ಐಶ್ವರ್ಯಾ, ಶಿಶಿರ್ ಶಾಸ್ತ್ರಿ ಸ್ನೇಹಕ್ಕೆ ಗುಡ್ ಬೈ ಹೇಳಿದ್ರಾ ಮೋಕ್ಷಿತಾ? ಈ ಮೂವರ ಮಧ್ಯೆ ಏನಾಗ್ತಿದೆ?
ಸಿನಿಮಾ ಇರಲಿ, ಕಿರುತೆರೆ ಇರಲಿ.. ಇಲ್ಲಿ ಪ್ರತಿ ದಿನ ನೂರೆಂಟು ಕಥೆಗಳು ಹುಟ್ಟಿಕೊಳ್ಳುತ್ತವೆ. ಯಾವ ಗಲ್ಲಿಯಿಂದ ಯಾವ್ಯಾವ ಸುದ್ದಿ ತೂರಿಕೊಂಡು ಬರುತ್ತೋ ಗೊತ್ತೇ ಆಗಲ್ಲ. ಕೆಲವೊಮ್ಮೆ ತಮ್ಮಲ್ಲೇ ರಹಸ್ಯವಾಗಿ ಇಟ್ಟುಕೊಂಡಿದ್ದ ಸಂಗತಿಗಳು ಅವರನ್ನೂ ಮೀರಿ ಹೊರ ಬಂದು ಬಿಡುತ್ತವೆ. ಲವ್ ಸ್ಟೋರಿ, ಬ್ರೇಕಪ್, ಫ್ರೆಂಡ್‌ಶಿಪ್ ಬ್ರೇಕಪ್ ಹೀಗೆ ನೂರೆಂಟು ಸುದ್ದಿಗಳು ಓಡಾಡುತ್ತಲೇ ಇರುತ್ತವೆ. ಹಾಗಂತ ಇದು ಕೇವಲ ಸಿನಿಮಾಗಷ್ಟೇ ಸೀಮಿತವಾಗಿಲ್ಲ ಕಿರುತೆರೆಯಲ್ಲೂ ಗಾಳಿ ಸುದ್ದಿಗಳು ಓಡಾಡುತ್ತಲೇ ಇರುತ್ತವೆ.
ಸದ್ಯಕ್ಕೀಗ ಕಿರುತೆರೆ ಬೆಸ್ಟ್ ಫ್ರೆಂಡ್ಸ್, ಬಿಗ್ ಬಾಸ್ ಸ್ನೇಹಿತರಾದ ಮೋಕ್ಷಿತಾ ಪೈ, ಐಶ್ವರ್ಯಾ ಸಿಂಧೋಗಿ ಹಾಗೂ ಶಿಶಿರ್ ಶಾಸ್ತ್ರಿಯ ಸುತ್ತ ಸುದ್ದಿಯೊಂದು ಜೋರಾಗಿಯೇ ಸದ್ದು ಮಾಡುತ್ತಿದೆ. ಒಂದು ಕಾಲದಲ್ಲಿ ಉತ್ತಮ ಗೆಳೆಯರಾಗಿದ್ದವರು ಈಗ ದೂರ ಆಗಿದ್ದಾರೆಂಬ ಸುದ್ದಿ ಹರಿದಾರಿದಾಡುತ್ತಿದೆ. ಮೋಕ್ಷಿತಾ, ಐಶ್ವರ್ಯಾ ಸಿಂಧೋಗಿ ಹಾಗೂ ಶಿಶಿರ್ ಶಾಸ್ತ್ರಿ ಮೂವರು ಬ್ಯುಸಿಯಾಗಿದ್ದಾರೆ. ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಬೇರೆ ಬೇರೆ ಕೆಲಸ ಮಾಡುತ್ತಿದ್ದಾರೆ.

ಅದರಲ್ಲೂ ಬಿಗ್ ಬಾಸ್‌ನಿಂದ ಹೊರ ಬಂದ್ಮೇಲೆ ಮೂವರು ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ. ಅದರಲ್ಲೂ ಮೋಕ್ಷಿತಾ ಹೊಸ ಧಾರಾವಾಹಿ ಅನೌನ್ಸ್ ಮಾಡಿದ್ದಾರೆ. ಮೈಕ್ರೋ ಡ್ರಾಮಾದಲ್ಲೂ ನಟಿಸಿದ್ದಾರೆ. ಇತ್ತೀಚೆಗೆ ಹೊಸ ದುಬಾರಿ ಕಾರನ್ನು ಖರೀದಿ ಮಾಡಿದ್ದಾರೆ. ಅದರ ವಿಡಿಯೋ ಹಾಗೂ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಈಗ ಕಿರುತೆರೆಯಲ್ಲಿ ಈ ಮೂವರು ಸ್ನೇಹಿತರ ವೈಮನಸ್ಸಿನ ಸುದ್ದಿಯ ಹೊತ್ತಿಕೊಂಡಿದೆ. ಅಷ್ಟಕ್ಕೂ ಈ ಮೂವರ ಮಧ್ಯೆ ಏನಾಗಿದೆ? ತಿಳಿಯುವುದಕ್ಕೆ ಮುಂದೆ ಓದಿ.
ಬಿಗ್ ಬಾಸ್ ಮೂಲಕ ಮೋಕ್ಷಿತಾ ಪೈ, ಐಶ್ವರ್ಯಾ ಸಿಂಧೋಗಿ ಹಾಗೂ ಶಿಶಿರ್ ಶಾಸ್ತ್ರಿ ಒಂದೇ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಸಹಜವಾಗಿಯೇ ಬಿಗ್ ಬಾಸ್‌ಗಿಂತಲೂ ಮೊದಲಿನಿಂದಲೇ ಅವರು ಆತ್ಮೀಯರಾಗಿಯೇ ಇದ್ದರು. ಆದರೆ, ಅದ್ಯಾವಾಗ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ರೋ ಅಲ್ಲಿ ಈ ಮೂವರ ಬಾಂಡಿಂಗ್ ಇನ್ನೂ ಚೆನ್ನಾಗಿ ಬೆಳೆದಿತ್ತು. ಬಿಗ್ ಬಾಸ್ ಮುಗಿಯುತ್ತಿದ್ದಂತೆ ಈ ಮೂವರೂ ಒಟ್ಟೊಟ್ಟಿಗೆ ಟ್ರಾವೆಲ್ ಕೂಡ ಮಾಡಿದ್ದರು. ಅದರನ್ನು ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುತ್ತಿದ್ದರು.
ಆದರೆ, ಬಹಳ ದಿನಗಳಿಂದ ಈ ಮೂವರು ಒಟ್ಟಿಗೆ ಕಾಣಿಸಿಕೊಂಡೇ ಇಲ್ಲ. ಟ್ರಾವೆಲ್ ಫ್ರೀಕ್ ಇದ್ದರೂ ಎಲ್ಲೂ ಮೂವರು ಒಟ್ಟಿಗೆ ಕಾಣಿಸಿಕೊಂಡಿಲ್ಲ. ಅದನ್ನು ಸೋಶಿಯಲ್ ಮೀಡಿಯಾಗಳಲ್ಲೂ ಹಾಕಿಕೊಂಡಿಲ್ಲ. ಶಿಶಿರ್ ಸದ್ಯ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ 'ಶ್ರೀಗಂಧದ ಗುಡಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇನ್ನು ಮೋಕ್ಷಿತಾ ಪೈ ಜೀ ಕನ್ನಡದ 'ಜಗದ್ಧಾತ್ರಿ' ಅನ್ನೋ ಹೊಸ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಹಾಗೆ ನೋಡುವುದಕ್ಕೆ ಹೋದರೆ, ಐಶ್ವರ್ಯಾ ಸಿಂಧೋಗಿ ಅವರೇ ಸೈಲೆಂಟ್ ಆಗಿದ್ದಾರೆ.

ಅಷ್ಟಕ್ಕೂ ಮೋಕ್ಷಿತಾ ಅವರೇ ಇವರಿಬ್ಬರಿಂದ ದೂರ ಉಳಿದಿದ್ದಾರೆ ಅನ್ನೋದು ಸುದ್ದಿ. ಬಿಗ್ ಬಾಸ್‌ಗೂ ಮುನ್ನ ಶಿಶಿರ್ ಹಾಗೂ ಮೋಕ್ಷಿತಾ ಪೈ ಅವರ ಗೆಳತಿಯೊಂದಿಗೆ ಕ್ಲೋಸ್ ಆಗಿದ್ದರಂತೆ. ಬಿಗ್ ಬಾಸ್‌ನಿಂದ ಹೊರ ಬಂದ್ಮೇಲೆ ಶಿಶಿರ್ ಹಾಗೂ ಐಶ್ವರ್ಯಾ ಇಬ್ಬರೂ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದಾರಂತೆ. ಈ ಕಾರಣಕ್ಕೆ ಮೋಕ್ಷಿತಾ ಅವರಿಬ್ಬರಿಂದ ಅಂತರ ಕಾಯ್ದುಕೊಂಡಿದ್ದಾರೆ ಅಂತ ಕಿರುತೆರೆ ಮಂದಿ ಮಾತಾಡಿಕೊಳ್ತಿದ್ದಾರೆ.
ಮೋಕ್ಷಿತಾಗೆ ಇವರಿಬ್ಬರ ಬಗ್ಗೆ ಸಿಕ್ಕಾಪಟ್ಟೆ ಬೇಜಾರು ಆಗಿದೆಯಂತೆ. ಸ್ನೇಹಿತೆ ಮನಸ್ಸಿಗೆ ನೋವು ಮಾಡಿದ್ದಾರೆಂದು ಮೋಕ್ಷಿತಾ ಕೂಡ ಮನಸ್ಸಿಗೆ ನೋವು ಮಾಡಿಕೊಂಡಿದ್ದಾರೆ ಅನ್ನೋದು ಸುದ್ದಿ. ಏನೇ ಇದ್ದರೂ, ಮೂವರ ಸ್ನೇಹದಲ್ಲಿ ಬಿರುಕು ಬಿಟ್ಟಿದೆ ಅಂತ ಕಿರುತೆರೆ ಮಂದಿ ಗಾಳಿ ಸುದ್ದಿಯನ್ನು ಹಬ್ಬಿಸಿದ್ದಾರೆ. ಸದ್ಯ ಶಿಶಿರ್ 'ಶ್ರೀಗಂಧದ ಗುಡಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಮೋಕ್ಷಿತಾ ಪೈ 'ಜಗದ್ಧಾತ್ರಿ' ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ಇನ್ನು ಐಶ್ವರ್ಯಾ ಸಿಂಧೋಗಿ ಅಫ್‌ಡೇಟ್ ಕೊಡಬೇಕಿದೆ.


Click it and Unblock the Notifications
