ಯುವ 2ನೇ ಸಿನಿಮಾಗಾಗಿ ಡಾಲಿಯ 'ಉತ್ತರಕಾಂಡ' ಶೂಟಿಂಗ್ ಸ್ಥಗಿತ? ಯಾಕೆ ಹೀಗೆ ಮಾಡಿತು ಕೆಆರ್‌ಜಿ ಸ್ಟುಡಿಯೋ?

ಸ್ಯಾಂಡಲ್‌ವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ 'ಉತ್ತರಕಾಂಡ' ಕೂಡ ಒಂದು. ಡಾಲಿ ಧನಂಜಯ್, ಶಿವರಾಜ್‌ಕುಮಾರ್, ದಿಗಂತ್ ಸೇರಿದಂತೆ ದಿಗ್ಗಜರೇ ನಟಿಸುತ್ತಿರುವ ಈ ಸಿನಿಮಾ ಕನ್ನಡದ ಚಿತ್ರರಂಗಕ್ಕೆ ಒಂದು ಮ್ಯಾಸಿವ್ ಹಿಟ್ ಕೊಡಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಕಳೆದ ಕೆಲವು ದಿನಗಳಿಂದ ಈ ಸಿನಿಮಾ ಬಗ್ಗೆ ಸುದ್ದಿನೇ ಇಲ್ಲ.

ಡಾಲಿ ಧನಂಜಯ್, ಶಿವಣ್ಣ, ದಿಗಂತ್ ಸೇರಿದಂತೆ 'ಉತ್ತರಕಾಂಡ' ಸಿನಿಮಾದ ಪ್ರಮುಖ ನಟರು ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದ ಜನಪ್ರಿಯ ನಿರ್ಮಾಣ ಸಂಸ್ಥೆ ಕೆಆರ್‌ಜಿ ಸ್ಟುಡಿಯೋ ಈ ಸಿನಿಮಾಗೆ ಹಣ ಹೂಡಿತ್ತು. ಅಸಲಿಗೆ 'ಉತ್ತರಕಾಂಡ' ಸಿನಿಮಾ ಯಾಕೆ ಸದ್ದು ಮಾಡುತ್ತಿಲ್ಲ? ಅಂತ ಹುಡುಕಿಕೊಂಡು ಹೊರಟಾಗ, ಸ್ಯಾಂಡಲ್‌ವುಡ್ ಮಂದಿ ಕೊಟ್ಟ ಉತ್ತರ ಅಚ್ಚರಿ ಹುಟ್ಟಿಸಿದೆ.

Buzz is that KRG Studios stop shooting Daali Dhananjaya starrer Uttarakaanda movie

'ಉತ್ತರಕಾಂಡ' ಸಿನಿಮಾ ಸೆಟ್ಟೇರಿ ಹಲವು ತಿಂಗಳುಗಳೇ ಆಗಿವೆ. ಸಿನಿಮಾದ ಕೆಲವು ಭಾಗದ ಚಿತ್ರೀಕರಣ ಕೂಡ ನಡೆದಿದೆ. ಅಷ್ಟರಲ್ಲೇ ಈ ಸಿನಿಮಾ ನಿಲ್ಲಿಸಿ ಕೆಆರ್‌ಜಿ ಸ್ಟುಡಿಯೋ ಇನ್ನೊಂದು ಸಿನಿಮಾವನ್ನು ಕೈಗೆತ್ತಿಕೊಂಡಿದೆ ಅನ್ನೋ ಮಾತು ಕೇಳಿಬರುತ್ತಿದೆ. ಸದ್ಯ ಕನ್ನಡದ ಚಿತ್ರರಂಗದಲ್ಲಿ ಕೆಆರ್‌ಜಿ ಸ್ಟುಡಿಯೋ ಹಾಗೂ ಉತ್ತರಕಾಂಡ ಸಿನಿಮಾ ಬಗ್ಗೆ ಗಂಭೀರ ಚರ್ಚೆ ಶುರುವಾಗಿದೆ. ಅಸಲಿಗೆ ಏನಿದು ಮ್ಯಾಟರ್? ತಿಳಿಯಲು ಮುಂದೆ ಓದಿ.

ಡಾಲಿ ಧನಂಜಯ್ ಒಂದೇ ಒಂದು ರೂಪಾಯಿ ಸಂಭಾವನೆ ಪಡೆಯದೆ 'ಉತ್ತರಕಾಂಡ' ಸಿನಿಮಾ ಶೂಟಿಂಗ್ ಆರಂಭಿಸಿದ್ದರು. ಈ ಸಿನಿಮಾಗಾಗಿ ಧನಂಜಯ್ ನಿರ್ಮಾಣ ಸಂಸ್ಥೆಯಿಂದ ಏನನ್ನೂ ಬಯಸಿರಲಿಲ್ಲ. ಸಿನಿಮಾದ ಕಥೆ ಇಷ್ಟ ಆಗಿದ್ದರಿಂದ ಡಾಲಿ ಒಪ್ಪಿಕೊಂಡಿದ್ದರು ಎನ್ನಲಾಗಿತ್ತು. ಚಿತ್ರತಂಡ ಆಗಲು, ಧನಂಜಯ್ ಆಗಲಿ ಈ ಬಗ್ಗೆ ಅಧಿಕೃತವಾಗಿ ಹೇಳಿಕೊಳ್ಳದೇ ಹೋದರೂ, ಇಂತಹದ್ದೊಂದು ಸುದ್ದಿಯಂತೂ ಗಾಂಧಿನಗರದಲ್ಲಿ ಹಬ್ಬಿತ್ತು.

Buzz is that KRG Studios stop shooting Daali Dhananjaya starrer Uttarakaanda movie

ಈ ಹಿಂದೆ ಇದೇ ಕೆಆರ್‌ಜಿ ಸ್ಟುಡಿಯೋ ನಿರ್ಮಿಸಿದ್ದ 'ರತ್ನನ್ ಪ್ರಪಂಚ'ದಲ್ಲಿ ಧನಂಜಯ್ ಹಾಗೂ ನಿರ್ದೇಶಕ ರೋಹಿತ್ ಪದಕಿ ಕಾಂಬಿನೇಷನ್ ವರ್ಕ್ ಆಗಿತ್ತು. ಸಿನಿಮಾಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿತ್ತು. ಇದೇ ಜೋಡಿ ಮತ್ತೆ 'ಉತ್ತರಕಾಂಡ' ಮಾಡಲು ಮುಂದಾಗಿತ್ತು. ಆದರೆ, ಈ ಬಾರಿ ಮಾಸ್, ರಗಡ್ ಸಿನಿಮಾ ಮಾಡುವುದಕ್ಕೆ ನಿರ್ಧರಿಸಿದ್ದಾಗ ಕೆಆರ್‌ಜಿ ಸ್ಟುಡಿಯೋ ಮುಂದೆ ಬಂದಿತ್ತು. ಆದ್ರೀಗ ಕೆಆರ್‌ಜಿ ಸ್ಟುಡಿಯೋ 'ಉತ್ತರಕಾಂಡ' ಸಿನಿಮಾ ಮೇಕಿಂಗ್ ಮೇಲೆ ಆಸಕ್ತಿ ಕಳೆದುಕೊಂಡಿದೆ ಅನ್ನೋ ವಿಷಯ ಓಡಾಡುತ್ತಿದೆ. ಇದರೊಂದಿಗೆ ಧನಂಜಯ್ ಹಾಗೂ ಕೆಆರ್‌ಜಿ ಸ್ಟುಡಿಯೋ ನಡುವೆ ಸಂಬಂಧ ಈಗ ಚೆನ್ನಾಗಿಲ್ಲ ಅಂತ ಹೇಳಾಗುತ್ತಿದೆ.

ಹಾಗಿದ್ದರೆ 'ಉತ್ತರಕಾಂಡ' ನಿಂತು ಹೋಯ್ತಾ? ಈ ಪ್ರಶ್ನೆಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿಯಿಲ್ಲ. ಕನ್ನಡ ಚಿತ್ರರಂಗದಲ್ಲಿ ಇಂತಹದ್ದೊಂದು ಸುದ್ದಿಯಂತೂ ಹರಿದಾಡುತ್ತಿದೆ. ಕೆಆರ್‌ಜಿ ಸ್ಟುಡಿಯೋ ಡಾಲಿ ಧನಂಜಯ್ ಸಿನಿಮಾ ಬಿಟ್ಟು ಯುವ ರಾಜ್‌ಕುಮಾರ್ ಸಿನಿಮಾ ನಿರ್ಮಾಣ ಮಾಡುವುದಕ್ಕೆ ಮುಂದಾಗಿದ್ದಾರಂತೆ. ಇನ್ನೇನು ಹೊಸ ಸಿನಿಮಾ ಶೀಘ್ರದಲ್ಲಿಯೇ ಅನೌನ್ಸ್ ಮಾಡುವುದಕ್ಕೆ ಮುಂದಾಗಿದೆ ಅನ್ನೋ ವಿಷಯ ಕೂಡ ಓಡಾಡುತ್ತಿದೆ.

ಯುವ ರಾಜ್‌ಕುಮಾರ್ ಸಿನಿಮಾ ಮಾಡುತ್ತಿರೋದಕ್ಕೂ 'ಉತ್ತರಕಾಂಡ' ನಿಲ್ಲಿಸುವುದಕ್ಕೂ ಏನು ಸಂಬಂಧ? ಅನ್ನೋ ಪ್ರಶ್ನೆಗೆ ಉತ್ತರ ಫೈನಾನ್ಷಿಯಲ್ ಮ್ಯಾಟರ್ ಎನ್ನುತ್ತಿವೆ ಮೂಲಗಳು. ಬಹುತಾರಾಗಣದ 'ಉತ್ತರಕಾಂಡ' ಸಿನಿಮಾವನ್ನು ಕೆಆರ್‌ಜಿ ಸ್ಟುಡಿಯೋ ಹಣಕಾಸಿನ ಸಮಸ್ಯೆಯಿಂದಾಗಿ ನಿಲ್ಲಿಸುತ್ತಿದೆ ಅನ್ನೋದು ಮತ್ತೊಂದು ಮೂಲಗಳಿಂದ ಸಿಕ್ಕಿರುವ ಮಾಹಿತಿ. ಹಾಗಿದ್ಮೇಲೆ ಯುವರಾಜ್‌ಕುಮಾರ್ ಸಿನಿಮಾ ಹೇಗೆ ಶುರುವಾಗುತ್ತಿದೆ? ಅನ್ನೋ ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜ. ಅದಕ್ಕೆ ದೊಡ್ಮೆನೆಯಿಂದ ಹಣ ಹೂಡಿಕೆ ಆಗುತ್ತಿದೆ ಅನ್ನೋ ಉತ್ತರ ಸಿಗುತ್ತಿದೆ.

ಉತ್ತರಕಾಂಡ' ಸಿನಿಮಾ ಸ್ಥಗಿತಗೊಂಡಿದೆ ಅನ್ನೋದು ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಆಗುತ್ತಿರುವ ಚರ್ಚೆ. ಇನ್ನು ಕೆಆರ್‌ಜಿ ಸ್ಟುಡಿಯೋ ಆಗಲಿ, ಡಾಲಿ ಧನಂಜಯ್ ಆಗಲಿ ಈ ಬಗ್ಗೆ ಅಧಿಕೃತವಾಗಿ ಮಾಹಿತಿಯನ್ನು ನೀಡಿಲ್ಲ. ಇಷ್ಟೆಲ್ಲ ವಿಷಯಗಳು ಗಾಂಧಿನಗರದ ನಿರ್ಮಾಪಕರ ವಲಯದಲ್ಲಂತೂ ಓಡಾಡುತ್ತಿದೆ. ಒಂದು ವೇಳೆ ಇದು ಕೇವಲ ಗಾಳಿ ಸುದ್ದಿಯಾಗಿದ್ದರೆ, ಸಂಬಂಧ ಪಟ್ಟವರು ಮುಂದೆ ಬಂದು ಕ್ಲಾರಿಟಿ ಕೊಡಬಹುದು.

More from Filmibeat

English summary
Buzz is that KRG Studios stop shooting Daali Dhananjaya starrer Uttarakaanda movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X