಗೆ ಕಮ್‌ಬ್ಯಾಕ್ ಮಾಡಿದ್ದರು. ಬಳಿಕ ಮತ್ತೆ ಬ್ರೇಕ್ ಕೊಟ್ಟಿದ್ದರು. ಕಳೆದ 7 ವರ್ಷಗಳಿಂದ ಸೈಲೆಂಟ್ ಆಗಿದ್ದ ನಟನ ಹೆಸರು ಮತ್ತೆ ತಮಿಳು ಚಿತ್ರರಂಗದಲ್ಲಿ ಕೇಳಿಬರುತ್ತಿದೆ. ಅದುವೇ ದಳಪತಿ ವಿಜಯ್ 68ನೇ ಸಿನಿಮಾ.
68ನೇ ಸಿನಿಮಾದಲ್ಲಿ ದಳಪತಿ ವಿಜಯ್ ಬ್ಯುಸಿ
ದಳಪತಿ ವಿಜಯ್ 'ಲಿಯೋ' ಸಿನಿಮ ಬಿಡುಗಡೆಗೆ ರೆಡಿಯಾಗಿದೆ. ಇದೇ ಅಕ್ಟೋಬರ್ 19ರಂದು ವಿಶ್ವದಾದ್ಯಂತ ಸಿನಿಮಾ ರಿಲೀಸ್ ಆಗುತ್ತಿದೆ. ಹೀಗಿದ್ದರೂ, 68ನೇ ಸಿನಿಮಾವನ್ನು ಆರಂಭ ಮಾಡಿದ್ದಾರೆ. ಆಡಿಯೋ ರಿಲೀಸ್ ಇಲ್ಲವೇ ಪ್ರೀ ರಿಲೀಸ್ ಇವೆಂಟ್ ನಡೆಸಲು ಅವಕಾಶ ಸಿಗದೇ ಇರೋದ್ರಿಂದ ಅಭಿಮಾನಿಗಳಿಗೆ ನಿರಾಸೆಗೊಂಡಿದ್ದಾರೆ. ಆದರೂ, ರಿಲೀಸ್ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳದ ನಟ ವಿಜಯ್ 68ನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
1000 ಕೋಟಿ ಕಲೆಕ್ಷನ್ ಮೇಲೆ ಕಣ್ಣು
ಲೋಕೇಶ್ ಕನಗರಾಜ್ ಹಾಗೂ ದುನಿಯಾ ವಿಜಯ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಎರಡನೇ ಸಿನಿಮಾ. ಈ ಹಿಂದೆ ಬಂದಿದ್ದ 'ಮಾಸ್ಟರ್' ಬ್ಲಾಕ್ ಬಸ್ಟರ್ ಲಿಸ್ಟ್ ಸೇರಿತ್ತು. ಈಗ 'ಲಿಯೋ' 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತೆ ಎಂದು ಕೆಲವು ಈಗಾಗಲೇ ಭವಿಷ್ಯ ನಡಿದಿದ್ದಾರೆ. ಅಡ್ವಾನ್ಸ್ ಬುಕಿಂಗ್ ಕೂಡ ಜೋರಾಗಿದೆ. ಈ ಮಧ್ಯೆನೇ 68ನೇ ಸಿನಿಮಾ ಬಗ್ಗೆನೂ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಅದಕ್ಕೆ ಕಾರಣ ಕನ್ನಡ ಮೂಲದ ಬಹುಭಾಷಾ ನಟ.
ವಿಜಯ್ 68ರಲ್ಲಿ ಕೋಕಿಲಾ ಮೋಹನ್ ವಿಲನ್
ದಳಪತಿ ವಿಜಯ್ 68ನೇ ಸಿನಿಮಾ ಈಗಾಗಲೇ ಶುರುವಾಗಿದೆ. ವೆಂಕಟ್ ಪ್ರಭು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಹಾಡಿನ ಚಿತ್ರೀಕರಣ ಕೂಡ ನಡೆದಿದೆ ಎನ್ನಲಾಗಿದೆ. ಖ್ಯಾತ ನೃತ್ಯ ನಿರ್ದೇಶಕ ರಾಜು ಸುಂದರಂ ಈ ಹಾಡಿಗೆ ಕೊರಿಯೋಗ್ರಫಿ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಸುದ್ದಿ ಮಧ್ಯೆನೇ ಕೋಕಿಲಾ ಮೋಹನ್ ಹೆಸರು ಕೇಳಿಬರುತ್ತಿದೆ. ಕೋಕಿಲಾ ಮೋಹನ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಏಳು ವರ್ಷಗಳ ಬಳಿಕ ನಟನೆ
ಕೋಕಿಲಾ ಮೋಹನ್ ಯಾವುದೇ ಸ್ಟಾರ್ ನಟನ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಶರತ್ತು ವಿಧಿಸಿಕೊಂಡಿದ್ದರು. ಬಹಳ ದಿನಗಳ ಬಳಿಕ ಆ ಶರತ್ತನ್ನು ಮುರಿದಿದ್ದಾರೆಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ. ವಿಜಯ್ 68ನೇ ಸಿನಿಮಾದಲ್ಲಿ ಕೋಕಿಲಾ ಮೋಹನ್ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈ ಹಿಂದೆ ಅರವಿಂದ್ ಸಾಮಿಯ ಹೆಸರು ಕೇಳಿ ಬಂದಿತ್ತು. ಆದರೆ, ಅವರ ಬದಲು ಮೋಹನ್ ಆಯ್ಕೆಯಾಗಿದ್ದು, ಎರಡು ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.


Click it and Unblock the Notifications