Vishal Marriage: ಸೂಪರ್‌ಸ್ಟಾರ್ ತಂಗಿ ಜೊತೆ ವಿಶಾಲ್ ಮದುವೆ? ಮತ್ತೆ ಹಲ್‌ಚಲ್ ಎಬ್ಬಿಸಿದ 'ಪುರುಚ್ಚಿ ದಳಪತಿ'

ಕಾಲಿವುಡ್‌ನ ಸ್ಟಾರ್ ಹೀರೊ ವಿಶಾಲ್ ಆಗಾಗ ಸುದ್ದಿಯಲ್ಲಿರುತ್ತಾರೆ. ಒಮ್ಮೆ ವಿವಾದಗಳಿಂದ ಸದ್ದು ಮಾಡಿದರೆ, ಮತ್ತೊಮ್ಮೆ ಮದುವೆ ವಿಚಾರಕ್ಕೆ ಸದ್ದು ಮಾಡುತ್ತಾರೆ. ಮೂಲತ: ತೆಲುಗಿನವರೇ ಆದರೂ, ತಮಿಳು ಚಿತ್ರರಂಗದಲ್ಲಿ ವಿಶಾಲ್ ಹೆಸರು ಮಾಡಿದ್ದಾರೆ. ಆಕ್ಷನ್ ಸಿನಿಮಾಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡು ಅಪಾರ ಪ್ರಮಾಣದಲ್ಲಿ ಅಭಿಮಾನಿಗಳನ್ನು ಸಂಪಾಧಿಸಿದ್ದಾರೆ.

40 ವರ್ಷದ ವಿಶಾಲ್ ಇನ್ನೂ ಮದುವೆ ಆಗಿಲ್ಲ. ಆಗಾಗ ಇವರ ಮದುವೆ ವಿಷಯವೇ ದೊಡ್ಡ ಮಟ್ಟಕ್ಕೆ ಚರ್ಚೆಯಾಗುತ್ತೆ. ವಯಸ್ಸು 40 ಆದರೂ, ವಿಶಾಲ್ ಮದುವೆ ಆಗದೆ ಇರೋದು ಕೂಡ ಸೋಶಿಯಲ್ ಮೀಡಿಯಾದಲ್ಲಿ ಗಂಭೀರವಾಗಿ ಚರ್ಚೆಯಾಗುತ್ತೆ. ಈಗಾಗಲೇ ಕೆಲವು ನಟಿಯರ ಹೆಸರು ವಿಶಾಲ್ ಮದುವೆ ಜೊತೆ ತಳುಕು ಹಾಕಿಕೊಂಡಿತ್ತು.

Vishal-Lakshmi Menon-Marriage

ಇದೀಗ ಮತ್ತೆ ವಿಶಾಲ್ ಮದುವೆ ಬಗ್ಗೆ ಇಂಟ್ರೆಸ್ಟಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಶೀಘ್ರದಲ್ಲೇ ಕಾಲಿವುಡ್‌ನ ಈ ಸ್ಟಾರ್ ನಟ ಮದುವೆ ಆಗಲಿದ್ದಾರೆ ಅನ್ನೋ ಸುದ್ದಿ ಹಲ್‌ಚಲ್ ಎಬ್ಬಿಸಿದೆ. ಅಷ್ಟಕ್ಕೂ ಆ ನಟಿ ಯಾರು? ವಿಶಾಲ್ ಮದುವೆ ಆಗುತ್ತಿರೋದು ನಿಜವೇ? ತಿಳಿಯಲು ಮುಂದೆ ಓದಿ.

ವಿಶಾಲ್ ಮದುವೆ ಬಗ್ಗೆ ಫ್ಯಾನ್ಸ್‌ಗೆ ಕುತೂಹಲ

ವಿಶಾಲ್ ತೆಲುಗು ಹಾಗೂ ತಮಿಳು ಸಿನಿಮಾ ಮಂದಿಗೆ ತುಂಬಾನೇ ಚಿರಪರಿಚಿತ. ಈ ಸ್ಟಾರ್ ನಟನ ಸಿನಿಮಾಗಳು ಈ ಎರಡೂ ಭಾಷೆಗಳಲ್ಲೂ ಉತ್ತಮ ಕಲೆಕ್ಷನ್ ಮಾಡುತ್ತವೆ. ಹಾಗೇ ಕನ್ನಡಿಗರಿಗೂ ವಿಶಾಲ್ ಚೆನ್ನಾಗಿಯೇ ಗೊತ್ತು. ವಿಶಾಲ್ ತಂದೆ ಉತ್ತಮವಾಗಿ ಕನ್ನಡ ಮಾತಾಡುತ್ತಾರೆ. ಹಾಗೇ ವಿಶಾಲ್‌ಗೂ ಕನ್ನಡಿಗರ ಬಗ್ಗೆ ಗೌರವವಿದೆ. ಅಲ್ಲದೆ ಪುನೀತ್ ರಾಜ್‌ಕುಮಾರ್ ಅಗಲಿದಾಗ, ಅವರ ಸಾಮಾಜಿಕ ಕೆಲಸಗಳಿಂದ ವಿಶಾಲ್ ಪ್ರೇರಿತರಾಗಿದ್ದರು. ದೊಡ್ಮನೆ ಒಪ್ಪಿದರೆ, ಶಕ್ತಿಧಾಮವನ್ನು ದತ್ತು ಪಡೆಯುವುದಾಗಿ ಹೇಳಿ ಕನ್ನಡಿಗರ ಮೆಚ್ಚುಗೆ ಗಳಿಸಿದ್ದರು. ಇದೇ ನಟನ ಮದುವೆ ಮ್ಯಾಟರ್‌ ಈಗ ಮತ್ತೆ ಚರ್ಚೆಯಲ್ಲಿದೆ.

Vishal-Lakshmi Menon-Marriage

ಸೂಪರ್‌ಸ್ಟಾರ್ ತಂಗಿ ಜೊತೆ ವಿಶಾಲ್ ಮದುವೆ

ಕಾಲಿವುಡ್‌ ನಟ ವಿಶಾಲ್‌ಗೆ ಈಗ 40 ವರ್ಷ. ಹೀಗಾಗಿ ಅವರ ಅಭಿಮಾನಿಗಳಿಗೆ ಮದುವೆ ಆಗುತ್ತಾರೋ ಇಲ್ಲವೋ ಅನ್ನೋ ಆತಂಕ. ಈಗಾಗಲೇ ವಿಶಾಲ್ ಹೈದರಾಬಾದ್‌ನ ಯುವತಿಯೊಂದಿಗೆ ಮದುವೆ ಆಗಬೇಕಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಮುರಿದುಬಿತ್ತು ಎನ್ನಲಾಗಿದೆ. ಹಾಗೇ ತಮಿಳಿನ ಸ್ಟಾರ್ ನಟ ಶರತ್ ಕುಮಾರ್ ಪುತ್ರಿ ವರಲಕ್ಷ್ಮಿಯನ್ನು ವಿವಾಹವಾಗಲಿದ್ದಾರೆ ಅನ್ನೋ ಸುದ್ದಿ ಹಬ್ಬಿತ್ತು. ಆದರೆ, ಇಬ್ಬರೂ ಒಳ್ಳೆಯ ಸ್ನೇಹಿತರು ಅಂತಲೇ ವಾದಿಸಿಕೊಂಡಡು ಬಂದಿದ್ದರು. ಈಗ ತಮಿಳಿನ ಸೂಪರ್‌ಸ್ಟಾರ್ ನಟಿಯೊಂದಿಗೆ ವಿಶಾಲ್ ಮದುವೆ ಆಗಲಿದ್ದಾರೆ ಅಂತ ಸುದ್ದಿ ಹಬ್ಬಿದೆ.

ವಿಶಾಲ್ ಜೊತೆ ತಳುಕು ಹಾಕಿಕೊಂಡ ಆ ನಟಿ ಯಾರು?

ತೆಲುಗು ಹಾಗೂ ತಮಿಳು ಮಾಧ್ಯಮಗಳಲ್ಲಿ ಇದೇ ಸುದ್ದಿ. ಹೀಗಾಗಿ ಸೂಪರ್‌ಸ್ಟಾರ್ ಸಹೋದರಿ ಯಾರು ಅಂತ ಅಭಿಮಾನಿಗಳು ಹುಡುಕಾಡಿದ್ದರು. ಬಳಿಕ ತಿಳಿದ ವಿಷಯ ಏನಂದ್ರೆ, ತಮಿಳಿನ ಸೂಪರ್‌ಸ್ಟಾರ್ ಅಜಿತ್ ಕುಮಾರ್ ಅಭಿನಯದ 'ವೇದಾಳಂ' ಸಿನಿಮಾದಲ್ಲಿ ಸಹೋದರಿಯಾಗಿ ನಟಿಸಿದ್ದ ಲಕ್ಷ್ಮಿ ಮೆನನ್ ನಟಿಸಿದ್ದರು. ಅದೇ ನಟಿಯೊಂದಿಗೆ ವಿಶಾಲ್ ಮದುವೆ ಫಿಕ್ಸ್ ಆಗಿದೆ ಅನ್ನೋ ಮಾತು ಕೇಳಿ ಬರುತ್ತಿದೆ.

ವಿಶಾಲ್‌ ಜೊತೆ ಲಕ್ಷ್ಮಿ ಮೆನನ್ ಲವ್

ಒಂದು ಕಾಲದಲ್ಲಿ ಲಕ್ಷ್ಮಿ ಮೆನನ್ ತಮಿಳು ಚಿತ್ರರಂಗದ ಸ್ಟಾರ್ ಹೀರೊಯಿನ್. ಈಕೆ ನಟಿಸಿದ ಸಿನಿಮಾಗಳೆಲ್ಲವೂ ಸೂಪರ್‌ ಹಿಟ್ ಆಗಿದ್ದವು. 27 ವರ್ಷದ ಲಕ್ಷ್ಮಿ ಮೆನನ್ ಕಾಲಿವುಡ್ ನಟ ವಿಶಾಲ್ ಜೊತೆ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಓಡಾಡುತ್ತಿದೆ. ವಿಶಾಲ್ ಜೊತೆ ಈಗಾಗಲೇ 'ಪಲ್ನಾಡು', 'ಇಂದ್ರಡು' ಚಿತ್ರಗಳಲ್ಲಿ ನಟಿಸಿದ್ದರು. ಇಬ್ಬರ ಕೆಮಿಸ್ಟ್ರಿ ಸಖತ್ ಕ್ಲಿಕ್ ಆಗಿತ್ತು.

More from Filmibeat

English summary
Tamil Star actor Vishal will tie the knot with Lakshmi Menon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X